Thursday, January 10, 2008

ಹಣತೆಗೆ...

ಜೀವನೋತ್ಸಾಹ ಇದೆ ಅಂತ ಟವರ್ ಹತ್ತಿ ನಿಂತು ಕೂಗೋ ಅವಶ್ಯಕತೆ ಏನಿದೆ? ಇದೆ ರೀ, ಒಳಗೇ ಎಲ್ಲೋ ಸೋರಿಹೋಗುತ್ತಿರೋ ಭಾವಕ್ಕೆ, ಸೋರದಂತೆ ನಿಲ್ಲಿಸಲು ತುಂಬಿಕೊಳ್ಳಬೇಕಿರೋ ಚೈತನ್ಯಕ್ಕೆ...

ಸುತ್ತೆಲ್ಲ ಬಣ್ಣದಲೋಕ, ಕಾಯುತ್ತಿರೋ ನೂರು ನಲಿವು-ನೋವು...
ಒಳಗೆ ಬಿರುಗಾಳಿಗೆ ಸಿಕ್ಕ ಕಿರುಹಣತೆಯ ಭಾವ ಯಾಕೋ!ಉಸಿರುಕಟ್ಟಿಸುವಂಥ ಸ್ತಬ್ಧತೆಯೂ ಅಲ್ಲೇ! ಎಲ್ಲದರ ನಡುವೆ ಏನೂ ಆಗದಂತೆ ಕೂರುವ ವಿಗ್ರಹವಾಗೋ ಯಾವ ಹಂಬಲಗಳೂ ಇಲ್ಲ, ರತ್ನಖಚಿತ ಕಿರೀಟ ವಿಗ್ರಹಕ್ಕೇ ಇರಲಿ.
ಸಿನಿಕತನ ನುಸುಳದಂತೆ, ಕಿರುಹಣತೆ ಆರದಂತೆ ಕಾಯುವುದೊಂದೇ ಹಂಬಲ...
ಅದಕ್ಕೇ ಈ ಕೂಗು...ಇರಬಹುದು!

ಕ್ಲೀಷೆ ಅನ್ನಿಸಿದ್ರೂ ಈ ಕ್ಷಣದ ಹಾಡು ಅದೇ...
ದೀಪವು ನಿನ್ನದೇ ಗಾಳಿಯೂ ನಿನ್ನದೇ...
ಆರದಿರಲಿ ಅಂದುಕೊಂಡರೆ ಸಾಕೇನೋ, ಗಾಳಿ ಮಾತು ಕೇಳಬಹುದು! ಅಥವಾ ದೀಪವೇ ಸೆಟೆದು ನಿಲ್ಲಬಹುದು!

ಹಣತೆಯಾರಿದರೆ
ನೋವೇನು ನಲಿವೇನು
ಕತ್ತಲೆಯ ತುಣುಕುಗಳು
ಸವೆಸಿ ಮರೆಯುವ ಹಾದಿಕಲ್ಲುಗಳು...
ಬದುಕೆ?

ಕತ್ತಲೆಯ ಗುಡಿಯಲ್ಲಿ
ಶ್ರೀಮೂರ್ತಿ ಕಂಗೊಳಿಸೆ
ಬೇಕೊಂದು ಪುಟ್ಟ ಹಣತೆ
ಕಲ್ಲಿನಲಿ ಕಾಯುವನ ತೋರಿ
ನಮಿಸೆ

12 comments:

Gowtham said...

ಹಿಂಗೆಲ್ಲಾ ಕಠಿಣ ಪದಪ್ರಯೋಗ ಮಾಡಿದ್ರೆ ಓದಿ ಅರ್ಥ ಮಾಡ್ಕೊಂಡು ಕಮೆಂತ್ ಹಾಕೋಕ್ಕೆ ಸ್ವಲ್ಪ ಕಷ್ಟ ಆಗತ್ತೆ --- so, will try reading again and attempt to understand it...

Sree said...

ಹಲ್ಲೋ? ಕಠಿಣಪದನಾ?? ತಲೆಕೆರ್ಕೊಂಡ್ರೂ ಗೊತ್ತಾಗ್ತಿಲ ಇದ್ರಲ್ಲಿ ಕಠಿಣ ಅನ್ನ್ಸೋ ಪದಗಳ್ ಯಾವ್ದು ಅಂತ! ಅದೂ ಕಗ್ಗ ಅರೆದುಕುಡ್ದಿರೋ ನಿಂಗೆ?? ಏನಪ್ಪ ಕಂಪ್ಲೀಟು ಥೇಮ್ಸ್ ಪುತ್ರ ಆಗಿ ಕನ್ನಡ ಮರೆತ್ಯಾ ಹೆಂಗೆ?;)

aequo animo said...

ಶ್ರೀಮೂರ್ತಿ ಕಂಗೊಳಿಸೆ ?? or ಶ್ರೀಮಾತಾ ಕನ್ಗೊಲಿಸೆ ? :D

ಶಾಂತಲಾ ಭಂಡಿ (ಸನ್ನಿಧಿ) said...

sree ಅವರೇ,
ತುಂಬ ಚೆನ್ನಾಗಿ ಬರೆದಿದ್ದೀರಾ.
"ಗಾಳಿ ಮಾತು ಕೇಳಬಹುದು! ಅಥವಾ ದೀಪವೇ ಸೆಟೆದು ನಿಲ್ಲಬಹುದು!" :) ಎಂತಹ ಸಾಲಿದು! ಬೆಲೆಬಾಳುವಂತಹ ನುಡಿ.

Rags said...

En artha aythu tumba chennagi anisitthu. Srimatharavare inna jaasti bareeri

ಸುಪ್ತದೀಪ್ತಿ suptadeepti said...

ಗುಡಿಯಿರಲಿ, ಗುಡಿಸಲಿರಲಿ, ಕಾಯುವನ ತೋರಲು ಹಣತೆ ಬೇಕು, ಪುಟ್ಟ ಹಣತೆಯೂ ಸಾಕು....

ಚೆನ್ನಾಗಿದೆ ಶ್ರೀಮಾತಾ.

ಮನಸ್ವಿನಿ said...


ಸಿನಿಕತನ ನುಸುಳದಂತೆ, ಕಿರುಹಣತೆ ಆರದಂತೆ ಕಾಯುವುದೊಂದೇ ಹಂಬಲ...
ಅದಕ್ಕೇ ಈ ಕೂಗು...ಇರಬಹುದು!

ಇರಬಹುದು. ಚೆನ್ನಾಗಿದೆ

Anonymous said...

ಶ್ರೀ ಅವರೇ,

ಕವನ ಓದಿದೆ. ಖುಷಿಯಾಯಿತು.

"ಗಾಳಿ ಮಾತು ಕೇಳಬಹುದು! ಅಥವಾ ದೀಪವೇ ಸೆಟೆದು ನಿಲ್ಲಬಹುದು!"

ಕತ್ತಲೆಯ ತುಣುಕುಗಳು
ಸವೆಸಿ ಮರೆಯುವ ಹಾದಿಕಲ್ಲುಗಳು...

ಒಳ್ಳೆ ಪ್ರತಿಮೆ. ಹೀಗೇ ಬರೆಯುತ್ತಿರಿ.

ನಾವಡ

ವಿಕ್ರಮ ಹತ್ವಾರ said...

ಥ್ಯಾಂಕ್ಯೂ!!

ಕೆಲವು ತಿಂಗಳುಗಳ ಹಿಂದೆ....ಹರಳೆಣ್ಣೆ ಮುಗಿದಿರೆ ಗಾಳಿಯೂ ಮುನಿದಿರೆ...ಅಂತ ತುಟಿಗೆ ಬಂದರೂ ದೀಪ ಉರಿಯಲೇ ಬೇಕು ಎನ್ನುವ ನನ್ನ ಹಠಕ್ಕೋ ಆಸೆಗೋ, `ಒಮ್ಮೆ ಮೂಡಿಸಿ ಹರುಷ ಮೆರೆದಾಳುತಿರು ಸೂತಕ' ಅಂತ ಬರೆದು ಮುಗಿಸಿದ್ದೆ. ಈಗ ಯಾಕೋ ಮತ್ತೆ ದಿಗಿಲು. ದೀಪಕ್ಕೆ ಸೆಟೆದು ನಿಲ್ಲುವ ತ್ರಾಣವಿಲ್ಲ, ಗಾಳಿಯೇ ಕರುಣೆ ತೋರಬೇಕು. ಮತ್ತೊಮ್ಮೆ ಥ್ಯಾಂಕ್ಸ್ !!

Sree said...

wow! ಈ ಪೋಸ್ಟ್ ಪುಣ್ಯ ಮಾಡಿತ್ತು! ನನ್ನ ಮೆಚ್ಚಿನ ಬ್ಲಾಗಿಗರೆಲ್ಲಾ ಬಂದು ಕಮೆಂಟಿಸಿದ್ದೀರ! ಥಾಂಕ್ಯೂ!!
ಶಾಂತಲಾ, ಜ್ಯೋತಿ, ಮನಸ್ವಿನಿ, ನಾವಡ - ನನ್ನ ಗೀಚಾಟದಲ್ಲಿ ಚೆನ್ನ ಅನಿಸಿದ ಸಾಲುಗಳನ್ನ ಹುಡುಕಿ ಒಳ್ಳೆ ಮಾತುಗಳನ್ನ ಬರೆದಿದ್ದಕ್ಕೆ thanks:)
ವಿಕ್ರಮ್, ನಿಮ್ಮ ಮಾಯೆಯ fanಗಳಲ್ಲಿ ನಾನೂ ಒಬ್ಬಳು. ಇಲ್ಲಿ ನೋಡಿ ಖುಷಿಯಾಯ್ತು:) ತ್ರಾಣ ಇಲ್ಲ/ ಇದೆ ಅಂದುಕೊಳ್ಳೋದರಿಂದಲೂ ಸ್ಥಿತಿ ಸ್ವಲ್ಪ ವ್ಯತ್ಯಾಸವಾಗುತ್ತಲ್ಲ್ವಾ?:)

Kiran said...

ಭಾವ = ಒಳಗೆ ಬಿರುಗಾಳಿಗೆ ಸಿಕ್ಕ ಕಿರುಹಣತೆ, beautiful imagery. Made it to one of my noob poem as well
(http://thousandthoughts.blogspot.in/2012/02/blog-post.html). So, Thank you very much!

Unknown said...

ಶ್ರೀರವರೆ, ನಿಮ್ಮ ಪದ ಪುಂಜಗಳ ಜೋಡಣೆಯೇ ಚಂದ.. ನಿಮ್ಮ ಈ ಕವನದ ರೀತಿಯೇ ಅಂದ.... ಇರಲಿ....ನಮಗೆ ನಿಮ್ಮ ಈ ಮೇಲ್ ವಿಳಾಸ ಬೇಕಾಗಿದೆ.. ದಯಮಾಡಿ ದಯಪಾಲಿಸಿ.... ನಾವು ಸಹ ಕನ್ನಡಕ್ಕೆ, ಕನ್ನಡದಲ್ಲಿ ಎನಾದರು ಪ್ರಯತ್ನಿಸಬೇಕೆಂದು ಪಟ್ಟ ಪರಿಶ್ರಮದ ಪಲಶ್ರುತಿಯೇ www.mylifemystory.in or mail me your address, mylifemystory.in@gmail.com
ನಿಮ್ಮ ಬರಹಗಳ ಮುಖ್ಯ ಉದ್ದೇಶ ಜನಗಳ ಆಂತರ್ಯ ತಲುಪುವುದು ಎಂದಾದರೆ pls mail me.

ಪ್ರತಿಯೊಬ್ಬ ಮನುಶ್ಯನಿಗು ತಮ್ಮ ಜೀವನದಲ್ಲಿ ಬದವಲಾವಣೆ ತರುವ ರೀತಿ ಎನಾದರು ಘಟಣೆ/ಸಂದರ್ಬಗಳು ಎದುರಿಸಿರುತ್ತಾನೆ. ಹಾಗು ಅದರಿಂದ ಜೀವನದಲ್ಲಿ ಪಾಠ ಕೂಡ ಕಲಿತಿರುತ್ತಾನೆ. ಇಲ್ಲಿ ಅದನ್ನು ನೀವು ವ್ಯಕ್ತಪಡಿಸಿದರೆ ಅದು ಮತ್ತೊಬ್ಬರಿಗೆ ಪಾಠವಾಗಬಲ್ಲದು ಹಾಗು ಅವರ ಬಾಳಿನಲ್ಲಿ ಕೂಡ ಬದಲಾವಣೆ ತರಬಹುದು.ಅದು ಯಾವುದೇ ವಿಷಯವಾಗಿರಬಹುದು. ಮನಬಿಚ್ಚಿ ಹಂಚಿಕೊಳ್ಳಿ ಹಾಗು ಒದುಗರ ಅಭಿಪ್ರಾಯಗಳನ್ನು ತಿಳಿಯಿರಿ, ಹಾಗು ಎಲ್ಲಾ ರೀತಿಯ ಅಭಿಪ್ರಾಯಗಳನ್ನು ಕೂಲ್ ಆಗಿ ತೆಗೆದುಕೊಳ್ಳಿ, ಇದರಲ್ಲಿ ಕಳೆದು ಕೊಳ್ಳೆದು ಎನು ಇಲ್ಲ..