ಬರೆದು ತಿಂಗಳ ಮೇಲಾಯ್ತು...ಎಲ್ಲಾ ಸ್ನೇಹಿತರ ಹತ್ರ ಬೈಸಿಕೊಂಡಾಯ್ತು...ಕನ್ನಡಸಾಹಿತ್ಯ.ಕಾಂ ನ ಸಂಪಾದಕೀಯದಲ್ಲಿ ನನ್ನ ಬ್ಲಾಗ್ ಬಗ್ಗೆ ನೋಡಿ ಟೆನ್ಶನ್ ಆಗಿದ್ದೂ ಆಯ್ತು... ವಿಷಯಗಳ, ಭಾವಗಳ backlog ಭಾರವಾಗಿ ಇನ್ನು ಬರ್ಯೋದೇ ಸರಿ ಅಂತ ಈಗ ಕೂತಿದೀನಿ. ನಿಮ್ಮಗಳ ದುರಾದೃಷ್ಟ ಇವತ್ತು!:))
ಕನ್ನಡಸಾಹಿತ್ಯ.ಕಾಂನಲ್ಲಿ ಶೇಖರ್ ಪೂರ್ಣ ಅವರ ಸಂಪಾದಕೀಯದ ಲಿಂಕ್ ಗೆಳೆಯರೊಬ್ಬ್ರು ಕಳಿಸಿದಾಗ ಓದಿ ಮೊದ್ಲಿಗೇನೋ ಸ್ವಲ್ಪ ಖುಷಿನೇ ಆಯ್ತು. ಅದೇ ಖುಷಿಯಲ್ಲಿ ನಾಕಾರು ಗೆಳೆಯರಿಗೆ ಮೈಲ್ ಮಾಡಿ ಲಿಂಕ್ ಕೊಟ್ಟಿದ್ದೂ ಆಯ್ತು. ಆದ್ರೆ ಆಮೆಲೆ ಹಾಗೇ ಕೂತಾಗ ಕೆಲವು ಪ್ರಶ್ನೆಗಳು ಬಂದ್ವು. ಇವತ್ತು ಅವುಗಳ್ ಬಗ್ಗೆನೇ ಮೊದ್ಲು ಬರೆದುಬಿಡ್ತೀನಿ.
ಬ್ಲಾಗ್ ಅನ್ನೋದು ಒಂದು ಮಾಧ್ಯಮ - ಅದನ್ನ್ ಯಾರ್ ಯಾರು ಹೇಗ್ ಬಳಸ್ಕೋತಾರೆ ಅವರವ್ರಿಗೆ ಬಿಟ್ಟಿದ್ದು... canonical ಸಾಹಿತ್ಯದ parameters ಅದಕ್ಕೆ apply ಮಾಡಬೇಕಾ? ಬೇರೆ ಭಾಷೆಗಳಲ್ಲಿ ಬ್ಲಾಗ್ ಗಳಿಗೆ ಇಷ್ಟು ಗಮನ ಕೊಡ್ತಿದಾರಾ? ಬ್ಲಾಗ್ ಅನ್ನೋದು ಮಲ್ಟಿನ್ಯಾಷನಲ್ ಗ್ಲೋಬಲಿಸ್ಮ್ ನ ಐಡಿಯಾಲಜಿಯನ್ನೂ ತನ್ನ ಜೊತೆಗೆ ತರುತ್ತೆ. ಕಂಪ್ಯೂಟರ್ ಇದ್ದವ್ರಿಗೆಲ್ಲ ಖಾಲಿ ಸ್ಲೇಟ್ ಒದಗಿಸುತ್ತೆ. ಅದರಲ್ಲಿ ಸಾಹಿತ್ಯವೇ ಗೀಚ್ಬಹುದು, ಕಾಡು ಹರಟೆಯನ್ನೇ ಕುಟ್ಟ್ಬಹುದು, ಡೈರಿನೇ ಬರೆದಿಡ್ಬಹುದು. ಬರೆದದ್ದೆಲ್ಲ ಸಾಹಿತ್ಯ ಆಗೊಲ್ಲ ಅಲ್ಲ್ವ?
ಹೀಗೇ ಯೋಚಿಸ್ತಾ ನಾನ್ ಯಾಕೆ ಬ್ಲಾಗ್ ಬರೀತೀನಿ ಅಂತ ಪ್ರಶ್ನೆನೂ ಬಂತು. ಸುಮ್ಮ್ನೆ ಒಂದ್ಸಲ ಇಲ್ಲಿಯವರ್ಗೆ ಬರೆದಿದ್ದನ್ನ ನೋಡ್ದೆ...ಶೇಖರ್ ಸರ್ ಹೇಳಿರೋಹಾಗೆ ಯಾವ್ದೋ ಭಾವಜೀವನದ ತುಣುಕುಗಳೆ ಹೆಚ್ಚು ಕಂಡ್ವು. ಆದ್ರೆ ಅದನ್ನ್ ಬಿಟ್ಟು ಬೇರೆ ಥರದವೂ ಇವೆ. ಆದ್ರೆ ನೋಡ್ತಾ ನೋಡ್ತಾ ಭಾವಗಳ ಭರಪೂರಕ್ಕಿರೋ ಶಕ್ತಿ ಇಲ್ಲದೇ ಸುಮ್ಮ್ನೆ ತೋಚಿದ್ದು ಗೀಚಿದ್ದು, ಕೆಲವು ಬರೀಬೇಕನ್ನೋ ಬಲವಂತಕ್ಕೆ ಬರೆದಿದ್ದೇನೋ ಅಂತಲೂ ಅನ್ನಿಸ್ತು. ಹಾಗೇ ನಾನ್ಯಾವ ಘನವಾದ ಸಾಹಿತ್ಯ ರಚನೆಯಲ್ಲಿ ತೊಡಗಿದೀನಿ ಅನ್ನೋ ಭ್ರಮೆ ನನ್ನನೇನ್ ಕಾಡಿಲ್ಲ ಅನ್ನಿಸ್ತು...
'ವನಸುಮದೊಲೆನ್ನ...'ಬ್ಲಾಗ್ ನನ್ನಷ್ಟಕ್ಕೆ ನಾನು ನನ್ನಿಷ್ಟಕ್ಕೆ ಬೇಕಾದ್ದು ಗೀಚಿ ಹಾಕುವ ಗ್ರಾಫಿಟಿ ಗೋಡೆ ಆಗಿದೆ ಅನ್ನಿಸ್ತು...ಅದರ ಜೊತೆಗೇ ಸ್ನೇಹಿತರೊಬ್ಬರು ಇದು loss of relative privacy ಅಂತ ಹೇಳಿದ್ದ್ ಮಾತೂ ನೆನಪಾಯ್ತು...ತೀರ ನನ್ನಷ್ಟಕ್ಕೆ ಬರಿಯೋಕೆ ಡೈರಿ ಇದೆಯಲ್ಲ ಅನ್ನೋ ಮಾತೂ ಮನಸ್ಸಲ್ಲಿ ಹಾದು ಹೋಯ್ತು. ನಾಕು ಜನ ಓದ್ಲಿ ಅನ್ನೋ ಆಸೆ ಎಲ್ಲೋ ಒಂದುಕಡೆ ಇದ್ದೇ ಇದೆ, ನಿಜ, ಅದರ್ ಬಗ್ಗೆ apologetic ಆಗಬೇಕಿಲ್ಲ, ಹಾಗಂತ ನಾಕ್ ಜನ ಓದ್ತಾಅರೆ ಅನ್ನೋ ಮಾತ್ರಕ್ಕೆ ಇದು ಯಾವ್ದೇ ಸೀರಿಯಸ್ ಸಾಹಿತ್ಯಿಕ ಆಸಕ್ತಿಗಳಿಗೆ alternative ಆಗೋದಿಲ್ಲ ಅನ್ನೋ ನಂಬಿಕೆ...
ಬರಿಯೋದು ಖುಷಿಯ ಕೆಲ್ಸ ಅಂತ ಬ್ಲಾಗಿಗೆ ತಗುಲಿಕೊಂಡಿದ್ದೀನಿ...ಆದ್ರೆ ಬದುಕು attention ಕೇಳ್ದಾಗ ಬ್ಲಾಗ್ ಮೌನ ತಾಳುತ್ತೆ... ಸಹನೀಯವೋ ಅಸಹನೀಯವೋ, ನನ್ನ್ choice ಅದೇ... ನನ್ನನ್ನ ಹೊಗಳಿ, ತಿವಿದು, ಓಲೈಸಿ ಬರೀ ಅಂದ ಎಲ್ಲ ಗೆಳೆಯರಿಗೂ thanks:) ಜೀವನ extremes ಕಡೆ ಹೋಗದಿದ್ದಾಗಲೆಲ್ಲ ಇಲ್ಲಿ ಹರಟುತ್ತಾನೇ ಇರ್ತೀನಿ ಅಂತ promise ಮಾಡ್ತಾ...
ಶ್ರೀ
21 comments:
ನಿಮ್ಮ ಆಲೋಚನ ಸರಿಯಾದ ಹಾದಿಯಲ್ಲಿದೆ. ಬ್ಲಾಗ್ ಎಂಬ ಖಾಲಿ ಸ್ಲೇಟನ್ನು ಎಲ್ಲರಿಗೂ ಕೊಟ್ಟಿದ್ದಾರೆ.
ಏನು ಮಾಡೋದು, ಚಿಕ್ಕಂದಿನಿಂದ ಬರೆದೂ ಬರೆದೂ ಅಭ್ಯಾಸವಾಗಿದೆ. ಮನದಲ್ಲಿ ಬರುವ ಯೋಚನೆಗಳಲ್ಲಿ ಕೆಲವು ಗಟ್ಟಿ ಇರಬಹುದು ಇನ್ನು ಕೆಲವು ಪೊಳ್ಳು ಇರಬಹುದು. ಆ ತಕ್ಷಣಕ್ಕೆ ನಿರ್ಧರಿಸಲಾಗದಿರಬಹುದು. ಸ್ವಲ್ಪ ಕಾಲದ ನಂತರ ನಿರ್ಧರಿಸಲಾಗಬಹುದು. ಅದಕ್ಕಾಗಿ ಒಂದೆಡೆ ಬರೆದಿಟ್ಟರೆ, ಸ್ನೇಹಿತರು ಓದಿ, ಅವರ ಸಲಹೆಯ ಮೇರೆಗೆ ಪರಿಷ್ಕರಿಸಬಹುದು.
ಶೇಖರ್ ಸಾರ್ ಹೇಳಿದ ಸಂದರ್ಭ ನನಗೆ ಸರಿಯಾಗಿ ತಿಳಿಯದಿರಬಹುದು. ಅವರು ಹೆಚ್ಚಿಗೆ ತಿಳಿದವರು. ಆದರೆ, ಬರೆದವರೆಲ್ಲರೂ ಸಾಹಿತಿಗಳಾಗಬೇಕಿಲ್ಲ. ಬರೆಯುವಾಗ ಯಾರೂ ತಾನು ಸಾಹಿತಿ ಆಗಬೇಕು, ಸಾಹಿತ್ಯವನ್ನು ಉದ್ಧಾರ ಮಾಡಬೇಕು ಎಂದು ಬರೆಯೋಲ್ಲ. ಕುವೆಂಪುರವರು ಬರೆದಾಗ ಅದು ಶ್ರೇಷ್ಠ ಕಾವ್ಯವಾಗಿಲ್ಲದಿರಬಹುದು. ಕಾಲಾನಂತರ ಅದರ ಬೆಲೆ ಗೊತ್ತಾಗುವುದು. ಆದರಿಲ್ಲಿ ನಾವು ಬರೆಯೋದು ಯಾತಕ್ಕೆ ಎಂದು ಚಿಂತಿಸಿದರೆ, ನನ್ನ ಮನಸ್ಸಿಗೆ ಹೊಳೆಯುವುದು -
ನಾಲ್ಕಕ್ಷರ ಬರೆಯುವುದನ್ನು ಕಲಿತವರು ತಮ್ಮ ಮಾನಸಿಕ ತಳಮಳ, ತುಮುಲ, ದುಗುಡ, ಸಂತೋಷ, ದು:ಖವನ್ನು ಮನಸ್ಸಿನಲ್ಲಿ ಒತ್ತಿ ಹಿಡಿಯದೇ ಹೊರಹಾಕಿದರೆ, ಮನಸ್ಸಿಗೆ ಸ್ವಲ್ಪ ಸಮಾಧಾನ ಆಗಬಹುದು. ಇದಕ್ಕಾಗಿ ಬರೆಯಬೇಕಾಗುತ್ತದೆ.
empty mind is devil's workshop ಎನ್ನುವ ಮಾತಿನಂತೆ, ಸುಮ್ಮನೆ ಕುಳಿತಿದ್ದರೆ ತಲೆಯೊಳಗೆ ಯಾವುದೋ ಹುಳು ಸೇರಿ, ಮಾಡಬಾರದ ಕೆಲಸವನ್ನು ಮಾಡಿಸುತ್ತದೆ. ಆ ತಕ್ಷಣಕ್ಕೆ ಅದರ ಮಹಿಮೆ ತಿಳಿಯದಿದ್ದರೂ, ಮುಂದೊಂದು ದಿನ ಆ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡಬೇಕಾಗಬಹುದು. ಇದಕ್ಕಾಗಿ ಹಾಡುವುದು, ಲಲಿತಕಲೆಯ ಪ್ರದರ್ಶನ, ಇತ್ಯಾದಿಗಳ (ನಮ್ಮ ದೈನಂದಿನ ಕೆಲಸಕ್ಕಿಂತ ವಿಭಿನ್ನವಾಗಿರುವುದು) ತರಹ ಬರೆಯುವುದನ್ನು ಬೆಳೆಸಿಕೊಳ್ಳಬೇಕಾಗಬಹುದು.
ಒಟ್ಟಿನಲ್ಲಿ ನಮ್ಮ ಮನಸ್ಸಿಗೆ ಸಮಾಧಾನವಾಗಲೆಂದು ಬರೆಯುವುದಷ್ಟೇ ಹೊರತು, ಬೇರೆ ಯಾರೂ ಓದಬೇಕು, ಅವರಿಗೆ ನಮ್ಮಿಂದ ತಿಳುವಳಿಕೆ ಮೂಡಬೇಕು ಎಂಬ ಉದ್ದೇಶವಲ್ಲ.
ಯಾರೂ ಓದಲಿ ಎಂದು
ನಾನು ಬರೆಯುವುದಿಲ್ಲ
ಬರೆಯುವುದು ಅನಿವಾರ್ಯ
ಕರ್ಮ ಎನಗೆ (ಜಿ.ಎಸ್.ಎಸ್.ಅವರ ಕ್ಷಮೆ ಕೋರಿ)
ಮರಾಯತ್ತಿ,
ಕೊನೆಗೂ ಅಂತು ಬರೆದೆಲ್ಲ :)
ಬ್ಲಾಗ್ ಯಾಕೆ ಮಾಡ್ತಿವಿ ಅನ್ನುವ ಪ್ರಶ್ನೆಗೆ ನೀವೇ ಉತ್ತರನೂ ಕೊಟ್ಟಿದ್ಡಿರಿ.ಭಾವನೆಗಳು,ನೆನಪುಗಳು,ಟೈಂಪಾಸ್ಗೆ -ಯಾವುದೋ ಒಂದು ಕಾರಣಕ್ಕೆ.
ಇನ್ನ ಸೀರಿಯಸ್ ಸಾಹಿತ್ಯ ಅಂದ್ರೆ ಏನು ?
ಬ್ಲಾಗ್ ಮಧ್ಯಮದಿಂದ ಆ ತರದ ಸಾಹಿತ್ಯ ಸಾಧ್ಯವಿಲ್ಲ ಅನ್ನೋ ತರ ಇದೆ ನಿಮ್ಮ ಅಭಿಪ್ರಾಯ.ಯಾಕಾಗಬಾರದು?ಬ್ಲಾಗ್ ಸಹ ಸೀರಿಯಸ್ alternative ಆಗಬಹುದಲ್ಲವೇ?
ಅವೇನೇ ಇರಲಿ..
ಬರಿಯೋದು ಖುಷಿಯ ಕೆಲ್ಸ...ಈ ಒಂದು ಮಾತು ನಾನು ಸಂಪೂರ್ಣವಾಗಿ ಒಪ್ಪುತ್ತೀನಿ..
ನಿಮ್ಮ ಬರವಣಿಗೆ ಹೀಗೆ ಸಾಗ್ತಿರಲಿ...ಅದರಲ್ಲಿ ನಿಮಗೆ ಹೀಗೆ ಖುಷಿ ಸಿಗಲಿ..
ನಾನೇಕೆ ಬ್ಲಾಗ್ತೀನಿ - ಈ ಪ್ರಶ್ನೆ ಓರ್ವ ಬುದ್ಧಿವಂತ ಬ್ಲಾಗಿಗನಿಗೆ ಬರುವುದು ತುಂಬ ಕಾಮನ್. ಈ ಪ್ರಶ್ನೆಗೆ ಉತ್ತರ ಅವರವರೇ ಕಂಡುಕೊಳ್ಳಬೇಕು ಅನ್ನುವುದು ನನ್ನ ಅಭಿಪ್ರಾಯ.
ಕಮೆಂಟ್ಸ್ ಗಾಗಿ ಶಿವ್, ಅನೂಪ್, ಗೌತಮ್ ಹಾಗೂ ತ ವಿ ಶ್ರೀ ಯವ್ರಿಗೆ ಗಳು:)
ಶಿವ್ ಹಾಗೂ ತವಿಶ್ರೀ, ಮನಸ್ಸಿನ ದುಗುಡ ಕಳಿಯೋಕೆ, ಬರಿಯೋ ಖುಶಿಗೆ ಬ್ಲಾಗಿಸೋದು ಅನ್ನೋದು ಖಂಡೀತಾ ನಿಜ.
ತವಿಶ್ರೀಯವ್ರು ಹಾಕಿರೋ ಜಿ ಎಸ್ ಎಸ್ adaptation ಸಖತ್!:)
ಮತ್ತೆ ಶಿವ್, ಬ್ಲಾಗ್ ನಲ್ಲಿ serious ಸಾಹಿತ್ಯ ಸಾಧ್ಯವಿಲ್ಲ ಅಂತ ನಾನ್ ಹೇಳ್ಲಿಲ್ಲ. ಆದ್ರೆ canonical ಸಾಹಿತ್ಯದ parameters ಅಷ್ಟು ಸುಲಭವಾಗಿ ಈ ಮಾಧ್ಯಮಕ್ಕೆ ಒಗ್ಗೋದಿಲ್ಲ. ಎಷ್ಟಂದ್ರೂ ಇಲ್ಲಿ ನಾವೇ ಬರೆಯೋವ್ರು, ನಾವೇ ಪಬ್ಲಿಷ್ ಬಟನ್ ಅನ್ನೂ ಕುಟ್ಟೋವ್ರು - ಆದ್ರಿಂದ ಇದು ಹೆಚ್ಚು ನಮಗಾಗಿ ಬರೆದುಕೊಳ್ಳೋ ಒಂದು ಮಾಧ್ಯಮ ಅಂತ ನನಗನ್ನಿಸುತ್ತೆ. ಶೇಖರ್ ಸಾರ್ ಸಂಪಾದಕೀಯದಲ್ಲಿ ಹೇಳಿರೋ ಹಾಗೆ ಈ ಮಾಧ್ಯಮದ್ ಪ್ರಯತ್ನಗಳನ್ನ ಸ್ಪಷ್ಟವಾಗಿ ವರ್ಗೀಕರಿಸಿ ಅಳೆಯೋ ಮಟ್ಟಿಗೆ ನಾವಿನ್ನೂ ಬಂದಿಲ್ಲ ಅನ್ನೋದು ನನಗೆ ನಿಜ ಅನ್ನಿಸುತ್ತೆ.
ಇದು ಬರಿಯ ಟೆಕ್ನಾಲಜಿ ಅಲ್ಲ, ಅದರ ಜೊತೆ ಇಡಿಯಾಲಜಿಯೂ ಇದೆ - ಇಲ್ಲಿ ಯಾವುದೇ ಸೆಲೆಕ್ಶನ್ ಇಲ್ಲ, ಕಂಪ್ಯೂಟರ್ ಸಿಕ್ಕವ್ರಿಗೆಲ್ಲ ಬಿಟ್ಟಿ ಗ್ರಾಫಿಟ್ಟಿ ವಾಲ್... ಚೆನ್ನವೋ ಇಲ್ಲವೋ ನಾವೇ decide ಮಾಡಿಕೊಳ್ಳೋವ್ರು!:) ಇಲ್ಲಿ ಒಳ್ಳೇ ಸಾಹಿತ್ಯ ಬರಕ್ಕಾಗಲ್ಲ ಅಂತಲ್ಲ ನಾನು ಹೇಳ್ತಿರೋದು. ಆದ್ರೆ ಸಾಹಿತ್ಯವನ್ನ್ ಓದ್ಬೇಕು ಅಂತ ಹೊರಟವ್ರು ದಾರಿ ತಪ್ಪಿ ಇಲ್ಲಿ ಬಂದು ಮುಗ್ಗರಿಸೋ ಚಾನ್ಸ್ ಕಡೀಮೆ ಏನೋ ಅನ್ನೋದು ನನ್ನ್ ಅನಿಸಿಕೆ...ಆದ್ರಿಂದ ಇದು ಸಾಹಿತ್ಯಿಕ ಆಸಕ್ತಿಗಳಿಗೆ alternative ಅಲ್ಲ ಅಂತ ನನಗನ್ನಿಸೋದು.
ನಮ್ಮ ಖುಷಿಗೆ ಬರಿಯೋದು ಒಳ್ಳೆ ಸಾಹಿತ್ಯಕ್ಕೆ ಅತ್ಯವಶ್ಯಕವಾದ್ರೂ ನಮ್ಮ ಖುಷಿಗೆ ಬರೆದದ್ದೆಲ್ಲ ಒಳ್ಳೆ ಸಾಹಿತ್ಯ ಆಗಲ್ಲ ಅಲ್ಲ್ವ?:)
ತವಿಶ್ರೀ ಯವ್ರು ಹೇಳಿರೋ "ಮನದಲ್ಲಿ ಬರುವ ಯೋಚನೆಗಳಲ್ಲಿ ಕೆಲವು ಗಟ್ಟಿ ಇರಬಹುದು ಇನ್ನು ಕೆಲವು ಪೊಳ್ಳು ಇರಬಹುದು. ಆ ತಕ್ಷಣಕ್ಕೆ ನಿರ್ಧರಿಸಲಾಗದಿರಬಹುದು. ಸ್ವಲ್ಪ ಕಾಲದ ನಂತರ ನಿರ್ಧರಿಸಲಾಗಬಹುದು. ಅದಕ್ಕಾಗಿ ಒಂದೆಡೆ ಬರೆದಿಟ್ಟರೆ, ಸ್ನೇಹಿತರು ಓದಿ, ಅವರ ಸಲಹೆಯ ಮೇರೆಗೆ ಪರಿಷ್ಕರಿಸಬಹುದು" ಅನ್ನೋ ಮಾತುಗಳು ಈ ಮಾಧ್ಯಮದ plus, minusಗಳನ್ನ ಚಿಕ್ಕದಾಗಿ ಚೊಕ್ಕವಾಗಿ ಸೆರೆ ಹಿಡಿದಿವೆ ಅನ್ನಿಸುತ್ತೆ!:)
ಅನೂಪ್, ಹೌದು, ಜೀವನದಲ್ಲಿ ನಾವ್ ಎದುರಿಸೋ ಮಿಕ್ಕೆಲ್ಲ ಪ್ರಶ್ನೆಗಳ ಹಾಗೇ ಇದೂ ಅಲ್ಲ್ವಾ!:)
ಗೌತಮ್, ಹಸಿವಾಗ್ತಿತ್ತಾ ಬ್ಲಾಗ್ ಓದೋವಾಗ? ಅಥ್ವಾ ಚೆನ್ನಾಗಿ ಬಿಸಿಬೇಳೆಭಾತ್ ಮಾಡ್ಕೊಂಡು ತಿಂದುಬಿಟ್ಟಿದ್ದ್ಯಾ?;))
Tumba chanaagi barethiree,
i liked the style of your writing,using single english word in between the sentences...
ಶ್ರೀ ಅವರೇ,
ನನ್ನ ಪ್ರಕಾರ ಬ್ಲಾಗ್ ಅಂದರೆ ತೋಚಿದ್ದನ್ನು ಗೀಚಿಬಿಡುವ ಒಂದು ಸ್ಥಳ.
ಇನ್ನು ಸಾಹಿತ್ಯದ ವಿದ್ಯಾರ್ಥಿಯಾಗಿ ಹೇಳಬೇಕೆಂದರೆ, ಕೇವಲ ಹೆಸರಾಂತ ಲೇಖಕ-ಕವಿಗಳು ಬರೆದದ್ದೇ ಸಾಹಿತ್ಯವಾಗಬೆಕೆಂದೇನೂ ಇಲ್ಲ. ಟ್ರಾವೆಲ್ ಬ್ರೋಶರ್, ಅಟೊಬಯೋಗ್ರಫಿ, ಹಿರಿಗಥೆ, ಸಣ್ಣ ಕತೆ, ಲೇಖನ, ರಸೀದಿ, ಪತ್ರ... ಒಟ್ಟಿನಲ್ಲಿ ಬರಹ ರೂಪದಲ್ಲಿರುವುದೆಲ್ಲ ಸಾಹಿತ್ಯವೇ ಎಂದು ಸಾಹಿತ್ಯದ ಕ್ಲಾಸ್ನಲ್ಲಿ ಮೇಷ್ಟ್ರು ಹೇಳಿದ ನೆನಪು.
ಸೋ, ತೋಚಿದ್ದನ್ನು ಗೀಚುತ್ತಿರಿ.
ಹ್ಯಾಪಿ ಬ್ಲಾಗಿಂಗ್.
ನಮಸ್ಕಾರ
-ವಿಶ್ವನಾಥ
'express the feelings', dvಗಳು:) ಅದು ಕಾಂಪ್ಲಿಮೆಂಟ್ ಅಂತಾನೇ ಅನ್ಕೊಂಡ್ಬಿಡ್ತೀನಿ:P
ವಿಶ್ವನಾಥ್, ಹೌದು, ಬರೆದದ್ದೆಲ್ಲಾ post modern definition(?!:)) ಪ್ರಕಾರ ಸಾಹಿತ್ಯವೇ.. ಆದ್ರೆ ನಾನ್ ಮಾತಾಡ್ತಿರೋದು ಮುಖ್ಯವಾಗಿ canonical ಸಾಹಿತ್ಯದ parameters ಬಗ್ಗೆ. ಅದನ್ನ ಈ ಹೊಸ ಪ್ರಾಣಿಗೆ apply ಮಾಡ್ಬಾರ್ದೇನೋ ಅಂತ.
ಬರಹವೆಲ್ಲಾ ಆ ದೃಷ್ಟಿಯಲ್ಲಿ ಸಾಹಿತ್ಯವಾದ್ರೂ ಎಲ್ಲವನ್ನೂ ಒಂದೇ ಸ್ಕೇಲ್ ನಲ್ಲಿ ಅಳಿಯೋಕಾಗಲ್ಲ...ನಮ್ಮ್ ಬಾಲಿವುಡ್ ಹೀರೋಯಿನ್ಸ್ ಭಾಷೆನಲ್ಲಿ ಹೇಳೋದಾದ್ರೆ ಎಲ್ಲಾರ್ಗೂ ಅವರವರ ಸ್ಥಾನ ಇದೆ, ಯಾರೂ ಯಾರ್ ಜೊತೆಗೂ ಸ್ಪರ್ಧೆಗೆ ನಿಲ್ಲಬೇಕಿಲ್ಲ ಅಂತ!:))
ಬ್ಲಾಗ್ನ ಸ್ಥಾನ ನಿರ್ಧರಿಸುವಲ್ಲಿ "ಬ್ಲಾಗ್ ಏಕೆ ಬರೆಯುತ್ತೇವೆ?" ಎನ್ನುವ ಪ್ರಶ್ನೆಯಂತೆ "ಬ್ಲಾಗ್ ಏಕೆ ಓದುತ್ತೇವೆ?" ಎನ್ನುವ ಪ್ರಶ್ನೆಯು ಸಮಂಜಸ ಎನ್ನುವುದು ನನ್ನ ಅನಿಸಿಕೆ!
ತನ್ನ ದೇಶ-ಕಾಲಗಳ ವ್ಯಾಪ್ತಿಯನ್ನು ಮೀರಿ ಭಾವನೆಗಳನ್ನು ವ್ಯಕ್ತ ಪಡಿಸುವುದು ಸಾಹಿತಿಯ ಆಸೆ. ಆದ್ದರಿಂದ ಸಮಕಾಲೀನ ವಿಷಯಗಳು ಸಾಹಿತ್ಯಕ್ಕೆ ಉತ್ತಮ ಅಥವಾ ಅಗತ್ಯ ವಸ್ತು ಆಗಲಾರದು. ಸಾಹಿತ್ಯವು ದೀರ್ಘಾಯು. ಇನ್ನೊಂದೆಡೆ ವೃತ್ತಪತ್ರಿಕೆಗಳು ಅಲ್ಲಿನ-ಅಂದಿನ ವಿಷಯಗಳನ್ನು, ವಿಮರ್ಶೆಗಳನ್ನು ನೀಡುವ ಅಲ್ಪಾಯು. ಇಲ್ಲಿ ಭಾವನೆಗಳಿಗೆ ಸ್ಥಾನವಿಲ್ಲ. ಮಾಸಿಕ ಪತ್ರಿಕೆಗಳು ಮತ್ತು ಪತ್ರಿಕೆಯ ಅಂಕಣಗಳು ಇವೆರಡರ ಮಧ್ಯೆ ನಿಲ್ಲುತ್ತವೆ. ಆದರೆ ಬೆಳೆಯುತ್ತಿರುವ ತಾಂತ್ರಿಕತೆಗೆ ಮತ್ತು ಅಭಿರುಚಿ ವೈವಿಧ್ಯಕ್ಕೆ ಈ ಸಾಂಪ್ರದಾಯಿಕ ಮಾಧ್ಯಮಗಳು ಹೊಂದಿಕೊಳ್ಳಲು ಕಷ್ಟ. ಬಹುಶಃ ಬ್ಲಾಗ್ ಈ ಕೊರತೆಯನ್ನು ನೀಗಿಸುತ್ತದೆ. ಯಾರೋ ಎಲ್ಲೋ ಹೀಗೆ ಸುಮ್ನೆ ಬರೆದ ನಾಕು ಸಾಲುಗಳು ಇಷ್ಟವಾಗುತ್ತದೆ:) ಬರದವರ ವೈಯಕ್ತಿಕ ಅನಿಸಿಕೆಗಳೆ ಆಗಿದ್ದರೂ, ವಸ್ತುವಿನ ಸಾಮಿಪ್ಯದಿಂದ ಓದುಗರಿಗೆ ಸಾಹಿತ್ಯದಂತಯೆ ಸಂತೋಷ ಕೊಡುತ್ತದೆ. ಸಾಹಿತ್ಯಿಕ ಆಸಕ್ತಿಗಳಿಗೆ alternative ಆಗದೆ complement ಆಗುತ್ತದೆ. ಬ್ಲಾಗ್ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗುವುದಿಲ್ಲವೆ? (supporting actress ತರ:))
-ಪಿ. ಕಲ್ಯಾಣ್
ಮನಸ್ಸಿನ ದುಗುಡ ದುಮ್ಮಾನಗಳ ಭಾರ ಇಳಿಸಲು ಬ್ಲಾಗಿಸ್ತಾ ಇರಬೇಕು.
ಅದ್ಯಾಕೋ ಹರಟೆಕಟ್ಟೆ ಕಟ್ಟಿದ ನಂತ್ರ ನೀವು ಹೀಗೇ ಸುಮ್ಮನೆ ಬರೆಯೋದು ನಿಲ್ಸಿದ್ದು ಯಾಕೆ ಗೊತ್ತಾಗಿಲ್ಲ.
ಬರೀರಿ
ಬರೀತಾ ಇರಿ
ನಾನು ತವಿಶ್ರೀ ಬ್ಲಾಗ್ ನಲ್ಲಿ ಈ ನಮ್ಮ ಕೊಂಡಿಯನ್ನು ಕಂಡು, ಓದೋಣವೆನಿಸಿ ಬಂದೆ.
ಸ್ಲೇಟ್ ಈಗ ನನ್ನ ಕೈಗು ಸಿಕ್ಕಿದೆ.ಬೇರೆಯವರ ತಮ್ಮ ಸ್ಲೇಟಿನಲ್ಲಿ ಬರೆದಿರುವುದನ್ನು ಓದುವ ಕಾಯಕವು ಶುರು ಆಗಿದೆ. ಚೆನ್ನಗಿ ಬರಿತಿರಿ, ಬರೆಯುತ್ತ ಇರಿ :)
ಇಂತಿ
ಭೂತ
ಕಲ್ಯಾಣ್, ಅಸತ್ಯಾನ್ವೇಷಿ ಹಾಗೂ ಭೂತರಾಯರಿಗೆ dvಗಳು:)
@ ಕಲ್ಯಾಣ್
"ಬ್ಲಾಗ್ ಏಕೆ ಓದುತ್ತೇವೆ?" -interesting approach! ಈ ಬಗ್ಗೆ ಹೆಚ್ಚು ಯೋಚಿಸಿರ್ಲಿಲ್ಲ...food for thought!:)
ಆದ್ರೆ
"ತನ್ನ ದೇಶ-ಕಾಲಗಳ ವ್ಯಾಪ್ತಿಯನ್ನು ಮೀರಿ ಭಾವನೆಗಳನ್ನು ವ್ಯಕ್ತ ಪಡಿಸುವುದು ಸಾಹಿತಿಯ ಆಸೆ. ಆದ್ದರಿಂದ ಸಮಕಾಲೀನ ವಿಷಯಗಳು ಸಾಹಿತ್ಯಕ್ಕೆ ಉತ್ತಮ ಅಥವಾ ಅಗತ್ಯ ವಸ್ತು ಆಗಲಾರದು" - ಇದನ್ನ ನಾನ್ ಒಪ್ಪೋದಿಲ್ಲ. ಇದು ಬಹಳ limited definition of literature ಅಲ್ಲ್ವಾ?
"ಬರದವರ ವೈಯಕ್ತಿಕ ಅನಿಸಿಕೆಗಳೆ ಆಗಿದ್ದರೂ, ವಸ್ತುವಿನ ಸಾಮಿಪ್ಯದಿಂದ ಓದುಗರಿಗೆ ಸಾಹಿತ್ಯದಂತಯೆ ಸಂತೋಷ ಕೊಡುತ್ತದೆ." - ಇದೂ ಬ್ಲಾಗ್ ಬರಹ ಗಳ ಸ್ವಭಾವವನ್ನ define ಮಾಡಿರೋ ಥರ ಸರಿಯಾ? ಇಲ್ಲಿ ಬರೀ ಒಂದೇ ರೀತಿಯ ಬರಹಗಳು ಬರುತ್ತ್ವೆ ಅನ್ನೋದು ನಿಜ ಅಲ್ಲ ಅಲ್ಲ್ವಾ? ಈಗ ನಮ್ಮ ಕನ್ನಡ ಬ್ಲಾಗ್ ಪ್ರಪಂಚದಲ್ಲೇ ಮಜಾವಾಣಿ, ಬೊಗಳೆ ರಗಳೆಯಂತಹ ಪ್ರಯತ್ನಗಳು, ಸುಷೀಲ್ ನ ಕಾವ್ಯಕೃಷಿ(ಸುಸಂಕೃತ) - ಹೀಗೆ ಹಲವು ಪ್ರಕಾರದ ಬರವಣೀಗೆಗಳು ಬೆಳಕು ಕಾಣ್ತಿವೆಯಲ್ಲ? ನನಗನ್ನಿಸ್ತಿರೋದು ಬ್ಲಾಗ್ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗದೇ ಒಂದು ವಿಶಿಷ್ಟ ಮಾಧ್ಯಮವಾಗಿದೆ ಅನ್ನೋದು? supporting actress ಯಾಕ್ರೀ, ಇನ್ನೊಂದು ಫಿಲ್ಮ್ ನಲ್ಲಿ ಹೀರೋಯಿನೇ ಆಗ್ಬಹುದಲ್ಲ್ವ?:))
ಅಸತ್ಯಾನ್ವೇಷಿಗಳೇ, ಈಗ ಬರ್ದಿದೀನಲ್ಲ, ಮತ್ತೆ ಯಾಕೆ 'ಬರೀಲಿಲ್ಲ' ರಾಗ?!:))
ಭೂತ ಹಿಂದೆಯೂ ಬಂದಿದ್ದ ನೆನಪು;))
ದೇಶ-ಕಾಲಗಳ ವ್ಯಾಪ್ತಿಯನ್ನು ಮೀರಿದ್ದು (beyond the limits of space-time) ಉತ್ತಮ ಸಾಹಿತ್ಯ ಎನ್ನುವುದು limited definition ಹೆಂಗೇ? Unlimited definition ಅಲ್ವಾ? :))
ಇರಲಿ ಬಿಡಿ. ಬ್ಲಾಗ್ ಬರೆಯೋದಕ್ಕೆ ಓದೋದಕ್ಕೆ ಎನಾದರೂ ಕಾರಣ ಇರಲಿ ನೀವು ಬ್ಲಾಗಿಸ್ತಿರಿ, ನಾವು ಓದ್ತಿರ್ತೀವಿ :)
-ಪಿ. ಕಲ್ಯಾಣ್
ಇಷ್ಟು ದಿನ ಸುಮ್ಮನೆ ಏನೋ ತೋಚಿದ್ದನ್ನ ಗೀಚ್ತಿದ್ದ ನನಗೆ ನಿಮ್ಮ ಈ updates ಓದಿಬಿಟ್ಟು ನಿಜಕ್ಕೂ ಒಳ್ಳೇ ಸಾಹಿತ್ಯ ಬರೆಯೋವ್ರು ಮಾತ್ರವೇ ಬ್ಲಾಗ್ ಬರೀಬೇಕೆ? ಹಾಗಿದ್ರೆ ಅಷ್ಟೇನೂ ಒಳ್ಳೆಯದಲ್ಲದ ನನ್ನಂಥವರ ಬರವಣಿಗೆ ಪುಸ್ತಕದ ಕಡೇ ಹಾಳೆಯಲ್ಲಿ/ಡೈರಿಯಲ್ಲಿ ಗೌಣವಾಗಿಬಿಡಬೇಕೆ ಅನ್ನೋ ಪ್ರಶ್ನೆ ಕಾಡತೊಡಗೋದಕ್ಕೆ ಶುರುವಾಗಿ ಬೆನ್ನುಹುರಿಯಲ್ಲಿ ಬೆವರ ಹನಿ ಹರಿದುಬಂದಂತಾಯ್ತು...ತಕ್ಷಣ ಈ ರೀತಿಯ ಯೋಚನಾಲಹರಿಯ ಪರಿಮಿತಿಯ ಒಳಗೂ ನನ್ನನ್ನು ನಾನು ಗುರುತಿಸಿಕೊಳ್ಳಲಾರೆನೆಂದು ನಿರ್ಧರಿಸಿ ಈ ವಿಚಾರ ಇಲ್ಲೇ ಬಿಟ್ಟುಬಿಡೋದು ವಾಸಿ ಅನ್ನಿಸ್ತು...ಅದಕ್ಕೆ ಇಲ್ಲೇ ಬಿಟ್ಟುಬಿಟ್ಟೆ...
ನಿಜಕ್ಕೂ ಯಾಕೆ ಬರೀತೀವೋ ಗೊತ್ತಿಲ್ಲ...ದೈನಂದಿನ ಬದುಕಿನ ಜಂಜಾಟದಲ್ಲಿ ಕಂಡದ್ದು ಕೇಳಿದ್ದು ಕಲಿತದ್ದು miss ಮಾಡ್ಕೊಂಡಿದ್ದು ಎಲ್ಲವನ್ನೂ ನನ್ನ ಬ್ಲಾಗಿನಲ್ಲಿ ತುಂಬಿಸೋದೆ ನನ್ನ ಗುರಿ! ಹಂಚಿಕೊಳ್ಳೋ ವಿಷಯಗಳೆಲ್ಲವನ್ನೂ ಎಲ್ಲರ ಜೊತೆಗೂ ಏಕಕಾಲಕ್ಕೆ ಹಂಚಿಕೊಳ್ಳಲು ಇದಕ್ಕಿಂತ ಸುಲಭವಾದ,cheap ಆದ ಮಾರ್ಗ ಬೇರೆಯುಂಟೆ?!
So keep blogging!
ಕಲ್ಯಾಣ್,
ನನ್ನ ದೃಷ್ಟಿಯಲ್ಲಿ ಈ ಯುನಿವರ್ಸಲ್ ಗುಣಕ್ಕೆ ಪ್ರಾಮುಖ್ಯ ಕೊಡೋದು ಒಂದು ಲಿಮಿಟೆಡ್ ಡೆಫಿನಿಷನ್. ಈ ದೇಶ, ಈ ಕಾಲ, ಈ ಕ್ಷಣದ ನನ್ನ ಅನುಭವ ಯೂನಿಕ್ ಆಗಬಲ್ಲುದು. ಇದರ ಹೊರತಾಗಿ ಬರೆಯುವುದೇ ಉತ್ತಮ ಸಾಹಿತ್ಯ ಅಂದ್ರೆ ಅದು ಎಲ್ಲರಿಗೂ ಲಭ್ಯವಿರೋ ಅನುಭವ ಅಲ್ಲ್ವಾ? ಇನ್ನೂ ಮುಖ್ಯವಾಗಿ ನಾ ಹೇಳಿದ್ದು ನಿಮ್ಮ ಸ್ಟೇಟ್ಮೆಂಟ್ ನ ಎರಡನೇ ಭಾಗ - ಸಮಕಾಲೀನ ವಿಷಯಗಳು ಸಾಹಿತ್ಯಕ್ಕೆಸಾಹಿತ್ಯಕ್ಕೆ ಉತ್ತಮ ಅಥವಾ ಅಗತ್ಯ ವಸ್ತು ಆಗಲಾರದು - ಅನ್ನೋದು...ಸಾಹಿತ್ಯವನ್ನ ಜೇವನದ ಕನ್ನಡಿಯಾಗಿ ನೋಡೋ ಅಭ್ಯಾಸವೂ ಬೆಳೆಯುತ್ತಿರುವಾಗ ಈ ಯುನಿವರ್ಸಲಿಸ್ಮ್ ನ ಬೇಡಿಕೆ ಸ್ವಲ್ಪ irrelevant ಅನಿಸುತ್ತೆ ನನಗೆ...
ಬ್ಲಾಗ್ ಮಾಧ್ಯಮದ ವೈಶಿಷ್ಟ್ಯ ನಮ್ಮ ಬರಹದ ಒಳಿತು - ಕೆಡುಕುಗಳನ್ನ ನಾವೇ ಜಡ್ಜ್ ಮಾಡಿಕೊಂಡು ಯಾವುದನ್ನ ಪಬ್ಲಿಷ್ ಮಾಡೋದು ಅಂತ ನಿರ್ಧರಿಸೋದು, ಹಾಗೂ ಬೇರೆ ಯಾವುದೇ ಮಾಧ್ಯಮದಲ್ಲ್ಲಿ ಇಷ್ಟು ಸುಲಭವಾಗಿ ಸಾಧ್ಯವಾಗದ ಸಂವಾದ. ಇದನ್ನು ಬಿಟ್ಟು ಸಾಹಿತ್ಯಿಕವಾಗಿ ಬ್ಲಾಗ್ ಅಂದ್ರೆ ಮೊಮೆಂಟರಿ ಅನುಭವಗಳು, ಉತ್ತಮ ಸಾಹಿತ್ಯ ಅಂದ್ರೆ ಸಾರ್ವಕಾಲಿಕ ಅನ್ನೋ ದೆಫಿನಿಶನ್ ನನಗಂತೂ ಸರಿಯೆನಿಸೋಲ್ಲ..ಇವು ಅದಲಿ ಬದಲಿಯಾಗೋ ಸಾಧ್ಯತೆಗಳು ಬಹಳಷ್ಟಿವೆ ಅಂತ ನನಗನ್ನಿಸುತ್ತೆ.
ಸುಶೀಲ್, ಈ ಎಲ್ಲ ಚರ್ಚೆಗಳ ನಡುವೆ ನನಗೆ ಮನದಟ್ಟಾಗಿದ್ದು ಒಂದೇ ಒಂದು ವಿಷಯ - ತೋಚಿದ್ದನ್ನ ಗೀಚೋದು ಬಿಡಬರ್ದು ನಾವು:) ಮತ್ತೆ ನಿನ್ನ ಬರಹದ ಬಗ್ಗೆ ಹೇಳೋದಾದ್ರೆ ಅದು ಖಂಡಿತಾ ಡೈರಿಯ ಕಡೇ ಪುಟದಲ್ಲುಳಿಸಿಬಿಡುವಂಥದ್ದಲ್ಲ. ಈ ಮಾತನ್ನ ನಿನ್ನ ಬರಹಗಳನ್ನ ಓದಿದ ಯಾರಾದ್ರೂ ಹೇಳ್ತಾರೆ!
Blessed!
This is all I can say bout your comment on my writing...
inmuMde nimmiMda hecceccu blog updates expect mADabahudu ansatte! :)
ಶ್ರೀಯವರೇ,
ಬರೆಯುವುದಕ್ಕೆ ಕಾರಣಗಳು ಹಲವಿರಬಹುದು.
ನಮಗಾಗಿ ನಾವು ಬರೆಯುವುದು, ನಮಗಾಗಿ ನಾವು ಜೀವಿಸಿದಂತೆ.
ಬರೆಯುತ್ತಿರಿ
yet again speechless ma'am... dayavittu kshamisabeku male barediruva ella vyakthigalu... nange innoo sariyaagi kannada lipi computernalli balasokke baralla... hogli bidi... heegesumne maththomme od'daaga... mooka vismitanaade naanu... neevu ello irbekaadavru saamanya manushyara madhyene iddeera innoo... andre celebrity aagirbekaadavru neevu... nimma baravanige aththyththama...
heege barethaa iri madam
@gowtham
adakkE baryOdakkU time aaguttappa;) - nimgella OdOk time koDbEkalla:P
Susheel, nee bEga bareyappa, nanag hELi nee summne kootre henge!:)
@manaswini,
thanks for visiting:) howdu, fundamentally namagaagiyE baredukoLLODu, aadrU nimmanthavru bandu Odidaaga khushi aagutte:D
@suresh
bhaaLaa doDD maatugaLu ree!:)) nimm abhimaanakke dv'gaLU:)
super aagide akka.....alde ee commentgalu jotege ninna replies tumbane arth poorna vaagive.....
aadroo ondu feelingu vishayagalu tumba gahanavagi ive comment maadodu kashtada maatu....
eno neevella illi blog-gala contents bagge vichara maaadtirovaga nanna manassu innondu yoochaneyalli todagittu adu ee BLOG-ge kannadadalli een antaare athava anabahudu antha :}
sampadakiyadalli nanage swalpa dwandwa ide annisutte.
Ondu kade google ondu kade ketta jagadikaranada sanketa anta dooruttare.
Inndodu kade sampada.net drupal opayogisuttide anta aakhepisuttare (drupal - ondu free and open source software).
nanna prakara "there is no meaning in reinventing the wheel". Drupal athava wordpress jagathi karanada sanketa vadare...windows athava IE bagge ennana beku?
ಶ್ರೀಯವರೆ,
"ನಾನೇಕೆ ಬ್ಲಾಗಿಸುತ್ತೇನೆ" ವಿಚಾರವಾಗಿ ಗಹನವಾದ ಮಾತುಕತೆ ನಡೆದಂತಿದೆ. ಅದರ ಕುರಿತು ಬರೆಯುವುದಕ್ಕೆ ಏನೂ ತೋಚುತ್ತಿಲ್ಲ. ನಿಮ್ಮ ಬ್ಲಾಗಿನಿಂದ ಮಜಾವಾಣಿಗೆ ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ,
ವಿ.ವಿ.
Post a Comment