೧೫X೪೦ ಸೈಟಿನ ಎರಡನೇ ಮಹಡಿಯಲ್ಲಿ
ಆಗೊಂದು ಈಗೊಂದು ಅರಳೋ ಜಾಜಿ ಹೂವು
ಹಳೆಯ ಕಡತಗಳಲ್ಲಿ ಕಳೆದುಹೋಗಬಿಡಬೇಡ
ಬೇಗ ಫೈಲ್ ಪಾಸ್ ಮಾಡು
ಪ್ಲಾನೆಟೇರಿಯಂ ಸರ್ಕಸ್
ಅಡ್ವೆಂಚರ್ ಪಾರ್ಕು ನೋಡಾಯ್ತು
ಮನೆಗೆ ಹೋಗೋದು ಯಾವತ್ತು?
ಕನಸು ಮಾರುವ ಚೆಲುವ ಹಾಡ ನಿಲ್ಲಿಸಬೇಡ*
ನಿಲ್ಲಿಸೋ ಪ್ಲ್ಯಾನ್ ಇದ್ರೆ ಹಾಡೋಕೇ ಹೋಗಬೇಡ!
ಹೂವಿಂದ ಹೂವಿಗೆ ಹಾರುವ ದುಂಬಿ*
ಹೊಸ ಇನ್ಸೆಕ್ಟಿಸೈಡ್ ತಂದಿಟ್ಟಿದೀನಿ
(ಇದನ್ನ ಕವಿತೆ ಅಂತಲೋ ಚುಟುಕ ಅಂತಲೋ ಖಂಡಿತಾ ಕರಿಯೋಕಾಗಲ್ಲ, ಗೊತ್ತು:)) ಸ್ವಲ್ಪ ತರಲೆ ಮೂಡ್ ಇದ್ದಾಗ ಬರೆದಿರೋ ಸಾಲುಗಳು ಅಷ್ಟೇ, ತುಂಬಾ ಚೆನ್ನಾಗಿವೆ ಅನ್ನೋ ಭ್ರಮೆ ನನಗೇ ಇಲ್ಲ... ಸೋ ನೀವು ಬಲವಂತ್ವಾಗಿ ’ಚೆನ್ನಾಗಿದೆ’ ಅನ್ಬೇಡಿ, ನಿಮಗೆಲ್ಲ ನನ್ನ ಮೇಲೆ ಪ್ರೀತಿ ಇದೆ ಅಂತ ಗೊತ್ತು!:) )
*ಮೂಲ ಕವಿಗಳ ಕ್ಷಮೆ ಯಾಚಿಸುತ್ತಾ...
19 comments:
ಅರೆರೆ ಏಲ್ಲೋಗಿದ್ದ್ರೀ ಇಷ್ಟ್ ದಿನ...? ಇಂಥ ನವಿಲುಗರಿಗಳನ್ನು ಅದೆಲ್ಲಿ ಹೆಕ್ಕಿ ತಂದಿರಿ? ಮೂಲಕವಿಗಳನ್ನು ಮೂಲೆಗೆ ಸರಿಸುವಷ್ಟು ಚನ್ನಾಗಿವೆ. ಇರಲಿ ಬಹಳ ದಿನಗಳ ಮೇಲೆ ಕಾಣಿಸಿಕೊಂಡರೆ ದೃಷ್ಟಿ ತೆಗೀಬೇಕಾಗುತ್ತೆ! ಸ್ವಲ್ಪ ಮರೆಯಲ್ಲಿರಿ, ಆರತಿ ಮಾಡಲು ಜನ ಕಾಯ್ತಿದ್ದಾರೆ.
Enu life's happeningaa? ;)
hm hmm hmmm.. :)
pApada duMbige hosA insecticide kAytide annO viShAdada aMtya!! che paapa :P
innaShTu baravaNige barali
ಮೇಲಿನ ಕವಿತೆಗಿಂತ ಕೆಳಗಿನ ಸಾಲುಗಳೇ ಇಷ್ಟವಾದ್ದರಿಂದ ಅವು ಚೆನ್ನಾಗಿವೆ ಅನ್ನದೆ ಇರಲು ಆಗಲಿಲ್ಲ, ಚೆನ್ನಾಗಿದೆ.
ಬರೆಯುತ್ತಿರಿ.
ಧನ್ಯವಾದಗಳು.
ಜೋಮನ್.
ಹೂವಿಂದ ಹೂವಿಗೆ ಹಾರುವ ದುಂಬಿ*
ಹೊಸ ಇನ್ಸೆಕ್ಟಿಸೈಡ್ ತಂದಿಟ್ಟಿದೀನಿ....
hahahahaha...just wonderful....
ತುಂಬಾssss ಚೆನ್ನಾಗಿವೆ. ಇಲ್ಲಾಂತ ಯಾಕ್ ತಿಳ್ಕೋತೀರಿ?
too cool, too good
ಚನ್ನಾಗಿ ಬರೆದಿದ್ದೀರ ಅದಕ್ಕೆ ಚನ್ನಾಗಿದೆ ಅಂತ ಹೇಳಲೇಬೇಕಾಗಿದೆ.
ಇದನ್ನ ಕವನ ಅ೦ತ ಖ೦ಡಿತಾ ಕರೆಯೋದಿಲ್ಲ. ಆದರೆ ಈ ಕವನ (?) ಮನಸ್ಸಿಗೆ ಖುಷಿ ಕೊಟ್ಟಿದ್ದ೦ತೂ ತು೦ಬಾ ಸತ್ಯ.
ಅ೦ದ ಹಾಗೆ ನೀವು ಯಾಕೆ ಬರಹಗಳನ್ನು ಬರೆಯದೇ ನಮ್ಮನ್ನು ಸತಾಯಿಸ್ತೀರಾ?
ohohohoho! bharjari sarjari:) maja ide kanri! cute lines!
ಒಂದಷ್ಟು ಸೋಮಾರಿತನನ ಪಕ್ಕಕ್ಕಿಟ್ಟು(ದಾನ ಮಾಡಿಯಾದ್ರು) ನೀವು ಬರಿಯಂಗಾಗಲಿ ಜಲ್ದಿ :)ಇದು ನಮ್ಮ ಹಾರೈಕೆ.
-ಅಮರ
sree...
ಎಲ್ಲ ಸಾಲುಗಳೂ ಸೂಪರು....ಇಷ್ಟವಾದ್ವು :)
ಬದುಕು ಕಾವ್ಯಕ್ಕಿಂತ ದೊಡ್ಡದು ಅಂತಾರೆ.
ನೀವು ಇಲ್ಲಿ ಬರೆದಿರುವವು ಕವಿತೆಯ ನೆನಪದಲ್ಲಿ ಬದುಕಿನಲ್ಲಿ ಎಲ್ಲೋ ಕೈಜಾರಿ ಹೋಗಬಹುದಾದ ಸೂಕ್ಷ್ಮ ಕ್ಷಣಗಳು. ಹಪಹಪಿಕೆಗಳು..
ಕವಿತೆ ತುಂಬಾ ಎಷ್ಟೊಂದು ಚಿತ್ರಗಳಿವೆ ನೋಡಿ. ಪುಟ್ಟ ಮನೆ, ಅರಳು ಹೂ, ಫೈಲು, ವಾರದ ರಜೆ, ಜೊತೆಗಾರ...
ಅಭಿವ್ಯಕ್ತಿ ನಿಮ್ಮದು, ಗ್ರಹಿಕೆ ನಮ್ಮದು..
ಕನಸು ಮಾರುವ ಚೆಲುವ ಹಾಡ ನಿಲ್ಲಿಸಬೇಡ
ನಿಲ್ಲಿಸೋ ಪ್ಲ್ಯಾನ್ ಇದ್ರೆ ಹಾಡೋಕೇ ಹೋಗಬೇಡ!
ಈ ಸಾಲುಗಳು ಇಷ್ಟವಾದವು...:-)
ನೋಟ್ ಕಳೆದೇ.. ಹೋಗಿದೆಯಲ್ರಿ.....
abbaba adbhuta !!! yellinda bantu e idea,
yaarige ee message,yaru aa dumbi paapa
ಹಾಡೋದ ನಿಲ್ಲಿಸಿದ್ರೆ ಕನಸೆಲ್ಲಿ ಬಿಕರಿಯಾಗುತ್ವೆ?
ಅಂದ ಹಾಗೆ ನೀವ್ಯಾಕೆ ನೋಟ್ಸ್ ಮಾಡೋದ್ ನಿಲ್ಸಿದ್ದು. ಒಂದು ತಿಂಗಳಾಯ್ತಲ್ಲ.
ರವೀ,
ಹ್ಹೆ ಹ್ಹೆ ಮರೆಯಲ್ಲಿ ಒಂದು ತಿಂಗ್ಳು ಕೂತಿದ್ದೆ, ಯಾರೂ ಆರತಿ ಮಾಡೋಕೇ ಬರಲಿಲ್ಲ! ಸದ್ಯ ಮಂಗಳಾರತೀನೂ ಮಾಡ್ಲಿಲ್ಲ ಅನ್ನಿ:))
ಸುಶ್ರುತ,
ಏನ್ ಹಂಗಂದ್ರೆ?:P
ಸುಶೀಲ್, ಆದರ್ಶ್
ಹುಡುಗ್ರಿಗೆಲ್ಲಾ ದುಂಬಿಯ ಮೇಲೇ ಕನಿಕರ!! ಏನ್ ಹುಡುಗ್ರೋ!!
ವೇಣುವಿನೋದ್
:P :D
ಜೋಮನ್, ಸುನಾಥ ಕಾಕಾ,ಕಿರಣ್, ಮನಸ್ವಿ, ಶ್ರೀನಿಧಿ, ಶಾಂತಲಾ
ಥ್ಯಾಂಕ್ಸು, ನೀವೆಲ್ಲಾ ಹಿಂಗೇ ಹೇಳ್ತೀರ ಅಂತ ಗೊತ್ತಿತ್ತು:p
ಸುಧೇಶ್, ಅಮರ, ದಿನೇಶ್,
ಬರೀಬೇಕು ಅಂದ್ಕೊತಾನೇ ಇರ್ತೀನಿ, ಆದ್ರೂ ಯಾಕಎಹ್ೀಗಾಗುತ್ತೋ ಗೊತ್ತಿಲ್ಲ:P ನೀವ್ಗಳು ಬಯ್ಯೋದು ಸಾಲದೇನೋ:P ಅಮರ, ಸೋಮಾರಿತನಾನ ಯೆಂಗೆ ಪಕ್ಕಕ್ಕಿಡೋದು? ಗೊತ್ತಿದ್ರೆ ಹೇಳಿ ಪುಣ್ಯ ಕಟ್ಕೊಳಿ:D
ಅಲೆಮಾರಿಗಳಿಗೆ ಸ್ವಾಗತ:) ಏನೋಪ, ತರ್ಲೆ ಕ್ಷಣಗಳ ಗೀಚಾಟ...ಬದುಕು, ಹಪಹಪಿಕೆ ಎಲ್ಲಾ ಗೊತ್ತಿಲ್ಲ:))
ಸಿಮ್ಮಾ
ಕನಸು ಬಿಕರಿಯಾಗ್ಬೇಕು ಅಂದ್ರೆ ಪರ್ಮನೆಂಟ್ ಸಪ್ಲೈ ಇರ್ಬೇಕು ಅಂತ ಅಷ್ಟೇ ಕಂಡಿಶನ್ನು, ಅದು ಓಕೆ ಅಂದ್ರೆ ಎಷ್ಟು ಹಾಡು ಬೇಕಾದ್ರೂ ಹಾಡ್ಕೊಬಹುದು;)
ಒಂದು ತಿಂಗಳೊಳಗೆ ಅಟೆಂಡೆನ್ಸ್ ಹಾಕ್ಬಿಟ್ಟೆ!:P
ಅಯ್ಯೋ! ಪರಾಗಸ್ಪರ್ಶವೇ ತನ್ನ ಜೀವನದ ಪರಮಗುರಿ ಅಂತ ನಂಬಿಕೊಂಡಿರೋ ಪಾಪದ ದುಂಬಿಗೆ ಇನ್ಸೆಕ್ಟಿಸೈಡ್ (ಅದೂ ಹೊಸಾದು!) ಇಟ್ಟಿರುವಾಗ ಕನಿಕರ/ಸಿಂಪತಿ ಬೇಕೇಬೇಕಪ್ಪ! :)
ವೆಲ್ಕಂ ಬ್ಯಾಕು
hoovinda hoovige haaruva dumbige
insecticidena bhayave??
oorinda oorige haaruva hakkige
sarahaddina parive?
Post a Comment