ಬ್ಲಾಗರ್ಸ್ ಮೀಟ್ ಬಗ್ಗೆ ಇ-ಮೈಲ್ ಗಳು, ಪೋಸ್ಟ್ಗಳು ಹಾರಾಡಿ ಇಲ್ಲೀವರೆಗೆ ಯುಆರೆಲ್ ಅಷ್ಟೆ ಆಗಿದ್ದವ್ರೆಲ್ಲರನ್ನ ಒಂದುಕಡೆ ಭೇಟಿಯಾಗೋ ಸಂಭ್ರಮ, excitementಗಳು ತುಳುಕಾಡಿ ಅಂತೂ ಇವತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಎಲ್ಲ ಸೇರುವಂತಾಯ್ತು. ನಾಲ್ಕಕ್ಕೆ ಕಾರ್ಯಕ್ರಮ ಅಂತ ಕಾಲು ಘಂಟೆ ಮುಂಚೆನೇ ಹೋಗಿ ಸೇರಿದವಳಿಗೆ ಇವರ್ ಬಿಟ್ಟ್ ಅವರ್ ಬಿಟ್ಟ್ ಇವರ್ ಬಿಟ್ಟು ಅವರ್ ಬಿಟ್ಟ್ ಇವರ್ಯಾರು ಅಂತ ತೆರೆದ ಕಣ್ಣಲ್ಲೇ ಗೆಸ್ಸಿಂಗ್ ಗೇಮ್ ಷುರು ಆಗಿತ್ತು. ಕಡೇ ಪಕ್ಷ ಈ ಮೀಟಿಗೆ ಆಹ್ವಾನ ಕಳಿಸಿದ್ದವರನ್ನಾದ್ರೂ ಸರಿಯಾಗಿ ಗುರುತಿಸಬೇಕು ಅಂತ ಆರ್ಕುಟ್ ಆಲ್ಬಂಗಳಿಗೆ ಭೇಟಿ ಕೊಟ್ಟಿದ್ರೂ ಕೊನೆಗೆ ಸಹಾಯಕ್ಕೆ ಬಂದದ್ದು ಯುಆರ್ಎಲ್ಗಳೇ!:)) ಯಾರಿರಬಹುದು ಅಂತ ಗೆಸ್ ಮಾಡ್ತಾ, ಪರಿಚಯ ಮಾಡಿಕೊಳ್ತಾ, ಮಾಡಿಸ್ತಾ...ನಾಕೂವರೆ ಸುಮಾರಿಗೆ ಕಾರ್ಯಕ್ರಮ ಷುರುವಾಯ್ತು. ಕಾರ್ಯಕ್ರಮದ ವರದಿ ಇಲ್ಲಿ ಮಾಡೋ ಸಾಹಸಕ್ಕೆ ಹೋಗಲ್ಲ, ಅದು ನಿಮಗೆ ಬೇರೆ ಕಡೆಯೂ ಸಿಗುತ್ತೆ ಅನ್ನೋ ನಂಬಿಕೆಯೂ ಇರೋದ್ರಿಂದ!:) ಕಾರ್ಯಕ್ರಮಕ್ಕೆ ನನ್ನ ಪ್ರತಿಕ್ರಿಯೆಗಳು, ನನ್ನಲ್ಲಿ ಎದ್ದ ಕೆಲವು ಪ್ರಶ್ನೆಗಳು, ಒಂದಿಷ್ಟು ಖುಷಿ - ಇವುಗಳು ಈಗ ಇಲ್ಲಿ ನಿಮಗಾಗಿ.
ಮೊದಲನೇದಾಗಿ ಅಷ್ಟು ಜನ ಕನ್ನಡ ಬ್ಲಾಗರ್ಸ್ ಒಟ್ಟು ಸೇರಿದ್ದೇ ತುಂಬಾ ಖುಷಿ ಕೊಟ್ಟ ವಿಷ್ಯ. ಅದಕ್ಕೆ ಪ್ರಣತಿಗೆ ಮೊದಲ ಥ್ಯಾಂಕ್ಸ್! ಅಂತರ್ಜಾಲದಲ್ಲಿ ಕನ್ನಡ ಬೆಳೆಸೋ ಪ್ರಯತ್ನ ಮಾಡ್ತಿರೋ ಅನುಭವಿಗಳನ್ನ ಕರೆಸಿ ಮಾತಾಡ್ಸಿದ್ದು apt ಅನ್ನಿಸ್ತು. ಕಾರ್ಯಕ್ರಮದ ಮೊದಲಿನ ಭಾಗದಲ್ಲಿ ಸುಮಾರು ಪಾಲು ತಾಂತ್ರಿಕ ಸಮಸ್ಯೆ-ಸವಾಲುಗಳ ಚರ್ಚೆಗೇ ಹೊರಟುಹೋಯಿತು, ಅವೆಲ್ಲಾ ನನಗಂತೂ ಓವರ್ಹೆಡ್ ಟ್ರಾನ್ಸ್ಮಿಶನ್ ಆಯ್ತು ಅನ್ನೋದು ಬೇರೆ ಹೇಳಬೇಕಿಲ್ಲ! ಸಂಪದದ ಹರಿಪ್ರಸಾದ್ ನಾಡಿಗರು ಹೇಳಿದ್ದು ಇದ್ದಿದ್ರಲ್ಲಿ ಸ್ವಲ್ಪ ಅರ್ಥವಾಯ್ತು. ಸರಳವಾಗಿ, ನೇರವಾಗಿ ಹೇಳಿದ್ರು. ಇನ್ನೊಂದ್ ಸ್ವಲ್ಪ ನಿಧಾನಕ್ಕೆ ಮಾತಾಡಬಹುದಿತ್ತು ಅನ್ನಿಸ್ತು. ಬರೀ ಭಾವಲಹರಿಗಳಲ್ಲದೇ ಬೇರೆ ಬೇರೆ ವಿಷಯಗಳ ಬಗ್ಗೆನೂ ಕನ್ನಡದಲ್ಲಿ ಬ್ಲಾಗಿಸೋ ಅವಶ್ಯಕತೆ, ಸಾಧ್ಯತೆಗಳ ಬಗ್ಗೆ ಕೆಂಡಸಂಪಿಗೆಯ ರಷೀದರು, ದಟ್ಸ್ಕನ್ನಡದ ಶ್ಯಾಮಸುಂದರ್ಅವರು ಹೇಳಿದ್ರು. ಈಚೆಗೆ ಹುಲುಸಾಗಿ ಬೆಳೀತಿರೋ ಬ್ಲಾಗ್ಗಳನ್ನ ಓದ್ತಾ ಈ ಮಾತು ನನ್ನ ಮನಸ್ಸಿಗೂ ಬಂದಿತ್ತು. ಅದಕ್ಕೇ ಹೀಗೇಸುಮ್ಮ್ನೆಇಲ್ಲಿ ಬರೆಯೋದರ ಜೊತೆಗೆ ಸಂಗೀತಕ್ಕಾಗಿ sree-raaga.blogspot.com ಷುರು ಮಾಡಿದ್ದೆ. ಆದ್ರೆ ಹಾಗಂತ ಭಾವಲಹರಿಗಳಿಗೆ ಬೆಲೆಯಿಲ್ಲ ಅಂತಲ್ಲ. ಕಂಪ್ಯೂಟರ್ ಜನಾಂಗಕ್ಕೆ ಕನ್ನಡ ಹತ್ತಿರವಾಗಿಸೋದ್ರಲ್ಲಿ, ನಾವೂ ಕನ್ನಡ ಓದ್ತೀವಿ-ಬರೀತೀವಿ ಅನ್ನೋ ಅಭಿಮಾನ ಹುಟ್ಟಿಸೋದ್ರಲ್ಲಿ ಭಾವಲಹರಿಗಳ ಪಾತ್ರ ಅದನ್ನ ದಾಟಬೇಕಾದ ಅವಶ್ಯಕತೆಯಷ್ಟೇ ದೊಡ್ದದು ಅನ್ನಿಸುತ್ತೆ.
ಇದೇ ವಿಷ್ಯಕ್ಕೆ ಸಂಬಂಧ ಪಟ್ಟಹಾಗೆ ಶ್ಯಾಮ್ಸುಂದರ್ ಅವ್ರು ಹೇಳಿದ್ದ್ ಇನ್ನೊಂದು ಮಾತು - ಬ್ಲಾಗರ್ಸ್ ಜವಾಬ್ದಾರಿಯ ಬಗ್ಗೆ. ನನಗೇನ್ ಬೇಕೋ ಬರೀತೀನಿ, ನಿಂಗೆ ಇಷ್ಟ ಇದ್ದ್ರೆ ಓದು, ಕಷ್ಟವಾದ್ರೆ ಬಿಡು ಅನ್ನೋ ಧೋರಣೆ ತಪ್ಪು ಅಂದ್ರು. ಅದು ಸರೀನೇ... ಆದ್ರೆ ಬ್ಲಾಗ್ ಷುರುಮಾಡಿದ್ ಹೊಸದ್ರಲ್ಲಿ ನನಗೂ ಆ ಧೋರಣೆ ಇದ್ದದ್ದು ಸುಳ್ಳಲ್ಲ. ಆ ಬಗ್ಗೆ ತಿಳಿಯದೇ ಕನ್ನಡಸಾಹಿತ್ಯ.ಕಾಂನ ಶೇಖರ್ಪೂರ್ಣಅವರ ಜೊತೆ ವಾದಕ್ಕೂ ಇಳಿದಿದ್ದೆ! ಈಗ ಭಾರೀ ಜವಾಬ್ದಾರಿಯುತವಾಗಿ ಬರೀತೀನಿ ಅಂತಲ್ಲ. ಆದ್ರೆ ಕಡೇಪಕ್ಷ ಹಾಗೆ ಬರೀತಿಲ್ಲ ಅನ್ನೋ ಅರಿವು, ಅದರ ಬಗ್ಗೆ ಸ್ವಲ್ಪ guilt, ಚೆನ್ನಾಗಿ, ಅರ್ಥಪೂರ್ಣವಾಗಿ ಏನಾದ್ರೂ ಬರೀಬೇಕನ್ನೋ ಹಂಬಲ ಇದೆ ಅನ್ನಬಹುದು. ಇಷ್ಟು ಅನ್ನಿಸೋಕೆ ತಲೆಯಮೇಲೆ ಯಾವ ಬೋಧಿವೃಕ್ಷವೂ ಬೆಳೀಲಿಲ್ಲ, ೨ ವರ್ಷ ಹೀಗೇಸುಮ್ಮ್ನೆ ಕುಟ್ಟಿ ಉಳಿದ ಬ್ಲಾಗಿಗರ ಜೊತೆ interact ಮಾಡ್ತಾ, ಅವರು ಬರೆದದ್ದು ಓದ್ತಾ ಬಂದ ಅನುಭವ ಸಾಕಾಯ್ತು. ಒಂದಷ್ಟು introspection ಮಾಡಿಕೊಂಡ ಎಲ್ಲ ಬ್ಲಾಗಿಗರೂ ಹೀಗೆ ಅನುಭವದ ಘಟ್ಟಗಳನ್ನ ಹಾದುಹೋಗ್ತಾರೆ, ಹೀಗೇ ಬರೀತಾ ಹೋದ ಹಾಗೆ introspection ನಮ್ಮೊಳಗಿಂದ್ಲೇ ಅವಶ್ಯಕತೆಯಾಗಿ ಬರುತ್ತೆ ಅನ್ನಿಸುತ್ತೆ. ಯಾರಾದ್ರೂ ಸ್ವಲ್ಪದೊಡ್ಡವರು-ಅನುಭವಿಗಳು ನಮ್ಮ ಬರಹಗಳನ್ನ ಓದಿ, ನಮ್ಮ ಭಂಡಧೈರ್ಯಗಳಿಗೆ ನಾಕು ಪ್ರಶ್ನೆಗಳನ್ನಿಟ್ಟರೆ ಈ introspection ಇನ್ನಷ್ಟು ಸುಲಭವಾಗುತ್ತೆ. ಜೊತೆಗೆ ಸ್ವಲ್ಪ guidence ಕೂಡ ಸಿಕ್ಕರೆ ಗಟ್ಟಿಯೂ ಆಗ್ತೀವೆನೋ, ಒಳ್ಳೇ ಬರಹಗಾರರಲ್ಲದಿದ್ರೂ ಒಳ್ಳೆಯ ಓದುಗರಾಗಿಯಾದ್ರೂ...
ಅದೇನೇ ಇದ್ದರೂ ಯಾವ ಪಬ್ಲಿಶರ್ ಹಂಗಿಲ್ಲದೇ ನಾಕುಜನ ಓದುಗರನ್ನ ಗಿಟ್ಟಿಸಿಕೊಳ್ಳೋದರಿಂದ ನಮ್ಮಲ್ಲಿ ಒಂದುರೀತಿಯಲ್ಲಿ natural bratತನ ಇದ್ದೇ ಇರುತ್ತೆ, ಅದರಿಂದ ಬ್ಲಾಗ್ ಬರಹಗಳಿಗೇ ಒಂದು ವಿಶಿಷ್ಟ ಫ್ಲೇವರ್ ಕೂಡ ಇರುತ್ತೆ. ಅದು ತೀರಾ ಬೇಜವಾಬ್ದಾರಿತನವಾಗದೇ ಹೋಗೋದಕ್ಕೆ ಸ್ವಲ್ಪ ಎಚ್ಚರವಹಿಸಬೇಕಷ್ಟೆ. ಸಂವಾದ, ಬೇರೆ ಬರಹಗಳ ಓದು ಇದಕ್ಕೆ ಸಹಾಯವಾಗುತ್ತೆ ಅಂತ ನನಗನ್ನಿಸೋದು... ನಮ್ಮ-ನಮ್ಮ ನಡುವಿನ ಮಾತುಗಳು ಬೆಳೀಬೇಕು ಅನ್ನೋದಕ್ಕೆ, ಇವತ್ತಿನ ಮೀಟ್ನಂಥದ್ದರ ಅವಶ್ಯಕತೆಗೆ ಇನ್ನೊಂದು ಕಾರಣ...
ಬ್ಲಾಗಿಂಗ್ ಅನುಭವದ ಬಗ್ಗೆ ಮಾತಾಡಿದವ್ರಿಗೆ ಇನ್ನೊಂದೆರಡು ನಿಮಿಷ ಪ್ರಿಪರೇಷನ್ ಸಮಯ ಸಿಕ್ಕಿದ್ರೆ ಸ್ವಲ್ಪ ಫೋಕಸ್ಡ್ ಆಗಿ ಮಾತಾಡೋಕೆ ಸಾಧ್ಯವಾಗ್ತಿತ್ತೇನೋ ಅನ್ನಿಸ್ತು. ’ಚೆನ್ನಾಗಿದೆ’ ಅನ್ನೋದರಿಂದ ಮುಂದೆ ಹೋಗಿ ವಿಮರ್ಶೆಯೂ ಬರಬೇಕು ಅನ್ನೋ ಸುಧನ್ವ ದೇರಾಜೆಯವರ ಮಾತು ನಮ್ಮ ನಮ್ಮಲ್ಲಿ ಇನ್ನಷ್ಟು ಮಾತು-ಕತೆಯ ಅವಶ್ಯಕತೆಯನ್ನ ತೋರಿಸ್ತು ಅನ್ನಿಸುತ್ತೆ. ಈ ರೀತಿಯ ಹೀಗೇ ಸುಮ್ಮನೆ ಚೆನ್ನಾಗಿದೆ ಅನ್ನೋ ಕಾಮೆಂಟುಗಳಿಗೂ ಅವುಗಳದ್ದೇ ಬೆಲೆ ಇದೆ, ಬರೆಯುವವರ ಹುಮ್ಮಸ್ಸಿಗೆ ನೀರೆರೆಯೋದರಲ್ಲಿ. ಆದರೆ ಪ್ರಕಟಿತ ಸಾಹಿತ್ಯಕ್ಕೆ ಸಿಗುವಷ್ಟು ವಿಮರ್ಶೆಯ ಮರ್ಯಾದೆ ಸಿಗದಿರೋದಕ್ಕೆ ಇದು ಬಹುಮಟ್ಟಿಗೆ ’ಹೀಗೆ ಸುಮ್ಮನೆ’ ಬರಿಯೋ-ಓದೋ ಮೀಡಿಯಮ್ ಆಗಿರೋದು ಕಾರಣವೇನೋ. ರೀಡಿಂಗ್ ಕ್ಲಬ್ ಆಗಿಯೋ ಮೈಲ್ ಗ್ರೂಪ್ ಆಗಿಯೋ ಬರೆದದ್ದನ್ನು ಚರ್ಚಿಸಲು ಒಂದು ಮಾಧ್ಯಮ ಹುಡುಕಿಕೊಳ್ಳಬೇಕಾದ ಅಗತ್ಯ ಇದೆ ಅನ್ನಿಸುತ್ತೆ, ಕಾಮೆಂಟ್ಗಳ ಮೂಲಕವೇ ಇದು ಸಾಧ್ಯವಾಗೋದು ಅಷ್ಟು ಸುಲಭವಲ್ಲವೇನೋ ಅನ್ನಿಸುತ್ತೆ. ಯಾಕಂದ್ರೆ ಬ್ಲಾಗ್ ಓದೋದು, ಕಾಮೆಂಟಿಸೋದು ಎಲ್ಲಾ ಕ್ಯಾಶುವಲ್ಲಾಗಿ, ಯಾವಾಗ್ಲೋ ಸಿಕ್ಕ ಎರಡು ನಿಮಿಷದ ಬ್ರೇಕ್ನಲ್ಲೂ ನಡೆದುಹೋಗ್ತಿರುತ್ತೆ. ಫೋಕಸ್ಡ್ ಪ್ರತಿಕ್ರಿಯೆ-ಚರ್ಚೆಗಳಿಗೆ ಅದಕ್ಕೇ ಆದ ಒಂದು ಸ್ಥಾನ ಕಲ್ಪಿಸದೇ ಇದು ಸಾಧ್ಯವಾಗಲ್ಲ. ಕನ್ನಡ ಬ್ಲಾಗ್ಗಳ ಸಂಖ್ಯೆಯ ಜೊತೆ ವ್ಯಾಪ್ತಿಯೂ ಬೆಳೀತಿರೋ ಕಾಲದಲ್ಲಿ ಅವುಗಳನ್ನ ಪೋಷಿಸೋದಕ್ಕೆ ಈ ರೀತಿಯ ಸಪೋರ್ಟ್ ಸಿಸ್ಟಂ ಹುಟ್ಟೋ ಅವಶ್ಯಕತೆ ಇದೆ ಅನ್ನಿಸುತ್ತೆ. ಇವತ್ತಿನ ಮೀಟ್ ಈ ಬಗೆಯ ಸಂವಾದಗಳಿಗೆ ಒಂದು ಒಳ್ಳೆಯ ಪ್ರಾರಂಭ ಅನ್ನಿಸುತ್ತೆ.
ಚಹಾ ವಿರಾಮದಲ್ಲಿ ಜಯಾ ಹೇಳಿದಂತೆ ಸ್ವಲ್ಪ preachy ಅನ್ನಿಸಿದ್ರೂ ಚಿಂತನೆಗೆ ಹಚ್ಚೋ ಹಲವು ವಿಷ್ಯಗಳು ಕಾರ್ಯಕ್ರಮದಲ್ಲಿದ್ದ್ವು ಅನ್ನೋದು ನಿಜ. ಮೊದಲ ಪ್ರಯತ್ನವಾಗಿ ಕಾರ್ಯಕ್ರಮ ತುಂಬಾ ಯಶಸ್ವಿ ಅನ್ನಿಸ್ತು. ನಮ್ಮ ನಡುವೆ ಇನ್ನೊಂದಿಷ್ಟು interactionಗೆ ಅವಕಾಶ, ಕಂಟೆಂಟ್ ಬಗ್ಗೆ ಇನ್ನೊಂದಿಷ್ಟು ಗಮನ ಇದ್ದಿದ್ದರೆ... ಇರುತ್ತೆ, ಮುಂದಿನ ಪ್ರಯತ್ನದಲ್ಲಿ, ಅನ್ನಿಸುತ್ತೆ.
ಒಟ್ಟ್ನಲ್ಲಿ ಹಲವು ದಿನಗಳಿಂದ ಒಬ್ಬರದೊಬ್ಬರು ಬ್ಲಾಗ್ ಓದ್ತಾ, ಕಮೆಂಟಿಸ್ತಾ ಇದ್ದ ಹಲವು ಗೆಳೆಯರನ್ನ ಮೊದಲಬಾರಿ ಮುಖತಃ ಭೇಟಿ ಮಾಡಿದ್ದು ತುಂಬಾ ಖುಷಿಯಾಯ್ತು! ಶ್ರೀ, ಸುರೇಖಾ(ಮನಸ್ವಿನಿ), ಸಿಂಧು, ಶ್ರೀನಿಧಿ, ಸುಶ್ರುತ, ರಾಧಾಕೃಷ್ಣ, ಅರವಿಂದ್ ನಾವಡ, ಶಿವಕುಮಾರ್, ಗುರುರಾಜ್... ಅಲ್ಲದೇ ಓದಿ ಚೆನ್ನಾಗಿ ಬರೀತಾರೆ ಅನ್ನಿಸಿದ್ದ ಹಲವು ಬ್ಲಾಗಿಗರನ್ನ ನೋಡಿದ್ದು, ಮಾತಾಡಿಸಿದ್ದು, ಹೊಸ ಪರಿಚಯಗಳಾಗಿದ್ದು... I guess everyone shares the feeling of wanting to take this forward. ಪ್ರಣತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು! ಮಾತಾಡೋಕೆ ಟೈಮ್ ಸಾಲಲಿಲ್ಲ, ಮುಂದಿನ ಭೇಟಿ ಬೇಗ ಆಗ್ಬೇಕು! ಈ ಸಲ ಬರದೇ ಮಿಸ್ಆದ್ ಬ್ಲಾಗಿಗರನ್ನೂ ಮುಂದಿನಸಲ ಮೀಟ್ ಮಾಡೋ ಹಾಗಾಗಬೇಕು!
ಅಂದಹಾಗೆ ಯಾವ ಮದುವೆಮನೆ ಹುಡುಗೀರ್ಗೂ ಹೆಚ್ಚಾಗಿ ಸಂಭ್ರಮ-ಸಡಗರಗಳಿಂದ ಓಡಾಡ್ತಿದ್ದ ನಮ್ಮ ಶ್ರೀನಿಧಿ-ಸುಶ್ರುತ ಹುಡುಗರ್ ಗುಂಪನ್ನ ನೋಡಿ ಭಾಳಾ ಖುಷಿಯಾಯ್ತು!
ತುಂಬಾ ಕೊರೆದುಬಿಟ್ಟೆ! ಏನ್ ಮಾಡೋದು, ಅಷ್ಟು ಜನ ಕುಟ್ಟಿಗರನ್ನ ಒಟ್ಟಿಗೇ ನೋಡಿದ್ದ್ ಎಫೆಕ್ಟು!:P ಸರಿ ಇನ್ನು ಮಿಕ್ಕ ವಿವರಗಳಿಗೆ ಬೇರೆ ಬ್ಲಾಗ್ಗಳನ್ನ ನೋಡಿ:) ಮತ್ತೆ ನನ್ನ ಕ್ಯಾಮರಾ ಚಾರ್ಜ್ ಮಾಡೊದ್ ಮರೆತಿದ್ರಿಂದ ಫೋಟೋಗಳಿಗೆ ಕಾಯಬೇಕು...ನೀವ್ ಯಾರಾದ್ರೂ ಕ್ಲಿಕ್ಕಿಸಿದ್ರೆ ಪ್ಲೀಸ್ ಕಳ್ಸಿ!:)
44 comments:
ಈ ಕಾರ್ಯಕ್ರಮ ಮುಂದಿನ ಹೊಸ ಹೆಜ್ಜೆಗಳಿಗೆ ಒಂದು ಬದ್ರ ಅಡಿಪಾಯವನ್ನ ಹಾಕಿಕೊಟ್ಟದ್ದು ನಿಜ.... ಇನ್ನೂ ಹಲವಾರು ವಿಷಯಗಳ ಬಗ್ಗೆ ಚರ್ಚಿಸುವುದಿದೆ .... ಅನುಭವಗಳನ್ನ ಹಂಚಿಕೊಳ್ಳೊದು ಬಹಳಷ್ಟಿದೆ .... ನಿಮ್ಮ ಅನಿಸಿಕೆಗೆ ಧನ್ಯವಾದಗಳು......... ಹಾ!!! ನನಗೂ ಕುತುಹಲವಿತ್ತು ಬ್ಲಾಗುಗಳ ಹಿಂದಿನ ಮುಖಗಳ ಬಗ್ಗೆ, ಒಂದಷ್ಟು ಜನರ ಪರಿಚಯವು ಆಯಿತು.... ಅಂದಹಾಗೆ ನಿಮ್ಗೆ "ದೇಶ ಕಾಲ"ದ ಧ್ಯಾಂಕ್ಸ್ ಹೇಳಬೇಕಿತ್ತು, ಆದ್ರೆ ಆಗಲಿಲ್ಲ ......... ಮತ್ತೆ ಬೇಟಿ ಆಗ್ತೆವಲ್ಲ ..... :)
-ಅಮರ
ನೀವು compere ಮಾಡಿದವ್ರಾ?! ಶ್ರೀ ಹೇಳ್ದಾಗ ಬೇರೆ ಯಾವ್ದೋ ಅಮರ ಇರಬೇಕು ಅಂದುಕೊಂಡೆ... ಹೌದು, ಚರ್ಚಿಸೋ ವಿಷಯಗಳು ಬೇಕಾದಷ್ಟಿವೆ. ನಾವೆಲ್ಲಾ ಒಂದಿಷ್ಟು informal ಆಗಿಯೂ ಸೇರುವ-ಮಾತನಾಡುವ ಅಗತ್ಯ ಇದೆ. ದೇಶಕಾಲ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು:)
ಹಾ!!! ಅದೆ ಅಮರ, ಈ ಸ್ಟೇಜು ಭಾಷಣಕಾರರು ಎಲ್ಲರನ್ನ ಬದಿಗಿಟ್ಟು, ನಾವೆಲ್ಲ ಕೂತು ಮಾತಾಡಿದರೆ ಇನ್ನು ಹೆಚ್ಚು ಅರ್ಥಪೂರ್ಣವಾಗಿಯಾತು ಅನ್ನೊದು ನನ್ನ ಅನಿಸಿಕೆ ಕೂಡ .... ಆದಷ್ಟು ಬೇಗ ಎಲ್ಲ ಸೇರೊಣ.
-ಅಮರ
nimma anisikegalanna odi thilkondu tumba khushi aaytu. samayada abhaava iddidrinda hechchu charchisodakke aaglilla, nija. Informal aagi sikku maathadodu sari antha nanna anisike kooda, aadre ninne iddantaha sabhe nalli baree charche nadesi, adanna nibhaaysodu tumba kasha aagittu :-)
Lets plan to meet sometime. Thanks again for participating.
@amar
ಖಂಡಿತಾ!:)
@vijaya
ಬಂದು ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್:) ನಿಮ್ಮ ಉತ್ಸಾಹ ತುಂಬ ಖುಷಿ ಕೊಡ್ತು. ನೆನ್ನೆಯ ಸಭೆಯಲ್ಲಿ informal ಚರ್ಚೆ ಕಷ್ಟವಾಗ್ತಿತ್ತು ಅನ್ನೋದು ೧೦೦% ನಿಜ. ಮುಂದೆ ಹೇಗಿದ್ದರೆ ಚೆನ್ನ, ಏನು ಬೇಕು ಅನ್ನೋ ಕನಸಿನ ಮೂಟೆಗಷ್ಟೇ interactionನ ಅವಶ್ಯಕತೆಯ ಬಗ್ಗೆ ನಾ ಹೇಳಿದ್ದು:) ಮೊದಲ ಯತ್ನಕ್ಕೆ ಪ್ರಣತಿಗೆ ಫುಲ್ ಮಾರ್ಕ್ಸ್ - ಅದರ ಬಗ್ಗೆ ಸಂಶಯನೇ ಇಲ್ಲ:) ಅಂದಹಾಗೆ ನೀವು ತುಂಬಾ ಶ್ರುತಿ ರವಿಕಿರಣ್(ಟಿವಿ ನಟಿ) ಥರ ಕಾಣ್ತೀರಾ - ಯಾರಾದ್ರೂ ಹೇಳಿದಾರಾ?:)
ಕಾರ್ಯಕ್ರಮದ ವರದಿ ಮಾಡೋದಿಲ್ಲ ಅಂತ ಹೇಳಿದ್ರೂ ಬಹುಪಾಲು ಎಲ್ಲವನ್ನೂ ಕವರ್ ಮಾಡಿದೀರಾ.. ಗುಡ್ ಜಾಬ್.
ಇಷ್ಟು ಅನ್ನಿಸೋಕೆ ತಲೆಯಮೇಲೆ ಯಾವ ಬೋಧಿವೃಕ್ಷವೂ ಬೆಳೀಲಿಲ್ಲ,
This thought is so much mundane that I can never/ever dare to disagree with the author. Chumma Great!!
meaning, tannagide, madike neeru idda haage
@ಹರೀಶ
ವರದಿಗಿಂತ ನನ್ನ ಕೊರೆತ ಜಾಸ್ತಿ ಇದೆ ಅಂತ ಆ ಮಾತು ಹೇಳಿದ್ದು:D
@shami
mundane ಮತ್ತೆ great! ಎರಡ್ರಲ್ಲಿ ಯಾವ್ದನ್ನ ನಂಬ್ಲಿ ಸಾರ್:)) ಮಡಕೆ ನೀರೇನೋ ನಂಗೆ ಇಷ್ಟಾನೇ, ಆದ್ರೆ ಗಂಟ್ಲು ಕಟ್ಟುತ್ತೆ - ಸೋ ಅದರ ಮೇಲೂ ಅರ್ಥೈಸಕ್ಕಾಗ್ತಿಲ್ಲ ನಿಮ್ಮ್ ಮಾತು. ನೆಟ್ಟಗೆ ಹೇಳಿದ್ರೆ(ಬೈದಿದ್ರೆ) ಬದುಕ್ಕೋತಿತ್ತು ಬಡಜೀವ;) ಏನೇ ಇರಲಿ, ನೀವ್ ಬಂದು ಓದಿದ್ದಕ್ಕೆ ಥ್ಯಾಂಕ್ಸ್:) ಸ್ವಲ್ಪ ಡೀಟೇಲಾಗಿ ಬೈದ್ರೆ ಇನ್ನೂ ದೊಡ್ಡ ಥ್ಯಾಂಕ್ಸ್ ಹೇಳ್ತೀನಿ(ನಿಧಾನಕ್ಕಾದ್ರೂ, ಬೋಧಿವೃಕ್ಷ ಬೆಳೆದ್ ತಕ್ಷಣ ಖಂಡಿತಾ ಹೇಳ್ತೀನಿ:P)
ಬ್ಲಾಗಿಗರ ಮೀಟಿನ ಬಗ್ಗೆ
ನೀವು ಮೀಟಿದುದನ್ನು ಓದಿ
ನಾ ಅಲ್ಲಿಯೇ ಇದ್ದಂತೆ ಭಾಸವಾಯಿತು
ಅಂದ್ರೆ ಅದು ತಪ್ಪಾದೀತು
ನೀವೆಲ್ಲರೂ ಒಂದೆಡೆ ಸೇರಿ ಸಂತೋಷಿಸಿದಿರಿ
ಎಂದು ನನಗೆ ಹೊಟ್ಟೆ ಉರಿಯುತ್ತಿದೆ
ಮುಂದೊಮ್ಮೆ ನಾನೂ ನಿಮ್ಮೊಂದಿಗೆ ಸೇರುವೆ
ಅಂದ ಹಾಗೆ ನನ್ನ ಬ್ಲಾಗಿನ ಕೊಂಡಿಯನ್ನು
ಆಶ್ರಯ ಅಂತ ತೋರಿಸಿದ್ದೀರಿ
ಆಶ್ರಯ ನಿರಾಶ್ರಯ ಆಗಿ ಎರಡು ವರುಷಗಳೇ ಸಂದುತ್ತಾ ಬಂದಿದೆ
ಸದ್ಯಕ್ಕೆ ನನ್ನ ಬರಹವನ್ನು ಮಾವಿನಯನಸ
ಮತ್ತು ವೆಂಕಟೇಶ ಇಲ್ಲಿ ಪಾರ್ಕಿಸಿರುವೆ
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
ಶ್ರೀಮಾತಾ,
ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ.
ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’ ಅಂತ ಪರಿಚಯಿಸಿದಾಗ, ನಾನು ಪೆದ್ದು-ಪೆದ್ದಾಗಿ ನೋಡಿದಾಗ-ನೀವು ಏನಂದುಕೊಂಡಿರೋ...ಇರ್ಲಿ ಬಿಡಿ. "ಹೀಗೆ ಸುಮ್ನೆ" ಬ್ಲಾಗ್ಕರ್ತೆ ಅಂದಿದ್ದರೆ ತಕ್ಷಣ ಗೊತ್ತಾಗ್ತಿತ್ತು. ಶೇಖರ್ಪೂರ್ಣರವರನ್ನು ವಿಚಾರಿಸಿ, ನಿಮ್ಮ ಕೆಲವು ಹಳೆ ಪೋಸ್ಟುಗಳನ್ನು ನೋಡಿದ ಮೇಲೇನೇ ನನಗೆ ನಿಮ್ಮ ಬಗ್ಗೆ ತಿಳಿದದ್ದು. ಜೊತೆಗೆ ಶ್ರೀಮಾತ ಎನ್ನುವ ಹೆಸರು, ಅಪರೂಪಕ್ಕೊಮ್ಮೆ ಹಲವಾರು ಬ್ಲಾಗ್ಗಳನ್ನು ಒಟ್ಟಿಗೆ ನೋಡುವಾಗ ಆಗುವ ಗೊಂದಲ ಇತ್ಯಾದಿಗಳು ನಿಮ್ಮನ್ನು ಗುರುತಿಸುವಲ್ಲಿ ನನಗೆ ಅಡ್ಡಿಯಾದವು. ಈಗ ಗುರುತಾಯಿತು.
ಸುಶ್ರುತನಿಗೆ ಎಲ್ಲಾ ಬ್ಲಾಗಿಗಳನ್ನು....ನನ್ನ ಬ್ಲಾಗ್ನಲ್ಲಿ ಮುಂದುವರೆದಿದೆ.
ಶ್ರೀನಿವಾಸ್ ಸಾರ್, ಯಾವ ಬ್ಲಾಗರ್ಸ್ನಾದ್ರೂ ಮೊನ್ನೆ ನಾನು ತೂಂಬಾ ನೆನಪಿಸಿಕೊಂಡಿದ್ರೆ, ಮಿಸ್ ಮಾಡಿಕೊಂಡಿದ್ರೆ ಅದು ನಿಮ್ಮನ್ನ! ಕನ್ನಡ ಬ್ಲಾಗ್ಗಳು ಆಗಷ್ಟೇ ಷುರುವಾಗಿದ್ದ ದಿನಗಳಲ್ಲಿ ನಮ್ಮೆಲ್ಲ ತೊದಲು-ತಲೆಹರಟೆಗಳನ್ನ ಓದ್ತಾ, ಪ್ರತಿಕ್ರಿಯೆ ನೀಡ್ತಾ, ಪ್ರೋತ್ಸಾಹಿಸ್ತಾ ಬಂದ ನೀವು ಇಲ್ಲದಿದ್ರೆ ನಮ್ಮಲ್ಲಿ ಎಷ್ಟೋ ಜನ ಬರಿಯೋದು ನಿಲ್ಲಿಸಿಬಿಡ್ತಿದ್ವಿ ಅನ್ನಿಸುತ್ತೆ! we all owe a bigggg thanks to you for nurturing us! ಮೊನ್ನೆ ನೀವಿರಬೇಕಿತ್ತು...
ಇರ್ಲಿ ನೀವಿಲ್ಲಿ ಬಂದಾಗ ಮತ್ತೆ ಭೇಟಿಯಾಗೋಣ..
ರವಿಯವ್ರೆ, ಅಷ್ಟೆಲ್ಲಾ ಡೋಂಟ್ ವರಿ ಮಾಡ್ಕೊಬೇಡಿ:)) ನಿಮ್ಮ ಪೋಸ್ಟ್ ಚೆನ್ನಾಗಿದೆ:)
ಶ್ರೀನಿವಾಸ್ ಸಾರ್, ಲಿಂಕ್ ಬಗ್ಗೆ ಕ್ಷಮೆಯಿರಲಿ,ನನ್ನ ಗೂಗಲ್ ರೀದರ್ನಲ್ಲಿ ಹೊಸ ಅಡ್ರೆಸ್ಸನ್ನೇ ಹಾಕಿಕೊಂಡಿದೀನಿ, ಇಲ್ಲಿ ಅಪ್ಡೇಟ್ ಮಾಡೋದು ಮರೆತೆ! ಸಾರಿ...
ಶ್ರೀ,
ಬರ್ದೇ ಇದ್ದಿದ್ಕೆ ಬೇಸ್ರ ಆಗ್ತಿದೆ..ಕಾರಣ ಅದು ಇದು ಅಂತ ಫಾರ್ಮಲ್ ಆಗಿ ಮಾತಾಡೋದಕ್ಕಿಂತ ಅಪುನ್ ಕಾ ಬ್ಯಾಡ್ಲಕ್ಕೀಚ್ ಖರಾಬ್ ಹೈ ಅಂದ್ಕೋಂಡು ಸುಮ್ನಾಗಿದೀನಿ.ಮುಂದಿನ್ಸಾರಿ ಮಿಸ್ ಮಾಡೊಲ್ಲ. ನಿಮ್ಮ ಬರಹ ಬರದಿದ್ದ ಕೊರತೇನ ತಕ್ಕಮಟ್ಟಿಗೆ ತೂಂಬಿಕೊಟ್ಟಿತು.
-ಟೀನಾ.
hmm... ನಿಮ್ಮನ್ನ ನೋಡೋ ಕುತೂಹಲ ತುಂಬಾ ಇತ್ತು(ತುಂಬಾ ಜನರಿಗೂ ಇತ್ತು!:) ) ನಾನೂ,ಸುರೇಖಾ(ಮನಸ್ವಿನಿ) ನಿಮ್ಮನ್ನ ನೆನಪಿಸ್ಕೊಂಡ್ವಿ... ಮುಂದಿನ ಸಲ ಖಂಡಿತಾ ಸಿಗಬೇಕು!
ಶ್ರೀ -
ತುಂಬಾ ಚೆನ್ನಾಗಿ ಬರೆದಿದೀರಿ.
ನನಗೆ ನೆನಪಿರೋ/ಇಷ್ಟ್ ಆಗಿದ್ ಇನ್ನೆರಡು ವಿಷಯ ಅನ್ದ್ರೆ
ಸಂಪದ ನಾಡಿಗ್ ಹೇಳಿದ
೧) ಒಳ್ಳೆ ಪ್ರಯತ್ನಗಳಿಗೆ 'ಹೊರಗೆ' ಇರೊ ಹಾಗೆ 'Donate' ಮಾಡಿ ಬೆಂಬಲ ಕೊಡೋ ಸಂಪ್ರದಾಯ ನಮ್ಮಲ್ಲಿ ತುಂಬಾ ಕಮ್ಮಿ.
೨) ಬೇರೆ ಬೇರೆ ಕಾರಣಗಳಿಗಾಗಿ ನಮ್ಮ ನಮ್ಮಲ್ಲೆ ಇರೋ ಭಿನ್ನಾಭಿಪ್ರಾಯಗಳನ್ನ ಮರೆತು ಒಂದಾಗಿ ಕೆಲಸ ಮಾಡೊಕೆ ಸಾದ್ಯ ಆದ್ರೆ ಚೆನ್ನ. I think he was refering to pro/against Braraha/Nudi S/W- Business ethics -Standard of blog write-ups etc. Very true.
Thatskannada.com ನ ಶ್ಯಾಂ ರವರು Blog ಬರಹಗಳನ್ನ 'ಕರ್ಮ ವೀರ'ದ ಕಡೆಪುಟದಲ್ಲಿ ಬರೊ 'ಮಕ್ಕಳ paintings' ಗೆ ಹೋಲಿಸಿ ಹೊಗಳಿದ್ದು ಮೊದಲು ಸ್ವಲ್ಪ ಅತೀ ಅನ್ನಿಸಿದ್ರು ಆಮೇಲೆ majority ಬರಹ ಗಳನ್ನ ತೋಗೊಂಡ್ರೆ 'ಸರೀನೇ' ಅನ್ನಿಸ್ತು :)).
sis,
intha blog meet gaLige nammantha, andre KannaDa da bagge alpa swalpa kaaLaji iddu, English nalli blog maaDovrigoo entry idyaa..? athava gate nindane oDisbiDtheero..?
ರಾಜೇಶ್
ಶ್ಯಾಮ್ ರವರು ಕನ್ನಡದ ಬಹಳಷ್ಟು ಬ್ಲಾಗ್ಗಳು ಮಕ್ಕಳ canvas ತರಾ ಇವೆ ಅಂದದ್ದು ಬಹುಪಾಲು ನಿಜ. ಬರೆಯಲು ಬಾರದವರು, ಏನನ್ನಾದರೂ ಬರೀಬೇಕು ಅನ್ನೋ ಹುಮ್ಮಸ್ಸಿರುವವರು, ಬೇರೆಯವರು ಬರೀತಾರೆ ಅಂತ ಬರೆಯುವವರು ಇವರಿಗೆಲ್ಲಾ ಬ್ಲಾಗ್ ಒಂದು canvas ನಿಜ. ನಾನು ಕೆಲವು ಬರಹಗಳನ್ನು ಓದುವಾಗ ಅವುಗಳಲ್ಲಿ ಬಹಳಷ್ಟು kiddish ಅನ್ನಿಸಿದ್ದುಂಟು. ಊಟ ಮಾಡಿದ್ದು, ತಿಂಡಿ ತಿಂದಿದ್ದು, ಕಸಾ ಗುಡಿಸಿದ್ದು ಮುಂತಾದ ವಿವರಗಳನ್ನೆಲ್ಲಾ ಬರೆದುಕೊಳ್ಳೋದಕ್ಕೆ ಏನಂತೀರಿ? ಹಸಿವಿತ್ತು ಊಟ ಮಾಡಿದೆ ಅಂದರೆ ಸಾಕಲ್ಲ. ಹೇಗೆಲ್ಲಾ ಊಟ ಮಾಡಿದೆ ಅನ್ನೋದು ಬೇಕಾ?
ಇನ್ನೂ ಕೆಲವರು ಬರಹಗಳನ್ನು ಆಪ್ತವಾಗಿಸಲು ಹೋಗಿ ಹೀಗೆಲ್ಲಾ ಬರೀತಾರೆ ಅನ್ಸುತ್ತೆ. ಆಪ್ತತೆ ಅತಿಯಾಗಬಾರದು. ಅದು ಬರೆಯುವಾತ ಮತ್ತು
ಓದುವಾತನ ಕೊಂಡಿಯೊಂದನ್ನು ನಡುವೆ ಬೆಸೆಯುವಷ್ಟಿದ್ದರೆ ಸಾಕು.
ಬ್ಲಾಗ್ informative ಆಗಿದೆಯೆನ್ನಿಸಿದರೆ ಅದಕ್ಕೆ ಚೌಕಟ್ಟೇ ಬೇಕಿಲ್ಲ. ಅದು kiddish ಅನ್ನಿಸಿಕೊಳ್ಳೋದೆ ಇಲ್ಲ. ಅದು ಯಾವ canvas ನಲ್ಲಿದ್ದರೂ ಒಳ್ಳೇ ಕೃತಿಯಾಗಿ ಅರಳುತ್ತೆ.
ಆಮೇಲೆ ಬ್ಲಾಗೀ ಪ್ರಪಂಚದಲ್ಲಿ(ಬ್ಲಾಗೇತರ ಪರಿಸರದಲ್ಲೂ
) ಇರುವ ವಿಪರ್ಯಾಸ ತಾನು ಬರೆದದ್ದೆಲ್ಲ ಶ್ರೇಷ್ಟವೆಂದುಕೊಳ್ಳೋದು, ಇತರರು ಅದನ್ನು ಹೊಗಳಲಿ ಅಂದುಕೊಳ್ಳೋದು, ಅದನ್ನೇ ಪ್ರಕಟಿಸಿ ಬಿಡಲು ಪ್ರಯತ್ನ ಪಡೋದು(ಕೈಯ್ಯಲ್ಲಿ ದುಡ್ಡು ಓಡಾಡುತ್ತಿರುತ್ತೆ). ಇವೆಲ್ಲಾ ಬ್ಲಾಗ್ ಪ್ರಪಂಚ ತಂದಿಡಬಹುದಾದ ಸವಾಲುಗಳು.
ಆದರೆ ಇವೆಲ್ಲವುಗಳ ಮಧ್ಯೆ ಅವೇ kiddish ಬರಹಗಾರರ ನಡುವೆ ಒಳ್ಳೆಯ ಬರಹಗಾರನೊಬ್ಬ ಮೂಡಿ ಬರಹಲೂಬಹುದು.
So let us encourage it..
ಶ್ರೀ,
ಕಾರ್ಯಕ್ರಮದ ಬಗ್ಗೆ ’ಕಾರ್ಯಕ್ರಮದ ವರದಿ ಇಲ್ಲಿ ಮಾಡೋ ಸಾಹಸಕ್ಕೆ ಹೋಗಲ್ಲ’ ಅಂತ ಅಂದೂ ಸುಮಾರಷ್ಟು ವರದಿ ಮಾಡಿದ್ದೀರಿ. :)
ಸುಮಾರಷ್ಟು ಬ್ಲಾಗಿಗರನ್ನು ಭೇಟಿ ಆಗಿದ್ದು ಸಂತೋಷದ ವಿಷಯ. ನಿಮ್ಮ ಜೊತೆ ಮಾತು ಸುಲಭವಾಗಿ ಸಾಗಿದ್ದು ಇನ್ನೂ ಖುಶಿಯ ವಿಷಯ.
ನಾವಡರು ಅಲ್ಲಿ ಚಂಡೆಮದ್ದಳೆ ಬಾರಿಸ್ತಾ ಇದ್ರೂ ನಂಗೆ ಕೇಳಿಸ್ಲಿಲ್ಲ ಅನ್ನೋದು ಬೇಸರ ತಂದಿದೆ. :(
ಎಲ್ಲರ informal ಪರಿಚಯ ಇದ್ದಿದ್ರೆ ಚೆನ್ನಾಗಿರ್ತಿತ್ತು. at least 'ಓಹ್...ಇವ್ರಾ’ ಅಂತ ಮುಖ ಮುಖ ನೋಡ್ಕೋಳಬಹುದಿತ್ತು ಅಲ್ವಾ ಶ್ರೀ ?
ಅಂದ ಹಾಗೆ ನಿಮಗೊಂದು ವಿಷಯ ಗೊತ್ತಾ? ಕನ್ನಡ ಬ್ಲಾಗುಗಳಲ್ಲಿ ನಾನು ಮೊದಲು ಓದಿದ್ದು ತವಿಶ್ರೀ ಸರ್ ದು ಮತ್ತೆ ನಿಮ್ದು . ಹೇಳೋಕೆ ಮರ್ತಿದ್ದೆ.
ಚರ್ಚಿಸೋ ವಿಷಯಗಳು ಬೇಕಾದಷ್ಟಿವೆ ಬಿಡಿ. ಸಿಗೋಣ ಮತ್ತೆ.
ಶ್ರೀ,
ನೀವ್ ಸಿಕ್ಕಿದ್ದು ಖುಶಿಯಾಯ್ತು. ಮತ್ತೆ ಸಿಗೋಣ. ಅವತ್ತು ಏನೂ ಮಾತಾಡಿಸಲೇ ಆಗಲಿಲ್ಲ. ಆರಾಮಾಗಿ ಸಿಗೋಣ.
ಈ ಪೋಸ್ಟ್ ಚೆನ್ನಾಗಿದೆ.
ಪ್ರೀತಿಯಿಂದ
ಸಿಂಧು
ಛೇ! ಒಂದೊಂದು ರಿಪೋರ್ಟೂ ಹೋಟ್ಟೆ ಉರಿಸ್ತಿದೆ!! ನಾನು ಅನಿವಾರ್ಯವಾಗಿ ಬರಲಾಗ್ಲಿಲ್ಲ. ಎಲ್ಲರ ವರದಿ ನೋಡ್ತ ಈಗ ನಿಮ್ಮದಕ್ಕೆ ಬಂದೆ. ಕಾರ್ಯಕ್ರಮದ ಒಟ್ಟು ಚಿತ್ರ ಸಿಕ್ಹೋಯ್ತು.ಥ್ಯಾಂಕ್ಸ್.
ಎರಡನೇ ಕಾರಣವೂ ಇದೆ. ಥ್ಯಾಂಕ್ಸ್ ಗೆ.
ನಲ್ಮೆ,
ಚೇತನಾ ತೀರ್ಥಹಳ್ಳಿ
@ಗುರು
ಹಾ, ಹರಿಪ್ರಸಾದ್ ನಾಡಿಗರು ಹೇಳಿದ್ದು ಟೆಕ್ನಿಕಲ್ ಆಗಿದ್ದರೂ ಅವರ ಪ್ರಾಮಾಣಿಕ ಕಳಕಳಿ-ಪ್ರಯತ್ನ, ground realityಯ ಅರಿವಿನೊಂದಿಗೇ ಮಾಡಬಹುದು ಅನ್ನೋ ಉತ್ಸಾಹ ನನಗೆ ಹಿಡಿಸ್ತು, ಓವರ್ಹೆಡ್ ಟ್ರಾನ್ಸ್ಮಿಷನ್ನನ್ನೂ ಮೀರಿ!:)
@ರವಿ
ಆ balance ಬೇಕು ಅನ್ನೋದು ಅರ್ಥವಾಗೋದು ಒಂದು ಘಟ್ಟವಾದ್ರೆ ಅದನ್ನ ಹಿಡಿಯೋದು ಇನ್ನೊಂದು ದೊಡ್ಡ ಹೆಜ್ಜೆ ಅಲ್ಲ್ವಾ!:) ನಿಮ್ಮ ಮಾತು ನೂರರಷ್ಟು ನಿಜ, kiddish ಬರಹಗಳಿಂದ ಷುರು ಮಾಡಿ ಇವತ್ತು ತುಂಬಾ ಚೆನ್ನಾಗಿಬರೀತಿರೋವ್ರು ನಮ್ಮ ನಡುವೆಯೇ ಇದ್ದಾರೆ. ಆದ್ರೆ ಇದಕ್ಕೆಲ್ಲ ಸಂವಾದಗಳಿಗೆ ತೆರೆದುಕೊಳ್ಳೋ ಮನಸ್ಥಿತಿಯೊಂದು ಮಾತರ್ ಅವಶ್ಯಕ ಅನ್ನಿಸುತ್ತೆ - ಶ್ಯಾಂ ಸರ್ ಹೇಳಿದ ಜವಾಬ್ದಾರಿಯ ಅರಿವು ಅಲ್ಲಿ ಪ್ರಸ್ತುತವಾಗುತ್ತೆ...
@ಅನಂತ
ನಿಂಗೆ ಇಂಟರೆಸ್ಟ್ ಇದೆ ಅಂತ ಗೊತ್ತಿರಲಿಲ್ಲ ಕಣೋ, ಮುಂದಿನ ಸಲ ಖಂಡಿತಾ ಹೇಳ್ತೀನಿ, ಬರುವಿಯಂತೆ. ಇದು ಆನ್ಲೈನ್ ಕನ್ನಡಿಗರ ಕೂಟ - ಕನ್ನಡದಲ್ಲಿ ಬರಿಯುವವರು ಮಾತ್ರ ಬರಬೇಕಂತ ಏನಿರ್ಲಿಲ್ಲ:)
@ಮನಸ್ವಿನಿ & ಸಿಂಧು
ನಿಮ್ಮ ಭೇಟಿ ನನಗೂ ತುಂಬಾ ಖುಷಿ ತಂದ ವಿಷಯಗಳಲ್ಲೊಂದು:) ಖಂಡಿತಾ ಆರಾಮದಲ್ಲಿ ಸಿಗೋಣ. ಮೈಲ್ ಮಾಡಿ ಪ್ಲಾನ್ ಮಾಡುವಾ ಸದ್ಯದಲ್ಲೇ!
ಮನಸ್ವಿನಿ - ಸಾರಿ, ನಾವಡರನ್ನ ನಿಮಗೆ ಪರಿಚಯಿಸಬೇಕಿತ್ತು...ನೀವು ಇನ್ನೆಲ್ಲೋ ಮಾತಾಡ್ತಿದ್ರಿ, ನಾನೂ ಮರೆತೆ! ನನಗೆ ಇನ್ನೊಂದು ಶ್ರೀ ಪರಿಚಯಿಸಿದ್ರು...
informal ಪರಿಚಯ formalಆಗಿ ಆಗಬೇಕಿದ್ರೆ ತುಂಬಾ ಸಮಯ ಆಗ್ತಿತ್ತಲ್ಲವಾ... ನೂರು ಜನ ಅರ್ಧರ್ಧ ನಿಮಿಷ ಹೆಸರು-ಯು ಆರ್ ಎಲ್ ಹೇಳಿದ್ದರೂ... ಅದು ಮ್ಯಾನೇಜ್ ಮಾಡೋಕೆ ಕಷ್ಟವಾಗ್ತಿತ್ತು , ಬೇರೆ ಇಂತಹ ಸಭೆ-ಪರಿಚಯದ ನನ್ನ ಅನುಭವಗಳಿಂದ ಹೇಳೋದಾದ್ರೆ. ಮೊದಲ ಹತ್ತು-ಹದಿನೈದು ಪರಿಚಯಗಳಿಗೆ ಮೀರಿ ಸಭೆಯ ಗಮನ ಹಿಡಿದಿಡೋದು ಕಷ್ಟವಾಗುತ್ತೆ ಅನ್ನಿಸುತ್ತೆ...
ಸಿಂಧು, ಭಾರೀ ಮಾತಾಡೋಳ ಹಾಗೆ ಸ್ಕ್ರಾಪ್ ಹಾಕಿ ಬೇರೆ ವಿಚಾರಿಸಿಕೊಂಡಿದ್ದೆ, ಆದ್ರೆ ಅವತ್ತು ವಾಪಸ್ ಒಬ್ಬಳೇ ಆಟೋ ಹುಡುಕಿ ಹೋಗೋ ತಲೆನೋವಲ್ಲಿ ಹೆಚ್ಚುಹೊತ್ತು ಮಾತಾಡೋಕೆ ಆಗ್ಲಿಲ್ಲ:( ಮೀಟ್ ಮಾಡೋಣ, ಮಾತುಗಳು ಬೇಕಾದಷ್ಟಿವೆ!:)
@ಚೇತನಾ
ನಿಮ್ಮನ್ನ ಇಲ್ಲಿ ನೋಡಿ ಖುಷಿಯಾಯ್ತು, ಅಲ್ಲಿ ಎದುರಿಗೆ ನೋಡಿದ್ರೆ ಇನ್ನೂ ಖುಷಿಯಾಗಿರ್ತಿತ್ತು! ನಿಮ್ಮನ್ನ, ಟೀನಾ ಅವರನ್ನ ನೋಡೋ ಕುತೂಹಲ ಬಹಳ ಇತ್ತು. ನಿಮ್ಮ ಇನ್ನೊಂದು ಥ್ಯಾಂಕ್ಸ್ ಯಾಕೆ ಅಂತ ಗೊತ್ತಾಯ್ತು:)) ನಾ ’ಕಟ್ಟಿದ’ ಪಟ್ಟ ಅಲ್ಲ ಅದು, ಮೊನ್ನೆ ಅಲ್ಲೇನಾದ್ರೂ ಸರ್ವೇ ಮಾಡಿದ್ರೆ ಪ್ರೂವ್ ಆಗ್ತಿದ್ದ ಸತ್ಯ:) ಎಷ್ಟು ಜನರಿಗೆ ಡಿಸಪಾಯಿಂಟ್ ಆಯಿತು ಅನ್ನೋದಿಕ್ಕೆ ಪ್ರೂಫ್ ನೀವು ಕೂಡಾ ನೋಡಿದ್ದೀರಲ್ಲ!:)
Hello,
I saw your comments on the BLOG MEET @ Santoshkumar's BOLG. Thought i will comment on your comments...
First of all My apologies for gate crashing into your BOLOG space.
I have never read your BOLGs so i am really not aware of any of your work etc. I am a "AGNANI" with regards to your work. However, i am a regular reader of Santosh's BLOGS and when i saw your comments i really strongly felt like defending him on all the comments that he has made(Poor Soul, he has a medium to express his feelings (which are not pretentious by any means thankfully) with his creative writing here on the internet).
As i understand you are trying to patronize the organizers which is ok with me because you might have your own reasons but to come down heavily upon somebody like Santoshkumar who is honest in his opinions is wrong. I just wish you will understand this.
Thanks again.
PEACE
SP
ಓಹ್! ಒಂದು ಬ್ಲಾಗಿಗರ ಮೀಟಿನ ಬಗ್ಗೆಯೂ ಇಷ್ಟೊಂದು ರಾದ್ಧಾಂತ ಆಗ್ತಿದೆ ಅಂತ ನನಗೆ ಗೊತ್ತಿರಲೇ ಇಲ್ಲ
ಒಂದು ನಾಣ್ಯಕ್ಕೆ ಎರಡು ಮುಖವಿದ್ದಂತೆ, ಎಲ್ಲ ಕಾರ್ಯಕ್ರಮ ಸಂಯೋಜನೆಯಲ್ಲಿಯೂ ಸಕಾರಾತ್ಮಕ ನಕಾರಾತ್ಮಕ ಅಂಶಗಳು ಕಂಡುಬರುತ್ತವೆ.
ಆದರೆ ನಾವುಗಳೂ ಆ ಕಾರ್ಯಕ್ರಮದಲ್ಲಿ ಒಬ್ಬರಾದರೆ, ನಕಾರಾತ್ಮಕ ಅಂಶವನ್ನು ಹೊಟ್ಟೆಯಲ್ಲಿಟ್ಟುಕೊಂಡು, ಸಕಾರಾತ್ಮಕ ಅಂಶವನ್ನು ಹೊರಗೆಡವಬೇಕಿದೆ. ನೀವು ಮಾಡಿರುವುದೂ ಅಂತಹ ಉತ್ತಮ ಕಾರ್ಯವನ್ನೇ! ಅದಕ್ಕಾಗಿ ನನ್ನ ಅಭಿನಂದನೆಗಳು.
ಹೋಗ್ಲಿ ಬಿಡಿ, ಪಾಟೀಲರು - ಮತ್ತಿತರರು ಅನುಭವಿಸಿದಂತಹ ಸನ್ನಿವೇಶಗಳನ್ನು ನಾಲ್ಕು ವರ್ಷಗಳಿಂದ ನಾನು ಆನೂಚಾನವಾಗಿ ಅನುಭವಿಸುತ್ತಾ ಬಂದಿರುವೆ, ಮುಖ ಮುದುಡಿಸಿಕೊಂಡಿರುವೆ, ಬರಹವನ್ನು ಬದಿಗಿಟ್ಟ ಸಂದರ್ಭವೂ ಇದೆ. ಪ್ರತಿವಾದಿಗಳೇನೂ ಸಾಮಾನ್ಯ ವ್ಯಕ್ತಿಗಳಲ್ಲ. ಅಂತಹವರೊಂದಿಗೂ ಬಹಿರಂಗ ಗುದ್ದಾಡಿ, ಮುಸುಕಿನೊಳಗೆ ಗುದ್ದಾಡಿ, ಮುಖ ಊದಿಸಿಕೊಂಡದ್ದೂ ಇದೆ. ಇವೆಲ್ಲಾ ಜೀವನದ ಆಯಾಮಗಳು.
ಆದರೇನು, ನಾವು ಮಾಡಬೇಕಿರುವುದು ಕನ್ನಡದ ಏಳಿಗೆ, ಹಾಗಾಗಿ ಎಲ್ಲವನ್ನೂ ಮರೆಯೋಣ.
ಎಸ್ಪಿಯವರೇ,
ಅಲ್ಲಿಯ ರಾಡಿ ಇಲ್ಲಿ ಎರಚಾಡೋಕೆ ಮನಸ್ಸಿಲ್ಲ ಸಾರ್, ನಾನು ಸಂತೋಶ್ ಅವರ ಪೋಸ್ಟಿಗೆ ಕಾಮೆಂಟ್ ಹಾಕುವಾಗ ಅವರ ಹಿಂದಿನ ಪೋಸ್ಟ್ ಗಳನ್ನ ಓದಿದ್ದೆ. ಚೆನ್ನಾಗಿ, ರೀಸನಬಲ್ ಆಗಿ ಬರೀತಾರೆ ಅನ್ನಿಸಿದ್ರಿಂದಲೇ ಈ ಪೋಸ್ಟ್ನಲಿ ಕಂಡ ಅನಗತ್ಯ ವೈಯುಕ್ತಿಕ ವ್ಯಂಗ್ಯಗಳು ಮುಜುಗರ ತರಿಸಿದ್ವು. ಯಾವಾಗ್ಲೂ ಹಾಗೇ ಬರಿಯೋರು ಅನ್ನಿಸಿದ್ರೆ ನಾನು ಅಲ್ಲಿ ಮಾತಾಡೋಕೇ ಹೋಗ್ತಿರಲಿಲ್ಲ.
ಇಷ್ಟರ ಮೇಲೆ ನಾನು ಅಲ್ಲಿ ಅವರ ಪೋಸ್ಟಿನಲ್ಲಿರೋ ವಿಷಯಗಳಿಗೆ ಪ್ರತಿಕ್ರಿಯೆ ನೀಡಿದೆನೇ ಹೊರತು ವೈಯುಕ್ತಿಕವಾಗಿ ಕೊಚ್ಚೆ ಎಬ್ಬಿಸೋ ಯಾವ ಮಾತನ್ನೂ ಹೇಳಲಿಲ್ಲ. ಸ್ವಲ್ಪ ಸಮಾಧಾನದಿಂದ ಓದಿದ್ರೆ ಅವರಿಗೂ ಅದು ಗೊತ್ತಾಗ್ತಿತ್ತು. ಬಿಡಿ, ಇಷ್ಟೆಲ್ಲ ಜನ ಬಂದು ತಪ್ಪು ಅಂದಾಗ ಅವರಿಗೂ ಸಮಾಧಾನ ಕಳಿಯೋದು ಆಶ್ಚರ್ಯದ ವಿಷಯ ಅಲ್ಲ. ಆದರೆ ನಾವೆಲ್ಲ ಹೇಳಿದ ಮಾತುಗಳಿಗೆ ಪ್ರತಿಯಾಗಿ ಅವರ ಉತ್ತರ logical ಆಗಿ ಕೊಡೋ ಬದಲು ಇಲ್ಲ-ಸಲ್ಲದ ವಿಷಯಗಳನ್ನೆತ್ತಿ ಅದನ್ನೊಂದು ಚೀಪ್ ಎಂಟರ್ಟೈನ್ಮೆಂಟ್ ಆಗಿಸಿದ್ದು ಬೇಜಾರಿನ ವಿಷ್ಯ. ನಿಮಗೂ ಅದು ಕಂಡಿರುತ್ತೆ ಅಂತ ಭಾವಿಸ್ತೀನಿ.
ನಾನು ಆರ್ಗನೈಸರ್ಸ್ನ ಪೇಟ್ರನೈಸ್ ಮಾಡೋಕೆ ಯಾವ ದೊಡ್ಡ ಪಾಳೇಗಾರಳೂ ಅಲ್ಲ ಸರ್, ನನ್ನ ಪೋಸ್ಟಿನಲ್ಲೂ ಅವತ್ತಿನ ಕಾರ್ಯಕ್ರಮದಲ್ಲಿ ಇನ್ನೂ ಏನಿರಬಹುದಿತ್ತು, ಮುಂದಿ ಏನಿದ್ದರೆ ಚೆನ್ನ ಅಂತೆಲ್ಲ ಬರೆದಿದ್ದೀನಿ, ಸಮಯ ಆದ್ರೆ ಓದಿ. (you might have your reasons ಅಂತ ಬರೆದಿದ್ದೀರಿ, ನನ್ನ ರೀಸನ್ಗಳನ್ನ ಈ ಪೋಸ್ಟ್ನಲ್ಲೂ, ಸಂತೋಶ್ ಅವರ ಬ್ಲಾಗಿನಲ್ಲಿ ಹಾಕಿದ ಕಾಮೆಂಟುಗಳಲ್ಲೂ ಸ್ಪಷ್ಟವಾಗಿಯೇ ಬರೆದಿದ್ದೀನಿ ಅನ್ನಿಸುತ್ತೆ) ಒಟ್ಟು ಆ ತಂಡದ ಉತ್ಸಾಹ-ಪ್ರಯತ್ನದ ಬಗ್ಗೆ ಗೌರವ, ಅಭಿಮಾನ ಹುಟ್ಟಿದ್ದಂತೂ ನಿಜ. ಅದಕ್ಕೇ ಪ್ರಯತ್ನದ ಬಗೆಗಿನ ಚರ್ಚೆಗಿಂತ ತಂಡದವರ ಬಗ್ಗೆ, ಅಲ್ಲಿ ಬಂದ ಇತರರ ಬಗ್ಗೆ ವೈಯುಕ್ತಿಕ ಟೀಕೆಗಳನ್ನ ’ನೇರ’ ’ದಿಟ್ಟ’ ಅಭಿಪ್ರಾಯಮಂಡನೆ ಅಂತ ಒಪ್ಪಿಕೊಳ್ಳೋಕೆ ನನಗೆ ಸಾಧ್ಯವಾಗಲಿಲ್ಲ. ಅದಕ್ಕೇ ಚರ್ಚೆಗೆ ನಿಂತೆ. ಆದ್ರೆ ನಮ್ಮ ಪ್ರಶ್ನೆಗಳಿಗೆ ಲಾಜಿಕಲ್ ಉತ್ತರ ಕೊಡೋ ಬದಲು ಮತ್ತೆ ಎಲ್ಲರನ್ನ ಸೇರ್ಸಿ ಗುತ್ತಿಗೆದಾರರು ಅಂತ ಗುಡಿಸಿಹಾಕಿದಾಗ ಸಂತೋಶ್ ಅವರ ಸೆನ್ಸಿಬಿಲಿಟಿಯ ಬಗ್ಗೆ ಇದ್ದ ನಂಬಿಕೆ ಹುಸಿಯಾದಂತೆನಿಸಿ ಆ ಚರ್ಚೆಯಿಂದ ಆಚೆ ಬಂದೆ. ಅದಾದಮೇಲೆ ಅಲ್ಲಿ ಬಂದಿರೋ ಕೀಳು ಅಭಿರುಚಿಯ ಅನಾನಿಮಸ್ ಪೋಸ್ಟ್ಗಳನ್ನ ನೋಡಿದ ಮೇಲೂ ನಿಮಗೆ ನನ್ನದೇ ತಪ್ಪು ಅನ್ನಿಸಿದ್ರೆ ಅದು ವಿಪರ್ಯಾಸ. ಇನ್ನು ಇಲ್ಲಿ ಆ ಚರ್ಚೆ ಮುಂದುವರಿಸೋಕೆ ನನಗೆ ಮನಸ್ಸಿಲ್ಲ ಸರ್. ನಿಮಗೆ ಇನ್ನೂ ನನ್ನದೇ ತಪ್ಪು ಅನ್ನಿಸಿದ್ರೆ ಅಮೃತಸಿಂಚನದಲ್ಲೇ ನನ್ನನ್ನ ಇನ್ನಷ್ಟು ಬೈದುಬಿಡಿ. ಯಾವ್ದೋ ಜನ್ಮದ ಕರ್ಮ ಅಂತ ಸುಮ್ಮನೆ ಸಹಿಸಿಬಿಡ್ತೀನಿ.
ಒಂದು ಸದುದ್ದೇಶದ ಪ್ರಯತ್ನದ ಹಿನ್ನೆಲೆಯಲ್ಲಿ ಇಷ್ಟೆಲ್ಲ ಕೊಚ್ಚೆ ಎರಚಾಟ ಆಯ್ತಲ್ಲ, ಅದಕ್ಕೆ ಒಂದು ರೀತಿಯಲ್ಲಿ ನಾನೂ ಕಾರಣವಾದಂತಾಯ್ತಲ್ಲ ಅನ್ನೋದೊಂದೇ ಬೇಜಾರಿನ ವಿಷ್ಯ!
ತವಿಶ್ರೀ ಸರ್,
ನೀವು ಹೇಳೊದು ಖಂಡಿತಾ ನಿಜ, ಆ ನಂಬಿಕೆಯಲ್ಲೇ ಇಲ್ಲೂ ಬರೆದದ್ದು, ಅಲ್ಲೂ ಬರೆದದ್ದು. ಆದ್ರೆ ಅದು ಇಷ್ಟು ರಾದ್ಧಾಂತವಾಯ್ತು...ಬೇಜಾರಾಗ್ತಿದೆ..,ಆದ್ರೆ ಏನ್ ಮಾಡೊದು!:)
Hello Again,
I appreciate your way of thinking. I can not agree more when Srinivas says "ಇವೆಲ್ಲಾ ಜೀವನದ ಆಯಾಮಗಳು".
I am writing back just because you said "ನಿಮಗೆ ಇನ್ನೂ ನನ್ನದೇ ತಪ್ಪು ಅನ್ನಿಸಿದ್ರೆ"... This is not the case at all.
PEACE
SP
ಶ್ರೀ ಯವರೇ,
ಬ್ಲಾಗ್ ಸಭೆ ಕುರಿತ ’ಕಾರಣ-ಸಕಾರಣ-ವಿನಾಕಾರಣ-ಕಾಲು ಎಳೆಯೋ ಕಾರಣ’ ದಂಥ ಎಲ್ಲ ವರದಿಗಳನ್ನು ಓದಿದೆ. ತಮಾಷೆಯಾಗಿತ್ತು.
ನಿಮ್ಮ ವರದಿ ಚೆನ್ನಾಗಿದೆ. ನಾನೂ ಬರೆಯಬೇಕೆಂದುಕೊಂಡಿದ್ದೆ. ಆದರೆ ನೀವೆಲ್ಲಾ ಬರೆದ ಮೇಲೆ ಮತ್ತೆ ಪುನರುಕ್ತಿ ಎನ್ನಿಸಿ ಸುಮ್ಮನಾದೆ. "ಅವರವರ ಭಾವಕ್ಕೆ’ ಬರೆದಿರೋದು ನಿಜ. ಆದರೆ ಕೆಲವರ ವರದಿಯಲ್ಲಿ ಪರರ ಭಾವಕ್ಕೆ ಅಭಾವವಾಗಿ, ಅವರದ್ದೇ ಭಾವ ಹೆಚ್ಚಾಗಿತ್ತು. ಏನೂ ಮಾಡೋಕ್ಕಾಗಲ್ಲ ಬಿಡಿ.
ಅಂದಹಾಗೆ ನಿಮ್ಮನ್ನು, ಶ್ರೀ (ಮತ್ತೊಬ್ಬರು), ಸಿಂಧು ಅವರನ್ನು ಭೇಟಿಯಾಗಿದ್ದು ಖುಶಿಯಾಯ್ತ್ತು. ಜತೆಗೆ ಮನಸ್ವಿನಿಯವರನ್ನು ಭೇಟಿಯಾಗದೇ ಇದ್ದದ್ದು ಬೇಸರವಾಯ್ತು. ಮತ್ತೊಮ್ಮೆ ಸಿಗೋಣ ಎಲ್ಲರೂ. ನೀವೆಲ್ಲಾ ಸೇರೋವಾಗ ನಮಗೂ ಕರೆಯಿರಿ, ಮಿಸ್ ಮಾಡ್ಭೇಡಿ.
ಅಂದಹಾಗೆ ನಿಮ್ಮಿಂದ ನನಗೂ ಸಂಗೀತ, ಚಿತ್ರಕಲೆ, ನಾಟಕ ಇತ್ಯಾದಿ ಬರಹಗಳಿಗೇ ಒಂದು ಬ್ಲಾಗ್ ಮಾಡ್ಬೇಕು ಅನಿಸುತ್ತಿದೆ. ಆದರೆ ನಿಮ್ಮಷ್ಟು ಟೆಕ್ನಿಕಲ್ ಆಗಿ ನನಗೆ ಗೊತ್ತಿಲ್ಲ.
ನೋಡೋಣ. ನನ್ನ ಇಮೇಲ್ a_navada@yahoo.com ವಿಶೇಷವಿದ್ದರೆ ಇಲ್ಲಿಯೂ ಚರ್ಚಿಸಬಹುದು. ನಮ್ಮ ಬ್ಲಾಗ್ ಕಡೆ ಬರ್ತಾ ಇರಿ.
ನಾವಡ
ಹ ಹ್ಹ! ಅದು ಬಿಡಿ, ಬಗ್ಗಡ:))
ಹಾ, ನಾವೆಲ್ಲ ಹಂಗೇ ಸುಮ್ಮನೆ ಭಾಷಣ-ಬ್ಯಾನರುಗಳನ್ನ ಪಕ್ಕಕ್ಕಿಟ್ಟು ಕೂತು ಚರ್ಚಿಸೋಕೆ ಮೀಟ್ ಮಾಡೋಣ...
ಮತ್ತೆ ನಿಮ್ಮ ಹೊಸ ಬ್ಲಾಗ್ ಬೇಗ ಷುರು ಆಗ್ಲಿ, ವಿಷಯವೈವಿಧ್ಯ ಇದ್ರೆ ಓದೋದಕ್ಕೂ ಖುಷಿಯಾಗುತ್ತೆ...ತುಂಬಾ ಟೆಕ್ನಿಕಲ್ ಆಗಿ ಹೋಗೋ ಅವಶ್ಯಕತೆನೂ ಕಮ್ಮಿ ಅನ್ನಿಸುತ್ತೆ ಅಲ್ಲ್ವಾ?
ಶ್ರೀಮಾತಾ,
ಒಂದು ಅಪ್ ಡೇಟ್ ನೋಡಿ
ಬ್ಲಾಗೀ ಮಿಲನದ ಫೋಟೋಗಳಿಗೆ ಸಂಪರ್ಕ ನನ್ನ ಬ್ಲಾಗ್ನಲ್ಲಿ...ಜೊತೆಗೆ ಇನ್ನೊಂದು ಸೆನ್ಸೇಷನ್
Gold Questnet ಪೋಸ್ಟ್ ಮಾರ್ಟಂ-ಚಿನ್ನ ಮಾರಿ ಲಕ್ಷ ಗಳಿಸಿ !
ಹ್ಞೂ, ನಿಮ್ಮನ್ನೆಲ್ಲ ನೋಡಿ ಮಾತನಾಡಿಸಿ ತಲೆ ತಿನ್ನೋ ಭಾಗ್ಯ ನಮಗಿಲ್ಲ ಬಿಡಿ!
ftpkfSree,
Nimma blogige idu nanna modala bheti.
eE baari nadeda bloggers meetge abaralu sadhya aagalliaa. Idarabagge bahala dhukka ide. Adre nimma article odida mele, naanu saha karya krama nadeyovaga alle idneno ansodakke shuru aitu:)
Nimma barahadallina nera nudi nanage tumbha hidistu. Heege bariyutta iri.
Mundina sala bloggers meetnalli sigona:)
ರವೀ,
ಒಂದೇ ಒಂದು ಫೋಟೋ ಇದೆಯಲ್ಲ್ವಾ....
ಸತೀಶ್,
ನೀವ್ ಈ ಕಡೆ ಬಂದಾಗ ಇನ್ನೊಂದ್ ಮೀಟ್ ಮಾಡಣ ಬಿಡಿ:)
ಸುರೇಶ್,
ಸ್ವಾಗತ!:)ಥ್ಯಾಂಕ್ಸ್, ಬರ್ತಾ ಇರಿ, ಬರೀತಾ ಇರಿ:) ಬಾಳದೋಣಿ ಗ್ರೂಪ್ ಬ್ಲಾಗ್ ಅಂತ ಗಮನಿಸೇ ಇರ್ಲಿಲ್ಲ ನಾನು!!
ಶ್ರೀಮಾತಾ,
ಯಾವಾಗ ನೋಡಿದಿರಿ...?
ನಿಮ್ಮದೂ ಒಂದು ಫೋಟೊ ಇತ್ತು.
ತುಂಬಾ ಜನ ನಮ್ಮ ಫೋಟೊ flickrನಲ್ಲಿ ಹಾಕಬೇಡಿರೆಂದು ಹೇಳಿದ ಮೇಲೆ ತೆಗೆದುಹಾಕಿದ್ದೇನೆ-ನಿಮ್ಮದನ್ನೂ.
ಅಲ್ಲಿನ್ನೂ ಸುಮಾರು ೨೦ ಫೋಟೋಗಳಿವೆ...
ನಿಮ್ಮ ಮೈಲ್ ಐಡಿ ಕೊಟ್ಟರೆ ಒಂದಷ್ಟು foraward ಮಾಡ್ತೀನಿ.
Flickr ಫೋಟೋದ ಪಿಕ್ಸೆಲ್ ಕಡಿಮೆ ಮಾಡಿ ಅಪ್ಲೋಡ್ ಮಾಡಿಕೊಳ್ಳುತ್ತದೆ. ಅದರಿಂದ ಚಿತ್ರದ ಗುಣಮಟ್ಟ ಕಡಿಮೆಯಾಗುತ್ತೆ.
ರವೀ...
ನಂಗೂನೂ ಆಮಂತ್ರಣ ಬಂದಿತ್ತು. ಆದ್ರೆ ಬರೋಕಾಗಿಲ್ಲ... ಆದ್ರೂ `ಸಮಗ್ರ'ವರದಿ ನಿಮ್ಮ ಬ್ಲಾಗಲ್ಲಿ ಸಿಕ್ತಲ್ಲ... ಅದು ಸಂತೋಷ... ಖುಷಿಯಾಯ್ತು...
ಹರ್ಷ...
ಸಾಹಿತ್ಯ ಸಂಜೆ ಬ್ಲಾಗ್...
ರವಿ,
ಓಹ್ ನಾನು ಬರೀ ಪೋಸ್ಟ್ ಜೊತೆಗಿದ್ದ ಫೋಟೋ ನೋಡ್ದೆ! ಫ್ಲಿಕರ್ ಲಿಂಕ್ ನೋಡಿರ್ಲಿಲ್ಲ. ಮೈಲ್ ಐಡಿ ಕಳ್ಸ್ತೀನಿ(ನಿಮ್ಮ ಕಳೆದ ವರ್ಷದ ksc ಗ್ರೂಪ್ ಮೈಲ್ಗಳಲ್ಲಿ ಇದೆ ಅನ್ನ್ಸುತ್ತೆ)
ಹರ್ಷ,
ಧನ್ಯವಾದಗಳು!
Namasthe,
Thanks for visiting my blog and commenting on it. Bye the way, I too had an invitation for the bloggers meet held at B'lore but could not attend as I was having exams. Anyway, have an eye on my blog and keep commenting..!
Your article on DESHAKALA is impressive. I too am a reader of the magazine DESHAKALA.
ಶ್ರೀ ಮಾತಾ ರವರೆ,
ಕೂತುಹಲಕ್ಕೆ ಇಲ್ಲಿ ಇಣುಕಿದಾಗ ಎಸ್ ಪಿ ಯವರಿಗೆ ನೀವು ನೀಡಿದ ಉತ್ತರ ಕಂಡಿತು. ನಾನು ವಿಷಯ ಅಲ್ಲಿಗೆ ಬಿಟ್ಟು ಸುಮಾರು ದಿನಗಳಾದ್ದುವು,ಅದರೆ ನಿಮ್ಮ ಕೆಲ ಸಾಲುಗಳು ಮತ್ತು ಅಲ್ಲಲ್ಲಿ ನಿಮ್ಮ ಪ್ರತಿಕ್ರಿಯೆಗಳಲ್ಲಿ ಕಂಡು ಬಂದ ಅನಾವಶ್ಯಕ ವ್ಯಂಗ್ಯ ನನ್ನನ್ನು ಅನಿವಾರ್ಯವಾಗಿ ಪ್ರತಿಕ್ರಿಯಿಸುವಂತೆ ಮಾಡಿದುವು.
"ಅಲ್ಲಿಯ ರಾಡಿ ಇಲ್ಲಿ ಎರಚಾಡೋಕೆ ಮನಸ್ಸಿಲ್ಲ " ಅಂದರೆ ಏನರ್ಥ? ಅಲ್ಲಿ ಬಂದು ರಾಡಿ ಎರಚೋಕೆ ರಿಬ್ಬನ್ನು ಕತ್ತರಿಸಿದ್ದು ಯಾರು ಅಂತಾ ಎಲ್ಲರಿಗೂ ಗೊತ್ತು.ಯಾರೀಗೊ ಒಳ್ಳೆಯವರಾಗುವ ಚಟಕ್ಕೆ ಬಿದ್ದು ಪ್ರತಿಕಯಿಸಿದ್ದು ಯಾರು ಅಂತಲೂ ಗೊತ್ತು. ನಿಮಗೆ ಬೇಕಾದ "ಲಾಜಿಕಲ್" ಪ್ರತಿಕ್ರಿಯೆ ಎಂಥದು ಎಂಬುದೂ ಗೊತ್ತು. ವ್ಯಕ್ತಿಯ ಔಟ್ ಲುಕ್ ಬಗ್ಗೆ ಮಾತನಾಡುವ, ಬ್ಲಾಗಿಗೆ ಭೇಟಿ ನೀಡಬೇಕೊ? ಬೇಡ್ವೋ?ಅನ್ನುವ ಧಮಕಿ ದಾಟಿಯಲ್ಲಿ ಮಾತನಾಡುವ ನಿಮ್ಮಿಂದ ನಾನು "ಸೆನ್ಸಿಬಿಲಿಟಿ"ಯ ಪಾಠ ಹೇಳಿಸಿಕೊಳ್ಳಬೇಕಿಲ್ಲಾ.ಅನಾಮಿಕ ಕಮೆಂಟುಗಳನ್ನು ಬಿಟ್ಟು ಹೆಸರು ಸಮೇತ ಬರೆದವರ ಪ್ರತಿಕ್ರಿಯೆಗಳನ್ನು ಇನ್ನೋಮ್ಮೆ ಹೋಗಿ ನೋಡಿ; ಅವತ್ತು ನಡೆದದ್ದು ಅರ್ಥವಾಗುತ್ತೆ. ಯರದೋ ಮರ್ಜಿಗೆ ನಾಜೂಕಾಗಿ ಬರೆಯುವ ಅಥವಾ ಮುಲಾಜಿಗೆ ಒಳಗಾಗುವ ದರ್ದು ನನಗಿಲ್ಲ್ಲ. ನನಗೆ ಅನಿಸಿದ್ದನ್ನು ನಾನು ಬರೆದಿದ್ದೇನೆ. ಒಪ್ಪಿಕೊಳ್ಳುವುದು ಬಿಡುವುದು ನಿಮ್ಮಿಶ್ಟ. ಅದು ಬಿಟ್ಟು ಯಾರದೊ "ವಕ್ತಾರ"ರ ಹಾಗೆ ಬಂದು ಕೋಳಿ ಜಗಳ ಮಾಡುವುದು ನಿಮಗೆ ಬೇಕಿರಲಿಲ್ಲ್ಲ. ಅಷ್ಟಕ್ಕೂ ನಿಮ್ಮ ಉರಿಗೆ ಕಾರಣ ತಿಳಿತಿಲ್ಲ್ಲಾ. ಅಲ್ಲಿ ಸಂಘಟಕರೇ ಬಂದು ಸಮಾಧಾನದಿಂದ ಪ್ರತಿಕ್ರಿಯಿಸಿದ್ದಾರೆ, ಅಂಥದುರಲ್ಲಿ ನಿಮ್ಮದೇನು ಅಂತಾ?. ಒಂದು ಬಹಿರಂಗ ಸಭೆಯಲ್ಲಿ, ಅದು ಸಂಘಟಕರ ಸ್ಥಾನದಲ್ಲಿ ನಿಂತವರು ಜವಬ್ದಾರಿಯಿಂದ ವರ್ತಿಸಬೇಕಾಗುತ್ತೆ, ಅದು ಬಿಟ್ಟು ತಮ್ಮ ಲೋಕದಲ್ಲೆ ತಾವಿದ್ದರೆ ತಮಗೆ ಬೇಕಾದವರಷ್ಟನ್ನೆ ಕರೆಸಿ, ಬೇಕಾದ್ದು ಮಾಡಬಹುದಾಗಿತ್ತು. ಇದರ ಬಗ್ಗೆ ನಾನು ಶ್ರೀ ನಿಧಿಯ ಜೊತೆಗೂ ಮಾತನಾಡಿದ್ದೇನೆ;ನೀವಿನ್ನೂ ಅವರಿವರ ಪರವಾಗಿ ಪ್ರತಿಕ್ರಿಯುಸುವದನ್ನು ಬಿಟ್ಟರೆ ಒಳ್ಳೆಯದು.
ಅದು ಬಿಟ್ಟು " ನೀ ಊದು ಶಂಖ ಊದು, ನಾ ಮಾಡು ಕೆಲ್ಸ ಮಾಡ್ತೀನಿ" ಅಂದ್ರೆ ಏನು ಮಾಡಲಾಗುವುದಿಲ್ಲ್ಲ.
ಅರ್ಥವಾಯಿತು ಅನ್ಕೋತೀನಿ..
"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.
ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.
www.prakatane.blogspot.com
ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.
ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.
ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ.
I apologize for spamming, but no other way to inform :-(
ಸ್ಪ್ಯಾಮ್ ಮಾಡುತ್ತಿರುವುದಕ್ಕೆ ಕ್ಷಮೆ ಕೋರುತ್ತಾ,
ಆತ್ಮೀಯರೆ,
ಕಳೆದ ತಿಂಗಳು ನಡೆದ ಬ್ಲಾಗಿಗರ ಸಮಾವೇಶದ ನಂತರ, ನನ್ನ ಮನಸ್ಸಿನಲ್ಲಿ ಮೊಳಕೆಯೊಡೆದ ಆಸೆಯಂತೆ, ಅಂತರ್ಜಾಲವನ್ನೆಲ್ಲ ತಡಕಾಡಿ, ಅಸ್ತಿತ್ವದಲ್ಲಿರುವ ಎಲ್ಲ ಕನ್ನಡ ಬ್ಲಾಗುಗಳ ಪರಿವಿಡಿಯನ್ನು ತಯಾರಿಸುವ ಪ್ರಯತ್ನವನ್ನು ಮಾಡಿದ್ದೇನೆ(೫-೪-೨೦೦೮ ರಂದು ಇದ್ದಂತೆ ೫೫೦). ಅದನ್ನು ಇಲ್ಲಿ http://kannadabala.blogspot.com ನೋಡಬಹುದು. ಹಾಗೆಯೇ ಕನ್ನಡ ಬ್ಲಾಗ್ ಲೋಕದ ಆಗುಹೋಗುಗಳಿಗೆ ನನ್ನ ಪ್ರತಿಕ್ರಿಯೆ/ದನಿ ಸೇರಿಸಲು ಇದನ್ನು ಮೀಸಲಿರಿಸಿದ್ದೇನೆ. ಆಗಾಗ ಬರುತ್ತಿರಿ.
ವಿಶ್ವಾಸಿ,
ರೋಹಿತ್ ರಾಮಚಂದ್ರಯ್ಯ.
ROhith,
ಒಳ್ಳೆ ಕೆಲಸ ಮತ್ತು ಅಪರೂಪದ್ದು.
ರವೀ...
ಹೊಸದೊಂದು ಲೇಖನ ಓದಿ:ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...
ನಿಮ್ಮ ಬ್ಲಾಗ್ ಯಾಕೆ ಮಕಾಡೆ ಮಲಗಿದೆ?
shri avare...
eke enu baritha illa... naavellarU kaatharadinda kaayuththideve nimma barahakke...
eli eddeli.
ವಿಜಯ್,
ವಿಜಿಟ್ಟಿಗೆ, ಕಾಮೆಂಟಿಗೆ ಧನ್ಯವಾದಗಳು:)
MD & ರೋಹಿತ್, ಒಳ್ಳೇ ಪ್ರಯತ್ನಗಳು! ಅಭಿನಂದನೆ:) ಲಿಂಕ್ ಹಾಕಿಕೊಳ್ತೀನಿ...
ಭಾಗವತ್ರು&ಸುಧೇಶ್,
ಈಗ್ತಾನೇ ಎಬ್ಸಿ ಕೂರ್ಸಿದ್ದೀನಿ :P
Chennagide!
But tell me, whenever i open kannada blogs, alphabets will come as telugu ones!! See the example:
ಈ ಕಾರ್ಯಕ್ರಮ ಮುಂದಿನ ಹೊಸ ಹೆಜ್ಜೆಗಳಿಗೆ ಒಂದು ಬದ್ರ ಅಡಿಪಾಯವನ್ನ ಹಾಕಿಕೊಟ್ಟದ್ದು ನಿಜ.... ಇನ್ನೂ ಹಲವಾರು ವಿಷಯಗಳ ಬಗ್ಗೆ ಚರ್ಚಿಸುವುದಿದೆ ....
How to correct in correct readable fonts..?
nazaare@gmail.com
AA ಅವರೇ, ಸಮಸ್ಯೆ ಇರುವುದು ನಿಮ್ಮ ಗಣಕದ font ನಲ್ಲಿ.
ಭಾರತೀಯ ಭಾಷೆಗಳನ್ನು ಸರಿಯಾಗಿ ತೋರಿಸಲು Windows ಗೆ Indic script ಗಳ ಅವಶ್ಯಕತೆಯಿದೆ. ಈ ವಿಧಾನವನ್ನನುಸರಿಸಿ:
ನಿಮ್ಮ Control Panel ಗೆ ಹೋಗಿ Regional Settings ಅನ್ನು ತೆರೆಯಿರಿ. ಅದರ Languages tab ನಲ್ಲಿ Install files for complex script and right-to-left languages ಅಂತ ಇರುತ್ತೆ. ಅದನ್ನು ಆಯ್ಕೆ ಮಾಡಿಕೊಂಡು ಓಕೆ ಮಾಡಿರಿ. ನಿಮ್ಮ Windows ಸಿಡಿ ಬೇಕಾಗಬಹುದು. ನಂತರ restart ಮಾಡಿ blog ಗಳನ್ನು ಓದಿ, ಅಕ್ಷರಗಳು ಸರಿಯಾಗಿ ಬರುತ್ತಿವೆಯೇ ನೋಡಿ.
ಬರದಿದ್ದರೆ ತಿಳಿಸಿ :-)
Post a Comment