Sunday, May 04, 2008

ನಮ್ಮ ಮೆಚ್ಚಿನ ಬ್ಲಾಗುಗಳಲ್ಲಿ ಹೊಸ ಪೋಸ್ಟುಗಳಿವೆಯಾ? : ಗೂಗಲ್ ರೀಡರ್ ಬಗ್ಗೆ ಪುಟ್ಟ ಪರಿಚಯ

ಶ್ರೀನಿಧಿಯ ಬ್ಲಾಗ್ ಅಪ್‌ಡೇಟ್ ಮೈಲ್‌ಗಳನ್ನ ನೋಡಿದಾಗ್ಲೆಲ್ಲ ಅಂದುಕೋತಿದ್ದೆ, ಈ ಬಗ್ಗೆ ಬರೀಬೇಕು ಅಂತ. ಇವತ್ತು 'ಮನಸು ಮಾತಾಡ್ತಿದೆ’ಯ ಶ್ರೀ ಕೂಡ ಇನ್ಮೇಲೆ ಬ್ಲಾಗ್ ಅಪ್ಡೇಟ್ ಮೈಲ್ ಕಳಿಸ್ತೀನಿ ಅಂತ ಮೈಲ್ ಮಾಡಿದಾಗ ಇವತ್ತು ಬರೆದೇ ಬಿಡ್ತೀನಿ ಅಂತ ಕೂತೆ. ಯಾವ್ದರ್ ಬಗ್ಗೆ ಅಂತಿದೀರಾ? ನಮ್ಮ ನೆಚ್ಚಿನ ಬ್ಲಾಗುಗಳು, ವೆಬ್‌ಸೈಟುಗಳಲ್ಲಿ ಹೊಸ ಪೋಸ್ಟ್‌ಗಳು ಬಂದ್ರೆ ಪತ್ತೆ ಇಡೋ ಸುಲಭವಾದ ವಿಧಾನ - ಗೂಗಲ್ ರೀಡರ್ ಬಗ್ಗೆ. ಹಲವು ಬ್ಲಾಗಿಗರು ಇದನ್ನ ಆಗ್ಲೇ ಉಪಯೋಗಿಸ್ತಿದಾರೆ, ಆದ್ರೆ ಇನ್ನೂ ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ ಅನ್ನಿಸಿದ್ದರಿಂದ ಈ ಪೋಸ್ಟ್. ತುಂಬಾ ಟೆಕ್ನಿಕಲ್ ಆಗಿ ಹೇಳೋದಕ್ಕೆ ನಂಗೆ ಅಷ್ಟು ವಿಷ್ಯ ಗೊತ್ತೂ ಇಲ್ಲ, ಎಲ್ಲರಿಗೂ ಅವಶ್ಯಕವೂ ಅಲ್ಲ ಅನ್ನಿಸತ್ತೆ. ಉಪಯೋಗದ ದೃಷ್ಟಿಯಿಂದ ಎಷ್ಟು ಬೇಕೋ ಅಷ್ಟು ಹೇಳ್ತೀನಿ, ಮಿಕ್ಕಿದ್ದಕ್ಕೆ ಇದ್ದೇ ಇದೆಯಲ್ಲ, ಗೂಗಲೋಪನಿಷದ್!(ಸುಪ್ತದೀಪ್ತಿಯವರ ಪದ!)

ಜಿಮೈಲ್ ಅಕೌಂಟ್ ಇದ್ದವರೆಲ್ಲಾ ಲಾಗ್ ಇನ್ ಆದಾಗ ಕಂಪ್ಯೂಟರ್ ಪರದೆಯಲ್ಲಿ ನಿಮ್ಮ ಎಡ ಮೇಲ್ತುದಿಯಲ್ಲಿ ಆರ್ಕುಟ್ ಇತ್ಯಾದಿ ಗೂಗಲ್‌ನ ಇತರ ಸೌಲಭ್ಯಗಳಿಗೆ ಜಿಮೈಲ್ ಅಕೌಂಟಿನಿಂದಲೇ ನೇರವಾಗಿ ಹೋಗುವ ಬಗ್ಗೆ ನೋಡಿರಬಹುದು. ಈ ಸಾಲಿನಲ್ಲೇ ರೀಡರ್ ಅಂತಲೂ ಒಂದು ಟ್ಯಾಬ್ ಇರುತ್ತೆ. ಅಲ್ಲಿ ಹೋಗಿ ನಿಮ್ಮ ರೀಡರ್ ಅಕೌಂಟ್ ಪ್ರಾರಂಭಿಸಬಹುದು. ರೀಡರ್ ಒಳಹೊಕ್ಕಮೇಳೆ ’ಆ‍ಯ್‌ಡ್ ಸಬ್ಸ್ಕ್ರಿಪ್ಶನ್’ ಅನ್ನುವ ಕಡೆ ನಿಮ್ಮ ನೆಚ್ಚಿನ ಬ್ಲಾಗ್/ ವೆಬ್ಸೈಟುಗಳ ಯು ಆರ್ ಎಲ್ ಒಂದೊಂದಾಗಿ ಸೇರಿಸುತ್ತಾ ಹೋಗಬಹುದು. ಹೀಗೆ ಸೇರಿಸಿದಮೇಲೆ ಆ ಸೈಟ್ ಅಥವಾ ಬ್ಲಾಗಿನಲ್ಲಿ ಹೊಸತೇನಾದರೂ ಪ್ರಕಟವಾದಾಗ ನಿಮ್ಮ ರೀಡರ್ ಅಕೌಂಟಿನ ಇನ್‌ಬಾಕ್ಸಿಗೆ ಆ ಬಗ್ಗೆ ಸೂಚನೆ ಬರುತ್ತೆ. ಹೊಸ ಪೋಸ್ಟುಗಳನ್ನ ಹುಡುಕಿ ಅಲೆಯೋದು, ಅಥ್ವಾ ನೋಡದೇ ಮಿಸ್ ಮಾಡೋದು ಇದ್ರಿಂದ ತಪ್ಪುತ್ತೆ. (ನನ್ನಂಥಾ ಸೋಂಬೇರಿ ಬ್ಲಾಗಿಗರ ತಿಂಗಳೆರಡು ತಿಂಗಳಿಗೆ ಬರೋ ಪೋಸ್ಟ್‌ಗಳ ನಿರೀಕ್ಷೆಯಲ್ಲಿ ನಮ್ಮ ಬ್ಲಾಗುಗಳಿಗೆ ವ್ಯರ್ಥ ತೀರ್ಥಯಾತ್ರೆ ಮಾಡೀ ಮಾಡೀ ಸೋತುಹೋಗೋದು ತಪ್ಪುತ್ತೆ!:P)

ಇದಕ್ಕೆ ಬ್ಲಾಗ್ ಅಥವಾ ಸೈಟಿನ ಮಾಲೀಕರು feed enable ಮಾಡಿರುವುದು ಅಗತ್ಯ. (ಬ್ಲಾಗರ್‌ನಲ್ಲಾದರೆ ಸೆಟಿಂಗ್ಸ್‌ನಲ್ಲಿ ಸೈಟ್‌ಫೀಡ್ ಅಂತಿರೋಕಡೆ ಕ್ಲಿಕ್ಕಿಸಿ ಇದನ್ನು enable ಮಾಡಬಹುದು.) ಸಾಮಾನ್ಯವಾಗಿ ಬ್ಲಾಗರ್, ವರ್ಡ್‌ಪ್ರೆಸ್‌‌ಗಳಲ್ಲಿರೋ ಬ್ಲಾಗುಗಳಲ್ಲಿ ಮುಂಚೆಯಿಂದಲೇ feed enable ಆಗಿರುತ್ತೆ ಅನ್ಸುತ್ತೆ. (ವರ್ಡ್‌ಪ್ರೆಸ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲ, ಆದ್ರೆ ಇಲ್ಲಿಯವರೆಗೆ ಯಾವ ವರ್ಡ್‌ಪ್ರೆಸ್ ಬ್ಲಾಗಿಗೆ ಸಬ್ಸ್ಕೈಬಿಸುವಾಗಲೂ ತೊಂದರೆಯಾಗಿಲ್ಲವಾದ್ದರಿಂದ ಹೀಗಿರಬಹುದು ಅಂತ ಹೇಳ್ತಿದ್ದೀನಷ್ಟೆ.) ಮುಕ್ಕಾಲು ಪಾಲು ವಬ್‌ಸೈಟುಗಳೂ ತಮ್ಮ ಹೊಸ ಪೋಸ್ಟುಗಳಿಗೆ ಹೀಗೆ feed enable ಮಾಡಿರುತ್ವೆ. ನಮ್ಮ ಕನ್ನಡದ ದಟ್ಸ್‌ಕನ್ನಡ, ಸಂಪದ - ಇವೆಲ್ಲ ಆ ಸಾಲಿಗೆ ಸೇರುವಂತಹವು. ಕೆಂಡಸಂಪಿಗೆಗೆ ಹೊಸ ಅವತಾರದಲ್ಲಿ feed enable ಮಾಡಿಲ್ಲ. ಪ್ರತೀಸಲ ಅಪ್‍ಡೇಟ್ ಆಗಿದೆಯೋ ಇಲ್ವೋ ನಾವೇ ಆ ಸೈಟಿಗೆ ಹೋಗಿ ಹುಡುಕಿ ನೋಡಿಕೊಳ್ಳಬೇಕು.

ರೀಡರ್ ಉಪ್ಯೋಗಿಸೋಕೆ ಷುರು ಮಾಡಿದ ಮೇಲೆ ನಮಗಿಷ್ಟವಾದ ಪೋಸ್ಟುಗಳನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳೋದೂ ಸುಲಭ. ಇದಕ್ಕೆ ಮೂರು ದಾರಿಗಳಿವೆ- ಒಂದು, ಯಾವುದೇ ಪೋಸ್ಟ್ ಓದಿದ ಕೂಡ್ಲೆ ರೀಡರ್‌ನಿಂದಲೇ ನಿಮ್ಮ ಗೆಳೆಯರಿಗೆ ಅದನ್ನು ಮೈಲ್ ಮಾಡಬಹುದು. ಎರಡು - ರೀಡರ್‌ನಲ್ಲಿ ಬರೋ ಹೊಸ ಪೋಸ್ಟ್‍ಗಳಲ್ಲಿ ನಿಮ್ಮ ಮೆಚ್ಚಿನವುಗಳನ್ನ ’ಶೇರ್’ ಮಾಡುವ ಆಯ್ಕೆ ಕ್ಲಿಕ್ಕಿಸಿದ್ರೆ ರೀಡರ್ ಅಕೌಂಟಿನಿಂದ ನಿಮ್ಗೆ ಸಿಗೋ ಪಬ್ಲಿಕ್ ಪೇಜಿನಲ್ಲಿ ಈ ಪೋಸ್ಟುಗಳು ಕಾಣಿಸಿಕೊಳ್ಳುತ್ವೆ. ಇದೊಂಥರಾ public list of your favourite reads ಅನ್ನಬಹುದು. ಇದಕ್ಕೇ ಪ್ರತ್ಯೇಕವಾದ ಯೂಆರೆಲ್ ಇದ್ದು, ನಿಮ್ಮ ಸ್ನೇಹಿತರು ಇಲ್ಲಿ ಬಂದು ನಿಮ್ಮ ಇತ್ತೀಚಿನ ಮೆಚ್ಚಿನ ಬರಹಗಳನ್ನು ಓದಬಹುದು. ನನ್ನ ರೀಡರ್ ಪೇಜ್ ಇಲ್ಲಿದೆ: http://www.google.com/reader/shared/user/16208109501848855281/state/com.google/broadcast

ಹಾಂ ಈ ಪುಟದಲ್ಲೇ get started with google reader ಅನ್ನೋ ಲಿಂಕನ್ನು ಕ್ಲಿಕ್ಕಿಸಿ ನಿಮ್ಮ ರೀಡರ್ ಯಾತ್ರೆ ಪ್ರಾರಂಭಿಸಬಹುದು:)
ಮೂರನೇದಾಗಿ, ಈ ಪಟ್ಟಿಯನ್ನು ನಿಮ್ಮ ಬ್ಲಾಗಿನಲ್ಲೂ ಹಾಕಿಕೊಳ್ಳಬಹುದು. ಹಲವು ಬ್ಲಾಗಿಗರು ಈ ಥರದ ಪಟ್ಟಿಗಳನ್ನ ತಮ್ಮ ಬ್ಲಾಗ್‌ಗಳಲ್ಲಿ ಹಾಕಿಕೊಂಡಿದ್ದಾರೆ. ನನ್ನ ಈ ಬ್ಲಾಗಿನಲ್ಲಿ ’Sree's shared items' ಅನ್ನುವ ಹೆಸರಲ್ಲಿ ಈ ಪಟ್ಟಿ ಇದೆ.

ಸರಿ, ಜಾಸ್ತಿ ತಲೆತಿನ್ನೋಕೆ ಹೋಗಲ್ಲ, ಉಪಯೋಗಿಸ್ತಾ ಹೋದಹಾಗೆ ಅದರ ವ್ಯಾಪ್ತಿ ನಿಮ್ಗೇ ಗೊತ್ತಾಗುತ್ತೆ. happy reading!:)

27 comments:

Harisha - ಹರೀಶ said...

ಒಳ್ಳೆ ಕೆಲ್ಸ ಮಾಡಿದೀರಿ :) ನಾನೂ ಈ ಹಿಂದೆ ನನ್ನ ಬ್ಲಾಗ್ ನಲ್ಲಿ ಇದೇ ಥರದ ಆರ್ಟಿಕಲ್ ಬರ್ದಿದ್ದೆ...

Gururaja Narayana said...

ಶ್ರೀ - Thanks! ಗೂಗಲ್ ರೀಡರ್ ಬಗ್ಗೆ ಬರೆದಿದ್ದಕ್ಕೆ. ನಾನು ಸ್ವಲ್ಪ ದಿನ IE 7.0 browser ನಲ್ಲಿರೊ 'RSS Feeds' option ಉಪಯೋಗಿಸ್ತಿದ್ದೆ. Browser open ಮಾಡಿದ ತಕ್ಷಣ ಹೊಸದೇನಿದ್ರೂ ಗೊತ್ತಾಗೋದು. ಆಮೇಲೆ office ಕೆಲಸಕ್ಕೆ MS Outlook 2007 ಉಪಯೋಗೆಸೋಕೆ ಶುರು ಆದ ಮೇಲೆ ಹೊಸ blog update ಎಲ್ಲಾ e-mail ತರ inbox ಗೆ ಬರೊಕೆ ಶುರು ಆಯ್ತು. ಆದ್ರೆ ಈ 'ಇಷ್ತಾ ಆದ ಬರಹನ ಮಾರ್ಕ್ ಮಾಡಿ ಇಟ್ಟ್ಕೊಳ್ಳೋದು, PUBLIC ಆಗಿ share ಮಾಡೊ' option ಚೆನ್ನಾಗಿದೆ. Google Reader ಉಪಯೋಗಿಸಿ ನೋಡ್ತೀನಿ.

ಗುರು

ಶ್ರೀನಿಧಿ.ಡಿ.ಎಸ್ said...

:)!
ಅಲ್ಲಾ, ಇದರರ್ಥ, ಮೇಲ್ ಕಳ್ಸೋದು ಬೇಡ ಅಂತ್ಲಾ?:) ನಾನು ರೀಡರ್ ಉಪಯೋಗಿಸೋಕೆ ಅನಾದಿ ಕಾಲದಲ್ಲೇ ಶುರು ಮಾಡಿದ್ದೇನೆ.. :)

Sree said...

ಹರೀಶ್,
ಓಹ್ ನಿಮ್ಮ ಪೋಸ್ಟ್ ನೋಡಿರಲಿಲ್ಲ...ಹಿಂದೆ ಫೀಡ್‌ಬರ್ನರ್ ಉಪಯೋಗಿಸೋಕೆ ಹೋಗಿ ತಲೆಕೆಡ್ಸ್ಕೊಂಡಿದ್ದೆ! ಸದ್ಯ ರೀಡರ್ ಬಂತು!:)
ಗುರು,
ಹಾ, sharing ಇಲ್ಲಿ ಸುಲಭ...
ಶ್ರೀನಿಧಿ,
ನಾನು ಅನಾದಿಕಾಲದಲ್ಲೇ ನಿಮ್ಮ ಬ್ಲಾಗಿಗೆ ಸಬ್ಸ್ಕ್ರೈಬಿಸಿದ್ದೀನಿ ಸಾರ್:)ಇಷ್ಟರ್ ಮೇಲೆ ಒಂದು ಅಪ್‍ಡೇಟ್ ಮೈಲ್ ಬಂದ್ರೆ ನನ್ನ್ ಇನ್‍ಬಾಕ್ಸೇನೂ ಕೊಚ್ಚಿಹೋಗಲ್ಲ, so its ur call;)) ನನ್ನ ಸೋಮಾರಿತನಕ್ಕೆ ನಾನು ಬರೆಯೋದೇ ಹೆಚ್ಚು, ಬರೆದಿದ್ದೀನಿ ನೋಡಿ ಅಂತ ಹೇಳೋಕೆ ಮೈಲ್ ಕಳ್ಸೋದು ದೂರದ ಮಾತು:))ಆದ್ರಿಂದ ನನ್ನ ಓದುಗವೃಂದ ರೀಡರಿಗೇ ಷರಣಾಗಿಬಿಟ್ರೆ ಅನುಕೂಲ ಅಂತ ಹೇಳಿದ್ದಷ್ಟೆ:p

Karthik CS said...

ಹೌದ್ ಕಣ್ರೀ.. ನಾನು ಬಹಳ ದಿನದಿಂದ ಗೂಗಲ್ ರೀಡರ್ ಉಪಯೋಗಿಸ್ತಾ ಇದೀನಿ. infact ನಿಮ್ಮ ಈ ಬರಹವನ್ನೂ ಸಹ ಆರ ಮೂಲಕವೇ ಓದಿದ್ದು..

ಅಮರ said...
This comment has been removed by the author.
ಅಮರ said...

ಶ್ರೀ ಅವರೇ .......... ಮತ್ತೆರಡು ಶ್ರೀಗಳ ಬಗ್ಗೆ ಕಂಪ್ಲೆಂಟು ಮಾಡಿಯೆ ....... ಬರಹ ಶುರು ಮಾಡಿದ್ದಿರಾ :D
ಗೂಗಲ್ ಅವರು ದಿನಕ್ಕೊಂದು ಹೊಸ ಹೊಸ ಟೂಲ್ಗಳನ್ನ ತರುತ್ತಿದ್ದಾರೆ... ನಮ್ಮಲ್ಲಿ ಎಷ್ಟೋಂದು ಮಂದಿಗೆ ಅದರ ಬಗ್ಗೆ ತಿಳಿದಿಲ್ಲ ... ಒಳ್ಳೇದಾಯ್ತು ನೀವು ಬರೆದದ್ದು ..... ಈ ಲಿಂಕ್ ನೋಡಿ http://www.google.co.in/movies

ಮನಸ್ವಿನಿ said...

Thanks ಶ್ರೀ.

ಯಜ್ಞೇಶ್ (yajnesh) said...

ಶ್ರೀ ಅವರೇ,

ಮಾಹಿತಿಗಾಗಿ ಧನ್ಯವಾದಗಳು.

http://www.bloglines.com/ ನಲ್ಲಿಯೂ ಸಹ ನಾವು ನಮಗಿಷ್ಟವಾದವುಗಳನ್ನು ಸೇರಿಸಿಕೊಳ್ಳಬಹುದು. ಹೊಸ ಮಾಹಿತಿಗಳು ಬೇಗ ತಿಳಿಯುತ್ತದೆ. ಬಹಳ ದಿನಗಳಿಂದ ನಾನು ಇದನ್ನು ಉಪಯೋಗಿಸ್ತಾಯಿದೀನಿ.

Sushrutha Dodderi said...

ಇಕಾ, ಇಲ್ಲೊಂದು ಟೂಲ್ ಇದೆ: ಇದನ್ನ ನಮ್ ಬ್ಲಾಗಲ್ಲಿ ಹಾಕ್ಕೊಂಡ್ರೆ, ನಮ್ ಬ್ಲಾಗ್ ಅಪ್‍ಡೇಟ್ ಆದಾಗ್ಲೆಲ್ಲ ಈಮೇಲ್ ನೋಟಿಫಿಕೇಶನ್ ಬರ್ಬೇಕು ಅನ್ನೋರು, ಈ ಬಾಕ್ಸಲ್ಲಿ ತಮ್ ಐಡಿ ಎಂಟರ್ ಮಾಡಿ ರಿಜಿಸ್ಟರ್ ಮಾಡ್ಬೇಕು. ಆಮೇಲೆ ತಂತಾನೇ ಅವ್ರಿಗೆ ಅಪ್‍ಡೇಟ್ ನೋಟಿಫಿಕೇಶನ್ ಹೋಗತ್ತೆ.

http://www.blogarithm.com/getSticker.html

(ಕಷ್ಟ ಪಟ್ಟು ಹುಡ್ಕಿದೀನ್ರೀ, ಪಾರ್ಟಿ ಕೊಡಿಸ್ಬೇಕು ನೀವೂ..!)

Shree said...

ಶ್ರೀಮಾತಾ,
ಗೂಗಲ್ ರೀಡರ್-ಗೆ ನಾನು ಸಬ್ಸ್ಕ್ರೈಬ್ ಆಗಿದ್ದೇನೆ. ನಾನು ವಿಸಿಟ್ ಮಾಡುವ ಎಲ್ಲಾ ಬ್ಲಾಗುಗಳೂ ಅದರಲ್ಲಿವೆ. ಆದರೆ ನನ್ನ ತೊಂದರೆಯೆಂದರೆ, ನನಗೆ ಗೂಗಲ್ ರೀಡರಿಗೆ ಹೋಗಲಿಕ್ಕೇ ಸಮಯ ಸಿಗುವುದಿಲ್ಲ... :( ಹಾಗಾಗಿ ನಾನು ಯಾವಾಗಲಾದರೊಮ್ಮೆ ವಿಸಿಟ್ ಕೊಟ್ಟಾಗಲೇ ಬ್ಲಾಗುಗಳು ಅಪ್ಡೇಟ್ ಆಗುವುದು ಗೊತ್ತಾಗುತ್ತದೆ.
ಇಷ್ಟು ಮಾತ್ರವಲ್ಲ, ಗೂಗಲ್ ರೀಡರಿನಲ್ಲಿ ಬ್ಲಾಗ್ ಓದುವುದಕ್ಕಿಂತ ನನಗೆ ಆಯಾ ಬ್ಲಾಗಿಗೆ ಹೋಗಿ ಓದುವುದೇ ಹೆಚ್ಚು ಇಷ್ಟ. ಯಾಕೆಂದರೆ ಅದರಲ್ಲೊಂದು ಪರ್ಸನಲೈಸ್ಡ್ ಫೀಲ್ ಇರುತ್ತದೆ, ಆ ಬ್ಲಾಗಿಗ ತುಂಬಿದ ಬಣ್ಣ, ಲೇಓಟ್, ಇತರ ಬ್ಲಾಗುಗಳ ಲಿಂಕುಗಳು, ಕಮೆಂಟುಗಳು ಇತ್ಯಾದಿ ಇತ್ಯಾದಿ. ಅದಕ್ಕೋಸ್ಕರ ಸುಮ್ಮನೆ ರೀಡರು ಯಾಕೆ ಬೇಕು ಅಂತ ನಾನು ರೀಡರಿನ ಸಹವಾಸ ಬಿಟ್ಟೆ. ಕೆಲವರಾದರೂ ನನ್ನಂತಹವರಿರಬಹುದು ಅನ್ನುವುದಕ್ಕೋಸ್ಕರ ಮೈಲ್ ಕಳುಹಿಸಿದೆ. ಅದರಲ್ಲಿ ನಿಮಗೆ ಬೇಡದಿದ್ದರೆ ಹೇಳಿ ಅಂತಲೂ ಹೇಳಿದ್ದೆ ಅಂತ ನೆನಪು, ನಿಮ್ಮ ಉತ್ತರ ಸಿಕ್ಕಿದ ಕೂಡಲೇ ನಿಮ್ಮ ಮೈಲ್ ಐಡಿ ಅದರಿಂದ ತೆಗೆದಿದ್ದೇನೆ... :) ಚಿಂತೆ ಮಾಡದಿರಿ... :)

Sree said...

ಅಮರ
ಕಂಪ್ಲೇಂಟಲ್ಲಪ್ಪಾ, ಅವ್ರು ನನ್ನ ಪೋಸ್ಟಿಗೆ ಸ್ಫೂರ್ತಿ:P

ಮನಸ್ವಿನಿ,
ಥ್ಯಾಂಕ್ಸಿಗೊಂದು ಥ್ಯಾಂಕ್ಸು:))

ಯಜ್ಞೇಶ್, ಸುಶ್ರುತ,
ಥ್ಯಾಂಕ್ಸು, ಸುಶ್ರುತ, ಪಾರ್ಟಿ ಯಾರ್ ಕೊಡಿಸ್ಬೇಕು? ಹೀಗೆಸುಮ್ನೆಯ ಓದುಗರಾ?;p

ಶ್ರೀ(ನೂರುಕನಸಿನವ್ರು;) ) ಜಿ-ಮೈಲ್ ಚೆಕ್ ಮಾಡುವಾಗೊಮ್ಮೆ ಹಂಗೇ ರೀಡರ್ ಟ್ಯಾಬ್ ಕ್ಲಿಕ್ಕಿಸಿ, ಸುಲಭವಾಗಿ ಯಾವ್ದು ಅಪ್‌ಡೇಟ್ ಆಗಿದೆ ಅಂತ ಗೊತ್ತಾಗುತ್ತೆ. ಮತ್ತೆ ನಾನೂ ಪೋಸ್ಟುಗಳನ್ನ ರೀಡರಿನಲ್ಲಿ ಓದಲ್ಲ. ಅದನ್ನ ನೋಟಿಫಿಕೇಶನ್ನಿಗಾಗಿ ಮಾತ್ರ ಬಳಸ್ತೀನಿ. ಮತ್ತೆ ಹಲವು ಬ್ಲಾಗುಗಳಲ್ಲಿ(ನಂದೂ ಸೇರಿದಂತೆ) full feed ಬದಲಿಗೆ short feed enable ಮಾಡಿರೋದ್ರಿಂದ ಪೂರ್ತಿ ಪೋಸ್ಟ್‌ಗಳು ರೀಡರಿನಲ್ಲಿ ಕಾಣುವುದೂ ಇಲ್ಲ. ಹೊಸ ಪೋಸ್ಟಿನ ಮೊದಲ ಕೆಲವು ಸಾಲುಗಳು ಮಾತ್ರ ಬರುತ್ತೆ. ಅಲ್ಲಿಂದ ಕ್ಲಿಕ್ ಮಾಡಿ ಬ್ಲಾಗಿಗೆ ಹೋಗಬಹುದು.
ನಿಮ್ಮ ಮೈಲ್‌ಗಳನ್ನ ನೋಡ್ತಿದ್ದಾಗ ಮೈಲ್ ಮಾಡಿ ಹೇಳೋದಕ್ಕಿಂತ ಇದು ಸುಲಭ ಅನ್ನಿಸ್ತು...ಅದಕ್ಕೆ ಬರೆದೆ, ಮೈಲ್ ಮಾಡದ ನನ್ನಂಥ ಸೋಂಬೇರಿ ಬ್ಲಾಗಿಗರಿಗೆ, ನಮ್ಮಂಥವರ ಸೋಂಬೇರಿತನದಿಂದ ಸುಸ್ತಾಗಿರೋ ಇತರ ಬ್ಲಾಗಿಗರಿಗೆ, ಓದುಗರಿಗೆ ಉಪಯೋಗವಾಗಬಹುದು ಅಂತ. ನೀವಿಬ್ಬರು ಮೈಲ್ ಮಾಡೋ ಬಗ್ಗೆ ಆಕ್ಷೇಪ ಖಂಡಿತಾ ಅಲ್ಲ:)
ಆದ್ರೆ ನೀವು ನನ್ನ ಪೂರ್ತಿ ಹೆಸ್ರು ಕರೆದು ಕೀಟಲೆ ಮಾಡ್ತಿರೋದರ ಬಗ್ಗೆ ನನ್ನ ಆಕ್ಷೇಪ ಖಂಡಿತಾ ಇದೆ!;)(ಶೀಘ್ರದಲ್ಲೇ ತಕ್ಕ ಕ್ರಮ ಕೈಗೊಳ್ಳಲಾಗುವುದು)

Shree said...

ಮಾಹಿತಿಗಾಗಿ ಧನ್ಯವಾದ, ಅದ್ಯಾಕೋ ನಂಗೂ ಗೂಗಲ್ ರೀಡರಿಗೂ ಆಗಿಬರುವುದಿಲ್ಲವಾದ ಕಾರಣ, ಇಲ್ಲಿವರೆಗೆ ತಲೆಕೆಡಿಸಿಕೊಂಡಿರಲಿಲ್ಲ, ಇನ್ನು ಮುಂದೆಯಾದರೂ ತಲೆಕೆಡಿಸಿಕೊಳ್ಳುವುದು ಸಾಧ್ಯವೇ ಅಂತ ನೋಡುತ್ತೇನೆ..!
ಮತ್ತೆ ಪೂರ್ತಿ ಹೆಸರು ಹೇಳಿದುದದರ ಬಗ್ಗೆ - ಛೆ, ಮೊದಲೆಲ್ಲ ನಾನು ಶ್ರೀ ಅಂತ ಹಾಕ್ತಾ ಇದ್ದೆ, ನೀವು sree ಅಂತ ಹಾಕ್ತಾ ಇದ್ರಿ, ಹಾಗಾಗಿ ನನಗೆ ಏನೂ ಕನ್ಫೂಶನ್ ಇರಲಿಲ್ಲ, ಆದ್ರೆ ಇತ್ತೀಚೆಗೆ ನೀವೂ ಶ್ರೀ ಅಂತ ಹಾಕಲು ಶುರು ಮಾಡಿ ನನಗೆ ಎಲ್ಲಾದರೂ wordpress ಬ್ಲಾಗುಗಳಲ್ಲಿ ನಿಮ್ಮ ಕಮೆಂಟುಗಳನ್ನು ಓದುವಾಗ ಅರೆ, ನಾನ್ಯಾವಾಗ ಇಲ್ಲಿ ಬಂದು ಕಮೆಂಟು ಮಾಡಿದೆ ಅನ್ನಿಸಲು ಶುರುವಾಯಿತು, ಅದಕ್ಕೆ ನನ್ನ ಕಮೆಂಟುಗಳಿಗೆ ನೂರುಕನಸಿನವ್ರು ಅಂತ ಸೇರಿಸಲು ಶುರು ಮಾಡಿದೆ. ಹಾಗೆಯೇ ನಿಮಗೆ ಚೂರು ಬಿಸಿ ಮುಟ್ಟಿಸುವಾ ಅಂತ ಪೂರ್ತಿ ಹೆಸರು ಹಿಡಿದು ಕರೆದೆ... :P ಕ್ಷಮೆಯಿರಲಿ...! (ಈಗ ಈ ವಿಚಾರ ನಿಮ್ಮ ಹೊಸ ಬ್ಲಾಗು ಪೋಸ್ಟಿಗೆ ಸ್ಫೂರ್ತಿಯಾಗದಿರಲಿ, ಯಾಕೆಂದರೆ ನನ್ನ ತಲೆಯಲ್ಲಿ ಸ್ವಾರಸ್ಯಕರ ಅನುಭವಗಳಿರುವ ಒಂದು ಬ್ಲಾಗು ಪೋಸ್ಟ್ already ಕುಣೀತಾ ಇದೆ, ಟೈಪಿಸಲು quality time ಇಲ್ಲ ಅಷ್ಟೆ... :)

ಮನಸ್ವಿ said...

ತುಂಬಾ ಉಪಯುಕ್ತ ಮಾಹಿತಿ ಒದಗಿಸಿದ್ದೀರಿ.. ದನ್ಯವಾದಗಳು..

Pramod said...

1.ನೀವು Firefox ಉಪಯೋಗಿಸ್ತಾ ಇದ್ರೆ, ಈ ಕೆಳಗಿನ ಲಿ೦ಕು ಉಪಯೋಗಿಸಿ. https://addons.mozilla.org/en-US/firefox/addon/748
"add to Firefox" ಮೇಲೆ ಕ್ಲಿಕ್ಕಿಸಿ
2.ಆಮೇಲೆ http://userscripts.org/scripts/show/8782 ತೆರೆದು, ಬಲತುದಿಯ ಲಿ೦ಕು "install this" ಅನ್ನು ಕ್ಲಿಕ್ಕಿಸಿ.
ನಿಮ್ಮ google.com/reader ಬಣ್ಣ ಬಣ್ಣದ ಲಿ೦ಕುಗಳಿ೦ದ ಕ೦ಗೊಳಿಸುತ್ತದೆ.
ಬೇರೆ ಬೇರೆ ಲಿ೦ಕು ಅ೦ದ್ರೆ ಬೇರೆ ಬೇರೆ ಬಣ್ಣ.

ಕನಸು said...

thanks sree....

chetana said...

Adare,
nanna mechchina blog nalli bahaLa dinadinda hosa posTE ilvalla!? :)
:(

ಮನಸ್ವಿನಿ said...

Google Reader-ge ಕೆಲಸ ಕೊಡಿ.
ಹೊಸ post ಬರಲಿ ಬೇಗ.

ಅರೇಹಳ್ಳಿ ರವಿ said...

Registration- Seminar on the occasion of kannadasaahithya.com

8th year Celebration


Dear shreemata,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same

venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada



Please do come and forward the same to your like minded

friends

-kannadasaahithya.com balaga

Pramod P T said...

ನನ್ಗೆ ಗೂಗಲ್ ರೀಡರ್ ಬಗ್ಗೆ ಗೊತ್ತಿರ್ಲಿಲ್ಲಾ!
ಧನ್ಯವಾದಗಳು.

ವಿವೇಕ್ ಶಂಕರ್ said...

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada

ಅಮರ said...

ಕಾಣೆಯಾದವರ ಬಗ್ಗೆ ಪ್ರಕಟಣೆ???

ಬ್ಲಾಗಿನ ಒನರ್ ಅವರು ಒಂದು ತಿಂಗಳಿಂದ ಈ ಬ್ಲಾಗಿನಿಂದ ಕಾಣೆಯಾದಿದ್ದಾರೆ :P ..."ಇರುವುದೆಲ್ಲ ಬಿಟ್ಟು" ಅಂತ ಬ್ಲಾಗನ್ನು ಬಿಟ್ಟು ಹೋಗಿದ್ದಾರೊ, ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ....

ಗಲ್ಲಕ್ಕೆ ಕೈ ಒತ್ತಿ ಎತ್ತಲೊ ನೋಡುತ್ತ ಹಲವಾರು ಬ್ಲಾಗುಗಳಲ್ಲಿ ಕಾಣಿಸಿಕೊಳ್ಳುವ ಇವರನ್ನು ಹುಡುಕಿ ಇಲ್ಲಿಗೆ ಕಳುಹಿಸಬೇಕಾಗಿ ಕಳಕಳಿಯ ವಿನಂತಿ.. :D
-ಅಮರ

ಸುಧೇಶ್ ಶೆಟ್ಟಿ said...

ತು೦ಬಾ ಮಾಹಿತಿಪೂರ್ಣ ಬರಹ ಶ್ರಿ ಮಾತಾ ಅವರೆ.
ನಿಮ್ಮ ಬ್ಲಾಗ್ ಗೆ ಯಾವುದಾದರೂ ಹೊಸ ಬರಹ ಬ೦ದಿದೆಯೋ ಎ೦ದು ನಾನು ಅಗಾಗ್ಗೆ ಎಡತಾಕುವುದು ಇನ್ನು ಮೇಲಾದರೂ ತಪ್ಪುತ್ತದೆ.

Tina said...

ಶ್ರೀಈಈಈಈಈಈಈಈಈ
ಎಲ್ಲಿದೀಈಈಈಈಈರಾಆಆಆಆಆಆಆಆಆಆಆಆಆ?????
ಬೇಏಏಏಏಏಏಗ ಬರೀಈಈಈಈರೀಈಈಈಈಈ
ಆಯ್ತಾಆಆಆಆಆಆಆಆಆಆಆಆಆಆಆಆಆ?????

ನಾನೂಊಊಊಊ
ಟೀಈಈಈಈಈನಾಆಆಆಆಆಆಆಆ....

Sree said...

ನೂರುಕನಸಿನ ಶ್ರೀ,
ವರ್ಡ್‌ಪ್ರೆಸ್ಸಿನ ಕುಕಿ ನನ್ನನ್ನ ಶ್ರೀ ಅಂತಲೇ ನೆನಪಿಟ್ಟುಕೊಂಡುಬಿಟ್ಟಿದೆ, ಅದಿಕ್ಕೇ ಈ ಪ್ರಾಬ್ಲಂ!:P ಇರ್ಲಿ ಈ ವಿಷ್ಯದ್ ಜಗಳ ಬೇರೆ ಬ್ಲಾಗುಗಳಲ್ಲಿ ಮಾಡಿಕೊಳ್ಳೋಣ;) ನಿಮ್ಮ ಸ್ವಾರಸ್ಯಕರ ಅನುಭವ ಇನ್ನೂ ಬಂದಹಾಗಿಲ್ಲ!!

ಮನಸ್ವಿ, ಕನಸು,
ಹೀಗೇಸುಮ್ನೆಗೆ ಸ್ವಾಗತ:)

ಪ್ರಮೋದ್, ಸುಧೇಶ್,
ಎಲ್ಲಾ ನನ್ನ್ ಸ್ವಾರ್ಥ:)) ರೀಡರ್ ಉಪಯೋಗಿಸಿ ನಾನ್ ಬರೆದಾಗ ನೀವೆಲ್ಲ ಓದ್ಲಿ ಅಂತ:))

ಚೇತನಾ, ಮನಸ್ವಿನಿ, ಅಮರ, ಟೀನಾ,
ನಿಮ್ಮ ಪ್ರೀತಿಗೆ ಥ್ಯಾಂಕ್ಯೂ:)
ಚೇತನಾ - sooo sweet of u!:)
ಅಮರ - rofl!:))

ರವಿ, ವಿವೇಕ್
ಆಹ್ವಾನಕ್ಕೆ ಧನ್ಯವಾದ, ಅವತ್ತು ಬರೋಕಾಗ್ಲಿಲ್ಲ:(

Unknown said...

ಶ್ರೀ,

`ಕೆಂಡಸಂಪಿಗೆಗೆ ಹೊಸ ಅವತಾರದಲ್ಲಿ feed enable ಮಾಡಿಲ್ಲ' ಎಂಬ ನಿಮ್ಮ ದೂರಿಗೆ ನಾವು ಸ್ಪಂದಿಸಿದ್ದೇವೆ.

ಕೆಂಡಸಂಪಿಗೆಯಲ್ಲಿ ಈಗ ಈ ಸಮಸ್ಯೆ ಇಲ್ಲ.its corrected now. ಹೆಚ್ಚಿನ ಮಾಹಿತಿಗೆ-


feed://www.kendasampige.com/rss/feed.xml

-ಜಿತೇಂದ್ರ. ಕೆಂಡಸಂಪಿಗೆ

Sree said...

ಹಾ, ಜಿತೇಂದ್ರ, ನೋಡಿ ಸಬ್ಸ್ಕ್ರೈಬಿಸಿದೆ, ಸ್ಪಂದನೆಗೆ ಧನ್ಯವಾದಗಳು! ಖುಷಿಯಾಯ್ತು:) ಈಗ ಕೆಂಡಸಂಪಿಗೆಯ ಯಾವ ಲೇಖನವನ್ನೂ ತಪ್ಪಿಸೋದಿಲ್ಲ:)