Monday, October 06, 2008

ಬೆಳ್ಳಿ ಮಾತು ಬಂಗಾರದ ಮೌನಗಳ ನಿನಗೊಂದು ಕಿವಿಮಾತು

ಮೌನದ ಮೊರೆ ಹೊಕ್ಕ ಹುಡುಗ... ಹುಡುಗಿಗೆ ತಲೆಬಿಸಿ...
ಏನಾಯ್ತು, ಯಾಕೆ, ಯಾವಾಗ...
ಮನ ಗೊಂದಲದ ಬೀಡು.
ಏನು ಮಾಡೋದು? ಹೊರಗೆ ಹೋಗೋಣ್ವಾ?
ಸರಿ...
ಕಾಫಿಡೇನಲ್ಲೂ ಮತ್ತೆ ಕಪ್ಪಿಚಿಪ್ಪಿನೊಳಗೆ ತೂರಿದ ಹುಡುಗ.
ಲಾಂಗ್ ಡ್ರೈವ್? ಮತ್ತಷ್ಟು ಉದ್ದದ ಮೌನ...
ಇನ್ನೆಷ್ಟು ತಡೆದಾಳು ಪಾಪ...
ಏನಾಯ್ತೋ? ನನ್ನಿಂದ ಏನಾದ್ರೂ ತಪ್ಪಾಯ್ತಾ?
ಇಲ್ಲಮಾ, it has nothing to do with you, dont worry.
ಫುಲ್‌ಸ್ಟಾಪಿಸಿ ಗಾಡಿ ಓಡಿಸೋ ಮೌನ ಬಂಗಾರ!
ಮನೆ ತಲುಪಿದ ಕೂಡಲೇ ಮೌನಕ್ಕೆ ಸಾಥ್ ಟಿವಿ
ನನ್ನ ಜೊತೆ ಸಾಕಾಯ್ತಾ? ದಿಂಬಿನೊಡನೆ ಪ್ರಶ್ನೆಗಳನ್ನು ಬಿಕ್ಕುತ್ತಿರೋವಾಗ್ಲೇ ಪಕ್ಕದಲ್ಲಿ ತೆಪ್ಪಗೆ ನಿದ್ದೆ ಹೊಡೆದುಬಿಟ್ಟಾಗ...
ಬಿಕ್ಕಿದ ಸಾಲುಗಳನ್ನು ಹೆಕ್ಕುವುದಕ್ಕೆ ಕೂತ ಡೈರಿಗೆ ಓವರ್‌ಟೈಮ್.
ಅತ್ತು ಅತ್ತು ಸುಸ್ತಾಗಿ ಅಂತೂ ಇಂತೂ ಹುಡುಗಿ ನಿದ್ದೆಗೆ ಜಾರಿದಾಗ ಡೈರಿಗೆ ಪಕ್ಕದ ಡೈರಿಯ ಜೊತೆ ಮಾತಿಗೆ ಸಮಯ.
ಏನಿತ್ತಲ್ಲಿ?
Today India lost the cricket match
against bangladesh.
DAMN
IT.

ಯಾವತ್ತೋ ಎಲ್ಲಿಂದಲೋ ಬಂದ forwarded mail. ಸಾಧಾರಣವಾಗಿ ನನಗೂ gender stereotype ಮೆಸೇಜುಗಳಿಗೂ ಅಷ್ಟಕಷ್ಟೆ. women drivers, wife bashing jokes...ಇಂಥವು. ಆದ್ರೆ ಇದನ್ನ ಓದಿದಾಗ ಮಾತ್ರ ಸುಳಿದದ್ದು ಕಿರುನಗೆ! ನೀನೂ ನಗ್ತೀಯಾ ಅಂತ ಗೊತ್ತಿತ್ತು. ಕಳಿಸಿದೆ. ಹೌದಲ್ಲ, ನಾ ಹೀಗೇನೇ! ಅಂತ ಇಬ್ರಿಗೂ ಅನ್ನಿಸಿಬಿಡ್ತಲ್ಲವಾ:)
ಮತ್ತೆ ನಿನ್ನ ಮೆಸೇಜು,
ಓದಿದೆ ಕಣೇ, ಈಗ್ಲಾದ್ರೂ ನಿನಗೆ ಅರ್ಥವಾಗಿರಬೇಕು ನಾನೆಷ್ಟು ಸಿಂಪಲ್, ಹೆಂಗಸರೆಷ್ಟು ಕಾಂಪ್ಲೆಕ್ಸ್(’ನೀನೆಷ್ಟು ಕಾಂಪ್ಲೆಕ್ಸ್’ ಅನ್ನೋಕೆ ಹೊರಟವನಿಗೆ ನನ್ನ ಚಾಮುಂಡಿ ಅವತಾರಗಳು ನೆನಪಾಗಿರ್ಬೇಕು ಅಲ್ವಾ!:) )ಅಂತಾ...

ನೀನಷ್ಟೇ ಯಾಕೆ, ೯೦% ಹುಡುಗ್ರೂ ಹಾಗೇನೇ, ೯೦% ಹುಡುಗಿಯರು ಹೀಗೇನೇ...ಅದಕ್ಕೇ ಅಲ್ವಾ ನಿಮಗೆ ನಾವು ನಮಗೆ ನೀವು ಬೇಕಾಗೋದು, ಪ್ರೀತಿ, ಕೋಪ, ನಗು, ಅಳು ಇವೆಲ್ಲಾ ಭೂಮಿ ಮೇಲೆ ಫೆವಿಕೋಲ್ ಹಾಕ್ಕೊಂಡು ಕೂತಿರೋದು?

ಹೌದು, ಅದಕ್ಕೇ ಬದುಕಲ್ಲಿ ಮಜಾ ಇರೋದು, ಹಾಗಂತ ತುಂಬಾ ಕಾಂಪ್ಲೆಕ್ಸ್ ಕೂಡ ಆಗಬಾರದು...

ನಿಜ, ತುಂಬಾ ಸಿಂಪಲ್, ತುಂಬಾ ಕಾಂಪ್ಲೆಕ್ಸ್ ಇವೆಲ್ಲಾ ಎಷ್ಟೆಷ್ಟು, ಎಲ್ಲಿ, ಯಾವಾಗ ಅಂತ ಯಾವುದೇ ಸಂಬಂಧದಲ್ಲಿ ನಿಧಾನಕ್ಕೆ ಅರ್ಥವಾಗುತ್ತಾ ಹೋಗುತ್ತೆ...ಮೊದಮೊದಲಿನ ಗೊಂದಲಗಳು ಸಹಜವಷ್ಟೇ ಅಲ್ಲ, ಈ ಬಗೆಯ ಅರ್ಥೈಸಿಕೊಳ್ಳುವಿಕೆಯ ಮೊದಲ ಹೆಜ್ಜೆಗಳೂ ಹೌದು. ಎರಡು ಕಡೆಯಿಂದ ಈ ಬಗೆಗೆ ಪ್ರಯತ್ನವಿದ್ದಾಗ balance ಹುಡುಕೋದು ಕಷ್ಟದ ಕೆಲಸವೇನಲ್ಲ...
ಹೂಂ, ಇದೆಲ್ಲ ವಟವಟಗಳು ನಿನಗೂ ಗೊತ್ತಿದ್ದೂ ನಾ ಬಡಬಡಾಯ್ಸುವಾಗ ಹೊಸತನ್ನೋ ಹಾಗೆ ನಸುನಗೆಯಲ್ಲಿ ಕೇಳ್ತೀಯಲ್ಲ, ಅದಕ್ಕೇ ನೀ ನನಗಷ್ಟು ಇಷ್ಟವಾಗೋದೇನೋ!

ಸರಿ, ಪಂಡಿತೆಯಂತೆ ಬೀಗೋದು ನಿಲ್ಲಿಸಿ ನಂ ಬಗ್ಗೆ ಸ್ವಲ್ಪ ಹೇಳ್ತೀನಿ ಕೇಳು.
ನಾವು ಹುಡುಗಿಯರು ಹೀಗೇ ಕಣೋ, ನಮ್ಮ ಕಾಂಪ್ಲೆಕ್ಸಿಟಿ ಪ್ರೀತಿಯ ಇನ್ನೊಂದು ಮುಖ ಅಷ್ಟೇ. ನಿಮ್ಮ ಮಾತುಗಳಿಗೆ ಬೀಳೋ ಅಷ್ಟೇ ಸುಲಭವಾಗ ನಿಮ್ಮ ಮೌನಗಳು ಚುಚ್ಚಿಬಿಡತ್ವೆ ನಮ್ಮನ್ನ... ಒಂದೇ ಕ್ಷಣದ ಹಿಂದೆ ನೀನಾಡಿದ ಪ್ರೀತಿಮಾತೂ ನೀ ನನ್ನ ಮರೆತು ಮುಳುಗೋ ಮೌನದಲ್ಲಿ ಒದ್ದಾಡಿಹೋಗುತ್ತೆ. silence kills, it just kills us!
ಯಾಕೆ ಗೊತ್ತಾ... ಒಂದು ಹುಡುಗಿಗೆ ನೀ ಇಷ್ಟ ಅನಿಸಿದ ಘಳಿಗೆಯಿಂದ 24X7, 365ದಿನಗಳೂ ನೀ ಅವಳ ಜೊತೆಯಿರ್ತೀಯ. ಎಷ್ಟೇ ಕೆಲಸ ಇರಲಿ, ಏನೇ ಯೋಚನೆ ಇರಲಿ...ಒಂದು ಕಿರುನಗೆಯಾಗಿ, ಹನಿ ಕಣ್ಣೀರಾಗಿ, ಒರಗೋ ಹೆಗಲಾಗಿ, ಆರ್ಭಟಗಳಿಗೆ ಕಿವಿಯಾಗಿ...ಅಲ್ಲಿ ನೀನಿದ್ದೇ ಇರ್ತೀಯ, ನಿನ್ನ ಲೋಕದಲ್ಲಿ ನೀ ಬಿಜಿಯಾಗಿರೋವಾಗಲೂ.
ಹಾಗೆ ನಮ್ಮೆಲ್ಲ ಬಿಜಿ ಬಿಜಿ ಲೋಕಗಳಲ್ಲೂ ನಿಮ್ಮನ್ನು ಭದ್ರವಾಗಿ ಕೂಡಿಸುವ ನಮಗೆ ನಮ್ಮನ್ನು ಮೀರಿದ ನಿಮ್ಮ ಲೋಕಗಳನ್ನ ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟ... ಆದ್ರೂ ಒಳ್ಳೇ ಹುಡುಗಿಯರು ನಾವು. ನೀವುಗಳು ಎರಡೇ ಎರಡು ಸೆಕೆಂಡ್ ತೊಗೊಂಡು, ಬಿಜಿ ಇದ್ದೀನಿ ಕಣೇ ಅಂತ ಒಂದು ಮಾತು ಹೇಳಿದರೂ ಮತ್ತೆ ಗುಲಾಬಿ ತೋಟದಂತೆ ಅರಳಿಬಿಡ್ತೀವಿ, ನಗುತ್ತಾ ಕಾದುಬಿಡ್ತೀವಿ...

ಇನ್ನೊಂದು ಮಾತು, ನಮ್ಮ ದುಪಟ್ಟಾಗಳಿಗೆ, ಸೀರೆಗಳಿಗೆ ಜಿಗ್‌ಜಾಗ್ ಮಾಡಿಸ್ತೀವಿ ಗೊತ್ತಾ? ಅಂಚು ಕಟ್ಟುವ ಕೆಲಸ. ಯಾಕೆ ಮಾಡ್ತೀವಿ ಗೊತ್ತಾ? ಹಾಗೆ ಕಟ್ಟದೇ ಇದ್ರೆ ಹರಿದುಹೋಗೋ ಚಾನ್ಸ್ ಜಾಸ್ತಿ. ಅದನ್ನ ತಪ್ಪಿಸೋಕೆ ಒಂದು ಅಂಚು. ಒಂದು definition. ಸಂಬಂಧಗಳಲ್ಲೂ ಅಷ್ಟೆ... ಅಂಚು ಕಟ್ಟಿದ, ಮಿತಿಗಳನ್ನ ಗುರ್ತಿಸಿದ ಸಂಬಂಧಗಳಲ್ಲಿ ಅರ್ಥವಾಗದೇ ಹರಿದುಹೋಗುವ ಸಾಧ್ಯತೆಗಳು ಆ ಮಟ್ಟಿಗೆ ಕಮ್ಮಿ. ಅರ್ಥವಾಗದಿದ್ದಾಗ ಆಗ್ಲಿಲ್ಲ ಕಣೋ ಅಂತ ಹೇಳಿ ಬಿಡಿಸಿ ಕೇಳೋ ಅಷ್ಟು ಹಕ್ಕಾದ್ರೂ ಇರುತ್ತಲ್ಲ ಅಲ್ಲಿ, ಅದೇ ಅದರ ಸೇಫ್ಟಿ ವಾಲ್ವ್.

ಆದ್ರೆ ಇಷ್ಟಕ್ಕೆ ನೀ ಏನು ಅಂತ ನಾ ತಿಳಿದುಕೊಳ್ಳೋಕೆ, ನಾ ಏನು ಅಂತ ನೀ ತಿಳಿದುಕೊಳ್ಳೋಕೆ ಒಂದು forward mail ಸಾಕು ಅಂತ ಆಗಿಬಿಟ್ರೆ, ಇದಕ್ಕೂ ನಾಕು ಟೆಕ್ಸ್ಟ್‌ಬುಕ್ಕು, ಎರಡು ಎಕ್ಸಾಮು ಇಟ್ಟು ಪಾಸು ಮಾಡಿಸಬಹುದಿತ್ತಲ್ವಾ? ಧ್ರುವಗಳ ಮಧ್ಯೆ ಬದುಕು ಅರಳಿರುವ ಪರಿಯಿಂದಲ್ಲವಾ ಭೂಮಿ ಸುಂದರ ಅನ್ನಿಸೋದು...

ನಿನಗೊಂದು ಕಿವಿ ಮಾತು ಅಂದಿದ್ದೆ ಅಲ್ವಾ, ಕೇಳು... ನಾ ನನ್ನ usual ವಟವಟ ಯಾವತ್ತಾದ್ರೂ ನಿಲ್ಲಿಸಿದ್ರೆ (ಯಾಆಅಆಆವತ್ತಾದ್ರೂ!) ಅದಕ್ಕೆ ಖಂಡಿತಾ ಕ್ರಿಕೆಟ್ ಕಾರಣವಾಗಿರೋಲ್ಲ. ನನ್ನೆಲ್ಲ ಮೌನಗಳ ಕಾರಣಗಳ ಜೊತೆ ನಿನಗೊಂದು ಲಿಂಕ್ ಪರ್ಮನೆಂಟಾಗಿ ಅಂಟಿಕೊಂಡಿರುತ್ತೆ - ’ನಾವು’ ಇರುವವರೆಗೆ...

32 comments:

ಶ್ರೀನಿಧಿ.ಡಿ.ಎಸ್ said...

ಓದಿದ್ದೇನೆ!:):)

ಬೇರೆ ತರ ಬರ್ದಿದೀರಾ,! ಸ್ವಗತಕ್ಕೆ ಸ್ವಾಗತ:)

ಶಾಂತಲಾ ಭಂಡಿ (ಸನ್ನಿಧಿ) said...

sree...
ಬೆಳ್ಳಿ ಮಾತು ಬಂಗಾರದ ಮೌನಗಳ ನಡುವಿನ ಕಿವಿಮಾತುಗಳೆಲ್ಲ ರನ್ನದಂಗಿವೆ. ಎಲ್ಲಾ ಸಾಲುಗಳೂ ಇಷ್ಟವಾದ್ವು. ಹೀಗೇ ಬರೀತಾ ಇರು.

ವಿ.ರಾ.ಹೆ. said...

ನಾನೂ ಓದಿದ್ದೇನೆ :)

ಧ್ರುವಗಳ ಮಧ್ಯೆ ಬದುಕು ಅರಳಿರುವ ಪರಿಯಿಂದಲ್ಲವಾ ಭೂಮಿ ಸುಂದರ ಅನ್ನಿಸೋದು...

ಆಹ್. !

ಬಾಲು said...

ನಿನಗೊಂದು ಕಿವಿ ಮಾತು ಅಂದಿದ್ದೆ ಅಲ್ವಾ, ಕೇಳು... ನಾ ನನ್ನ usual ವಟವಟ ಯಾವತ್ತಾದ್ರೂ ನಿಲ್ಲಿಸಿದ್ರೆ (ಯಾಆಅಆಆವತ್ತಾದ್ರೂ!) ಅದಕ್ಕೆ ಖಂಡಿತಾ ಕ್ರಿಕೆಟ್ ಕಾರಣವಾಗಿರೋಲ್ಲ. ನನ್ನೆಲ್ಲ ಮೌನಗಳ ಕಾರಣಗಳ ಜೊತೆ ನಿನಗೊಂದು ಲಿಂಕ್ ಪರ್ಮನೆಂಟಾಗಿ ಅಂಟಿಕೊಂಡಿರುತ್ತೆ - ’ನಾವು’ ಇರುವವರೆಗೆ...

e saalu yaake barede andre ... nange adu thumba ishta aithu. chennagide.

ಸುಧೇಶ್ ಶೆಟ್ಟಿ said...

ಸೂಪರ್....
ನನಗೂ ಕೊನೆ ಸಾಲುಗಳು ತು೦ಬಾ ಇಷ್ಟ ಆಯ್ತು.
ಹೌದು... ಇಷ್ಟು ಚೆನ್ನಾಗಿರೋ ಬರಹ ಬರೆಯಬೇಕಾದರೆ, ಒ೦ದು ತಿ೦ಗಳು ಬೇಕೇ ಬೇಕು:)

Veena Shivanna said...

"ಒಂದು ಹುಡುಗಿಗೆ ನೀ ಇಷ್ಟ ಅನಿಸಿದ ಘಳಿಗೆಯಿಂದ 24X7, 365ದಿನಗಳೂ ನೀ ಅವಳ ಜೊತೆಯಿರ್ತೀಯ. ಎಷ್ಟೇ ಕೆಲಸ ಇರಲಿ, ಏನೇ ಯೋಚನೆ ಇರಲಿ...ಒಂದು ಕಿರುನಗೆಯಾಗಿ, ಹನಿ ಕಣ್ಣೀರಾಗಿ, ಒರಗೋ ಹೆಗಲಾಗಿ, ಆರ್ಭಟಗಳಿಗೆ ಕಿವಿಯಾಗಿ...ಅಲ್ಲಿ ನೀನಿದ್ದೇ ಇರ್ತೀಯ,"

--nijavaaglu usiru kaTTisutte ree idu. Practicallaagi barede sorry!

Anchu Anology is too good and the flow of the write up is mesmerising! you have a great writing style.
yaako baraha IME kai kodthaa ide, so english alli bareetha ideeni

Sree said...

ಶ್ರೀನಿಧಿ, ವಿಕಾಸ್, ಓದಿದ್ದಕ್ಕೆ(ಹಾಗೂ ಅದನ್ನ ತಿಳ್ಸಿದ್ದಕ್ಕೆ!) ಥ್ಯಾಂಕ್ಸ್:))
ನಿಧಿ, ಸ್ವಗತ ಅಲ್ಲ, ಪ್ರವಚನ:)) ಎಲ್ಲಾ ಹುಡುಗ್ರೂ ಓದಿ ಉದ್ಧಾರ ಆಗ್ಲಿ ಅಂತ;)

ಶಾಂತಲಾ, ವಿಕಾಸ್, ಬಾಲು, ಸುಶೀಲ್,ಸುಧೇಶ್, ವೀಣಾ...ಮೆಚ್ಚುಗೆಗೆ ಧನ್ಯವಾದಗಳು:)
ವೀಣಾ...ಉಸಿರುಕಟ್ಟಿಸುತ್ತೆ...ಆದ್ರೆ ನಿಜ...ಅದಕ್ಕೇ ಬ್ಯಾಲೆನ್ಸ್ ಬಗ್ಗೆ ಹೇಳ್ದೆ...ಸರಿ ಅಲ್ವಾ?:)

ಮನಸ್ವಿನಿ said...

ಚೆನ್ನಾಗಿದೆ ಶ್ರೀ ಈ ಬರಹ.
ಮ್ಯಾಜಿಕ್ ಮಾಡಿಬಿಟ್ಟಿದ್ದೀರ! ಅಂತೂ ನನ್ನ ಮಾತು ಸಿರಿಯಸ್ ಆಗಿ ತಗೊಂಡ್ರಲ! :D

ನವಿಲುಗರಿ ಹುಡುಗ said...

ಒಂದು ಹುಡುಗಿಗೆ ನೀ ಇಷ್ಟ ಅನಿಸಿದ ಘಳಿಗೆಯಿಂದ 24X7, 365ದಿನಗಳೂ ನೀ ಅವಳ ಜೊತೆಯಿರ್ತೀಯ. ಎಷ್ಟೇ ಕೆಲಸ ಇರಲಿ, ಏನೇ ಯೋಚನೆ ಇರಲಿ...ಒಂದು ಕಿರುನಗೆಯಾಗಿ, ಹನಿ ಕಣ್ಣೀರಾಗಿ, ಒರಗೋ ಹೆಗಲಾಗಿ, ಆರ್ಭಟಗಳಿಗೆ ಕಿವಿಯಾಗಿ...ಅಲ್ಲಿ ನೀನಿದ್ದೇ ಇರ್ತೀಯ, ನಿನ್ನ ಲೋಕದಲ್ಲಿ ನೀ ಬಿಜಿಯಾಗಿರೋವಾಗಲೂ.
ಹಾಗೆ ನಮ್ಮೆಲ್ಲ ಬಿಜಿ ಬಿಜಿ ಲೋಕಗಳಲ್ಲೂ ನಿಮ್ಮನ್ನು ಭದ್ರವಾಗಿ ಕೂಡಿಸುವ ನಮಗೆ ನಮ್ಮನ್ನು ಮೀರಿದ ನಿಮ್ಮ ಲೋಕಗಳನ್ನ ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟ... ಆದ್ರೂ ಒಳ್ಳೇ ಹುಡುಗಿಯರು ನಾವು. ನೀವುಗಳು ಎರಡೇ ಎರಡು ಸೆಕೆಂಡ್ ತೊಗೊಂಡು, ಬಿಜಿ ಇದ್ದೀನಿ ಕಣೇ ಅಂತ ಒಂದು ಮಾತು ಹೇಳಿದರೂ ಮತ್ತೆ ಗುಲಾಬಿ ತೋಟದಂತೆ ಅರಳಿಬಿಡ್ತೀವಿ, ನಗುತ್ತಾ ಕಾದುಬಿಡ್ತೀವಿ...

yaako 2 sala odikonde..tumba satyavada maatu annista ide...anubhavada matalla ;)

neev hudgeere heegnopa..hachkondre hachkondu bidteeri hachkondilla andre illi obnige hucchu hidtha ide opkolri andru tirigi kooda nodalla..;)

tumba tumba ishta aytu..:)

Anonymous said...

ಇಂಥ ಮೌನದ ಜೊತೆ ನಾನೂ ಕೂಡ ತುಂಬ ಸಲ ಒದ್ದಾಡಿದ್ದಿದೆ...
ಆದ್ರೆ ಈಗೀಗ ಮೌನ ಬಂಗಾರ ನಂಗೂ ಇಷ್ಟ ಅಂದ್ಕೋಳ್ಳೋಕೆ ಶುರು ಮಾಡಿದ್ದೀನಿ :)
ಚಂದದ ಬರಹ. ಇಷ್ಟ ಆಯ್ತು.

Veena Shivanna said...

hmm.. Balancing baggenu bardideera, aa sentences gaLanna odi haage annistu ashte.
nimma baraha dalli enO onthara seriousness enO onthara fun..(specially bracket nalli haakO padagaLu)...

and nimma post gaLa vishya predictable aagirolla nodi, very versatile in choosing the topic too.
Keep writing

--Veena

Santhosh Rao said...

ಚೆನ್ನಾಗಿ ಬರೆದಿದ್ದೀರ !

ಮೌನದ ಮೊರೆ ಹೊಕ್ಕ ಹುಡುಗ....ಲಾಂಗ್ ಡ್ರೈವ್? ಮತ್ತಷ್ಟು ಉದ್ದದ ಮೌನ...hmmmm.... ನಾನು ಪ್ರೀತಿಸುವ ಮೌನಕ್ಕು ಮಾತು ಬಂದಂತಾಯಿತು ..

ನೀವುಗಳು ಎರಡೇ ಎರಡು ಸೆಕೆಂಡ್ ತೊಗೊಂಡು, ಬಿಜಿ ಇದ್ದೀನಿ ಕಣೇ ಅಂತ ಒಂದು ಮಾತು ಹೇಳಿದರೂ ಮತ್ತೆ ಗುಲಾಬಿ ತೋಟದಂತೆ ಅರಳಿಬಿಡ್ತೀವಿ, ನಗುತ್ತಾ ಕಾದುಬಿಡ್ತೀವಿ...
(ನಿಜ ನೀವು ಹುಡ್ಗಿರು ಕಾಯುತ್ತೀರಾ ! ಯಾಕೆ ಅಂದ್ರೆ ನಿಮ್ಮಲ್ಲಿ ಪ್ರೀತಿಸಿದವನ ಮೇಲೆ ಒಂದು ಚಡಪಡಿಕೆ ! Just ಒಂದು ಚಡಪಡಿಕೆ ...ಆ ಚಡಪಡಿಕೆ ಅಥವಾ ಆ ನಿಮ್ಮ ಕಾಯುವಿಕೆ ಎಷ್ಟರ ಮಟ್ಟಿಗೆ mature ಆಗುತ್ತೆ ಅಂತ ಗೊತ್ತಿಲ್ಲ ...)

-Santhosh

sunaath said...

ನೀವು ಹೇಳೋದು ಖರೆ ಇರಬೇಕು. ಇಷ್ಟು ವರ್ಷ ಆದರೂ ನನ್ನ ಹೆಂಡತಿ ನನಗೆ complex ಆಗೇ ಕಾಣಸ್ತಾಳ.
ಇದಕ್ಕೇ 'ಪ್ರೀತಿ'ಅಂತಾರೇನೊ?

shreekanth said...
This comment has been removed by the author.
shreekanth said...

tumba tumba tumba.... chennag bardiddera!


idyako barahaIME-goo google chrome/blogger-goo aag baralla ansutte.
Adakke neev istu chennag bardiro kannada article-ge english-lipiyalli-kannada comments. kshame irli! :)

--sLr (ಶ್ರೀಕಾಂತ)

VENU VINOD said...

ಅಸೂಯೆ ಹುಟ್ಟುವಷ್ಟು ಚೆನ್ನಾಗಿ ಬರೆದಿದ್ದೀರಿ ಶ್ರೀ....
ನೀವು ಯಾವಾಗಲಾದರೊಮ್ಮೆ ಬರೆದರೂ ಮಾಸ್ಟರ್‍ ಪೀಸೇ ಬರೆಯುತ್ತೀರಿ ಬಿಡಿ :)

Balasubramanya H.R. said...

Wonderful...thumba chennagide nimma barevanige..

Bhavalahari said...

ಒಂದು ಹುಡುಗಿಗೆ ನೀ ಇಷ್ಟ ಅನಿಸಿದ ಘಳಿಗೆಯಿಂದ 24X7, 365ದಿನಗಳೂ ನೀ ಅವಳ ಜೊತೆಯಿರ್ತೀಯ. ಎಷ್ಟೇ ಕೆಲಸ ಇರಲಿ, ಏನೇ ಯೋಚನೆ ಇರಲಿ...ಒಂದು ಕಿರುನಗೆಯಾಗಿ, ಹನಿ ಕಣ್ಣೀರಾಗಿ, ಒರಗೋ ಹೆಗಲಾಗಿ, ಆರ್ಭಟಗಳಿಗೆ ಕಿವಿಯಾಗಿ...ಅಲ್ಲಿ ನೀನಿದ್ದೇ ಇರ್ತೀಯ, ನಿನ್ನ ಲೋಕದಲ್ಲಿ ನೀ ಬಿಜಿಯಾಗಿರೋವಾಗಲೂ.
ಹಾಗೆ ನಮ್ಮೆಲ್ಲ ಬಿಜಿ ಬಿಜಿ ಲೋಕಗಳಲ್ಲೂ ನಿಮ್ಮನ್ನು ಭದ್ರವಾಗಿ ಕೂಡಿಸುವ ನಮಗೆ ನಮ್ಮನ್ನು ಮೀರಿದ ನಿಮ್ಮ ಲೋಕಗಳನ್ನ ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟ... ಆದ್ರೂ ಒಳ್ಳೇ ಹುಡುಗಿಯರು ನಾವು. ನೀವುಗಳು ಎರಡೇ ಎರಡು ಸೆಕೆಂಡ್ ತೊಗೊಂಡು, ಬಿಜಿ ಇದ್ದೀನಿ ಕಣೇ ಅಂತ ಒಂದು ಮಾತು ಹೇಳಿದರೂ ಮತ್ತೆ ಗುಲಾಬಿ ತೋಟದಂತೆ ಅರಳಿಬಿಡ್ತೀವಿ, ನಗುತ್ತಾ ಕಾದುಬಿಡ್ತೀವಿ...


English font balastirodakke kshame irali Sree...
adhbutavaagi barediddira...100% satya... Hudugara mauna arthavaagade chadapadiso hudugiyara sukomala bhavanegalanna manamuttuvante chitrisiddira... truely mesmerising.....

ಧ್ರುವಗಳ ಮಧ್ಯೆ ಬದುಕು ಅರಳಿರುವ ಪರಿಯಿಂದಲ್ಲವಾ ಭೂಮಿ ಸುಂದರ ಅನ್ನಿಸೋದು...

saati illada saalugalu...

sp said...

Reading your blog first time. Very Good Writing skills.
Having said this, In my humble opinion, i felt this article to be a little over the top with lot of emphasis on bookish melodrama rather than practical wisdom. You are however a gifted writer specially made for writing great "FICTION" which can hold the reader's interest till the finish line.
Thanks..
ps: Ofcourse I've bookmarked your blog...

ರಾಘು ತೆಳಗಡಿ said...

"ನಾವು ಹುಡುಗಿಯರು ಹೀಗೇ ಕಣೋ, ನಮ್ಮ ಕಾಂಪ್ಲೆಕ್ಸಿಟಿ ಪ್ರೀತಿಯ ಇನ್ನೊಂದು ಮುಖ ಅಷ್ಟೇ. ನಿಮ್ಮ ಮಾತುಗಳಿಗೆ ಬೀಳೋ ಅಷ್ಟೇ ಸುಲಭವಾಗ ನಿಮ್ಮ ಮೌನಗಳು ಚುಚ್ಚಿಬಿಡತ್ವೆ ನಮ್ಮನ್ನ... " ನಿಜ ಕಣಮ್ಮ, ಅನುಭವದ ಮಾತು! ಜೊತೆಗೆ ಮೌನ ಹುಡ್ಗಿಗೆ ಮಾತ್ರವಲ್ಲದೆ ಹುಡುಗರಿಗೂ ಸಹ ಹಾಗೆ ತೊಂದ್ರೆ ಕೊಡುತ್ತಾ ಕೆಲ ಬಾರಿ. ಸುಂದರ ಬರಹ, ಬರಿತ ಇರಿ.

ಮನಸ್ವಿ said...

ತುಂಬಾ ಚನ್ನಾಗಿ ಬರೆದಿದ್ದೀರಿ.. ಯಾವಗಲೂ ಬರೆಯುವ ರೀತಿಯಿಲ್ಲ.. ಸ್ವಲ್ಪ ಡಿಪರೆಂಟ್ ಆಗಿದೆ ಲೇಖನ.. ಖುಷಿ ಕೊಡ್ತು....

ಸುಪ್ತದೀಪ್ತಿ suptadeepti said...

ಶ್ರೀಮಾತಾ... ವಾವ್!!

ಯಾವ ಸಾಲು ಹೆಚ್ಚು ಇಷ್ಟವಾಯ್ತೆಂದು ಹೇಳಲಿ?
ಪ್ರತೀ ಕ್ಷಣಗಳ ಲೆಕ್ಕವನ್ನೆ? ಮೌನಕ್ಕೆ ಟಿವಿ ಕೊಟ್ಟ ಜೊತೆಯನ್ನೆ? ಬಿಕ್ಕಳಿಸಿದ ಪದಗಳನ್ನು ಹೆಕ್ಕಿದ ಡೈರಿಯನ್ನೆ? ಪಕ್ಕದ ಡೈರಿಯೊಂದಿಗಿನ ಮಾತನ್ನೆ? ಅಥವಾ ನಮಗೆಲ್ಲ ಸಿಗಲಾರದ ಎರಡು ಸೆಕೆಂಡುಗಳ ಮೆಸೇಜನ್ನೆ? ಯಾವುದನ್ನು ಉದ್ಧರಿಸಲಿ? ನನ್ನೊಳಗಿನ ಕಾಂಪ್ಲೆಕ್ಸಿಟಿ ಗೊತ್ತಾಯ್ತಲ್ಲ!!

ಸಂತೋಷ್, ಹುಡುಗಿಯರಿಗೆ ಹುಡುಗರ ಬಗ್ಗೆ ಚಡಪಡಿಕೆ ಎಂದಿರಿ... ಮೆಚೂರಿಟಿ ಎಂದಿರಿ... ಚಡಪಡಿಕೆ ಪ್ರತೀ ಹಂತದಲ್ಲೂ ಒಂದೇ ರೀತಿಯದಲ್ಲ ಅಂತ ನಿಮ್ಮ ಗಮನಕ್ಕೆ ಬರಲು ಹಲವಾರು ವರ್ಷಗಳೇ ಬೇಕಾದಾವು.

ಮೊದಮೊದಲು "ಎಲ್ಲಿ ಬಿಟ್ಟು ಹೋದಾನೋ" ಅನ್ನುವ ಚಡಪಡಿಕೆ... ಆಮೇಲಾಮೇಲೆ "ಹೊತ್ತಿಗೆ ಸರಿಯಾಗಿ ಮನೆಗೆ ಬಾರದಿದ್ದರೆ ಅವನ ಊಟದ ಸಮಯ ಮೀರತ್ತೆ, ಅವನ ಹೊಟ್ಟೆಗೆ ಸರಿಯಾಗಿ ಆಹಾರ ಬೀಳದಿದ್ದರೆ ಅವನ ಆರೋಗ್ಯ ಹದಗೆಡಬಹುದು" ಅನ್ನುವ ಚಡಪಡಿಕೆ... ನಂತರ ಅರವತ್ತರ ದಶಕ ಮೀರಿದಾಗ, "ದೇಹದಲ್ಲಿ ಶಕ್ತಿ ಕುಗ್ಗಿದೆ, ಎಲ್ಲಿ ಏನಾಯಿತೋ" ಅನ್ನುವ ಭಯದ ಚಡಪಡಿಕೆ... ಇನ್ನು ಈಗಿನ ಭಯೋತ್ಪಾದನೆಯ ಬಿಸಿಲಿನಲ್ಲಿ ಎಲ್ಲರಿಗೂ ಎಲ್ಲರ ಬಗ್ಗೆಯೂ ಇರುವಂಥಾ ಕಾಳಜಿಯ ಚಡಪಡಿಕೆ... ಇವಕ್ಕೆಲ್ಲ ಒಂದೇ ಹೆಸರು; ಮುಖಗಳು ಮಾತ್ರ ಬೇರೆ ಬೇರೆ. ಮೆಚೂರಿಟಿ ಬರುತ್ತೆಯೆ? ಇಲ್ಲವೆ? ಈಗ ಹೇಳಿ. ನಿಮ್ಮ ಅಮ್ಮ ನಿಮ್ಮ ಅಪ್ಪನ ಹಾದಿ ಕಾಯುವುದಕ್ಕೂ ನಿಮ್ಮ ದಾರಿ ಕಾಯುವುದಕ್ಕೂ ವ್ಯತ್ಯಾಸವಿಲ್ಲವೆ? ಇದೆಯೆ? ಯೋಚಿಸಿ ನೋಡಿ.

ಉಷಾ... said...

naanu helabekinddanna(nanna huduganige) neeve helibittiddira... tumba chennagide...:)

Jagali bhaagavata said...

DAMN
IT.

yaakri IT-ge sumne baitideera? :-)

Vishwanatha Krishnamurthy Melinmane said...

The way you wrote is simply superb...

Anonymous said...

ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ

ಧರಿತ್ರಿ said...

ತುಂಬಾ ಚೆನ್ನಾಗಿ ಬರೇತೀರ ನೀವು. ಇವತ್ತೇ ಮೊದಲು ನೋಡಿದ್ದು ನಿಮ್ ಬ್ಲಾಗ್
-ಧರಿತ್ರಿ

ಸಾಗರದಾಚೆಯ ಇಂಚರ said...

ಶ್ರೀ,
ತುಂಬಾ ಒಳ್ಳೆಯ ಬರಹ, ಉಷ್ತವಾಯೋಇತು, ಹೀಗೆ ಬರೆಯುತ್ತಾ ಇರಿ

Ultrafast laser said...

ಬಾಕಿ ಸ್ವರ-ವ್ಯಂಜನಗಳನ್ನು ಬದಿಗಿಟ್ಟು ನೋಡಿದರೆ, ಅಂಚಿನ ಬಗೆಗಿನ ಸಂಚಿಗೆ ಒಳಗಾಗುವ ಮುಂಚಿನ ಮಿಂಚಿನ ಜ್ಞಾನದ ಬಗೆ, ಆ ಪ್ರತಿಮೆ, ರುಉಪಕೆ ಇಷ್ಟವಾಯಿತು. knowledge is connection -ಹೀಗೊಂದು ಮಾತಿದೆ. ಸೀರೆಯ ಅಂಚಿಗೂ ಸಂಬಂಧಗಳ ಅಂಚಿಗೂ ಇರುವ ಸರ್ವಕಾಲಿಕ ಸಾಮ್ಯತೆ ಹೊಳೆಯುವುದು ಸಾಹಿತ್ಯಿಕ ಸಾಧ್ಯತೆಗಳಲ್ಲಿ ಒಂದು ಎಂದು ನನ್ನ ಭಾವನೆ. -D.M.Sagar

uma bhat said...

nice words Shree.

Hi i am Uma here, recently joined the blog dept wher i shud have landed long back but nevermind better late than never :)
saw ur pieces here.. chennagi bardidira :)

stay in tch

regards
uma

Prateek said...

dupatta/seere anchina image chennagide...

madya kelu kade matra swallpa yarigo counseling madtiro thara bareda haagide.. :P

Sree said...

ಎಲ್ರಿಗೂ ಥ್ಯಾಂಕ್ಸ್:) @prateek as i said in one of the earlier comments, ಇದು "ಪ್ರವಚನ:)) ಎಲ್ಲಾ ಹುಡುಗ್ರೂ ಓದಿ ಉದ್ಧಾರ ಆಗ್ಲಿ ಅಂತ;)":p