ಭರವಸೆಗಳಿಗೆ ರಜಾ ಕೊಟ್ಟುಬಿಡಬೇಕು
ಕನಸುಗಳನ್ನ ಗುಡಿಸಿ ಬಿಸಾಕಿಬಿಡಬೇಕು
ತಣ್ಣಗಿದ್ದುಬಿಡಬೇಕು
ಬೇಕು ಬೇಕು ಬೇಕು ಬೇಕು
ಫೀನಿಕ್ಸುಗಳು ಮತ್ತೆ ಎದ್ದು ಕೂತವು
ಭಸ್ಮಾಸುರನ ಬೂದಿಯಿಂದೆದ್ದ ಮೋಹಿನಿಯರು
ಕಣ್ಣಲ್ಲಿ ನಾಕು
ಕನಸಲ್ಲಿ ಎಂಟು
ಒಂದು ಬೂದಿಗೆ ಎರಡು ಹಕ್ಕಿ ಫ್ರೀ -
ಕನಸೀಗ ರಕ್ತಬೀಜಾಸುರ.
ಯಾರಪ್ಪನ ಮನೇ ಗಂಟು,
ಕನಸಿಗೇನು ಕಾಸೇ?!
ಮತ್ತೆ ಸುತ್ತುತ್ತಾ
ಸರಿ, ಬನ್ನಿ, ಕುಕ್ಕಿ ಎಂದೆ
ಮತ್ತೆ ಸುಡುತ್ತಾ
16 comments:
tumba chennagide!!! adyako ee naDuve elli noDidru negative mood_e aagibiTTide. nanagu nanna friends ella tumba negative thinker aagibiTTideeya antaare.. neevu kooDa negative mooD_nalle baredideera.. aadaru it is wonderful
ಕನಸುಗಳೇ ಹೀಗೆ.. ಬೇಕು ಎಂದಾಗ ಬೇಡದ್ದು..
ಛೇ..ಅನ್ನಿಸಿಬಿಡುತ್ತದೆ.
ಕನಸುಗಳು ಸುಡುವುದಿಲ್ಲ.
ಮನಸ್ಸು ಕಟ್ಟುತ್ತದೆ..
ಅಂತಾರಂತೆ..
ಕನಸುಗಳನ್ನು ಗುಡಿಸಲು ಸಾಧ್ಯವಿಲ್ಲ.
ನೀವೆ ಸೋತು ಹೋದಿರಿ ಆಷ್ಟು ಸಾಕು..
ಬುದ್ಧನಾಗಲು ನೀವು.
ಒಂದು ಬೂದಿಗೆ ಎರಡು ಹಕ್ಕಿ ಫ್ರೀ!!
ಏನ್ರೀ ಇದು ಕಾಮಿಡಿ!
ಇದಕ್ಕೆ ಮುಂಚೆ ನೀವು ಬರೆದಿದ್ದ 'ನಿಟ್ಟುಸಿರು' ಚುಟುಕವೇ ಈಗ ಇಲ್ಲಿ ಮೈತುಂಬಿ ಕೈ-ಕಾಲು ಚಾಚಿ ಕೂತಂತಿದೆ! :)
ಬ್ಲಾಗಿನಲ್ಲಿ ಕವನವೊಂದನ್ನು ಬರೆದಾಗ ಅದು, ಬ್ಲಾಗಿನ ಇತರ ಬರಹಗಳಂತೆ ಬರಹಗಾರ್ತಿಯ ಸ್ವಂತ ಮಾತೋ ಅಥವಾ ಆಕೆ ಕವಿಯಾಗಿ ಬರೆದ, ಸುತ್ತಲ ಜಗತ್ತನ್ನು ನೋಡಿ, ಸಂವೇದಿಸಿ ಬರೆದ, ನೇರ ತನ್ನದೇ ಆಗಿರದ ಅನುಭವವೋ ಗೊತ್ತಾಗಲ್ಲ! ಈ ಗೊಂದಲ ಆ ಕವನದ ಬಗ್ಗೆ ಮಾತಾಡುವಾಗ ಸ್ವಲ್ಪ ಇಕ್ಕಟ್ಟಿನಲ್ಲಿ ಸಿಕ್ಕಿಸತ್ತೆ. ಹಾಗಾಗಿ ನಾನಿಲ್ಲಿ ಬರೀ ಕವನದ ಬಗ್ಗೆ ಮಾತಾಡ್ತೀನಿ - ಇದು ನಿಮ್ಮದೇ ಆದ ಹತಾಶೆಯಲ್ಲ ಅನ್ನುವ ಆಸೆಯೊಂದಿಗೆ. :)
ಮನುಷ್ಯನ ಅತ್ಯಂತ ದೊಡ್ಡ ಆಸ್ತಿ ಬಹುಶಃ ಕನಸು ಕಾಣುವ ಶಕ್ತಿ. ನಾಳೆಗೋಸ್ಕರ ಎದುರು ನೋಡುತ್ತಾ ಇವತ್ತನ್ನು ಸಹಿಸಿಕೊಳ್ಳುವುದು ಸಾಧ್ಯವಿರುವುದು ನಮಗೆ ಕನಸು ಕಾಣುವ ಶಕ್ತಿ ಇರುವುದರಿಂದಲೇ. ಆ ಶಕ್ತಿ ಕ್ಷೀಣವಾದರೆ ಬದುಕೇ ಕ್ಷೀಣಿಸತ್ತೆ.
ಓದಿದ ಕೂಡಲೇ ಈ ಪದ್ಯದಲ್ಲಿ ಒಂದು ರೀತಿಯ ನಿರಾಶೆ, ನಿರುತ್ಸಾಹ, ಹತಾಶೆ ಕಾಣಿಸತ್ತೆ -- ನಿಮಗೆ ಕನಸು ಕಾಣುವುದು ಜುಗುಪ್ಸೆ ತರಿಸುತ್ತಿದೆ. ಅದು ನನಸಾಗುವ ಭರವಸೆ, ನನಸಾಗಿಸುವ ಶಕ್ತಿ ಇಲ್ಲ ಅಂತ ಅನ್ನಿಸ್ತಿರೋದ್ರಿಂದ. ಬಹುಶಃ ಆ ಅನುಭವ ತುಂಬಾ ಆಗಿರುವುದರಿಂದ. ಆದರೆ "ಭರವಸೆಗಳಿಗೆ ರಜಾ ಕೊಟ್ಟುಬಿಡಬೇಕು" ಅನ್ನುವ ಸಾಲಿನಲ್ಲಿ ಭರವಸೆಗಳ ಅಸ್ತಿತ್ವದ affirmation ಇದೆ. 'ರಜಾ' ಅನ್ನುವುದು ಕೂಡಾ ತಾತ್ಕಾಲಿಕತೆಯನ್ನು ಬಿಂಬಿಸುತ್ತಿದೆ. ಅದು ನನ್ನ ಮಟ್ಟಿಗೆ 'positive.' ಫೀನಿಕ್ಸ್ ಪಕ್ಷಿಯ ರೂಪಕ ಕೂಡಾ positive ತತ್ವವನ್ನೇ ಸಾರುತ್ತದೆ. It hints at a certain immortality, invincibility. ಸ್ವಲ್ಪ ಮುಠ್ಠಾಳತನ ಇದರ ಮೂಲ ಅನ್ನುವುದು ಕೂಡ ಇದರಲ್ಲಿದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಕಾಣುವುದು ನಿಮ್ಮಲ್ಲಿ ಹತ್ತಿಕ್ಕಲಾರದಷ್ಟು ಹುಟ್ಟುತ್ತಿರುವ ಆ ಕನಸುಗಳು, ಅವನ್ನು ಹುಟ್ಟಿಸುತ್ತಿರುವ ನಿಮ್ಮಲ್ಲಿನ ಬತ್ತಿಲ್ಲದ ಜೀವಚಿಲುಮೆ, ಆ ಕನಸುಗಳನ್ನು ಸುಟ್ಟು, ಗುಡಿಸಿ ಬಿಸಾಕಿಬಿಡಬೇಕೆನಿಸಿ ಕೂಡಾ ಸೋಲುತ್ತಿರುವ ಆ ನಿಮ್ಮ ಪ್ರಯತ್ನ. ಅದರಲ್ಲಿರುವ ಗೆಲುವು! Negative-ನಲ್ಲೂ positive ಕಾಣುವಂತೆ ಬರೆದ ಈ ನಿಮ್ಮ ಶೈಲಿ, ಪ್ರಯತ್ನ ಅದ್ಭುತ! :)
"ಒಂದು ಬೂದಿಗೆ ಎರಡು ಹಕ್ಕಿ ಫ್ರೀ" cool imagination.
'ಕಣ್ಣಲ್ಲಿ ನಾಕು ಕನಸಲ್ಲಿ ಎಂಟು' ಬರುತ್ತಿರಲಿ ಇನ್ನೂ ಇಂತಹ ಕನ್ನಡಿಗಂಟು.
ಫೀನಿಕ್ಸುಗಳು ಮತ್ತೆ ಎದ್ದು ಕೂತವು
ಭಸ್ಮಾಸುರನ ಬೂದಿಯಿಂದೆದ್ದ ಮೋಹಿನಿಯರು
ಕಣ್ಣಲ್ಲಿ ನಾಕು
ಕನಸಲ್ಲಿ ಎಂಟು
ಒಂದು ಬೂದಿಗೆ ಎರಡು ಹಕ್ಕಿ ಫ್ರೀ -
ಕನಸೀಗ ರಕ್ತಬೀಜಾಸುರ.
ವಾಹ್. ವಾಹ್. ಲಾಲಿತ್ಯಪೂರ್ಣ ಶೈಲಿ.
"ತಣ್ಣಗಿದ್ದುಬಿಡಬೇಕು".....ಇತ್ತ ಕಡೆ ಬನ್ನಿ. ಸ್ವೆಟರ್ರು, ಜಾಕೆಟ್ಟು ಹಾಕ್ಕೊಳ್ದೆ ಹೊರಗೆ ಹೋದ್ರೆ, ’ತಣ್ಣಗಿದ್ದು’ಬಿಡಬಹುದು :-)
ಶ್ರೀಮಾತಾ,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
ಚೆನ್ನಾಗಿ ಬರ್ದಿದೀರಿ ..
ಶಶಿ.. ಈ ಕವನದಲ್ಲಿ -ve ಯೋಚನೆ ಇದ್ರೂ, ಕನಸಿನಲ್ಲಿ +veness ಮೂಡಿಬಂದಿದೆ. That shows that there is a hope. ಇದರ ಅರ್ಥ, ಮೊದಲ ಎರಡು ಸಾಲುಗಳು ಸುಳ್ಳು ಎಂದು .. ಏನಂತೀರಿ ?
ನಮಸ್ತೆ,
ಶ್ರೀ...
ನಿಮ್ಮ ಕವಿತೆ ಚೆನ್ನಾಗಿದೆ.ಕಲ್ಪನೆ ಅಭಿವ್ಯಕ್ತಿ ಎರಡೂ ಸುಂದರ.
ಧನ್ಯವಾದ.
ಜೋಮನ್.
Tumba dull mood nalliruva kavite kavana nange ashtu ishta agalla. Adre nimma poem tumba ishta aytu. Onthara force ide.Nannanthavanige adu ishta agutte.E bangalore life nalli agaga navu anubhavisuva ella 'hatashe'gala madhye kuda, nimma poem odidaga siguva 'Bhava' samadhana helutte. Konegu ondu kavana noora entu philosophy helodakkinta, adakke ondu strong mood irodu important annodu nanna bhavane. Adu 'Matte Suttutta'nalli ide. Thank You..
@shashi
ಇದು ಪೂರ್ತಿ ನೆಗೆಟಿವ್ ಮೂಡ್‍ನಲ್ಲೂ ಇಲ್ಲದೆ ಪಾಸಿಟಿವ್‍ನಲ್ಲೂ ಇರದೆ ಎರಡರ ಮಧ್ಯ ಸುತ್ತುತ್ತಲೇ ಇರೋದನ್ನ ಹೇಳೋಕೆ ಹೊರಟ ಪ್ರಯತ್ನ...
@ರಾಧಾಕೃಷ್ಣ
ಬುದ್ಧನಾಗೋಕೆ ಚಕ್ರಸುತ್ತೋದರಿಂದ ಆಚೆಬರಬೇಕಲ್ಲ್ವಾ:)
@prasan
hmm...!
@l'etranger
ಕಥೆ - ಕವನಗಳ ಬಗ್ಗೆ ಎಷ್ಟು ನನ್ನದು ಎಷ್ಟು ಕಂಡಿದ್ದು...ಅನ್ನೋ ಪ್ರಶ್ನೆಗೆ ಉತ್ತರಿಸೋದು ಕಷ್ಟ... ನನ್ನದ ಬವಣೆಯಿಂದ ಹುಟ್ಟಿದ್ದು ಮಾತ್ರ ನನ್ನ ಭಾವ ಆಗಿರಬೇಕಂತಿಲ್ಲವಲ್ಲಾ;) ಈ ಬಗ್ಗೆ ಇನ್ಯಾವಗಲಾದ್ರೂ ಬರೀತೀನಿ:)
ಕವನದ ಬಗ್ಗೆ ಹೇಳೋದಾದ್ರೆ ಕನಸು ನನಸಾಗೋ ಶಕ್ತಿ-ಭರವಸೆ ಇಲ್ಲ ಅಂತ ಹೇಳಲಾರೆ - ಅಲ್ಲಿ ಗೊಂದಲ, uncertainty ಇರೋದ್ರೀಂದಲೇ ಗುಡಿಸಿಹಾಕೋ ಅವಶ್ಯಕತೆ:) ಒಟ್ಟಿನಲ್ಲಿ ನೀವ್ ಹೇಳಿರೋ ಮಿಶ್ರ ಭಾವವೇ ಈ ಕವನವನ್ನು ಬರೆಸಿಕೊಂಡಿದ್ದು.ಮುಟ್ಠಾಳತನ -ಹೌದು!:))
@md, ಭಾಗವತ್ರು, ಜೋಮನ್ & rajesh
ಥ್ಯಾಂಕ್ಸ್!:D
@karthik
ಮೊದಲೆರಡು ಸಾಲೂ ನಿಜಾನೇ, ನನ್ನನಂಬಿ ಪ್ಲೀಸ್;P
ಶ್ರೀ, ತುಂಬಾ ಚೆನ್ನಾಗಿದೆ. ಓದುತ್ತಾ ಓದುತ್ತಾ ಈ ಕವನ ನಾನೇ ಬರ್ದಿರೋದು ಅನ್ನಿಸಿಬಿಡ್ತು! ಕವಿತೆ ಸಾರ್ಥಕವಾಗೋದು ಹೀಗೇ ತಾನೆ?
ತುಂಬಾ ದಿನಗಳಾಗಿತ್ತು ನಿಮ್ಮ ಬ್ಲಾಗ್-ಗೆ ಬಂದು...ನಿಮಗೆ ಬ್ಲಾಗ್ ಬರೆಯೋಕೆ ಸಮಯ ಸಿಕ್ತಿಲ್ಲ ಅಂದುಕೊಂಡಿದ್ದೆ. ಈಗ ಬಂದು ನೋಡಿದ್ರೆ, ಎಷ್ಟೊಂದು ಹೊಸ ಪೋಸ್ಟ್ಗಳಿವೆ! ಹೀಗೇ ಆಕ್ಟೀವ್ ಆಗಿಟ್ಟಿರಿ ನಿಮ್ಮ ಬ್ಲಾಗ್-ಅನ್ನು. ಇಲ್ಲಿಗೆ ಬಂದು ನೀವು ಬರೆದಿರೋದನ್ನ ಓದೋ ಖುಷಿ ನಮಗೆಲ್ಲ ಸಿಗ್ತಾ ಇರ್ಲಿ.
ಮೀರ.
ಮೀರಾ,
ನೀವೇ ಬರೆದಂತೆ ಅನ್ನಿಸೋದಿಕ್ಕಿಂತ ದೊಡ್ಡ ಕಾಂಪ್ಲಿಮೆಂಟ್ ಬೇರೇನಿದೆ!! ಥ್ಯಾಂಕ್ಯೂ!:) ಹೂ, ಸ್ವಲ್ಪ ದಿನ ನಿದ್ದೆ ಮಾಡ್ತಿದ್ದೆ, ಎಲ್ರೂ ಇವ್‍ಳು ಸದ್ಯಕ್ಕೆ ಏಳೋಹಂಗೆ ಕಾಣಲ್ಲ ಅಂತ ಡಿಸೈಡ್ ಮಾಡಿ ಈ ಕಡೆ ಬರೋದು ಕಡಿಮೆ ಮಾಡಿದ್ ಮೇಲೆ ಎದ್ದೆ:P
ನಿಮ್ಮ ಪ್ರೀತಿಗೆ ಥ್ಯಾಂಕ್ಸ್:) ಬರ್ತಾ ಇರಿ, ಬರೀತಾ ಇರಿ, ನಿಶು ಮಾತುಗಳನ್ನ ಕೇಳಿಸ್ತಾ ಇರಿ!:)
artha aaglilla :)
"ಭರವಸೆಗಳಿಗೆ ರಜಾ ಕೊಟ್ಟುಬಿಡಬೇಕು
ಕನಸುಗಳನ್ನ ಗುಡಿಸಿ ಬಿಸಾಕಿಬಿಡಬೇಕು"
ಅರೆಘಳಿಗೆ Blissful Thought ಅನ್ನಿಸ್ತು..ಆಮೇಲೆ ಇಷ್ಟು ಬೇಗಾ ಇಷ್ಟೊಂದ್ ವೈರಾಗ್ಯ ಯಾಕೆ? ಅನ್ನೋ ಯೋಚನೆ ಬಂತು...ಆದ್ರೂ ಕೈಗೆ ಕಲ್ಲು ಕೊಟ್ರೂ, ಹಿಂಡಿ ಎಣ್ಣೆ ತೆಗೆಯೋ ಈ ವಯಸಿನ ಗ್ಯಾಪಲ್ಲೆ ಇಷ್ಟು ದೊಡ್ಡ ಮಾತು ಬೇಕ? ಅಂತ ಗಣೇಶನ ಸ್ಟೈಲಲ್ಲಿ ಸೆಲ್ಫ್-ಸಮಾಧಾನ ಮಾಡ್ಕೊಂಡ್ ನಿಮ್ಮ ಬರವಣಿಗೆಗೆ ಹ್ಯಾಟ್ಸ್-ಆಫ್ ಅಂದು ಮುಂದಿನದನ್ನು ಓದ್ತಿದೀನಿ!
"ಭಸ್ಮಾಸುರನ ಬೂದಿಯಿಂದೆದ್ದ ಮೋಹಿನಿಯರು
" What a powerful and meaningful expression...
ಅದಕ್ಕೆ ವಿಶೇಷಣವಾಗಿ ಬರುವ ಫೀನಿಕ್ಸ್ ಪಕ್ಷಿಯ reference, ಇಡೀ expressionಗೆ ಒಂದು ಹೊಸ ಆಯಾಮವನ್ನೇ ನೀಡುತ್ತದೆ. ಸೊಗಸಾದ ಕವನ
Post a Comment