ಅಪಾರ್ಟ್ಮೆಂಟಿನ ಬಾಗಿಲಿಗೆ ತೋರಣ ಕಟ್ಟಿ ರಂಗೋಲೆಯಿಟ್ಟು, ಹಬ್ಬಕ್ಕೆ ನಮ್ಮ ಅಮ್ಮನ ತಲೆಮಾರನ್ನೂ ಮೀರಿಸೋ ಹಾಗೆ ಒಬ್ಬಟ್ಟು ತಟ್ಟುತ್ತಾ ನಮ್ಮತನದಲ್ಲಿ ಸಂಭ್ರಮ ಕಂಡುಕೊಳ್ಳೋ ಈ ಹುಡುಗಿ ಕಾಲೇಜು ದಿನಗಳಿಂದ ಉಳಿದುಬಂದಿರೋ ಕೆಲವೇ ಆತ್ಮೀಯ ಗೆಳೆಯ-ಗೆಳತಿಯರಲ್ಲಿ ಒಬ್ಬಳು. ಹೊಸತರ ಬಗ್ಗೆ ಸದಾ ಕುತೂಹಲ, ಏಳುಬೀಳುಗಳನ್ನೆಲ್ಲ ದಾಟಿ ನಿಲ್ಲೋ ಸ್ಫೂರ್ತಿ, self-made ದಿಟ್ಟತನ, ಜೊತೆಗೊಂದಿಷ್ಟು ಕವಿಮನಸು, ಕನಸುಗಳು - ಹೇಮಾ ಇಷ್ಟವಾಗೋಕೆ ಇನ್ನೂ ಕಾರಣಗಳು ಬೇಕಾ?:)
ಕಾರ್ಪೊರೇಟ್ ಕಲರವಗಳ ಮಧ್ಯೆ ಕನ್ನಡದ ಕಂಪು ಹಂಚೋ ಕೆಲಸವನ್ನೂ ಮಾಡ್ತಿರೋ ಹೇಮಾ ಈಗ ಗುಬ್ಬಚ್ಚಿಗೂಡಿನ ಅತಿಥಿಗಳನ್ನ ಬೆಂಗಳೂರಿನ ಒಂದು ಮುದ್ದಾದ ದೇವಸ್ಥಾನಕ್ಕೆ ಕರೆದುಕೊಂಡುಹೋಗ್ತಿದ್ದಾಳೆ. ಮಾಲ್-ಪಬ್ಬುಗಳಲ್ಲಿ ಕಳೆದುಹೋಗ್ತಾನೋ ಅಥ್ವಾ ಬೆಂಗಳೂರಂದ್ರೆ ಅಷ್ಟೇ ಅಂತ ಶಪಿಸ್ತಾನೋ ಇರೋ ಜನರಿಗೆ ಬೆಂಗಳೂರಿನ ಇನ್ನೊಂದು ಮುಖದ ಪರಿಚಯ ಮಾಡಿಕೊಳ್ಳೋ ಒಳ್ಳೇ ಅವಕಾಶ ಇದು. ಈ ಹಿಂದೆ ಪಟದ ಹಬ್ಬದ ಬಗ್ಗೆನೂ ಗುಬ್ಬಚ್ಚಿ ಗೂಡಲ್ಲಿ ಚಿಲಿಪಿಲಿ ನಡೆದಿತ್ತು. ಮುಂದೆನೂ ಇನ್ನಷ್ಟು ಈ ಥರದ ಪರಿಚಯಗಳು ಗುಬ್ಬಚ್ಚಿ ಗೂಡಿನಲ್ಲಿ ಬರುತ್ವೆ ಅಂತ ಹೇಮಕ್ಕ ಪ್ರಾಮಿಸ್ ಮಾಡ್ತಿದಾಳೆ.
ಓದಿ ಎರಡು ಸಾಲು ಅನಿಸಿಕೆ ಹಂಚಿಕೊಂಡ್ರೆ ಖುಷಿಯಾಗ್ತಾಳೆ:)
4 comments:
Thank you kane hudugi ,
suLLu yaake heLali, edhe ubbi banthu.
devagiri mattu dharmagiri bagge ninu kotta mahiti hennaagittu.hige
be0galurina bagge hechchina vishayagalannu tilisuttaa iru.
anil
ಗಿಡಗಳೆಲ್ಲಾ ಒಣಗಿ ಹೋಗ್ತಿವೆ
ಅಯ್ಯೋ ಪಾಪ - ಹೂವಿನ ಮುಖ ನೋಡೋಕ್ಕಾಗಲ್ಲ
ಎಲ್ಲಿ ಹೋದ್ರಿ ಶ್ರೀಮಾತಾ ಅವರೇ
atleast ಒಂದು ಆಲಾಪನೆ ಆದರೂ ಮಾಡಿ, ತರು ಲತೆಗಳೆಲ್ಲಗಳಿಗೂ ಜೀವ ಮರಳಿ ಬರಲಿ :)
ಗುರುದೇವ ದಯಾ ಕರೊ ದೀನ ಜನೆ
ಹೇಮ ಹೆಸರಿನವರೆಲ್ಲಾ ಹೀಗೇನಾ ? [ನಗು, ನನ್ನ ಅರ್ಧಾಂಗಿನಿಯ ಹೆಸರು ಇದೆ. ಅವಳು ಇಂಥ ಬೆಂಗಳೂರಲ್ಲೂ ಪಕ್ಕ ಕುತೂಹಲಕಾರಿ, ಸ್ವಲ್ಪ ಹಳ್ಳಿಯ ಮುಗ್ದತನ]
ಶಿವು.ಕೆ
ನಮ್ಮ ಬ್ಲಾಗಿಗೊಮ್ಮೆ ಬನ್ನಿ.
Post a Comment