ಕೆಲಸಕ್ಕೆ ಸೇರಿದ್ ಹೊಸದರಲ್ಲಿ ಊರಿಗೆಲ್ಲ ಒಬ್ಬಳೇ ಪದ್ಮಾವತಿಯಂತೆ ಅಲ್ಲಿದ್ದ ಆಲ್‍ಮೋಸ್ಟ್ ಏಕೈಕ(ಆಗ) ಕನ್ನಡ ಓದುಗಳಾಗಿ ಮೆರೀತಿದ್ದಾಗ, ಕನ್ನಡದ little magazineಗಳ ಬಗ್ಗೆ ಮಾಹಿತಿ ಹುಡುಕ್ತಿದ್ದಾಗಲೆಲ್ಲ ಪದೇ ಪದೇ ಎದುರಾದ ’ನೀನ್ ದೇಶಕಾಲ ಓದಲ್ಲ್ವಾ/ನೋಡಿಲ್ಲ್ವಾ’ ಪ್ರಶ್ನೆಗಳಿಂದ ಓಹ್ ಇದನ್ನ್ ಒಂದ್ಸಲ ನೋಡ್ಬೇಕು ಅನ್ನಿಸಿದ್ದ್ರೂ ಅದು ಅಲ್ಲಿಗೇ ನಿಂತಿತ್ತು.
ಈಚೆಗೆ ಬರಿಯೋದು ಕಮ್ಮಿ, ಓದೋದು ಜಾಸ್ತಿ ಮಾಡ್ಬೇಕು ಅನ್ನಿಸಿ, ಕುವೆಂಪು-ಕಾರಂತರಾಚೆ ಕನ್ನಡ ಓದಿದ್ದು ಸಾಲದು ಅಂತ ಜ್ಞಾನೋದಯ ಆಗಿ, ಅಲ್ಲಿ ಇಲ್ಲಿ ಪುಸ್ತಕ ಹುಡುಕ್ತಾ, ಕೈಗೆ ಸಿಕ್ಕಿದ್ದ್ ಓದುತ್ತಾ ಇಂಟರ್ನೆಟ್ ಅನ್ನೋ ಬಲೆಯಲ್ಲಿ ಕನ್ನಡ ಜಾಲಾಡ್ತಾ ಸಿಕ್ಕಪಕ್ಕ ಬ್ಲಾಗುಗಳು, ವೆಬ್‍ಸೈಟ್‍ಗಳನ್ನ ಹಿಗ್ಗಾಮುಗ್ಗಾ ಓದ್ತಾ ಕಾಳು-ಜೊಳ್ಳುಗಳ ಮಧ್ಯೆ ಮುಗ್ಗರಿಸ್ತಿದ್ದ ಹೊತ್ತಿಗೆ ’ದೇಶಕಾಲ’ಕ್ಕೆ ಮೂರು ತುಂಬಿದ ಸಂಭ್ರಮ ಎಲ್ಲಾ ಕಡೆ ಕೇಳಿಬಂದದ್ದು ಯಾವ ಸಚಿನ್‍ನೂ ಮೀರಿಸೋ ಟೈಮಿಂಗು ಅಂತ ನನ್ನ್ ಅಭಿಪ್ರಾಯ. ನೀನಾಸಂ ಶಿಬಿರಕ್ಕೆ ಹೋಗೋ ಅವಕಾಶವೂ ಈ ಸಲ ಬಂದು, ಅಲ್ಲಿ ಮತ್ತೆ ದೇಶಕಾಲದ ವಲಯದಲ್ಲಿ ಮುಳುಗೆದ್ದು ಬೆಂಗ್ಳೂರಿಗೆ ಬಂದಿಳಿದ್ರೆ ಮತ್ತೆ ನಮ್ಮ ಐ ಎಫ್ ಏ ನ್ಯೂಸ್‍ಲೆಟರು, ಸಂಪದ, ಎಲ್ಲಾ ಸೇರಿ ದೇಶಕಾಲ-ಜಪ ಮುಂದುವರೆಸಿಬಿಟ್ಟಿದ್ವು! ಇನ್ನು ಸಬ್‍ಸ್ಕ್ರೈಬಿಸದೇ ದಾರಿಯಿಲ್ಲ ಅಂತ ಚೆಕ್ ಬರೆದು, ನನ್ನ ಎಂದಿನ ಸೋಮಾರಿತನದ ದೆಸೆಯಿಂದ ಒಂದು ವಾರ ಬಿಟ್ಟು ಪೋಸ್ಟಿಸಿ ಇನ್ನೂ ಸುಧಾರಿಸ್ಕೋತಿದ್ದೆ. ಎರಡನೇ ದಿನಕ್ಕೇ ಕೊರಿಯರ್ ಬಂದುಬಿಡೋದಾ?! ನೀನಾಸಂನಲ್ಲಿ ವಿವೇಕ್ ಶಾನಭಾಗರನ್ನ ದೂರದಿಂದ ನೋಡಿ ಈ ಮನುಷ್ಯ ಎಷ್ಟು ತಣ್ಣಗಿರ್ತಾರಪ್ಪ ಅಂತ ಅಚ್ಚರಿಪಟ್ಟಿದ್ದೆ. ಅವರ ಸದ್ದುಗದ್ದಲವಿಲ್ಲದ ಎಫಿಶಿಯೆನ್ಸಿಯ ಬಗ್ಗೆ ಈಗಾಗ್ಲೇ ಕೇಳಿದ್ರೂ ಇದನ್ನ ಅರಗಿಸಿಕೊಳ್ಳೋಕೆ ಸ್ವಲ್ಪ ಸಮಯವೇ ಬೇಕಾಯ್ತು!
ಸಾಹಿತ್ಯದ ವಿದ್ಯಾರ್ಥಿಯಾಗಿದ್ದೂ ಕನ್ನಡಸಾಹಿತ್ಯವನ್ನ ಫಾರ್ಮಲ್ ಆಗಿ ಓದದ ಕಾರಣ ಮೊದಲಸಲ ಕನ್ನಡಸಾಹಿತ್ಯಕ್ಕೆ ಮೀಸಲಿಟ್ಟ ಜರ್ನಲ್ ಕೈಯ್ಯಲ್ಲಿ ಹಿಡಿದಾಗ ಹುಟ್ಟಿದ ಎಂತೋ ಏನೋ, ಕನ್ನಡವೇ ಪರಕೀಯವೆನಿಸಿ ಅತಂತ್ರದಲ್ಲಿ ಮುಳುಗಿಬಿಡ್ತೀನೇನೋ ಅನ್ನೋ ಅನುಮಾನಗಳನ್ನೂ, ಓದಿ ನೋಡಬೇಕು ಅನ್ನೋ ಹಂಬಲವನ್ನೂ ಪಕ್ಕದಲ್ಲಿ ಕೂಡಿಸಿಕೊಂಡು ಪುಟ ತೆರೆದೇ ಬಿಟ್ಟೆ.
ಸಂಪಾದಕೀಯದಲ್ಲೇ ಸೃಜನಶೀಲ ಸಾಹಿತ್ಯಕ್ಕೆ ಅನುಭವ-ಚಿಂತನೆಗಳೆರಡರ ಅಗತ್ಯದ ಕುರಿತು ಹೇಳುತ್ತಾ, ವೈಚಾರಿಕತೆಯ ಹೆಸರಿನ ಗೊಡ್ಡು ಅಕೆಡೆಮಿಕ್ ಭಯೋತ್ಪಾದನೆಯನ್ನೂ, ವೈಚಾರಿಕತೆಯನ್ನು ಸಾರಾಸಗಟಾಗಿ ನಿರ್ಜೀವ ಪಾಂಡಿತ್ಯ ಅಂತ ಪಕ್ಕಕ್ಕೆ ತಳ್ಳೋ ಸೋಮಾರಿತನವನ್ನೂ ಒಂದೇ ಸಲ ನಿವಾಳಿಸಿಹಾಕಿದ ವಿವೇಕರ ನಿರ್ದಾಕ್ಷಿಣ್ಯ ಮಾತುಗಳು ಭಾವ-ಬುದ್ಧಿಗಳ ಬ್ಯಾಲನ್ಸ್ ಏನಿರಬೇಕನ್ನೋ ಹುಡುಕಾಟಕ್ಕೆ food for thought ಆಗಿ ಸಂದವು.
ಪುಟಗಳು ತಿರುವಿಹಾಕ್ತಿದ್ದ ಹಾಗೇ ಅಲ್ಲಲ್ಲಿ ಓದಿದ್ದ - ಕೇಳಿದ್ದ ಹೆಸರುಗಳು ಕಂಡು, ಅಬ್ಬಾ! ನೆಲೆ ಕಂಡೆ ಅನ್ನೋ ಸಮಾಧಾನ ಗಟ್ಟಿಯಾಗ್ತಾ ಹೋಯ್ತು. ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬರುತ್ತಿದ್ದ ಅನುವಾದಗಳನ್ನ ಓದ್ತಿದ್ದಾಗ ಅನುವಾದಿತ ಸಾಹಿತ್ಯದಲ್ಲಿ ಎರಡು ಭಾಷೆ-ಸಂಸ್ಕೃತಿಗಳ negotiationನಲ್ಲಿ ಹುಟ್ಟುವ ವಿಚಿತ್ರ-ವಿಶಿಷ್ಟ ಸೊಗಡಿನಲ್ಲಿ ಕಳೆದುಹೋಗುತ್ತಿದ್ದೆ. ಆ ಅನುಭವವನ್ನ ವಿವೇಕ್ ಹಾಗೂ ಜಯಂತ್ ಕಾಯ್ಕಿಣಿಯವರು ಅನುವಾದಿಸಿರೋ ಐಸಾಕ್ ಬಾಶೆವಿಸ್ ಸಿಂಗರ್‍ನ ಕಥೆ ’ಮಳ್ಳ ಗಿಂಪೆಲ್’ ಮತ್ತೆ ನೆನಪಿಸಿತು.
ನಾನ್ಯಾಕೆ ಕಥೆ ಬರೆದಿಲ್ಲ ಅನ್ನೋದು ಈ ಸಲದ ಸಮಯಪರೀಕ್ಷೆಯಲ್ಲಿ ಕಥೆಗಾರರ ಬರಹಗಳನ್ನ ಹಾಗೂ ನಾನು ಇತ್ತೀಚೆಗೆ ಓದಿ ಮುಗಿಸಿದ ಇಂಗ್ಲಿಷ್ ಕಾದಂಬರಿ - ಲುನಾಟಿಕ್ ಇನ್ ಮೈ ಹೆಡ್ - ಓದುತ್ತಿದ್ದಂತೆ ಒಂದಿಷ್ಟು ಸ್ಪಷ್ಟವಾಗೋಕೆ ಷುರುವಾಯ್ತು. ಎಷ್ಟೋಸಲ ಅಂತರ್ಜಾಲದಲ್ಲಿ ಅಂತರಪಿಶಾಚಿಯಾಗಿ ಅಲೀತಿರುವಾಗ ದೊಡ್ಡ ಹೆಸರುಗಳ / ಅವರಂತೆ ಬರಿಯಹೋಗುವ ಮರಿಬರಹಗಾರರ ಕಥೆಗಳನ್ನೋದಿ ಕೊನೆಗೆ ಏನೂ ಅರ್ಥವಾಗದೇ ತಬ್ಬಿಬ್ಬಾಗಿ ನನ್ನ ಸಾಹಿತ್ಯಾಭ್ಯಾಸ ಕನ್ನಡಕ್ಕೆ ಸಲ್ಲದ್ದೋ, ಅಥವಾ ಕಲಿತದ್ದು ನಾನೇ ಮರೆತಿದ್ದೀನೋ, ಅಥವಾ ೨-೩ ವರ್ಷದಲ್ಲೇ ಔಟ್‍ಡೇಟೆಡ್ ಆಗಿಬಿಟ್ಟೆನೋ ಅನ್ನಿಸೋ ದಿಗ್ಭ್ರಾಂತಿಯ ಕ್ಷಣಗಳಿಗೆ ಇಲ್ಲಿ ವಸುಧೇಂದ್ರರ ಮಾತುಗಳು ಸಮಾಧಾನ ಹೇಳಿದವು! ಮಹಿಳಾ ಸಾಹಿತ್ಯದ ಬಗೆಗೆ ಸುಕನ್ಯಾ ಕನಾರಳ್ಳಿಯವರ ಸಾಲುಗಳನ್ನೋದುತ್ತಿದ್ದಾಗ ಫಣಿಯಮ್ಮನೊಂದಿಗಿನ ಎಂ ಫಿಲ್ ಯಾತ್ರೆಯ de javu ಭಾವನೆ....some shared grounds... ಡಯಸ್ಪೋರಾ ಕನ್ನಡಿಗರನ್ನ ಕಾಡೊ ಐಡೆಂಟಿಟಿ ಪಾಲಿಟಿಕ್ಸ್ ಬೆಂಗ್ಳೂರ್ ಕನ್ನಡಿಗರನ್ನೇನ್ ಬಿಟ್ಟಿಲ್ಲ ಅನ್ನಿಸಿಬಿಟ್ಟಾಗ ಆ shared grounds ಭಾವನೆಗೆ ಒಂದು ವಿಷಾದದ ನಂಟು...
ತೆರೆಮರೆಗಳಿಲ್ಲದೇ ಅತ್ಯಂತ ಪ್ರಾಮಾಣಿಕವಾಗಿ, ಸರಳವಾಗಿ ತನ್ನ ಕಥನ ಸತ್ಸಂಗದ ಸಾಂಗತ್ಯ ಅಂದುಬಿಡೋ ಸುನಂದಾ ಪ್ರಕಾಶ ಕಡಮೆ, ಆಲ್ಟರ್ ಈಗೋದ ಜೊತೆಯ ಸಂಭಾಷಣೆಯಾಗಿ ತಮ್ಮ ಕಥನದ ಕಥೆ ಬಿಚ್ಚಿಟ್ಟು ಪ್ರಶ್ನೆಗಳೆಬ್ಬಿಸೋ ಗುರುಪ್ರಸಾದ್ ಕಾಗಿನೆಲೆ...
ಹಲವು ಪ್ರಶ್ನೆಗಳಿಗೆ ಉತ್ತರಗಳು, ಇನ್ನೊಂದಷ್ಟು ಹೊಸ ಪ್ರಶ್ನೆಗಳು, ನನ್ನೊಳಗಿನ ಬರಹದ ತುಡಿತಕ್ಕೆ, ಬರೆಯಲಾರೆ ಅನ್ನಿಸೋ ಕ್ಷಣಗಳಿಗೆ... familiar ಅನ್ನಿಸುತ್ತಲೇ ಹೊಸ ವಿಚಾರಗಳನ್ನ ತೆರೆದಿಡುತ್ತ ಅತೀ ವೇಗದಲ್ಲಿ ಆತ್ಮೀಯರಾಗಿಬಿಡೋ ಜನರೊಂದಿಗಿನ ಸಹಚರ್ಯದಂತೆ ’ದೇಶಕಾಲ’ದ ಸಾಂಗತ್ಯ ಅನಿಸಿಬಿಡ್ತು. ಒಂದೊಂದು ಸಾಲೂ ಚಪ್ಪರಿಸಿ ಸವಿದಿದ್ದೀನಿ. ಒಂದೆರಡು ಬರಹಗಳನ್ನ ಹಬ್ಬದ ಹೋಳಿಗೆಯಂತೆ ನಾಳೆಗೆ ಉಳಿಸಿಕೊಂಡಿದ್ದೀನಿ, ಏಪ್ರಿಲ್ ಹದಿನೈದರ ವರೆಗೆ ಮುಂದಿನ ಸಂಚಿಕೆಗೆ ಕಾಯ್‍ಬೇಕಲ್ಲ!
ಅಂದಹಾಗೆ ಸಬ್‍ಸ್ಕ್ರಿಪ್ಶನ್ ಕಳಿಸೋವಾಗ ಹಿಂದಿನ ಸಂಚಿಕೆಗಳು ಸಿಗುತ್ವಾ ಅಂತ ಕೇಳಿದ ಒಂದು ಸಾಲಿಗೆ ಯಾವ್ ಯಾವ್ ಸಂಚಿಕೆಗಳು ಲಭ್ಯ ಅಂತ ದೇಶಕಾಲ ಟೀಮ್‍ನ ಎಸ್ಸೆಮ್ಮೆಸ್ಸೂ ಬಂತು ಅನ್ನೋದು ಈಗ ಅಷ್ಟೊಂದು ಆಶ್ಚರ್ಯದ ವಿಷ್ಯ ಅನ್ನಿಸಲ್ಲ್ವೇನೋ!
ಹಾಂ, ಮತ್ತೆ ಹೊದಿಕೆಯ ವಿನ್ಯಾಸದಲ್ಲಿನ ಕಥೆಗಾರರ ಹೆಸರಿನ ಯಾದಿಯಲ್ಲಿ ನಮ್ಮ ಬ್ಲಾಗಿಗರ ಹೆಸರುಗಳು ಅಲ್ಲಲ್ಲಿ ಮಿನುಗಿದ್ದೂ ವಾವ್ ಅನ್ನಿಸಿದ್ ವಿಷ್ಯ!
iruvudellava biTTu iradudaredege tuDivude jeevana... to leave behind what we have and long for things that are not there is life...is the rough translation of these beautiful lines of Kannada poetry by Gopalakrishna Adiga, from the popular song - 'yaava mOhana muraLi kareyito'...they sum up our lives in a way nothing else can... this constant look out called life...
Showing posts with label ಕನ್ನಡ. Show all posts

Wednesday, February 20, 2008
Sunday, October 14, 2007
ಕಳೆಯಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ
ನೀನಾಸಂ ಪಕ್ಕದ ’ಚರಕ’ದಲ್ಲಿ ಹಿಂದೆ ಓದಿ ಮೆಚ್ಚಿದ್ದ ಲೇಖಕಿ ನೇಮಿಚಂದ್ರರ ಇಲ್ಲಿಯವರೆಗಿನ ಕಥೆಗಳ ಸಂಗ್ರಹ ಕಣ್ಣಿಗೆ ಬಿತ್ತು. ’ಅಂಕಿತ’ದವರು ಹೊರತಂದಿರುವ ಈ ಸಂಗ್ರಹದಿಂದ("ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು", ೨೦೦೧) ಕೆಲವು ಕಥೆಗಳ ತುಣುಕುಗಳನ್ನ ಆಗೀಗ ಇಲ್ಲಿ ಹಂಚಿಕೊಳ್ಳೋ ಪ್ಲಾನ್ ಇದೆ. ಇಲ್ಲಿ ವಿಮರ್ಶೆಗಾಗಲೀ ಪೂರ್ತಿ ಕಥೆ ಹೇಳುವ ಗೋಜಿಗಾಗಲೇ ಹೋಗ್ತಿಲ್ಲ, ಸುಮ್ಮ್ನೆ ಕೆಲವು ಸಾಲುಗಳು...
ಸದ್ಯಕ್ಕೆ ’ಕಳೆಯಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ’:
ಕಳೆಯಬೇಕಿದೆ ನಿನ್ನ ಜೊತೆಯಲಿ
ಒಂದು ಶ್ಯಾಮಲ ಸಂಜೆ
ಬಾನು ಭುವಿಗಳ ಬಣ್ಣ ಬೆರೆಯುವ
ಒಂದು ಮೋಹಕ ಸಂಜೆ
ಕನಸು ನನಸಿನ ನಡುವಿನಂಚನು
ಅಳಿಸಿ ಹಾಕುವ ಸಂಜೆ
ಎದೆಯ ನೋವಿಗೆ ಕದವ ಹಾಕದೆ
ತೆರೆದು ತೋರುವ ಸಂಜೆ
ಕಣ್ಣ ಕತೆಗಳ ಬಿಡಿಸಿ ಹೇಳುವ
ಒಂದು ಕೋಮಲ ಸಂಜೆ
ನನ್ನ ನೋವಿನ ಅಂತರಾಳಕೆ
ನೀನು ಜಿಗಿಯುವ ಸಂಜೆ
ಹಿಡಿದು ಕೈಯನು ಬದುಕಿನೀಚೆಗೆ
ಎಳೆವ ಸಾಧ್ಯದ ಸಂಜೆ....
ಮತ್ತೆ ಗುಣುಗುಣಿಸಿದೆ... ’ಬದುಕಿನೀಚೆಗೆ ಎಳೆವೆ ಸಾಧ್ಯತೆ’ ಇತ್ತೆ? ಹೊರಟ ಅಹಲ್ಯೆಯನ್ನು ಹಿಡಿದು ನಿಲ್ಲಿಸಬಹುದಿತ್ತೆ? ನಮ್ಮಲ್ಲಿ ಒಂದು ಸಂಜೆ ಇತ್ತೆ ಅಹಲ್ಯೆಗಾಗಿ?
ಸಮಯದಲ್ಲೆಲ್ಲೋ ಕಳೆದುಹೋದ ಸ್ನೇಹ-ಸಂಬಂಧಗಳು.
"ಅಹಲ್ಯಾನ ನೋಡಿ ಕಲಿ, ಅವಳೂ ಫಸ್ಟ್ ಬರ್ತಾಳೆ, ರ್ಯಾಂಕ್ ಬರ್ತಾಳೆ, ಒಂದು ದಿನ ಎಗರಾಡಿದ್ದು ಕೇಳಿಲ್ಲ. ನಿನ್ನ ಬಾಯಿ ಊರಗಲ. ಎಲ್ಲಕ್ಕೂ ಯಾಕೆ, ಏನು, ಆಗೋಲ್ಲ ಅಂತಾನೇ ವಾದಿಸ್ತೀಯ... ಅದ್ಯಾವ ಗಳಿಗೇಲಿ ಸಾಗರಿಕಾ ಎಂದು ಹೆಸರಿಟ್ಟೆವೋ, ಸಮುದ್ರದ ಆರ್ಭಟ ಎಲ್ಲ ನಮ್ಮ ಮನೆಯೊಳಗೇ ನುಗ್ಗಿ ಬಂತು" ಅಮ್ಮ ಗೊಣಗುತ್ತಿದ್ದಳು.
ಮನಸ್ಸಿಗೆ ಸಮಾಧಾನವಿರಲಿಲ್ಲ. ಈ ಹುಚ್ಚಾಟದ ನಡುವೆ ಅಹಲ್ಯ ಎಲ್ಲಿಯೋ ಕಳೆದುಹೋಗುತ್ತಿದ್ದಾಳೆನಿಸಿತ್ತು. ಸುಖದ ಸುಳ್ಳಿನ ಜಾಲದಲ್ಲಿ ಸತ್ಯವನ್ನು ಮರೆಮಾಚುತ್ತಿದ್ದಾಳೆ, ವಾಸ್ತವವನ್ನು, ವರ್ತಮಾನವನ್ನು ನಿರಾಕರಿಸುತ್ತಿದ್ದಾಳೆನಿಸಿತು. ಈ ಬದುಕಿನಾಚಿನ ಸ್ವರ್ಗದ ಬಾಗಿಲು ತೋರಿಸಿ ಅವಳನ್ನಾಚೆಗೆ ಸೆಳೆವ ಭಯವಿತ್ತು. ... ಅವಳ ಅನುಭವಕ್ಕೆ ನಾ ಹೊರತಾಗಿದ್ದೆ. ನನ್ನ ಮಾತುಗಳೊಂದೂ ಅವಳನ್ನು ಸ್ಪರ್ಷಿಸುತ್ತಿರಲಿಲ್ಲ. ನಾ ತೋರುವ ಹಾದಿಗಳೆಲ್ಲ ಉದ್ದವಿದ್ದವು. ಸುಖದ ಗ್ಯಾರಂಟಿ ಕೊಟ್ಟ ಹಾದಿಗಳಲ್ಲ, ಹೋರಾಟದ ಹಾದಿಗಳು. ಆದರೆ ಗಟ್ಟಿ ನೆಲದ ಮೇಲೆ ಊರುವ ಹೆಜ್ಜೆಗಳವು. ಬದುಕಿನತ್ತ ಇಟ್ಟ ದಿಟ್ಟ ಹೆಜ್ಜೆಗಳು.
ಮನುಷ್ಯ ದ್ವೀಪವಾಗಿದ್ದ.... ಮತ್ತೆ ನೋಡಿದೆ ಹಿನ್ನೀರಿನತ್ತ. ಎಲ್ಲಿಯೋ ಅಹಲ್ಯೆಯ ದನಿ ಕೇಳಿಸಿತು. "ನೀ ಸಮುದ್ರ, ಪುಡಿಮಾಡಬಲ್ಲೆ ತೀರಕ್ಕೆ ಬಡಿ ಬಡಿದು ಬಂಡೆಗಳ... ನಾ ದಂಡೆಗಳ ನದುವೆ ಕಲ್ಲು ಬಂಡೆಗಳ ನಡುವೆ ಸಿಲುಕಿ ನಿಂತ ಹಿನ್ನೀರು. ನನ್ನ ಮಿತಿ ದಾಟಲಾರೆ..."
ಹಿನ್ನೀರ ಒಡಲಾಳದ ತಳಮಳ ನನಗೆ ತಿಳಿದಿತ್ತು. ಹೋದವರು ಮತ್ತೆ ಹಿಂತಿರುಗಿ ಬಾರರು. ಆದರೆ ಉಳಿಸಿಕೊಳ್ಳಬಹುದೇ ಉಳಿದವರನ್ನು? ಪ್ರಶ್ನೆ ಹೊತ್ತು ಹೊರಟೆ ಹೋಟಲಿನತ್ತ.
for a brief intro to the writer: http://www.deccanherald.com/Archives/dec21/artic6.asp
P.S.,: ಇಲ್ಲಿ ಬಂದು ಹತ್ತು ಸಾವಿರದ ಹಿಟ್ಟು ಕುಟ್ಟಿದವರಿಗೆಲ್ಲ ಧನ್ಯವಾದಗಳು!

Monday, March 13, 2006
ನಾನೂ ನನ್ನ ಬರಹ!
ಕನ್ನಡಕ್ಕೂ ಕಂಪ್ಯೂಟರಿಗೂ ಜೋತು ಬಿದ್ದ ಅಪರೂಪದ ಪ್ರಾಣಿಗಳ ಗುಂಪಿಗೆ ಸೇರಿದ ನನಗೆ ಮನೆಯಲ್ಲಿ ಬರಹ ಉಪ್ಯೋಗಿಸೋಕೆ ಆಗ್ದೇದ್ದಾಗ ಮೈ ಪರಚಿಕೊಳ್ಳೋಹಾಗಾಗಿದ್ದು ಸಹಜ ಅನ್ನ್ಸುತ್ತೆ!
ಮುಂಚಿನಿಂದ ಓದುವ ಬರೆಯುವ ಗೀಳೇನೋ ಇತ್ತು - ಆದ್ರೆ ಈಚೆಗೆ ಬರೆದದ್ದು ಕಡಿಮೆ. ಕಾಲೇಜಿನಲ್ಲಿದಾಗ ಜಾಸ್ತಿ ಸಮಯ ಇರ್ತಿತ್ತೋ ಅಥವಾ distractions ಕಡಿಮೆ ಇದ್ದ್ವೋ...ಒಟ್ಟಿನಲ್ಲಿ ಆಗ ಎನಾದ್ರೂ ಬರೀತಿದ್ದೆ...ಯಾವ್ದೋ essay competitionನೋ ಅಥ್ವಾ ಇನ್ನ್ಯಾವ್ದೋ ಮನಸ್ಸಿಗೆ ನಾಟಿದ/ ಸ್ವಲ್ಪ ಅಲ್ಲಾಡಿಸಿದ ವಿಷಯನೋ ತಲೆಗೆ ಹೊಕ್ಕಾಗಲೆಲ್ಲ ನೋಟ್ ಬುಕ್ ನಲ್ಲಿ ನಾಕು ಸಾಲು ಗೀಚೋದು ಅಭ್ಯಾಸ. ಪುಟ್ಟ ಹುಡುಗಿ ಅಮ್ಮನ ಕಾಲೇಜು ಪುಸ್ತಕಗಳಲ್ಲಿ ನೋಡಿದ್ದ ಅಮ್ಮನ ಭಾವಜೀವನದ, ಮುಗ್ಧತೆಯ, ಯೋಚನಾಶೀಲತೆಯ, ಕಲ್ಪನೆಯ ತುಣುಕುಗಳು ಈ ಗೀಚುವಿಕೆಗೆ inspiration ಆಗಿತ್ತೇನೋ. ಒಟ್ಟಿನಲ್ಲಿ ನನ್ನ ನೋಟ್ ಬುಕ್ ಗಳ ಹಿಂದಿನ ಪುಟಗಳು ನನ್ನ ಪ್ರಪಂಚದ ಆತ್ಮೀಯ ಭಾಗವಾಗಿದ್ದವು. note bookನ ಜೊತೆಯ ನಂಟು ಕಳೆದದ್ದರಿಂದಲೋ ಏನೋ ಈ ನನ್ನ ಪ್ರಪಂಚದಿಂದ ಕೆಲವು ದಿನ ದೂರವಾಗಿದ್ದೆ. note bookನ ಜಾಗಕ್ಕೆ ಕಂಪ್ಯೂಟರ್ ಬಂದು, ತನ್ನ ಜೊತೆ ಇಂಟರ್ನೆಟ್ಟನ್ನೂ ತಂದಾಗ ಬ್ಲಾಗ್ ಅನ್ನೋ ಹೊಸ ಖಾಲಿ ಸ್ಲೇಟು ನನ್ನ ಬತ್ತಳಿಕೆಗೆ ಒಡ್ಡಿಕೊಂಡು, ನಾನು ಅದಕ್ಕೆ ಒಗ್ಗಿಕೊಂಡು ನನ್ನ ಈ ಒದ್ದಾಟಗಳಿಗೆ ಸಹೃದಯಿ ಸ್ನೇಹಿತರ ಒತ್ತಾಸೆಯೂ ಸೇರಿಕೊಂಡು ಕಳೆದು ಹೋದ ಗೊಂಬೆಯೊಂದು ಹೊಸ ಅಲಂಕಾರದಲ್ಲಿ ಕೈಗೆ ಸಿಕ್ಕ ಮಗುವಿನಂತೆ ನನ್ನದೇ ಖುಷಿಯಲ್ಲಿ ಮತ್ತೆ ಬರೆಯೋದಕ್ಕೆ ಪ್ರಾರಂಭಿಸಿದೆ.
ಆಫೀಸ್ನಲ್ಲಿ ಕನ್ನಡ ಬಳಕೇನ ಬರಹದ ಮೂಲಕ ಷುರು ಮಾಡಿದ್ದೆ. ಈ ಬ್ಲಾಗ್ ಹುಚ್ಚು ಹಿಡಿದ್ಮೇಲೆ ಅದನ್ನೇ ಇಲ್ಲೂ ಉಪಯೋಗಿಸೋಕೆ ಷುರು ಹಚ್ಚ್ಕೊಂಡೆ. ಆದ್ರೆ ಇದ್ದದ್ದು ಒಂದೇ ಸಮಸ್ಯೆ. ಇಂಗ್ಲೀಷ್ ನಲ್ಲಿ ಬರೆದ ಪೋಸ್ಟ್ ಗಳನ್ನ ಮನೆಯಲ್ಲಿ ಬರೆದು ತಂದು ಇಲ್ಲಿ ಪೋಸ್ಟ್ ಮಾಡ್ಬಹುದಿತ್ತು. ಆದ್ರೆ ಮನೆಯಲ್ಲಿ ಬರಹದ ಹಳೆಯ ವರ್ಶನ್ ಇದ್ದಿದ್ರಿಂದ ಕನ್ನಡದಲ್ಲಿ ಅಲ್ಲಿ ಬರೆದು ಇಲ್ಲಿ ಪೋಸ್ಟ್ ಮಾಡೋಕಾಗ್ತಿರ್ಲಿಲ್ಲ. ಹಾಗೇ ಆಫೀಸ್ನಲ್ಲೇ ಅಲ್ಲೊಂದು ಇಲ್ಲೊಂದು ಖಾಲಿ ನಿಮಿಷಗಳನ್ನ ಕದ್ದು ಏನೋ ನಾಕು ಸಾಲು ಗೀಚ್ತಿದ್ದೆನಾದ್ರೂ ಮನಸ್ಸು ಬಂದಾಗ(ನನ್ನ್ ಕೇಸ್ನಲ್ಲಿ ಇದು usually ಆಗೋದು ರಾತ್ರಿ ೧೧ ಘಂಟೆ ಮೇಲೇನೇ!), ಮನಸ್ಸು ಬಂದಷ್ಟು ಹೊತ್ತು ಬರ್ಯೋದಕ್ಕಾಗ್ತಿರ್ಲಿಲ್ಲ ಅನ್ನೋ ಬೇಜಾರು ಆಗಾಗ ಕಾಡ್ತಾನೇ ಇತ್ತು.
ಅಷ್ಟರಲ್ಲಿ bsnl ದಯೆಯಿಂದ ಮನೆಯಲ್ಲಿ ನೆಟ್ ಬಂತು. ಸರಿ ಇನ್ನು ಪೋಸ್ಟ್ ಮೇಲೆ ಪೋಸ್ಟ್ ಕುಟ್ಟಿ ಬಿಸಾಕೋದು ಅಂತ ಹಕ್ಕಿಯಂತೆ light ಆಗಿ ಹಾರೋದ್ರಲ್ಲಿದ್ದೆ! ಮೊದಲ ಹೆಜ್ಜೆ ಅಂತ ಬರಹದ ಹೊಸ ವರ್ಶನ್ ಕೆಳಗಿಳಿಸೋ ಮಹತ್ಕಾರ್ಯನೂ ಆಯ್ತು. ಅದಾದ್ ತಕ್ಷಣ ಇನ್ನು ಬರ್ದೇ ಬಿಡ್ತೀನಿ ಅನ್ನೋ ಹುಮ್ಮಸ್ಸಿನಲ್ಲಿ ಬ್ಲಾಗಿಗೆ ಲಾಗ್ ಆದ್ರೆ ಹುಹ್! ಕನ್ನಡ ಹೋಗಿ ಚಿತ್ರಾನ್ನ ಆಗ್ಬಿಡೋದಾ! ಬರಹ ಡೈರೆಕ್ಟ್ನಲ್ಲಿ ಯುನಿಕೋಡ್ನಲ್ಲಿ ಅಫೀಸ್ನಲ್ಲಿ ಕುಟ್ಟಿ ಕುಟ್ಟಿ ಬಿಸಾಕ್ತಿದ್ದದ್ದು ಮನೇನಲ್ಲಿ ಏನಾಯ್ತು ಅಂತ ಎಷ್ಟು ತಲೆ ಕೆಡ್ಸ್ಕೊಂದ್ರೂ ಗೊತ್ತಾಗ್ಲಿಲ್ಲ! ಆರ್ಕಟ್ ಕನ್ನಡ ಕಮ್ಮ್ಯೂನಿಟಿ, ಸಂಪದ, ಭಾಷಾಇಂಡಿಯಾ - ಹೀಗೆ ಸ್ನೇಹಿತರ ಸಲಹೆ ಮೇರೆಗೆ ಎಲ್ಲಾ ಕಡೆ ತೀರ್ಥಯಾತ್ರೆ ಹೋಗ್ಬಂದಿದ್ದಾಯ್ತು, ಕನ್ನಡಪ್ರೇಮಿ ಮಿತ್ರರಿಗೆ sos ಹಾಕಿದ್ದಾಯ್ತು, ಇಂಡಿಕ್ ಫಾಂಟ್ಸ್ ಮಣ್ಣು ಮಸಿ ಅಂತೆಲ್ಲ ಕೆಳಗಿಳ್ಸಿದ್ದಯ್ತು, ನಮ್ಮ್ ಬರಹ ಮಾತ್ರ ಕನ್ನಡ ಬರೀ ಒಲ್ಲ್ದು! ಏನ್ ಸಮಸ್ಯೆ ಅಂತನೇ ಗೊತ್ತಾಗ್ತಿಲ್ಲ!
ಕನ್ನಡ, ಇಂಗ್ಲಿಷ್ - ಎರಡು ಭಾಷೆಲೂ ಬರಿಯೋ ನನಗೆ ಕನ್ನಡ ಕೈಗೆಟುಕದಂತಾದಾಗ ಇಷ್ಟು ಕಸಿವಿಸಿಯಾದದ್ದು ನನಗೇ surprise! ಇನ್ನೇನು frustration ಪರಮಾವಧಿ ಮುಟ್ಟೋ ಹೊತ್ತಿಗೆ ಒಂದು ತಣ್ಣನೆಯ ರಾತ್ರಿ ನನ್ನ್ ತಲೆ ಬಿಸಿಯಾಗಿ ಬ್ಲಾಸ್ಟ್ ಆಗೋ ಮುಂಚೆ ನನ್ನ್ ತಮ್ಮನಿಗೆ ಬ್ರೌಸರ್ ಬದಲಿಸೋ ಐಡಿಯಾ ಠಕ್ಕಂತ ಹೊಳೆದಿದ್ದು ಕನ್ನಡಮ್ಮನ್ blessingsಏ ಅಂತ ಈಗ ಅನ್ನ್ಸುತ್ತೆ! ಹಿಂದಿನ ಪೋಸ್ಟ್ನಲ್ಲಿ ಹೇಳಿದ್ ಹಾಗೆ ಎಕ್ಸ್ಪ್ಲೋರರ್ ಬಿಟ್ಟು ಒಪೆರನಲ್ಲಿ ಬ್ಲಾಗಿಗೆ ಬಂದಾಗ ಕನ್ನಡ ಲಿಪಿ ಮುದ್ದಾಗಿ ಅರಳಿ ಮುಖದಲ್ಲಿ ಹೂನಗೆಯೊಂದನ್ನ ಮಿಂಚಿಸಿಬಿಟ್ಟ್ವು!
ಆಗ ಬರೀತೀನಿ ಅನ್ಕೊಂಡದ್ದನ್ನ ಬರ್ಯೋಕೆ ವಾರಕ್ಕ್ ಮೇಲೆ time ತೊಗೊಂಡಿದ್ದು ನಿಜ. ಆದ್ರೆ ಬರ್ಯಕ್ಕಾಗ್ದೇದ್ದಾಗ ಚಡಪಡಿಸಿದ್ದೂ ನಿಜ! ಒಲ್ಲೆ ಅಂದ ಹುಡುಗಿ ಹಿಂದೆ ಓಡೋ ಹುಡುಗ ಹುಡುಗಿ ಒಂದು glance ಕೊಟ್ಟ್ಬಿಟ್ಟ್ ತ್ತಕ್ಷಣ ಇಲ್ಲ್ದೇರೋ ಜಂಭಾನೆಲ್ಲಾ ಮುಖದ್ ಮೇಲೆ ಮಿಂಚಿಸೋ ಹಾಗೇನೋ!:) (ok guys, granted, the reverse is also true!)

ಅಂತೂ ಹೀಗಾಯ್ತು ಬರಹದ ಜೊತೆ ನನ್ನ ಪ್ರಣಯಪ್ರಸಂಗ!
Saturday, March 11, 2006
ಗೆದ್ದುಬಿಟ್ಟೆ!!!
ಹುರ್ರಾ!!!!! ಕೊನೆಗೂ ಗೆದ್ದುಬಿಟ್ಟೆ:)
ಬರಹ ಯುನಿಕೋಡ್ ಬಳಸಲು ಎಲ್ಲರೂ ಕೊಟ್ಟ ಸಲಹೆಗಳನ್ನ ಒಂದಾದಮೇಲೊಂದು try ಮಾಡೀ ಮಾಡೀ ಸೋತು ಸುಣ್ಣವಾಗಿ ಇನ್ನೇನು ಧರಾಶಾಯಿಯಾಗೋದ್ರಲ್ಲಿದ್ದೆ, ನನ್ನ್ ತಮ್ಮ
ಅಪರೂಪಕ್ಕೊಂದು ಒಳ್ಳೇ ಸಲಹೆ ಮುಂದಿಟ್ಟ - ಬ್ರೌಸರ್ ಬದಲಿಸಿ ನೋಡು ಅಂತ! ಒಪೆರನಲ್ಲಿ ಪ್ರಯತ್ನಿಸಿದ ತಕ್ಷಣ ಬಂದುಬಿಡ್ತು ನಮ್ಮ ಕನ್ನಡದ ಮಲ್ಲಿಗೆ ಹೂವು, ಮುತ್ತಿನ ಸಾಲು!
ತವಿಶ್ರೀಯವರಿಗೆ, ಸುಶೀಲ್ ಗೆ,ಶ್ರೀ(ಏನ್ಸಮಾಚಾರ!)ಗೆ,alwaysvettiಗೆ ಸಲಹೆಗಳಿಗಾಗಿ, ಮಾರ್ಗದರ್ಶನಕ್ಕಾಗಿ ಧನ್ಯವಾದಗಳು:)
ಹುಹ್! ತುಂಬಾ ಹಸಿವಾದಾಗ ಏನನ್ನೂ ತಿನ್ನೋಕಾಗಲ್ಲ! ಏನ್ ಬರಿಯೋದಕ್ಕೂ ಆಗ್ತಿಲ್ಲ - ತಲೆಯಲ್ಲಿ ಐಡಿಯಾಗಳು ತಕಧಿಮಿ ನಡ್ಸಿವೆ!
ಈ ಅನುಭವದ್ ಬಗ್ಗೆನೇ ಮೊದಲು ಬರೀಬೇಕು! ಸುಧಾರಿಸ್ಕೊಂಡು ಬರೀತೀನಿ!:)

Tuesday, March 07, 2006
SOS!
manege hosadaagi net connection bantu annO khushinalli baraha hosaa version download maaDde...eega unicode nalli baryOkE aagtilla!:( yaake anta gotthaagthilla! word filenalli ansi modenalli bardre kannada aksharagaLu baratthve...illi unicode kai kodtide.... eraDu dONigaLalli kaaliTTu baduki abhyaasa aaghOgide...eega kannadadalli baryakkaagthilla andre mai parchkoLLO haagaagthide:((
yaaraadrU kannadabhaktaru daari tOrsipaa!

Tuesday, February 28, 2006
ಕುಲ್ಗೆಟ್ಟ್ ಭಾಷೆ, ಕಂಗ್ಲೀಷು, ಕಂಗಾಲು!
warning: ಕನ್ನಡದಲ್ಲ್ ಸಂಸ್ಕೃತ ಮಾತಾಡಿ/ ಕೇಳಿ ಅಭ್ಯಾಸ ಇಲ್ಲ್ದೇರೋವ್ರು please stay away. ನಂಗೆ ಶಾನೆ ಕೋಪ ಬಂದಿರೋದ್ರಿಂದ ಜೇಡ್ರಳ್ಳಿ style ಬರೋ ಎಲ್ಲಾ ಸಾಧ್ಯತೆಗಳೂ ಇವೆ!:D
ನೆನ್ನೆ ಹಿಂಗೇ ಎಲ್ಲೋ ಬೀದಿ ಸುತ್ತ್ಕೊಂಡ್ ಮನೆಗ್ ಬರ್ತಿದ್ದೆ. ಜೊತೆಗೆ ಇದ್ದವ್ರು ಇಬ್ರು. ಇಬ್ರೂ ಇಲ್ಲಿಯವ್ರೇ. ಕನ್ನಡ ಮಾತಾಡಕ್ಕ್ ರೋಗ! ಹಾಳಾಗೋಗ್ಲಿ ಇಂಗ್ಲಿಷ್ ಚೆನ್ನಾಗ್ ಬಂದ್ರೆ ತಡ್ಕೋ ಬಹುದು! ಕೆಲ್ವು samples:
'sooooo many times i called to him ya! even morning i told to him to come to here'
'please remeber me to call to him ya'(ಇಂಥಾ ನುಡಿಮುತ್ತು ಉದ್ರ್ಸ್ತಿದ್ರೆ ನಿನ್ನ ಮರ್ಯೋದಾದ್ರೂ ಹೇಗೆ!)
ಕೆಂಬೂತ ನವಿಲ್ಗರಿ ಸಿಕ್ಕ್ಸ್ಕೊಂಡು ಕುಣೀತಂತೆ! ಎತ್ತ್ ಒದ್ಯಣ ಅನ್ನ್ಸುತ್ತೆ! ಯಾವ್ದಾದ್ರೂ ಭಾಷೆ ಮಾತಾಡಿ, atleast ಸರ್ಯಾಗಿ ಮಾತಾಡಿ! ಇತ್ಲಾಗೆ ಕುವೆಂಪು ಕನ್ನಡಾನೂ ಗೊತ್ತಾಗಲ್ಲ, ಅದು ಹೋಗ್ಲಿ ಅಂದ್ರೆ Indian english-U ಬರಲ್ಲ! ಸರಿ ಸೀದಾ ಸಾದಾ ಬೆಂಗ್ಳೂರ್ಕನ್ನಡ ಮಾತಾಡಿ ಅಂದ್ರೆ ಹರ್ಕ್ಲು ಇಂಗ್ಲಿಷ್ನಲ್ಲೇ ಸ್ಕೋಪು!
ಭಾಷೆ ಇರೋದು communicationಗೆ ಅನ್ನೋದು ಮರ್ತು ಇಲ್ಲ್ದೇರೋ ಪ್ರತಿಷ್ಠೆ ಮೆರ್ಸಕ್ಕ್ ಹೋಗೋವ್ರಲ್ಲಿ ಇದೊಂದು type ಆದ್ರೆ, ಕೆಟ್ಟ್ ಕುಲ್ಗೆಟ್ಟೊಗಿರೋ ಅಮೆರಿಕನ್ accentನಲ್ಲಿ ಬಡ್ಬಡಾಯ್ಸೋದು ಇನ್ನೊಂದ್ ಗುಂಪು!
ನಾನು ಕನ್ನಡ ಬಾವುಟ ಎತ್ತ್ಕೊಂಡುಹೋಗಿ ಗೌರಿಶಂಕರದಲ್ಲಿ(Mt Everest ಕಣ್ರಪ್ಪಾ ಥೇಮ್ಸ್ ನನ್ನ್ ಮಕ್ಕಳ್ರಾ!) ನೆಡ್ಬೇಕು ಅನ್ನೋದಿಲ್ಲ. ಶೇಕ್ಸ್ಪಿಯರು ಸಮಾಧಿನಲ್ಲಿ ಒದ್ದ್ಲಾಡ್ದೇರೋ ಥರ ಇಂಗ್ಲಿಷ್ ಮಾತಾಡಿ ಅಂತನೂ ಹೇಳಲ್ಲ. ಆದ್ರೆ ಕನ್ನಡವೂ ಇಂಗ್ಲಿಷೋ ಕಂಗ್ಲಿಷೋ (ನನ್ನ್ ಭಾಷೆ ಈ ಕುಲ್ಗೆಟ್ಟ್ ಕಂಗ್ಲೀಷೇ ಅಂತ ಕುವೆಂಪು ಮುತ್ತಾತ, ಶೇಕ್ಸ್ಪಿಯರ್ ಕೋಲ್ತಾತನ್ ಥರ 'ಶುದ್ಧ ಭಾಷೆ'ಗಳನ್ನ ಮಾತಾಡೋ ಒಬ್ಬ ಫ್ರೆಂಡು ಹೇಳ್ತಿರ್ತಾನೆ/ ಬೈತಿರ್ತಾನೆ:P) ನಾವು ಮಾತಾಡೋದು ಎದುರು ಇರೋವ್ರಿಗೆ ಅರ್ಥ ಆಗೋದು ನಮ್ಮ್ priority ಆಗಿರ್ಬೇಕಲ್ಲ್ದೇ ದೊಂಬರಾಟ ಆಗ್ಬಿಡ್ಬಾರ್ದಲ್ಲ್ವ?!
ಈ ಕುವೆಂಪು ಮುತ್ತಾತ/ ಶೇಕ್ಸ್ಪಿಯರ್ ಕೋಲ್ತಾತನ್ ಬಗ್ಗೆ ಮಾತಾಡ್ತಾ ಒಂದು incident ನೆನಪಾಗತ್ತೆ. ಒಂದ್ಸಲ ಈ ಮಹಾಶಯನ್ ಹತ್ರ ಕೆಲವು ಹುಲು ಮನುಷ್ಯರು - ಅವ್ರೂ ನನ್ನ್ ಫ್ರೆಂಡ್ಸೇ (ಹೌದು, ನನ್ನ್ ಫ್ರೆಂಡ್ಸ್ ಲಿಸ್ಟು ಯಾವ್ zoo gardenಗೂ ಕಡಿಮೆ ಇಲ್ಲ - ಎಲ್ಲಾ ನಮೂನಾಗಳೇ!:)) - ಮಾತಾಡ್ತಿದ್ದ್ರು. ಈ ಪುಣ್ಯಾತ್ಮನ್ನ ಹಾಸ್ಟಲ್ನಲ್ಲಿ ಊಟ ಚೆನ್ನಾಗಿದೆ ಅಲ್ಲ್ವಾ ಅಂದ್ರೆ 'ಮೊದಮೊದಲು ಹಾಗನ್ನಿಸ್ತಿತ್ತು ನನಗೂ, ಈಗ ಏಕತಾನತೆ ಕಾಡತ್ತೆ' ಅಂತ royal ಆಗಿ ಅಚ್ಚಕನ್ನಡದಲ್ಲಿ ನುಡಿಮುತ್ತು ಉದುರ್ಸಿಬಿಟ್ಟಿದಾನೆ! ಈ ಪ್ರಾಣಿಗಳರಡು ಕಣ್ಣ್ ಕಣ್ಣ್ ಬಿಟ್ಟ್ಕೊಂಡು, ಮುಖ ಮುಖ ನೋಡ್ಕೊಂಡು ಇದು ನಮ್ಮ್ levelಗೆ ಮೀರಿದ್ದು ಅಂತ ತೆಪ್ಪ್ಗಾಗಿ ಆಮೇಲೆ ಬಂದು ನನ್ನನ್ನ ಕೇಳ್ದ್ರು! ಏಕತಾನತೆ ಅಂದ್ರೆ monotony ಅಂತ ವಿವರಿಸ್ದಾಗ ಒಂದು ದೊಡ್ಡ್ ಓಹೋನೂ ಬಂತು!:))
ಇದನ್ನ ನೋಡ್ತಿದ್ದಾಗ ಭಾಷೆನ ಕಲ್ಸೋ ರೀತಿನಲ್ಲೇ ಎಲ್ಲೋ ಎಡವಟ್ಟಾಗಿದೆಯೇನೋ ಅನ್ನ್ಸುತ್ತೆ. ಈ caseನಲ್ಲಂತೂ ಒಂದ್ಸ್ವಲ್ಪ logic ಉಪ್ಯೋಗ್ಸಿದ್ರೆ ಸ್ವಲ್ಪ scientificಆಗಿ ಭಾಷೆನ ಕಲ್ತಿದ್ರೆ ಏಕ=mono ತಾನ=tone ಅಂತ ಸುಲಭವಾಗಿ ಅರ್ಥ ಮಾಡ್ಕೋಬಹುದುತ್ತು. ನಮ್ಮಮ್ಮ ನಾನು ಚಿಕ್ಕವ್ಳಿದ್ದಾಗ ಭಾಷೆ ಕಲಿಸ್ತಾ, ಕನ್ನಡವೇ ಆಗ್ಲಿ ಇಂಗ್ಲಿಷೇ ಆಗ್ಲಿ, mug up ಮಾಡು ಅನ್ನದೇ ಪದಗಳನ್ನ, spellingsನ, ಅರ್ಥದಮೇಲೆ, pronunciation ಮೇಲೆ ಬಿಡಿಸಿ ಕಲಿಯೋದನ್ನ ಹೇಳ್ಕೊಟ್ಟ್ರು - ನನ್ನ್ ಪುಣ್ಯ! ಅಷ್ಟೇ - ಅದನ್ನ್ ಬಿಟ್ಟು ಯಾವ ಹೋಮ್ ವರ್ಕೂ ಕೂತು ಮಾಡಿಸ್ಲಿಲ್ಲ, ಯಾವ ಪಾಠನೂ ಓದ್ಸ್ಲಿಲ್ಲ. ಎಲೆಗಳನ್ನ ಹಸಿರು ಮಾಡೊದು ಯಾವ್ದು ಅನ್ನೋದಕ್ಕೆ ನನ್ನ್ ಮಿಕ್ಕೆಲ್ಲಾ classmates ಪತ್ರ ಹರಿತ್ತು ಅಂತ ಉತ್ತರ ಗಟ್ಟ್ ಹೊಡೀತಿದ್ದಾಗ ನಾನು ಆರಾಮಾಗಿ ಪತ್ರ=ಎಲೆ, ಹರಿತ್ತು=ಹಸಿರು ಅದರಲ್ಲಿ ತಲೆಕೆಡ್ಸ್ಕೊಂಡು ಗಟ್ಟು ಹೊಡ್ಯೋದೇನಿದೆ ಅನ್ಕೋತಿದ್ದೆ! ಈಗಂತೂ ಭಾಷೆಗಳಿಗೆ ನಮ್ಮ್ curriculumನಲ್ಲಿ ದಿನೇ ದಿನೇ importance ಕಡಿಮೆಯಾಗ್ತಿದೆ. science/ engineering ಆದ್ರಂತೂ ಕೇಳೊದೇ ಬೇಡ! ಭಾಷೆಗೂ ತಮ್ಗೂ ಸಂಬಂಧನೇ ಇಲ್ಲ ಅಂತ ಒಂದೇ ಸಲ ಕೈತೊಳ್ಕೊಂಡ್ಬಿಡ್ತಾರೆ ನಮ್ಮ್ ಹುಡುಗ್ರು! VTU VC language papers introduce ಮಾಡ್ದಾಗ ಊರಲ್ಲಿರೋ ಇಂಜಿನೀರಿಂಗ್ ಹುಡುಗ್ರೆಲ್ಲಾ ಹಿಡಿ ಹಿಡಿ ಶಾಪ ಹಾಕಿದ್ರು!
ಊರ್ ತುಂಬಾ ಇಂಜಿನೀರ್ಸೇ ತುಂಬ್ಕೊಂಡಿರೋ ಬೆಂಗ್ಳೂರಲ್ಲಿ ಅವ್ರಿಗೆಲ್ಲ ಸಾಹಿತ್ಯ ಬಿಡಿ, ಭಾಷೆನೂ ಸರ್ಯಾಗಿ ಬರ್ದೇ ಇದ್ದ್ರೆ ಸುಮ್ಮ್ನೆ ಕನ್ನಡಕ್ಕೆ ಅವಮಾನ ಆಗ್ತಿದೆ, ನಮ್ಮ್ ಭಾಷೆಗೆ ಸ್ಥಾನ ಸಿಗ್ತಿಲ್ಲ ಅಂತೆಲ್ಲಾ ಒದರಿದ್ರೆ ಅದಕ್ಕೊಂಡು ಬೆಲೆಯಾದ್ರೂ ಹೇಗೆ ಸಿಗತ್ತೆ!
ಭಾಷೆಯೆಂಬುದು ಮಗಳೆ ಮಾನವನ ಆಸೆ....ಅಂತ ಪ್ರೈಮರಿ ಸ್ಕೂಲ್ನಲ್ಲಿ ಓದಿದ ದಿನಕರ ದೇಸಾಯಿಯವ್ರ ಚುಟುಕ ನೆನಪಾಗತ್ತೆ!
ಏನೇನೋ ಬರ್ದ್ಬಿಟ್ಟಿದೀನಿ - ಇದನ್ನ ಬರ್ಯೊಕೆ ಶುರು ಮಾಡಿದ್ದ್ ದಿನ ಮೆಟ್ಟ್ಕೊಂಡಿದ್ದ ಜೇಡ್ರಳ್ಳಿ ಭೂತ ಇವತ್ತು ನನ್ನ ಹಿಂದೆ ಇಲ್ಲ, ಆದ್ರೆ ಭಾಷೆಗಳ್ ಬಗ್ಗೆ ನನ್ನ ಯೋಚನಾ ಲಹರಿ ಹರೀತಾನೇ ಇದೆ...

Subscribe to:
Posts (Atom)