Monday, September 29, 2008

’ಲವ್ ನೋಟ್‌’ಗಳು-೨

ನೀ ಅಡ್ಡಗೋಡೆಯ ದೀಪವಾದರೆ
ನಾ ಗಾಳಿಯಾಗಿಬಿಡ್ತೀನಿ;)

ಚಂದ್ರನಿಲ್ಲದ ರಾತ್ರಿ ಅನ್ನಿಸ್ತು
ಬೆಳದಿಂಗಳು ಬಿಸಿಲಾಯ್ತಾ ಅಂತ ಗುಮಾನಿ ಬಂತು
ಇನ್ನೊಂದು ಚಂದಿರ ಕಾಣಿಸೋ ಮುಂಚೆ
ನೀನೇ ಬಂದುಬಿಡು;))

(ಖಂಡಿತಾ ಇವತ್ತು ಬರೆದಿದ್ದಲ್ಲ :)) )

10 comments:

L'Étranger said...

ಹಹ್ಹಹ್ಹ! :D

ಅಂತೂ ಹೊಸ ಬ್ಲಾಗ್ ಪೋಸ್ಟ್ ಒಂದು ಬಂತು ನಿನ್ನಿಂದ... ಎಷ್ಟೋ ದಿನದ ನಂತರ!

Sushrutha Dodderi said...

ನೀವ್ ಹಿಂಗೇ ನೋಟು ಪೀಟು ಅಂತ ಎರ್ಡೆರ್ಡೇ ಲೈನ್ಸ್ ಬರ್ದು ಹಾಕ್ತಾ ಇರಿ.. ಗುರ್ರ್ :x

ಮನಸ್ವಿನಿ said...

"ಇನ್ನೊಂದು ಚಂದಿರ ಕಾಣಿಸೋ ಮುಂಚೆ" !!! ಏನ್ ಕಾಲ ಬಂತಪ್ಪ! ;) :D

Susheel Sandeep said...

"ಇನ್ನೊಂದು ಚಂದಿರ ಕಾಣಿಸೋ ಮುಂಚೆ" aMdre muMdina pauRNamige muMce aMtalO illa manaswini avara gumAni nijavO! :P

Jagali bhaagavata said...

ಎಲ್ಲಿಗ್ ಹೋಗ್ತಾನೆ ರೀ ನಿಮ್ಮ ಚಂದಿರ?
ಇನ್ನೊಮ್ಮೆ ನೋಡ್ಕೊಳ್ಳಿ ನಿಮ್ ಹೃದಯಮಂದಿರ!!!

ಅಮಾವಾಸ್ಯೆ, ಹುಣ್ಣಿಮೆ, ಕೃಷ್ಣಪಕ್ಷ, ಶುಕ್ಲಪಕ್ಷ ಅಂತೆಲ್ಲ ಕೇಳಿಲ್ವಾ? ಅದೇ ರೀ, full-moon-ಉ, no-moon-ಉ...ಇನ್ನೊಂದ್ ಸ್ವಲ್ಪ ದಿನ ಅಷ್ಟೆ, ಬಂದ್ಬಿಡ್ತಾನೆ. ಇನ್ನೂ ಬರ್ಲಿಲ್ಲ ಅಂದ್ರೆ missed call ಕೊಡಿ :-)

ಟೀನಾ ಯಾವತ್ತೋ ಬರ್ದಿದ್ದು ನೆನಪಾಯ್ತು - "ಈಗಿನ ಕಾಲದವರಿಗೆ ಕಾಯುವುದೆಂದರೆ ಎಲ್ಲಿಲ್ಲದ ಅವಜ್ನೆ. ಎಲ್ಲವೂ ತಕ್ಷಣ ಆಗಿಬಿಡಬೇಕು...ಫಾಸ್ಟ್-ಫುಡ್, ಇನ್ಸ್ಟಂಟ್ ಕಾಫಿ, ಇ-ಮೈಲ್, ಇನ್ಸ್ಟಂಟ್ ಪ್ರೀತಿ...

Sree said...

l'etranger
:)
ಸುಶ್ರುತ
ಎರಡು+ನಾಕು=ಆರು ಲೈನ್ಸ್:p ನೆಕ್ಸ್ಟ್ ಟೈಮು ತಮ್ಮ್ ಆಜ್ಞೆಯಂತೆ ಎರಡು+ಎರಡು ಲೈನ್ಸ್ ಮಾತ್ರ ಬರಿಯೋಕೆ ಪ್ರಯತ್ನ ಮಾಡ್ತೀನಿ;)
ಮನಸ್ವಿನಿ
ಕೃಷ್ಣಪಕ್ಷ ಇರ್ಬೇಕು:p
ಸುಶೀಲ್
ಅವರವರ ಭಾವಕ್ಕೆ?;) ಪೂರ್ಣಿಮೆನೋ ಹೊಸ ಚಂದ್ರನೋ, ಒಟ್ಟ್ನಲ್ಲಿ ನಂ ಚಂದ್ರ ಬರಕ್ಕೆ ಒಟ್ಟಿನಲ್ಲಿ ಒಂದು ಡೆಡ್‌ಲೈನು:D
ಭಾಗ್ವತ್ರೇ
ನಿಮ್ಮಂಥ ಬುದ್ಧಿವಂತ್ರಿಗಾಗಿ ಕನ್ನಡ ಫಿಲ್ಮ್ ಇಷ್ಟೈಲಿನಲ್ಲಿ tag line/disclaimer ಹಾಕಿದೀನಲ್ಲಪಾ, ಇವತ್ತು ಬರೆದಿದ್ದಲ್ಲ ಅಂತ:))

chetana said...

aparoopakke heege ereDeraDE sAlu baredu namma baayaarike hechchisteeri neevu!
chennagive.

nalme,
Chetana

Anonymous said...

Tumba chennagide..
The disclaimer says its an old one, so chandra barokke haakidda deadline mugithe?

Sree said...

ಚೇತನಾ, ವೀಣಾ ಥ್ಯಾಂಕ್ಯೂ:)
ಚೇತನಾ, ಮತ್ತೊಂದು ಪೋಸ್ಟ್ ಆಗ್ಲೇ ಬರೆದುಬಿಟ್ಟೆ!:p
ವೀಣಾ,:)

Ranjita said...

ಅರ್ಥಪೂರ್ಣ ಸಾಲುಗಳು .. ತುಂಬಾ ಇಸ್ಟವಾಯ್ತು ... ಎರಡೋ ನಾಲ್ಕೋ ಒಟ್ಟಲ್ಲಿ ಚಂದ್ರನ ಮೇಲೆ ಹೀಗೆ ಚಂದದ ಸಾಲುಗಳು ಬರ್ತಾ ಇರ್ಲಿ ... :)