Thursday, March 08, 2007

ಹೀಗೇಸುಮ್ಮನೆ ಎದ್ದಿದ್ದಲ್ಲ! :)

ಇರುವುದೆಲ್ಲವ ಬಿಟ್ಟು ಇರದುದರೆಡೆ ನೋಡೋಕೆ ಹೊರಟವಳು ಹೀಗೇ ಸುಮ್ಮನಾಗಿದ್ದು ಯಾಕೆ ಅಂತ ನೀವೆಲ್ಲ ಕೇಳಿ, ತಿವಿದು ಸುಸ್ತಾಗಿಬಿಡ್ತೀರ ಅಂತ ನನ್ನ ಸೋಮಾರಿತನ ಹೇಳ್ತಿತ್ತು. ಆದ್ರೆ ಭಾಳಾ ಇದೀರ್ರೀ ನೀವೆಲ್ಲ! ಕೊನೆಗೂ ಈ ಮಹಿಷಾಸುರಿಯನ್ನ ಬಡಿದೆಬ್ಬಿಸೇ ಬಿಟ್ಟ್ರಿ! ಹಾ, ಹಾ, ತುಂಬಾ ಖುಷಿಯಾಗಿಬಿಡಬೇಡಿ, ಏಳು ಎದ್ದೇಳು ಅಂತ ನೀವೆಲ್ಲ ಬರೆದ ಇ ಮೈಲ್, ಸ್ಕ್ರ್ಯಾಪ್ ಗಳಿಂದ ನನ್ನ ಕುಂಭಕರ್ಣತನ(ಕುಂಭಕರ್ಣಿತನ ಅನ್ನಬೇಕೋ?;) )ಬಿಟ್ಟು ಓಡಿಹೋಗಿಬಿಡ್ತು ಅಂತ! ಹೌದು, ಅದೂ ಆಗೀಗ ಕಾಡ್ತಿದ್ದಿದ್ದು ನಿಜ ಆದ್ರೂ ಈ ಪುನರುತ್ಥಾನಕ್ಕೆ( ವಾಹ್ ವಾಹ್! :p) ಇನ್ನೊಂದು ವಿಶೇಷ ಕಾರಣ ಇದೆ!
ಓಹ್ ಹನ್ನೆರಡು ಹೊಡೆಯೋದಕ್ಕೆ ಮೊದಲು, ಮಹಿಳಾ ದಿನದ ಶುಭಾಶಯಗಳು!
ಏನು ಇದ್ದಕ್ಕಿದ್ದಂತೆ ಗೋಕುಲಾಷ್ಟಮಿಗೂ ಇಮಾಮ್ ಸಾಬರಿಗೂ ಸಂಬಂಧ ಕಲ್ಪಿಸ ಹೊರಟಿದಾಳಲ್ಲಾ, ಬರೀದೇ ಬರೀದೇ ಇವಳ ಕುಟ್ಟುಮಣೆ ದಿಕ್ಕುಗೆಟ್ಟಿರಬೇಕು ಅಂದುಕೊಂಡ್ರಾ? ಏನಪ್ಪಾ ಸ್ವಲ್ಪನೂ ತಾಳ್ಮೆ ಇಲ್ಲ ನಿಮ್ಗೆ!:p

ಕುಟ್ಟೋದಕ್ಕೆ ರೆಸ್ಟ್ ಕೊಟ್ಟಿದ್ರೂ ನಿಮ್ಮಗಳ ಕುಟ್ಟಂಬಲಗಳಿಗೆ ವಿಜಿಟ್ ಕೊಟ್ಟು ತಮ್ಮ ಪ್ರತಾಪಗಳನ್ನ ಕಂಡು ಧನ್ಯಳಾಗೋ ಪುಣ್ಯಕಾರ್ಯವನ್ನೇನೂ ನಾನು ನಿಲ್ಲಿಸಿರ್ಲಿಲ್ಲವಷ್ಟೆ, ಹೀಗಿರಲಾಗಿ ,ಇತ್ತೀಚೆಗೆ ಇಂತು ಕನ್ನಡ ಬ್ಲಾಗ್ ಭೂಮಿಯಲ್ಲಿ ಅಲೆದಾಡುತ್ತಿದ್ದ ನನ್ನ ಅಂತರಾತ್ಮಕ್ಕೆ ಹಿಂದೆಂದೂ ಕಂಡಿರದ ಅಪೂರ್ವವೊಂದು ಕಂಡು ಮನಸ್ಸು ಹಿಗ್ಗಿ ಹೀರೇಕಾಯಿಯಾಯಿತು! ಆ ಹೀರೇಕಾಯಿಯನ್ನ ಹೀಗೇ ಸುಮ್ಮನೆ ಬಿಟ್ಟುಬಿಡದೆ ಹಾಕಿ ಈಗ ಕೂಟು, ಹುಳಿತೊವ್ವೆಗಳನ್ನು ಮಾಡಬೇಕನ್ನೋ ಮಹದಾಕಾಂಕ್ಷೆ ಇರುವುದೆಲ್ಲ ಘನಕಾರ್ಯಗಳನ್ನು(?) ಬಿಟ್ಟು ಇಲ್ಲಿ ಬಂದು ಕುಟ್ಟೋದಕ್ಕೆ ಪ್ರೇರೇಪಿಸಿತು!

ಸಾಕಮ್ಮಾ ಪೀಠಿಕಾ ಪ್ರಕರಣ, ಚುಕ್ಕೆಗೆ ಬಾ* ಅನ್ನುತಿದೀರಾ? ಬಂದೆ ಬಂದೆ, ಬಂದೇಬಿಟ್ಟೆ:))
ಅಲ್ಲ, ಇಷ್ಟು ದಿನ ಕನ್ನಡದಲ್ಲಿ ಬ್ಲಾಗ್ ಗಳೆನೋ ಚೆನ್ನಾಗಿಯೇ ಬರುತ್ತಿತ್ತು...ಓದೋಕೂ ಖುಷಿಯಾಗ್ತಿತ್ತು, ಆದ್ರೆ ಎಲ್ಲೋ ಒಂದು ಕಡೆ ಏನಪ್ಪಾ ಒಬ್ಬಳೇ ಅಲೀತಿದೀನಿ ಈ ಗಂಡುಭೂಮಿನಲ್ಲಿ ಅಂತ ನನ್ನಂಥಾ 'ಗಂಡುಬೀರಿ'ಗೂ ಅನ್ನಿಸಿಬಿಡ್ತಿತ್ತು! ಮನಸ್ವಿನಿ ಬಿಟ್ಟರೆ ನನ್ನ ಕಣ್ಣಿಗೆ ಯಾವ ಕನ್ನಡತಿಯೂ ಕಂಡಿರಲಿಲ್ಲ ಅನ್ನಿಸುತ್ತೆ ಇಲ್ಲಿ... ಮೊನ್ನೆ ಸುಶ್ರುತರ ಮೌನಗಾಳದಿಂದ ಸಿಂಧು ಅವರ ಎಲ್ಲ ನೋಟಗಳಾಚೆಗೆ ಕಣ್ಣು ಹಾಯಿಸಿದೆ...ಕವನಗಳು ಓದಿಸಿಕೊಳ್ಳುತ್ತಾನೇ ಹೋದ್ವು! ನೊಂದ ಹೃದಯವೇ... , ಕೇಳಬಾರದಿತ್ತು...ಆದ್ರೂ,
ತಂಪಾಗಿ ಷುರುವಾಗಿ ಕೊನೆಯಲ್ಲೆಲ್ಲೋ ಮೆಲ್ಲಗೊಂದು ಪ್ರಶ್ನೆ ಇಡುವ ಸುಪರ್ಣಾ ನದಿಯ ತೀರದಲ್ಲೊಂದು ಸಂಜೆ...

ಅಲ್ಲಿಂದ ಮನಸ್ಸನ್ನ ಮಾತಾಡಿಸುತ್ತಿರೋ ಶ್ರೀ (ಹೀಗೇ ಸುಮ್ಮನೆ ಇಲ್ಲಿ ಬಂದು ಕೂತಿರೋ ನಾನಲ್ಲಪಾ!:)) ) ಮನೆಗೊಂದು ಭೇಟಿ...ಕನಸು -ನನಸುಗಳ ಕನವರಿಕೆಗಳು, ಪುಟ್ಟ ಪುಟ್ಟ ಹರಟೆಗಳು, ಎಲ್ಲಕ್ಕಿಂತ ಹಿಡಿಸಿದ್ದು ಪುಟ್ಟ ಕವನ - ಮನಸು ಏಕಾಂಗಿಯಾದಾಗ...

ಯಾವುದೇ ದಿನಾಚರಣೆಗಳಿಗೆ ಅಂಥದ್ದೇನೂ ಮಹತ್ವ ಕೊಡೋದಿಲ್ಲ ನಾನು. ಹಾಗೆ ಮಹಿಳಾ ದಿನಕ್ಕೆ ಸರಿಯಾಗೆ ನನ್ನ ಕಣ್ಣಿಗೆ ಎರಡು ಕನ್ನಡತಿ ಬ್ಲಾಗ್ ಗಳು ಬಿದ್ದಿದ್ದು, ಅವು ಕಣ್ಣಿಗೇ ನಿಲ್ಲದೆ ಇದೇ ಸಮಯಕ್ಕೆ ಸರಿಯಾಗಿ ಹೃದಯಕ್ಕೂ ಧಾಳಿಯಿಟ್ಟಿದ್ದು ಕಾಕತಾಳೀಯ. ಆದ್ರೆ ಆ ಖುಷಿಯಲ್ಲಿ ನಾನು ನನ್ನ ಇಷ್ಟು ದಿನದ ನಿದ್ದೆ ಸ್ವಪ್ರೇರಣೆಯಿಂದ ಬಿಟ್ಟಿದ್ದು, ಈ ಅಪರಾತ್ರಿಯಲ್ಲಿ ಇಷ್ಟುದ್ದ ಕೊರೀತಾ ಕೂತಿರೋದು ಜಗತ್ತಿನ ವಿಸ್ಮಯಗಳ ಪಟ್ಟಿಗೆ ಸೇರಬೇಕಂತ ನನ್ನ ನಿದ್ರಾಮಹಾತ್ಮೆಯನ್ನ ಬಲ್ಲವರೆಲ್ಲ ಕ್ಯಾಂಪೇನ್ ಮಾಡೋದಂತೂ ಖಂಡಿತ! ;D

P.S,: ಈಗಷ್ಟೇ ಈ ಮಂಕುತಲೆಗೆ ಫ್ಲ್ಯಾಷ್ ಆದ ಇನ್ನೊಂದು ಕಾಕತಾಳೀಯ ವಿಷ್ಯ - ಸಿಂಧು, ಶ್ರೀ ಎರಡೂ ನನ್ನವೇ ಹೆಸರುಗಳಾಗಿರೋದು!! (ಸಿಂಧು ನನ್ನ 'ಪೆಟ್ ನೇಮ್'!)

(ಸಿಂಧು ಹಾಗೂ ಶ್ರೀ ಇಬ್ಬರೂ ನನ್ನ ಕಣ್ಣಿಗೆ ಬಿದ್ದಿದ್ದು ಈಗ ಅಷ್ಟೆ. ಶ್ರೀ ಮೇ ೨೦೦೬ರಿಂದ, ಸಿಂಧು ಡಿಸೆಂಬರ್ ೨೦೦೬ರಿಂದ ಕುಟ್ಟುತ್ತಿದಾರೆ ಅನ್ನುತ್ತೆ ಬ್ಲಾಗರ್)
*ಚುಕ್ಕೆಗೆ ಬಾ = come to the point! translation courtesy a friend of mine who thinks he cracks a joke everytime he opens his mouth!:))

15 comments:

ಸಿಂಧು Sindhu said...

ಹೌದಲ್ಲ ಶ್ರೀ..
ನಾನು ನಿಮ್ಮನ್ನ ಇನ್ನೊಬ್ಬ ಶ್ರೀ ಅಂದ್ಕೊಂಡು ಪಟ್ಟಾಂಗದ ಬಗ್ಗೆ ಬರೆದು ಬಿಟ್ಟೆ. ಮೊನ್ನೆ ನಿಮ್ಮ ಕಾಮೆಂಟ್ ಓದಿದಾಗಲೂ ನಿಮ್ಮ ಲಿಂಕ್ ಕ್ಲಿಕ್ ಮಾಡದೆ, ಮನಸು ಮಾತಾಡ್ತಿದೆ'ಗೆ ಹೋಗಿ ಓದಿ ವಾಪಸ್ಸಾದೆ.. :) ನನ್ನ ಮಂಕು ತಲೆ ನಿಮ್ಗಿಂತಾ ಜಾಸ್ತಿ ಮಂಕಾಗಿರೋ ಹಾಗಿದೆ..

ನಮ್ಮ - ಶ್ರೀ-ಸಿನ್-ಶ್ರೀ - ಕಾಕತಾಳೀಯ ಮಿಲನವನ್ನ, ಮಹಿಳಾದಿನಾಚರಣೆಯ ಅಪರಾತ್ರಿಯಲ್ಲಿ ನೆನಪು ಮಾಡಿಕೊಳ್ಳುತ್ತಾ ಒಂದು ಯೋಚನಾಪೂರ್ಣ ಬರಹ ಬರೆದಿರುವುದಕ್ಕೆ ಥ್ಯಾಂಕ್ಸ್.. ಬನ್ನಿ ಭಾವತೀರದ ಸಹಪ್ರಯಾಣಕೆ.. (ಒಂದೇ ದೋಣಿಯ ಕಳ್ಳರಾಗಿರೋಣ ಅನ್ನೋದು ತೀರಾ ಕಚ್ಚಾ ಅನ್ಸುತ್ತೆ :D )

ಸುಶ್ರುತ ದೊಡ್ಡೇರಿ said...

ನಿದ್ದೆ ಬಿಟ್ಟು ಎದ್ದಿದ್ದಕ್ಕೆ ಶುಭಾಷಯಗಳು.ನಾವು ಸ್ಕ್ರ್ಯಾಪ್‍ಬುಕ್ಕಿನಲ್ಲಿ ಕುಟ್ಟಿದ್ದಕ್ಕೂ ಸಾರ್ಥಕ. ಇರುವುದೆಲ್ಲವ ಬಿಡುವುದು ಬೇಡ; ಈ ನಿದ್ದೆ ಮಾತ್ರ ಬಿಡಿ ಎಂಬುದು ನನ್ನ ವಿನಮ್ರ ವಿನಂತಿ. Continue blogging..!!

Shiv said...

ನಮಸ್ಕಾರ ರೀ !

ಇಳಿದು ಬಾ ತಾಯಿ ಇಳಿದು ಬಾ,ಬ್ಲಾಗ್‍ನೊಳಗೆ ಬರೆಯ ಬಾ..
ಅಂತಾ ಹೇಳೋದು ಬಾಕಿ ಇತ್ತು :ಪ್

ಕನ್ನಡ ಬ್ಲಾಗ್‍ಲೋಕದಲಿ ಸ್ತ್ರೀ ಬಳಗ ಹೆಚ್ಚಿಗೆ ಆಗಲಿ..

ಮಹಿಳಾ ದಿನದ ಶುಭಾಶಯಗಳು

ಮನಸ್ವಿನಿ said...

ನಮಸ್ಕಾರ,

ನಿಮ್ಮ ಬ್ಲಾಗ್ ಲಿಂಕನ್ನ ನನ್ನ ಬ್ಲಾಗಿನಲ್ಲಿ ಹಾಕಿಕೊಳ್ಳಲೆ?

Gowtham said...

finally.......... hhhha (hhhha=huge sigh)

good to see something new in a loooooooooooong while. but as is typical of star writers, gem-like, thought-provoking write ups are few and far between. may the readers request you to drop a star (out of 7) and write more?? j/k...

know you have been super busy with, as usual, several things and glad you found time to write something...

Sree said...

ಸಿಂಧು,
ಹ್ಹೆ ಹ್ಹೆ! ನಾನು ಜಗುಲಿ ಎಲ್ಲ ಜಾಲಾಡಿದ್ದೇ ಜಾಲಾಡಿದ್ದು, ಎಲ್ಲಪ್ಪಾ ನನ್ನ್ ಫೋಟೋ ಸೆಷನ್ ಅಂತ:ಪ್ ನಮ್ಮನೆಗ್ ಬಂದು ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು:)

ಸುಶ್ರುತ, ಶಿವ್,
ಧನ್ಯವಾದಗಳು:ಪ್

ಮನಸ್ವಿನಿ,
ಹಾಕ್ಕೊಳ್ರೀ, ಧಾರಾಳ್ವಾಗಿ:)

ಗೌತಮ್
ಅಷ್ಟು ಖುಷಿಯಾಗ್ಬಿಡ್ತಾ?? ಒಂದೇ ಕಾಮೆಂಟ್ ಎರಡೆರಡ್ಸಲ ಹಾಕೋ ಅಷ್ಟು?;)

Gowtham said...

honestly, yes! more honestly, i had a spelling error in some 'key' word...

anoop said...

ಇದು ಬಹಳ ಮೋಸ ಆಯಿತು! ಇಷ್ಟು ದಿನದ ಬಳಿಕ ಬ್ಲಾಗಿದ್ದೀರಿ, ಯಾವುದಾದರೋ ಮಹತ್ವವಾದ ವಿಷಯದ ಮೇಲೋ ಅಥವ ಅನುಭವದ ಮೇಲೋ ಎಂದು ಎಣಿಸಿದ ನಿಮ್ಮ ಪ್ರಿಯ ಓದುಗರಿಗೆ ಮೋಸ!
ಕವಿತೆ ಬ್ಲಾಗುಗಳ ಲಿಂಕ್ ಕೊಟ್ಟಿರುವುದಕ್ಕೆ ಧನ್ಯವಾದಗಳು. ನನಗೆ ಕವಿತೆಗಳನ್ನು ಪೂರ್ಣವಾಗಿ 'experience' ಮಾಡಲಿಕ್ಕಾಗುತ್ತದೋ ಇಲ್ಲವೋ ಎನ್ನುವುದು ಬೇರೆಯ ಮಾತು. :)

veena shivanna said...

ಶ್ಯಾಮ್ ಅವರ ಬ್ಲಾಗ್ ನಿಂದ ಇಲ್ಲಿ ಬಂದೆ. ನಿಮ್ಮ ಬ್ಲಾಗ್ ಬಗ್ಗೆಗಿನ ಮಾಹಿಹಿತ್ ಒದಿದ್ರೆ ಬಹಳ ಗಂಬೀರ ಅನ್ನಿಸ್ತು :-) ಈಗ ಇದನ್ನು ನನ್ನ 'ಫೇವ್‌ರೇಟ್' ಲಿಸ್ಟಿಗೆ ಸೇರಿಸಿದೆ... ಉಪ್ಪು ಖಾರ ಉಳಿ ಎಲ್ಲ ಇದೆ...
ನಿಮ್ಮ ಬ್ಲಾಗ್‍ನ ಹೆಸ್ರು ಸೂಪರ್ ಆಗಿದೆ...! ಇನ್ನು ಮುಂದಕ್ಕೆ!

Mahantesh said...

Soniyavare,
aMtu parawagillarei...kuMbakarnana niddeyinda elokke mahiLa dinacharane sahaya maaDitu aMta idira....innu 6 tiMglu kaal satatavAgi blog kuTTata iri...
innu oMdu suggestion: neevu heegi ella dinacharaNe gamana kottu blog kuttakke shuru maadidare varshadalli 20kkU hecchu dinacharanegaLive..:)

ugaadiya shubhashayagaLu.....

SHREE said...
This comment has been removed by the author.
SHREE said...

ಶ್ರೀ... ಅ೦ತೂ ಇರುವುದರ ಕಡೆಗೆ ವಾಪಸ್ ಬ೦ದ್ರಲ್ಲ, ಅಭಿನ೦ದನೆಗಳು... ಬ್ಲಾಗ್ ಜಗತ್ತಿಗೆ ಬ೦ದ ಸಮಯದಲ್ಲಿ ನಿಮ್ಮ್ ಬ್ಲಾಗ್ ಓದಿ ಎಲ್ಲಿ ಈ ಹುಡುಗಿ ಅ೦ತ ಹುಡುಕಿದ್ದೇ ಹುಡುಕಿದ್ದು... ಕೊನೆಗೂ ಸಿಕ್ರಲ್ಲ. ಸಿ೦ಧು ಹೇಳಿದ ಹಾಗೆ... 'ಒ೦ದೇ ದೋಣಿಯ ಕಳ್ಳರಾಗಿ' ಹೋಗೋಣ.. ಇನ್ನೊಬ್ರು ಇದಾರೆ ಮಹಿಳಾ ಬರಹಗಾರ್ತಿ, ಬಹುಶ ಹೆಚ್ಚಿನವರು ಇನ್ನೂ ನೋಡಿಲ್ಲ ಅನ್ಸತ್ತೆ... www.smilingcolours.blogspot.com ಚೆಕ್ ಮಾಡಿ.
ಇ೦ತು, ಅತ್ಮೀಯತೆಯಿ೦ದ, ಶ್ರೀ

ನವೀನ Naveen M Hiremath said...

Nimma barevanigege, Topi Tegeta !(Hats Off)

Anonymous said...

nimma modal sentence nange Adigar famous kaavya "yella bittu iradudedege tiduvude jeevan".. nenpige bantu.
Dhanyavadagalu

Anonymous said...

Nimma baravanighey thumbha chennagidheya.Nimma bloglink annu nanna blogroll nalli add madhidheni @ Xplain

Matthasthu olleya lekhanigalu bartha irli

-Prashanth