Tuesday, October 24, 2006

ನಿನ್ನೆ ನಿನ್ನೆಗೆ ಇಂದು ಇಂದಿಗೆ....(2)

ಈ ಕಾಂಕ್ರೀಟ್ ಕಾಡ್ನಲ್ಲಿ ನಮ್ಮದೊಂದು ಪುಟ್ಟ ಹಸಿರು ಕನಸು ಟೆರೇಸ್ ನಲ್ಲಿನ ಪಾಟ್ ನಲ್ಲಿ ಅರಳಿದ ಬ್ರಹ್ಮಕಮಲ. ಅದು ಮೊಗ್ಗಾದಾಗಿಂದ ಸಂಭ್ರಮ... ಮೇಲೆ ಹತ್ತಿ ಹೋಗಿ ಹೋಗಿ ಅರಳಿತಾ ಅಂತ ನೋಡೋದು ನನಗಂತೂ ಒಂದು ಆಟ'ನೇ ಆಗಿಬಿಟ್ಟಿತ್ತು. ಒಂದು ರಾತ್ರಿ ಹೀಗೇ ಮೇಲೆ ಹತ್ತಿ ಹೋಗಿ ಟೆರೇಸ್ ಬಾಗಿಲು ತೆಗೀತಿದ್ದಂತೇ ಘಮ್ ಅಂತ ಒಂದು ದಿವ್ಯವಾದ ಪರಿಮಳ ಆವರಿಸ್ಬಿಡ್ತು! ನೋಡಿದ್ರೆ ನಮ್ಮ ಪುಟ್ಟ ಪಾಟ್ ನಲ್ಲಿ ಬೆಳ್ಳಗಿನ ಬಿರುನಗೆಯ ಬ್ರಹ್ಮ ಕಮಲ! ಸರಿ ಮನೆ ಮಂದೀನಲ್ಲಾ ಕರೆದು ತೋರಿಸಿ ಸಂಭ್ರಮ ಪಟ್ಟಿದ್ದಾಯ್ತು...
ಅಷ್ಟರಲ್ಲಿ ಅದು ಒಂದೇ ದಿನ ಇರೋದು ಅಂತ ಕೇಳಿದ್ದು ನೆನಪಿಗೆ ಬಂತು. ಕಿತ್ತು ಫ್ರಿಡ್ಜ್ ನಲ್ಲಿ ಇಟ್ಟ್ರೆ ಇರುತ್ತೇನೋ ಅಂತ ತಮ್ಮನ ತಲೆಗೆ ಒಂದು ಐಡಿಯಾ! ಹಾಗೇ ಕಿತ್ತುಬಿಟ್ಟ್ರೆ ಮುರುಟಿ ಹೋಗುತ್ತೇನೋ ಅನ್ನೋ ಯೋಚನೆ ಬೇರೆ...

ಹೀಗೇ ಹರಿದ ಯೋಚನೆಗಳ ಮೆರವಣಿಗೆ...
ಒಂದು ಮುದ್ದಾದ ಹೂವು ಕಣ್ಣಿಗೆ ಬಿದ್ದಾಗ ಅದನ್ನ ಕಿತ್ತು ಕೈಯಲ್ಲಿ ಹಿಡಿಯೋ ಆಸೆಗೆ ಯಾಕೆ ಬೀಳ್ತೀವಿ? ಕಿತ್ತ ಕೆಲ ಘಳಿಗೆಯಲ್ಲಿ ಮುರುಟಿಹೋಗುತ್ತೆ ಅನ್ನೋದು ಆ ಕ್ಷಣದಲ್ಲಿ ಮರೆತುಬಿಡ್ತೀವಾ...ಅಲ್ಲೇ ನೋಡಿ ಖುಷಿ ಪಟ್ಟಿದ್ದ್ರೆ ಆ ಸಂತೋಷದ ಅನುಭವ ಸದಾ ನಮ್ಮ ಜೊತೆ ಇರುತ್ತೆ ಅನ್ನೋದು ಮನಸ್ಸಿಗೆ ಯಾಕೆ ಹೊಳೆಯಲ್ಲ...ಎಲ್ಲವನ್ನ ಹಿಡಿದು ಮುಷ್ಟಿಯಲ್ಲಿ ಮುಚ್ಚಿಟ್ಟುಕೊಳ್ಳೋ possessiveness ನಮ್ಮ ವಿಷಾದಗಳಿಗೆ ಕಾರಣ ಅನ್ನಿಸುತ್ತೆ! ಕೈಗೆ ಸಿಗಲಿಲ್ಲಾ ಅನ್ನೋ ಕಾರಣಕ್ಕೆ ಆ ಕ್ಷಣದ ಕಿರುನಗೆಯನ್ನೂ ಕಣ್ಣೀರಾಗಿಸಿಬಿಡೋದು ಹುಚ್ಚುತನ ಅಲ್ಲ್ವಾ!

ಒಂದು ಸುಂದರ ಕನಸು ಕಣ್ಣು ತುಂಬಿದಾಗ ಅದನ್ನ ನಿಜ ಮಾಡಿಸಿಕೊಳ್ಳೋ ಆಸೆಯಲ್ಲಿ ಅದು ಕನಸಾಗಿಯೂ ಉಳಿಯದೆ ಹೋಗಬಹುದನ್ನೋ ವಾಸ್ತವವನ್ನ ಸ್ವಪ್ನವಾಸವದತ್ತದ ಉದಯನನಂತೆ ಮರೆಯುತ್ತ ಹೋಗೋದು ಯಾಕೆ...

ಇಂದು ಅರಳಿದ ಹೂವುಗಳನ್ನ ನಾಳೆ ಕಳೆದುಕೊಳ್ಳೋ ಭಯ ಮರೆತು ಇವತ್ತಿನ ಖುಷಿ ಅನುಭವಿಸೋದು ಕಲ್ತಾಗ್ಲೇ,
ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ ...ಅಂದಾಗ್ಲೇ ಬೀಸುಗಾಳಿಗೆ ಬೀಳುತೇಳುತ ದೋಣಿ ಮುಂದೆ ಸಾಗೋದು ಅನ್ನೋದು ಅರ್ಥವಾದಾಗ ಮುಳುಗೋ ಭಯ ಹೋಗುತ್ತೇನೋ!:)

( ಮಿಸ್ ಲೀಲಾವತಿ ಚಿತ್ರದ ಕ್ಲಾಸಿಕ್ ಹಾಡು 'ದೋಣಿ ಸಾಗಲಿ' - ಸಾಹಿತ್ಯ ಇಲ್ಲಿದೆ)

12 comments:

adamya said...

kiththu fridgenalli itre iraththeno antha idea banda thale mEle eega bodhivriksha kaaNsthide hahaha....next time aa hoovu arLdaaga eega nan thale mEliro bodhi vriksha hange iraththe[kithhtu fridge alli idakke aagalwalla vrikshana haha] antha andkondideeni haha...

ಶ್ರೀ ಶ್ರೀ ಶ್ರೀ said...

ಬಹಳ ಚೆನ್ನಾಗಿರುವ ಬರವಣಿಗೆ. ಮನದಲ್ಲಿ ಬಂದದ್ದನ್ನು ತಕ್ಷಣ ಕಾರ್ಯಗತ ಮಾಡಬಾರದು. ಹಾಗೆ ಮಾಡಿದರೆ ಬಾಲಿಶತನ ವ್ಯಕ್ತಿತ್ವವಾಗುತ್ತದೆ. ಇದನ್ನು ಒಂದು ಚಿಕ್ಕ ಉದಾಹರಣೆಯ ಮೂಲಕ ಬಹಳ ಚೆನ್ನಾಗಿ ಮನದಟ್ಟು ಮಾಡಿಸಿಕೊಟ್ಟಿದ್ದಿರ. ಅದಕ್ಕೆ ತಕ್ಕನಾದ ಕವನದ ಸಾಲುಗಳನ್ನು ಸೇರಿಸಿದ್ದೀರಿ. ಅಧ್ಯಾತ್ಮ ಚಿಂತನೆಗೆ ಒತ್ತು ಕೊಡುವಂತಹ ಲೇಖನ ಎಂದರೆ ಉತ್ಪ್ರೇಕ್ಶೆಯಲ್ಲ.

ಇಂತಹದ್ದೇ ಬರಹಗಳು ಇನ್ನೂ ಹೆಚ್ಚು ಹೆಚ್ಚು ಬರಲಿ.

Shiv said...

ಶ್ರೀ,

ನಮ್ಮ ಈಡೀ ಜಗತ್ತೆ ಹಿಂಗೆ ಅಲ್ವಾ...

Yesterday was past,tomorrow is mystery, today is gift and thats why it is called 'present' ಅಂತೆ..

ಆದರೆ ನಾವೆಲ್ಲ 'present' ಬಗ್ಗೆ ಯೋಚನೆ ಮಾಡೋದೆ ಇಲ್ಲ..ಇನ್ನೂ ಆಗದಿರುವ, ಗೊತ್ತಿರದ ನಾಳೆಗಳ ಸುಳಿಯಲ್ಲಿ ಇವತ್ತುಗಳನ್ನು,ಇವತ್ತಿನ ಸೊಗಡನ್ನು ಕಳೆದುಕೊಳ್ಳತ್ತಾ ಇದೀವಾ..

ಕಲ್ ಹೋ ನಾ ಹೋ...

Aravinda said...

"iruvudellavabittu iraduredege tudivude jeevana"
Adigara e ondu saalu eshtu arthagarbhitavagide!

Anonymous said...

ಭೂತ, ವರ್ತಮಾನ - ಎರೆಡೂ ಬೇಕು
"ಹೀಗೆ ಸುಮ್ನೆ" - ಚೆನ್ನಾಗಿದೆ.

Anonymous said...

ಟೈಟಲ್ 'ಹೀಗೇ ಸುಮ್ನೆ' ಅಂತಿದ್ರೂ ಇಲ್ಲಿಯ ಬರಹಗಳೇನು 'ಸುಮ್‍ಸುಮ್ನೆ' ಅಲ್ಲ. ತುಂಬಾ ಚೆನ್ನಾಗಿವೆ. ನಮ್ಮ 'ಇಂದು'ಗಳನ್ನು ಸರಾಗಗೊಳಿಸುವಂತಿವೆ. ಮತ್ತು 'ನಾಳೆ'ಯಾದಮೇಲೂ ಕಾಡುವಷ್ಟು ಪರಿಣಾಮಕಾರಿಯಾಗಿವೆ.

ನಿಮ್ಮ ಬ್ಲಾಗಿನ linkಅನ್ನು ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.

ಧನ್ಯವಾದಗಳು.

Goutham said...

Just happened to gatecrash into your website. Infact I was google-ing "Iruvudellava bittu", and happened to visit this world of yours. Adiga's poem is "Out of this world!!!" - But what a wonderfull idea for a Blog. I never thought that a blog could be so well written. You seem to have developed a great taste for writing.

I did go through some of your entries. Your line of thinking just rocks !!!

"Nenne nennege, Naale naalege" - What an amazing way of saying - Live in the moment.

You seem to have stopped writing after October ???

Cheers, Keep the spirit alive and kicking !!!

Anonymous said...

hai,
I am radhakrishna. living in bangalore. native Mangalore. i am intrest fot open Kannada Blog how I dont no. pls help me. i am triying. pls help me. my Id
anegundikanasu@yahoo.com
9900239680
Radha

SHREE said...

hey why hv u stopped writing? no posts since october !!! this shouldn't happen...

Manjub said...

Yava article odidharu, onde upadhesha: guri hirali, atma viswasa hiri, swabhimana, dhahe..mathinnenoo..

Bejaradhaga swalpa upadhesha villadha lekana kodo khusi nimma salu gallalii dhorehithuuu.

Manasige hithavagi bereyavarige thondhare yagadhanti bhabhukuthha phata kaliyodu easy ansuthe..upadesha beda antha nane blade akkokke suru madithe ansuthee...

E commentna mathondu udheessa: Yava mohan murali bhavageetheva prathi salina artha nanage thavu mail madidhare nanu dhanyaaa

meetmanju@gmail.com

Sree said...

ಅದಮ್ಯ, ಶ್ರೀ ಶ್ರೀ ಶ್ರೀ (?!?!:)), ಶಿವ್ - ಎಂದಿನಂತೆ ಧನ್ಯವಾದಗಳು:) ಹಾ, ಮಧ್ಯ ಸೇರ್ಕೊಂಡಿರೋ ಅನಾನಿಮಸ್ ಗಳೀಗೂ ಧನ್ಯವಾದಗಳು;))
ಗೌತಮ್, ಶ್ರೀ, ಮಂಜು - ಹೀಗೇಸುಮ್ಮ್ನೆ ಭೇಟಿಕೊಟ್ಟಿದ್ದಕ್ಕೆ ಧನ್ಯವಾದಗಳು:) ಸದ್ಯದಲ್ಲೇ ನಾಕು ಸಾಲು ಕುಟ್ಟೋ ಪ್ಲಾನ್ ಹಾಕಿದೀನಿ:)

海瓜子Andy said...

That's actually really cool!亂倫,戀愛ING,免費視訊聊天,視訊聊天,成人短片,美女交友,美女遊戲,18禁,
三級片,後宮電影院,85cc,免費影片,線上遊戲,色情遊戲,日本a片,美女,成人圖片區,avdvd,色情遊戲,情色貼圖,女優,偷拍,情色視訊,愛情小說,85cc成人片,成人貼圖站,成人論壇,080聊天室,080苗栗人聊天室,免費a片,視訊美女,視訊做愛,免費視訊,伊莉討論區,sogo論壇,台灣論壇,plus論壇,維克斯論壇,情色論壇,性感影片,正妹,走光,色遊戲,情色自拍,kk俱樂部,好玩遊戲,免費遊戲,貼圖區,好玩遊戲區,中部人聊天室,情色視訊聊天室,聊天室ut,成人遊戲,免費成人影片,成人光碟,情色遊戲,情色a片,情色網,成人圖片區