Wednesday, September 16, 2009

ಮಳೆಯ ಕನಸು

ನಿಂತು ಬೇಸತ್ತು
ಹಳೆಯ ಹೊಳವುಗಳಲ್ಲಿ
ಹರಿಯಬಿಡಬೇಡ;
ಇಳಿ ವರ್ಷಧಾರೆಯಾಗಿ,
ನಿನ್ನ ನಿರೀಕ್ಷೆ
ಹೊಸಹಸಿರಿಗೆ
ಉಸಿರಾಗುವ ಕನಸಿನಲ್ಲಿ...

ಕೀಲಿಮಣೆಯ ಮೇಲೆ ಸವಾರಿ...
ಸುರಿದ ಮುಸಲಧಾರೆಗೆ
ಫಟ್ಟೆಂದ ಟ್ರ್ಯಾನ್ಸ್‌ಫಾರ್ಮರ್!
ಕತ್ತಲ ಮಳೆಯಲ್ಲಿ
ಕವಿತೆ ಮಲಗಿತು
ಕನಸು ಬಿತ್ತಾ?
ಗೊತ್ತಿಲ್ಲ!

10 comments:

ಸಂಕ್ಷಿಪ್ತ said...

ವಿಲಕ್ಷಣವಾಗಿದೆ! ... ಮನಸ್ಸಿಗೆ ಹಿಡಿಸಿತು :). ಈಗಿನ (ಬ್ಲಾಗಿನ) ಕವಿಗಳಿಗೆ ಕೀಲಿಮಣೆಯೇ ಮಾಧ್ಯಮ. ಆದರೆ, ವರ್ಷಧಾರೆಯಾಗಿ ಇಳಿಯಲೇಬೇಕೆಂಬ ಹಂಬಲವಿದ್ದರೆ ಬುಡ್ಡಿದೀಪ, ಪೇಪರ್, ಪೆನ್ನು ಇದ್ದೇ ಇರುತ್ತೆ, ಅಲ್ವಾ :).

ಸಾಗರದಾಚೆಯ ಇಂಚರ said...

ಕತ್ತಲ ಮಳೆಯಲ್ಲಿ
ಕವಿತೆ ಮಲಗಿತು
ಕನಸು ಬಿತ್ತಾ?
ಗೊತ್ತಿಲ್ಲ

ಎಂಥಹ ಅಧ್ಭುತ ಸಾಲುಗಳು,
ಹಿಡಿಸಿತು ಕವಿತೆ

sunaath said...

ಇಂತಹ ಅದ್ಭುತವಾದ ಕವನಕ್ಕೆ ಅದ್ಭುತವಾದ ಕನಸೇ ಕಾರಣವಾಗಿರಬೆಕು ಅಂತೀನಿ!

ಶಾಂತಲಾ ಭಂಡಿ (ಸನ್ನಿಧಿ) said...

Sree...
ಅಂತೂ ಸುಮಾರು ದಿನ ಆದ್ಮೇಲಾದ್ರೂ ಮಳೆ ಬಿತ್ತಲ್ಲಾ, ಜೊತೆಗೆ ಕನಸೂ ಬಿತ್ತಾ? :-)

ಗೌತಮ್ ಹೆಗಡೆ said...

:):)

ಸುಧೇಶ್ ಶೆಟ್ಟಿ said...

Sundaravaada kavanadondige bandideera e baari... abhinandanegalu....

Mundina barahakke nireekshe aagle shuru aagbittide :)

Unknown said...

Nimma Baraha odide aksmathagi,thumbha chennagi barididra... mannasige hidisohage...

Zyroling said...

Idanu oodi... goosebumps yeluva munna, kelavu shabdagala artha kelalu horate... bhayanakawagi layikagi barediruve shree :) you are an inspiration!

Dileep Hegde said...

ಅದ್ಭುತವಾಗಿದೆ... ಕವಿತೆಗೆ ಖಂಡಿತಾ ಕನಸು ಬಿದ್ದಿರತ್ತೆ ಬಿಡಿ.. :)

ಪದ್ಮಾ ಭಟ್ said...

thumbaa channaagide..:)