ಕೆಲಸಕ್ಕೆ ಸೇರಿದ್ ಹೊಸದರಲ್ಲಿ ಊರಿಗೆಲ್ಲ ಒಬ್ಬಳೇ ಪದ್ಮಾವತಿಯಂತೆ ಅಲ್ಲಿದ್ದ ಆಲ್ಮೋಸ್ಟ್ ಏಕೈಕ(ಆಗ) ಕನ್ನಡ ಓದುಗಳಾಗಿ ಮೆರೀತಿದ್ದಾಗ, ಕನ್ನಡದ little magazineಗಳ ಬಗ್ಗೆ ಮಾಹಿತಿ ಹುಡುಕ್ತಿದ್ದಾಗಲೆಲ್ಲ ಪದೇ ಪದೇ ಎದುರಾದ ’ನೀನ್ ದೇಶಕಾಲ ಓದಲ್ಲ್ವಾ/ನೋಡಿಲ್ಲ್ವಾ’ ಪ್ರಶ್ನೆಗಳಿಂದ ಓಹ್ ಇದನ್ನ್ ಒಂದ್ಸಲ ನೋಡ್ಬೇಕು ಅನ್ನಿಸಿದ್ದ್ರೂ ಅದು ಅಲ್ಲಿಗೇ ನಿಂತಿತ್ತು.
ಈಚೆಗೆ ಬರಿಯೋದು ಕಮ್ಮಿ, ಓದೋದು ಜಾಸ್ತಿ ಮಾಡ್ಬೇಕು ಅನ್ನಿಸಿ, ಕುವೆಂಪು-ಕಾರಂತರಾಚೆ ಕನ್ನಡ ಓದಿದ್ದು ಸಾಲದು ಅಂತ ಜ್ಞಾನೋದಯ ಆಗಿ, ಅಲ್ಲಿ ಇಲ್ಲಿ ಪುಸ್ತಕ ಹುಡುಕ್ತಾ, ಕೈಗೆ ಸಿಕ್ಕಿದ್ದ್ ಓದುತ್ತಾ ಇಂಟರ್ನೆಟ್ ಅನ್ನೋ ಬಲೆಯಲ್ಲಿ ಕನ್ನಡ ಜಾಲಾಡ್ತಾ ಸಿಕ್ಕಪಕ್ಕ ಬ್ಲಾಗುಗಳು, ವೆಬ್ಸೈಟ್ಗಳನ್ನ ಹಿಗ್ಗಾಮುಗ್ಗಾ ಓದ್ತಾ ಕಾಳು-ಜೊಳ್ಳುಗಳ ಮಧ್ಯೆ ಮುಗ್ಗರಿಸ್ತಿದ್ದ ಹೊತ್ತಿಗೆ ’ದೇಶಕಾಲ’ಕ್ಕೆ ಮೂರು ತುಂಬಿದ ಸಂಭ್ರಮ ಎಲ್ಲಾ ಕಡೆ ಕೇಳಿಬಂದದ್ದು ಯಾವ ಸಚಿನ್ನೂ ಮೀರಿಸೋ ಟೈಮಿಂಗು ಅಂತ ನನ್ನ್ ಅಭಿಪ್ರಾಯ. ನೀನಾಸಂ ಶಿಬಿರಕ್ಕೆ ಹೋಗೋ ಅವಕಾಶವೂ ಈ ಸಲ ಬಂದು, ಅಲ್ಲಿ ಮತ್ತೆ ದೇಶಕಾಲದ ವಲಯದಲ್ಲಿ ಮುಳುಗೆದ್ದು ಬೆಂಗ್ಳೂರಿಗೆ ಬಂದಿಳಿದ್ರೆ ಮತ್ತೆ ನಮ್ಮ ಐ ಎಫ್ ಏ ನ್ಯೂಸ್ಲೆಟರು, ಸಂಪದ, ಎಲ್ಲಾ ಸೇರಿ ದೇಶಕಾಲ-ಜಪ ಮುಂದುವರೆಸಿಬಿಟ್ಟಿದ್ವು! ಇನ್ನು ಸಬ್ಸ್ಕ್ರೈಬಿಸದೇ ದಾರಿಯಿಲ್ಲ ಅಂತ ಚೆಕ್ ಬರೆದು, ನನ್ನ ಎಂದಿನ ಸೋಮಾರಿತನದ ದೆಸೆಯಿಂದ ಒಂದು ವಾರ ಬಿಟ್ಟು ಪೋಸ್ಟಿಸಿ ಇನ್ನೂ ಸುಧಾರಿಸ್ಕೋತಿದ್ದೆ. ಎರಡನೇ ದಿನಕ್ಕೇ ಕೊರಿಯರ್ ಬಂದುಬಿಡೋದಾ?! ನೀನಾಸಂನಲ್ಲಿ ವಿವೇಕ್ ಶಾನಭಾಗರನ್ನ ದೂರದಿಂದ ನೋಡಿ ಈ ಮನುಷ್ಯ ಎಷ್ಟು ತಣ್ಣಗಿರ್ತಾರಪ್ಪ ಅಂತ ಅಚ್ಚರಿಪಟ್ಟಿದ್ದೆ. ಅವರ ಸದ್ದುಗದ್ದಲವಿಲ್ಲದ ಎಫಿಶಿಯೆನ್ಸಿಯ ಬಗ್ಗೆ ಈಗಾಗ್ಲೇ ಕೇಳಿದ್ರೂ ಇದನ್ನ ಅರಗಿಸಿಕೊಳ್ಳೋಕೆ ಸ್ವಲ್ಪ ಸಮಯವೇ ಬೇಕಾಯ್ತು!
ಸಾಹಿತ್ಯದ ವಿದ್ಯಾರ್ಥಿಯಾಗಿದ್ದೂ ಕನ್ನಡಸಾಹಿತ್ಯವನ್ನ ಫಾರ್ಮಲ್ ಆಗಿ ಓದದ ಕಾರಣ ಮೊದಲಸಲ ಕನ್ನಡಸಾಹಿತ್ಯಕ್ಕೆ ಮೀಸಲಿಟ್ಟ ಜರ್ನಲ್ ಕೈಯ್ಯಲ್ಲಿ ಹಿಡಿದಾಗ ಹುಟ್ಟಿದ ಎಂತೋ ಏನೋ, ಕನ್ನಡವೇ ಪರಕೀಯವೆನಿಸಿ ಅತಂತ್ರದಲ್ಲಿ ಮುಳುಗಿಬಿಡ್ತೀನೇನೋ ಅನ್ನೋ ಅನುಮಾನಗಳನ್ನೂ, ಓದಿ ನೋಡಬೇಕು ಅನ್ನೋ ಹಂಬಲವನ್ನೂ ಪಕ್ಕದಲ್ಲಿ ಕೂಡಿಸಿಕೊಂಡು ಪುಟ ತೆರೆದೇ ಬಿಟ್ಟೆ.
ಸಂಪಾದಕೀಯದಲ್ಲೇ ಸೃಜನಶೀಲ ಸಾಹಿತ್ಯಕ್ಕೆ ಅನುಭವ-ಚಿಂತನೆಗಳೆರಡರ ಅಗತ್ಯದ ಕುರಿತು ಹೇಳುತ್ತಾ, ವೈಚಾರಿಕತೆಯ ಹೆಸರಿನ ಗೊಡ್ಡು ಅಕೆಡೆಮಿಕ್ ಭಯೋತ್ಪಾದನೆಯನ್ನೂ, ವೈಚಾರಿಕತೆಯನ್ನು ಸಾರಾಸಗಟಾಗಿ ನಿರ್ಜೀವ ಪಾಂಡಿತ್ಯ ಅಂತ ಪಕ್ಕಕ್ಕೆ ತಳ್ಳೋ ಸೋಮಾರಿತನವನ್ನೂ ಒಂದೇ ಸಲ ನಿವಾಳಿಸಿಹಾಕಿದ ವಿವೇಕರ ನಿರ್ದಾಕ್ಷಿಣ್ಯ ಮಾತುಗಳು ಭಾವ-ಬುದ್ಧಿಗಳ ಬ್ಯಾಲನ್ಸ್ ಏನಿರಬೇಕನ್ನೋ ಹುಡುಕಾಟಕ್ಕೆ food for thought ಆಗಿ ಸಂದವು.
ಪುಟಗಳು ತಿರುವಿಹಾಕ್ತಿದ್ದ ಹಾಗೇ ಅಲ್ಲಲ್ಲಿ ಓದಿದ್ದ - ಕೇಳಿದ್ದ ಹೆಸರುಗಳು ಕಂಡು, ಅಬ್ಬಾ! ನೆಲೆ ಕಂಡೆ ಅನ್ನೋ ಸಮಾಧಾನ ಗಟ್ಟಿಯಾಗ್ತಾ ಹೋಯ್ತು. ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬರುತ್ತಿದ್ದ ಅನುವಾದಗಳನ್ನ ಓದ್ತಿದ್ದಾಗ ಅನುವಾದಿತ ಸಾಹಿತ್ಯದಲ್ಲಿ ಎರಡು ಭಾಷೆ-ಸಂಸ್ಕೃತಿಗಳ negotiationನಲ್ಲಿ ಹುಟ್ಟುವ ವಿಚಿತ್ರ-ವಿಶಿಷ್ಟ ಸೊಗಡಿನಲ್ಲಿ ಕಳೆದುಹೋಗುತ್ತಿದ್ದೆ. ಆ ಅನುಭವವನ್ನ ವಿವೇಕ್ ಹಾಗೂ ಜಯಂತ್ ಕಾಯ್ಕಿಣಿಯವರು ಅನುವಾದಿಸಿರೋ ಐಸಾಕ್ ಬಾಶೆವಿಸ್ ಸಿಂಗರ್ನ ಕಥೆ ’ಮಳ್ಳ ಗಿಂಪೆಲ್’ ಮತ್ತೆ ನೆನಪಿಸಿತು.
ನಾನ್ಯಾಕೆ ಕಥೆ ಬರೆದಿಲ್ಲ ಅನ್ನೋದು ಈ ಸಲದ ಸಮಯಪರೀಕ್ಷೆಯಲ್ಲಿ ಕಥೆಗಾರರ ಬರಹಗಳನ್ನ ಹಾಗೂ ನಾನು ಇತ್ತೀಚೆಗೆ ಓದಿ ಮುಗಿಸಿದ ಇಂಗ್ಲಿಷ್ ಕಾದಂಬರಿ - ಲುನಾಟಿಕ್ ಇನ್ ಮೈ ಹೆಡ್ - ಓದುತ್ತಿದ್ದಂತೆ ಒಂದಿಷ್ಟು ಸ್ಪಷ್ಟವಾಗೋಕೆ ಷುರುವಾಯ್ತು. ಎಷ್ಟೋಸಲ ಅಂತರ್ಜಾಲದಲ್ಲಿ ಅಂತರಪಿಶಾಚಿಯಾಗಿ ಅಲೀತಿರುವಾಗ ದೊಡ್ಡ ಹೆಸರುಗಳ / ಅವರಂತೆ ಬರಿಯಹೋಗುವ ಮರಿಬರಹಗಾರರ ಕಥೆಗಳನ್ನೋದಿ ಕೊನೆಗೆ ಏನೂ ಅರ್ಥವಾಗದೇ ತಬ್ಬಿಬ್ಬಾಗಿ ನನ್ನ ಸಾಹಿತ್ಯಾಭ್ಯಾಸ ಕನ್ನಡಕ್ಕೆ ಸಲ್ಲದ್ದೋ, ಅಥವಾ ಕಲಿತದ್ದು ನಾನೇ ಮರೆತಿದ್ದೀನೋ, ಅಥವಾ ೨-೩ ವರ್ಷದಲ್ಲೇ ಔಟ್ಡೇಟೆಡ್ ಆಗಿಬಿಟ್ಟೆನೋ ಅನ್ನಿಸೋ ದಿಗ್ಭ್ರಾಂತಿಯ ಕ್ಷಣಗಳಿಗೆ ಇಲ್ಲಿ ವಸುಧೇಂದ್ರರ ಮಾತುಗಳು ಸಮಾಧಾನ ಹೇಳಿದವು! ಮಹಿಳಾ ಸಾಹಿತ್ಯದ ಬಗೆಗೆ ಸುಕನ್ಯಾ ಕನಾರಳ್ಳಿಯವರ ಸಾಲುಗಳನ್ನೋದುತ್ತಿದ್ದಾಗ ಫಣಿಯಮ್ಮನೊಂದಿಗಿನ ಎಂ ಫಿಲ್ ಯಾತ್ರೆಯ de javu ಭಾವನೆ....some shared grounds... ಡಯಸ್ಪೋರಾ ಕನ್ನಡಿಗರನ್ನ ಕಾಡೊ ಐಡೆಂಟಿಟಿ ಪಾಲಿಟಿಕ್ಸ್ ಬೆಂಗ್ಳೂರ್ ಕನ್ನಡಿಗರನ್ನೇನ್ ಬಿಟ್ಟಿಲ್ಲ ಅನ್ನಿಸಿಬಿಟ್ಟಾಗ ಆ shared grounds ಭಾವನೆಗೆ ಒಂದು ವಿಷಾದದ ನಂಟು...
ತೆರೆಮರೆಗಳಿಲ್ಲದೇ ಅತ್ಯಂತ ಪ್ರಾಮಾಣಿಕವಾಗಿ, ಸರಳವಾಗಿ ತನ್ನ ಕಥನ ಸತ್ಸಂಗದ ಸಾಂಗತ್ಯ ಅಂದುಬಿಡೋ ಸುನಂದಾ ಪ್ರಕಾಶ ಕಡಮೆ, ಆಲ್ಟರ್ ಈಗೋದ ಜೊತೆಯ ಸಂಭಾಷಣೆಯಾಗಿ ತಮ್ಮ ಕಥನದ ಕಥೆ ಬಿಚ್ಚಿಟ್ಟು ಪ್ರಶ್ನೆಗಳೆಬ್ಬಿಸೋ ಗುರುಪ್ರಸಾದ್ ಕಾಗಿನೆಲೆ...
ಹಲವು ಪ್ರಶ್ನೆಗಳಿಗೆ ಉತ್ತರಗಳು, ಇನ್ನೊಂದಷ್ಟು ಹೊಸ ಪ್ರಶ್ನೆಗಳು, ನನ್ನೊಳಗಿನ ಬರಹದ ತುಡಿತಕ್ಕೆ, ಬರೆಯಲಾರೆ ಅನ್ನಿಸೋ ಕ್ಷಣಗಳಿಗೆ... familiar ಅನ್ನಿಸುತ್ತಲೇ ಹೊಸ ವಿಚಾರಗಳನ್ನ ತೆರೆದಿಡುತ್ತ ಅತೀ ವೇಗದಲ್ಲಿ ಆತ್ಮೀಯರಾಗಿಬಿಡೋ ಜನರೊಂದಿಗಿನ ಸಹಚರ್ಯದಂತೆ ’ದೇಶಕಾಲ’ದ ಸಾಂಗತ್ಯ ಅನಿಸಿಬಿಡ್ತು. ಒಂದೊಂದು ಸಾಲೂ ಚಪ್ಪರಿಸಿ ಸವಿದಿದ್ದೀನಿ. ಒಂದೆರಡು ಬರಹಗಳನ್ನ ಹಬ್ಬದ ಹೋಳಿಗೆಯಂತೆ ನಾಳೆಗೆ ಉಳಿಸಿಕೊಂಡಿದ್ದೀನಿ, ಏಪ್ರಿಲ್ ಹದಿನೈದರ ವರೆಗೆ ಮುಂದಿನ ಸಂಚಿಕೆಗೆ ಕಾಯ್ಬೇಕಲ್ಲ!
ಅಂದಹಾಗೆ ಸಬ್ಸ್ಕ್ರಿಪ್ಶನ್ ಕಳಿಸೋವಾಗ ಹಿಂದಿನ ಸಂಚಿಕೆಗಳು ಸಿಗುತ್ವಾ ಅಂತ ಕೇಳಿದ ಒಂದು ಸಾಲಿಗೆ ಯಾವ್ ಯಾವ್ ಸಂಚಿಕೆಗಳು ಲಭ್ಯ ಅಂತ ದೇಶಕಾಲ ಟೀಮ್ನ ಎಸ್ಸೆಮ್ಮೆಸ್ಸೂ ಬಂತು ಅನ್ನೋದು ಈಗ ಅಷ್ಟೊಂದು ಆಶ್ಚರ್ಯದ ವಿಷ್ಯ ಅನ್ನಿಸಲ್ಲ್ವೇನೋ!
ಹಾಂ, ಮತ್ತೆ ಹೊದಿಕೆಯ ವಿನ್ಯಾಸದಲ್ಲಿನ ಕಥೆಗಾರರ ಹೆಸರಿನ ಯಾದಿಯಲ್ಲಿ ನಮ್ಮ ಬ್ಲಾಗಿಗರ ಹೆಸರುಗಳು ಅಲ್ಲಲ್ಲಿ ಮಿನುಗಿದ್ದೂ ವಾವ್ ಅನ್ನಿಸಿದ್ ವಿಷ್ಯ!
15 comments:
ದೇಶಕಾಲ? ಗೊತ್ತಿರಲಿಲ್ಲ. ಹೇಗೆ ಸಬ್ಸ್ಕ್ರೈಬ್ ಮಾಡ್ಬೇಕು ತಿಳಿಸ್ತೀರಾ?
ಕ್ಷಮಿಸಿ, ಈ ಮಾಹಿತಿ ಪೋಸ್ಟ್ನಲ್ಲೇ ಕೊಡಬೇಕಿತ್ತು. ವಿಳಾಸ ಹೀಗಿದೆ:
’ದೇಶಕಾಲ’
ಡಿ-೧ ವಿಕ್ಟೋರಿಯನ್ ವಿಲ್ಲಾ
ಅಲೆಕ್ಸಾಂಡ್ರಾ ಸ್ಟ್ರೀಟ್
ರಿಚ್ಮಂಡ್ ಟೌನ್
ಬೆಂಗಳೂರು ೫೬೦೦೨೫
email: deshakaala at gmail dot com.
ವಾರ್ಷಿಕ ಚಂದಾ ೩೦೦ ರೂಪಾಯಿಗಳು (ನಾಲ್ಕು ಸಂಚಿಕೆಗಳಿಗೆ, ಅಂಚೆವೆಚ್ಚ ಸೇರಿ). ಡಿಡಿ/ಚೆಕ್ಗಳು ’ದೇಶಕಾಲ’ ಹೆಸರಿನಲ್ಲಿರಬೇಕು. ಹೊರ ಊರಿನ ಚೆಕ್ಗಳಿಗೆ ಬ್ಯಾಂಕ್ ಕಮಿಶನ್ ರೂ ೪೫ ಸೇರಿಸಬೇಕಾಗುತ್ತೆ, ಪತ್ರಿಕೆ ಕಳಿಸಬೇಕಾದ ವಿಳಾಸ ಸ್ಪಷ್ಟವಾಗಿ ಬರಿಯೋದು ಮರೀಬೇಡಿ!
naanoo ittichege subscribe maadide. yet to read.
Sri,
Very lively article. Had access to the journal through libraries and friends. After reading this, decided to subscribe to 'deshakaala'. Thank you dear!!
-Tina.(www.tinazone.wordpress.com)
ನಾನೂ ಇತ್ತೀಚೆಗೆ ಸಬ್ಸ್ಕ್ರೈಬಿಸಿದೆ.. ಪತ್ರಿಕೆ ನಮ್ಮೂರು ತಲುಪುವ ಹೊತ್ತಿಗೆ ಮಾರ್ಚ್ ಮುಗೀತಾಬಂದಿರತ್ತೆ ಅನ್ಸತ್ತೆ. ನಾನದನ್ನು ನೋಡುವ ಮುಂಚೆ ಅದರ ಬಗ್ಗೆ ಒಂದಷ್ಟು ಒಳ್ಳೆ ಮಾತುಗಳನ್ನು ಆಡಿ ಕಾಯುವ ಕಷ್ಟ ಇನ್ನಷ್ಟು ಹೆಚ್ಚಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್! :P
ವಿವೇಕ್ ಅವರನ್ನು ಹಳೆಯ ಪ್ರತಿಗಳಿಗಾಗಿ ಆಸೆಪಟ್ಟು ಕೇಳಿದೆ. ಎಲ್ಲಾ ’ಸೋಲ್ಡ್ ಔಟ್’ ಆಗಿವೆಯಂತೆ. ಒಂದು ರೀತಿ ಖುಶಿಯೇ ಆಯ್ತು ಕೇಳಿ! ಓದುವವರಿದ್ದಾರಲ್ಲ ಅಂತ! ಭಾರತಕ್ಕೆ ಹಿಂದಿರುಗಿದ ಮೇಲೆ ನೋಡಿ, ಇದ್ದರೆ ಕಳಿಸುತ್ತೇನೆ ಅಂದಿದ್ದಾರೆ.
ಹಳಿಯ ಪ್ರತಿಗಳ PDF version ಆದರೂ ಚಂದಾದಾರರಿಗೆ ಒಂದಷ್ಟು ಬೆಲೆಗೆ ಸಿಗುವಹಾಗೆ ಮಾಡಿದ್ದರೆ ಚೆನ್ನಾಗಿತ್ತು ಆನ್ಸ್ತು.
I believe Vivek sends the copies to US too, for an additional charge of Rs 700/- or so.
ದೇಶಕಾಲದ ಜೊತೆಗೆ...
ಅಭಿನವ, ಸಂಚಯ, ಸಂಕ್ರಮಣ ಒಂದಿಷ್ಟು ಗಂಭೀರವಾಗಿ ಪ್ರಕಟವಾಗುತ್ತಿದೆ.
ವಿಕ್ರಮ್, ಟೀನಾ, l'etranger(ಯಾರು ಯಾರು ನೀವ್ಯಾರು?!:)), ಎಲ್ಲ ಒಂದೇ ಸಮಯಕ್ಕೆ ಓದೋಕೆ ಷುರು ಮಾಡ್ತಿರೋದು ಖುಷಿ,ಓದಿದ್ದರ್ ಬಗ್ಗೆ ಒಂದಷ್ಟು ಚರ್ಚೆ ಪರ್ಚೆ ಅಂತ ಮಜಾ ಮಾಡ್ಬಹುದು:)
@ಟೀನಾ,
ಥಾಂಕ್ಯೂ:) ನಿಮ್ಮ ಬಗ್ಗೆ ಸ್ವಲ್ಪೇ ಸ್ವಲ್ಪ ಹೊಟ್ಟೆಯುರಿ ಆಗ್ತಿದೆ - ದೇಶಕಾಲ ಕೊಡೋ ಅಂಥ ಫ್ರೆಂಡ್ಸ್ ಇದಾರಲ್ಲ ನಿಮಗೆ ಅಂತ!
@l'etranger
ಛೆ ಏನೋ ಪಾಪ ಮೈನ್ ಕೋರ್ಸ್ ಬರೋ ವರೆಗೆ ಸ್ಟಾರ್ಟರ್ ತಿನ್ನಿ ಅಂದ್ರೆ ಹಿಂಗೆ ಅಪವಾದ ಹೊರಿಸ್ತೀರಲ್ಲ!:p
ಕೆಲವು ಸಂಚಿಕೆಗಳು ಇವೆ ಅಂತ ನನಗೆ ಬಂದ ಎಸ್ಸೆಮ್ಸ್ ಹೇಳುತ್ತೆ. ಕೇಳಿ ಮೊದಲು ತೆಗೆದಿಟ್ಟುಕೊಂಡ್ಬಿಡಬೇಕು ಹಾಗಾದ್ರೆ!pdf ಒಳ್ಳೇ ಐಡಿಯಾ.. ವಿವೇಕ್ ಅವ್ರಿಗೆ ಹೇಳಿನೋಡಿದ್ರಾ?
@ಜಗ್ಲಿ ಜನ, ಹೌದು ಮೇಲೆ ಬರೆದಿರೋವ್ರು ಜಗ್ಲಿಯಾಚೆಯಿಂದನೂ ಸಬ್ಸ್ಕ್ರೈಬಿಸಿದ್ದಾರಂತಲ್ಲ!:)
@ರಾಧಾಕೃಷ್ಣ,
ಮಾಹಿತಿಗೆ ಧನ್ಯವಾದಗಳು:) ಅವುಗಳನ್ನೂ ಸಾಧ್ಯವಾದಾಗ ನಾಕೆಂಟು ಸಾಲಲ್ಲಿ ಪರಿಚಯಿಸಿದ್ರೆ ಇನ್ನೂ ದೊಡ್ಡ ಥ್ಯಾಂಕ್ಸ್ ಹೇಳ್ತೀವಿ, ಕೋರಸ್ನಲ್ಲಿ:D
ಅಯ್ಯೋ, ಇಷ್ಟು ಒಳ್ಳೆ ಕೆಲಸ ಮಾಡಿದವರ ಮೇಲೆ ಅಪವಾದ ಯಾಕೆ ಹೊರಿಸ್ಲಿ! ಏನೋ ಒಂಚೂರು ಕಷ್ಟ ಕೊಟ್ರಿ, ಅಷ್ಟೆ! :P ಸ್ಟಾರ್ಟರ್ ತಿಂದ್ಕೊಂಡು 'ಕಾಯುವಿಕೆಯೇ ಕೈಲಾಸ' ಅಂತ ಕಾಯ್ತೀನಿ ಬಿಡಿ. :) At least, it was a very nice starter!
ವಿವೇಕ್ ಅವರು ಹೇಳಿದ್ದು:
The following previous issues are available.
2, 5, 6, 7, 8, 9, 11, 12. The current issue is #12
ನಾನು ೧೨ -ರ ಜೊತೆಗೆ ೭, ೮, ೯ ಮತ್ತು ೧೧-ಅನ್ನೂ ಕೂಡಾ ಕಳಿಸಲು ಹೇಳಿದೆ. ಹಳೆಯ ಸಂಚಿಕೆಗಳಿಗೂ ಹೊಸ ಸಂಚಿಕೆಯಷ್ಟೇ ಬೆಲೆ.
PDF ಬಗ್ಗೆ ಅವರಿಗಿನ್ನೂ ಹೇಳಿಲ್ಲ -- ಹೇಳಿ ನೋಡುತ್ತೇನೆ. ಅವರ ಬಳಿ ಎಲೆಕ್ಟ್ರಾನಿಕ್ ಕಾಪಿ ಖಂಡಿತ ಇರತ್ತೆ.
-ಶ್ರೀಕಾಂತ್
ನಿಮ್ಮನ್ನ ನಂಬಿ ನಾನು ಕೂಡ ಚಂದಾದಾರನಾಗಿದ್ದೆನೆ .. :)........ ಇನ್ನು ದೇಶ ಕಾಲ ಬಂದಿಲ್ಲ ....... ಓದಿದ ನಂತರ ಪ್ರತಿಕ್ರಿಯೆ.
-ಅಮರ
@ಶ್ರೀಕಾಂತ್,
ಹೌದು, ನನ್ಗೆ ಬಂದ ಎಸ್ಸೆಮ್ಮೆಸ್ನಲ್ಲೂ ಇದೇ ಸಂಚಿಕೆಗಳಿವೆ ಅಂತ ಇತ್ತು
@ಅಮರ
ಹಹ್ಹ! ಇದೊಂದು ವಿಷ್ಯಕ್ಕೆ ನಂಬಬಹುದು ಅನ್ನಿಸುತ್ತೆ!:))
"ದೇಶ ಕಾಲ"ದ ಪರಿಮಳ ಮನೆ ಮನದಂಳವನ್ನ ತುಂಬಿದೆ, ಚಂದದ ಪುಟಗಳ ವಿನ್ಯಾಸ. ಹೊಸ ಸಾಹಿತಿಗಳ ಪರಿಚಯ, ಅನುವಾದಿತ ಲೇಖನಗಳು ಅದ್ಬುತ ..... :)
ನಿಮಗೊಂದು ಒಲವಿನ ಧ್ಯಾಂಕ್ಸ್...... ಅಜಾನಕ್ಕಾಗಿ ಸಿಕ್ಕ ನಿಮ್ಮ ಬ್ಲಾಗ್ ನಿಂದ ದೇಶ ಕಾಲ ಸಿಕ್ಕಿದ್ದು...... ಹಳೆಯ ಸಂಚಿಕೆಗಳು ಸೇರಿ ೮ ಇವೆ ನನ್ನಲ್ಲಿ ...... ಯಾವುದದನ್ನ ಮೊದಲು ಓದೊದು ಅನ್ನೊದು ಮತ್ತೊಂದು ತಲೆನೋವು..... ಆದರೂ ಕಳ್ಳ ಬುದ್ದಿ ಬಿಡಬೇಕಲ್ಲ ...... ಎಲ್ಲದರ ಎರಡೆರದೂ ಪುಟ ತಿರುವಿ ಹಾಕೋದು ......ಇದ್ದೆ ಇರುತ್ತೆ ..:)
-ಅಮರ
ಪತ್ರಿಕೆ ನಡೆಸುವ ಕಷ್ಟ ನಾವು ಈಗ "ಸಡಗರ" ಮಾಸಿಕವನ್ನು ನಡೆಸುತ್ತಿದ್ದಾಗಲೇ ಅರಿವಾಗ್ತಿದೆ. ಅಂಥದ್ರಲ್ಲಿ ಯಾವ ಮನೋರಂಜನಾತ್ಮಕ ಪ್ರಲೋಭನೆಗೂ ಒಳಪಡದೇ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದಕ್ಕೆ ನಿಜವಾಗಿಯೂ "ದೇಶಕಾಲ" ತಂಡ ಅಭಿನಂದನಾರ್ಹ!
Post a Comment