ಸಾವಿರ ದಾಟಿ ಇನ್ನೇನು ತಿಂಗಳಾಗುತ್ತೆ...ಬರೆದು ಹಾಕೋ ವಿಷಯಗಳು ನೂರಿವೆ ತಲೆಯಲ್ಲಿ...ಇವತ್ತೆಷ್ಟು ಬರಿಯಬಲ್ಲೆ ಗೊತ್ತಿಲ್ಲ. ನಿದ್ದೆ ಕಣ್ಣುತುಂಬೋ ಮೊದಲು ಇವತ್ತು ಕೇಳಿದ ಕೆಲವು ಹಾಡುಗಳನ್ನ ಮೆಲುಕು ಹಾಕ್ತಾ ಇದೆ ಮನಸ್ಸು. ನಾಕು ಸಾಲು ಗೀಚಿಬಿಡ್ತೀನಿ...ಒಳ್ಳೆ ಹಾಡುಗಳು, ನನಗೇ ನಾಳೆ ಮರೆತಾಗ ಇಲ್ಲಿ ಬಂದು ಓದಿಕೊಳ್ಳೋಕಾಗುತ್ತೆ!
ವ್ಯಾಸರಾಯರ ಕವನ ಇ-ಟಿವಿಯಲ್ಲಿ ಎದೆ ತುಂಬಿ ಹಾಡಿದೆನು'ನಲ್ಲಿ ಸೊಗಸಾಗಿ ಹಾಡಿದ್ರು ಶಿವಮೊಗ್ಗದವ್ರೊಬ್ಬ್ರು. ಆಹ್! ಒಳ್ಳೆ ಗಝಲ್ ಧಾಟಿಯಲ್ಲಿದೆ ಸಾಹಿತ್ಯ:
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಅದೇ ಪ್ರೋಗ್ರಾಮ್ನಲ್ಲಿ ಕೇಳಿದ ಇನ್ನೊಂದು ಹಾಡು:
ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬಾ ಪ್ರೀತಿ
ಈಗ ಯಾಕೆ ಧ್ವನಿಸುತ್ತಿದೆ(?) ಏನೋ ಶಂಕೆ ಭೀತಿ
ಹಾಗೇ ಚಾನೆಲ್ ಸರ್ಫ್ ಮಾಡ್ತಾ ಅಣ್ಣಾವ್ರ ಹಿಟ್ಸ್ ಕೇಳಿ ಮತ್ತೊಮ್ಮೆ ಸೋತೆ ನಾನಾಗ!:)
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ... ಅತಿ ಮಧುರ ರೀ ಆ ಹಾಡುಗಳು! ಅಣ್ನಾವ್ರು ಅವರ ವರ್ಚಸ್ಸು ಉಪಯೋಗ್ಸಿ ಜನರಿಗೆ ಬೇರೆ ಏನ್ ಮಾಡಿದ್ರೋ ಬಿಟ್ಟ್ರೋ ನನಗೆ ಅದು ಬೇಕಿಲ್ಲ! ಸದಭಿರುಚಿಯ ಮನೋರಂಜನೆ ಅಂದ್ರೇನು ಅಂತ ಕನ್ನಡಿಗರಿಗೆ ಒಂದು standard set ಮಾಡಿದ್ರು! ಆ ಅಭಿನಯ, ಭಾಷೆ...ಉಫ್! ರವಿ ಬೆಳಗೆರೆಯವ್ರು ಹೇಳಿದ್ ಒಂದು ಮಾತು ಭಾಳಾ ಹಿಡಿಸ್ತು - ಅಣ್ಣಾವ್ರನ್ನ ನಮ್ಮೆಲ್ಲರ ಪ್ರೀತಿಯ ಕನ್ನಡ ಮೇಷ್ಟ್ರು ಅಂದಿದ್ದು!
ಚಿಕ್ಕ ವಯಸ್ಸ್ನಲ್ಲಿ ಎದುರು ಮನೆಗೆ ಹೋಗಿ (ಆಗ ನಮ್ಮನೇಲಿ ಟಿವಿ ಇರ್ಲಿಲ್ಲ!) ಆಂಟಿ ಕೊಟ್ಟ ಕಡ್ಲೇಪುರಿ ತಿನ್ನುತಾ ನೋಡ್ತಿದ್ದ ಅಣ್ನಾವ್ರ black n white ಚಿತ್ರಗಳು ಇವತ್ತಿಗೂ ಮನಸ್ಸಲ್ಲಿ ಹಸಿರಾಗಿವೆ! ನರಸಿಂಹರಾಜು, ಬಾಲಕೃಷ್ಣ ಅವರುಗಳ ಜೊತೆಯಲ್ಲಿನ ಹಾಸ್ಯ, ಕಲ್ಪನಾ, ಮಂಜುಳಾ, ಭಾರತಿ...ಆ ರೊಮ್ಯಾನ್ಸ್... ಆ ಆದರ್ಶಪುರುಷನ ರೋಲ್ ಗಳು...ಅಣ್ಣಾವ್ರಿಗೆ ಉತ್ತರ ಇಲ್ಲ ಬಿಡ್ರೀ! ಇವತ್ತು ಕಡ್ಲೇಪುರಿ ಕೊಡ್ತಿದ್ದ ಆಂಟಿನೂ ಇಲ್ಲ, ಕಣ್ಣಿಗೆ, ಕಿವಿಗೆ ಹಬ್ಬವಾಗಿದ್ದ ಅಣ್ಣಾವ್ರೂ ಇಲ್ಲ... ಆದ್ರೆ ಅಣ್ಣಾವ್ರ ಚಿತ್ರಗಳು ನಮ್ಮ ಜೊತೆ ಯಾವಾಗ್ಲೂ ಇರುತ್ತ್ವೆ...ಅವುಗಳನ್ನ್ ನೋಡ್ದಾಗ ನೆನಪಿನ ಭಿತ್ತಿಯಲ್ಲಿ ಎಲ್ಲೋ ಕಳೆದುಹೋಗಿದ್ದ ಆಂಟಿಯ ನೆನಪೂ ಸುಳಿದ ಕಿರುನಗೆಯಂತೆ....
ಅಣ್ಣಾವ್ರು ಹೋಗ್ಬಿಟ್ಟ್ರು ಅನ್ನೋ ನ್ಯೂಸ್ ತಿಳಿದಾಗ ಸಡನ್ನಾಗಿ ಆವರಿಸಿದ ಖಾಲಿತನ ಈಗ ನಿಧಾನಕ್ಕೆ ಕರಗ್ತಿದೆ. ಅಣ್ಣಾವ್ರು ಹೋಗೋದು ಅಸಾಧ್ಯ ಅನ್ನೋ ಅರಿವು ಬರ್ತಿದೆ.
ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ...
ಆ ಇನ್ನೋಸೆಂಟ್ ನಗೆ ಆಗೀಗ ಟಿವಿಯಲ್ಲಿ ಮಿಂಚಿ ನಾನಿಲ್ಲೇ ಇದ್ದೀನ್ರಪ್ಪಾ, ಅನ್ಯಾಯವಾಗಿ ಬೆಂಕಿ ಹಚ್ಚಬೇಡಿ ನನ್ನ್ ಹೆಸರಲ್ಲಿ ಅನ್ನ್ತಿರೋ ಹಾಗನ್ನ್ಸುತ್ತೆ!
ವ್ಯಾಸರಾಯರ ಕವನ ಇ-ಟಿವಿಯಲ್ಲಿ ಎದೆ ತುಂಬಿ ಹಾಡಿದೆನು'ನಲ್ಲಿ ಸೊಗಸಾಗಿ ಹಾಡಿದ್ರು ಶಿವಮೊಗ್ಗದವ್ರೊಬ್ಬ್ರು. ಆಹ್! ಒಳ್ಳೆ ಗಝಲ್ ಧಾಟಿಯಲ್ಲಿದೆ ಸಾಹಿತ್ಯ:
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಅದೇ ಪ್ರೋಗ್ರಾಮ್ನಲ್ಲಿ ಕೇಳಿದ ಇನ್ನೊಂದು ಹಾಡು:
ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬಾ ಪ್ರೀತಿ
ಈಗ ಯಾಕೆ ಧ್ವನಿಸುತ್ತಿದೆ(?) ಏನೋ ಶಂಕೆ ಭೀತಿ
ಹಾಗೇ ಚಾನೆಲ್ ಸರ್ಫ್ ಮಾಡ್ತಾ ಅಣ್ಣಾವ್ರ ಹಿಟ್ಸ್ ಕೇಳಿ ಮತ್ತೊಮ್ಮೆ ಸೋತೆ ನಾನಾಗ!:)
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ... ಅತಿ ಮಧುರ ರೀ ಆ ಹಾಡುಗಳು! ಅಣ್ನಾವ್ರು ಅವರ ವರ್ಚಸ್ಸು ಉಪಯೋಗ್ಸಿ ಜನರಿಗೆ ಬೇರೆ ಏನ್ ಮಾಡಿದ್ರೋ ಬಿಟ್ಟ್ರೋ ನನಗೆ ಅದು ಬೇಕಿಲ್ಲ! ಸದಭಿರುಚಿಯ ಮನೋರಂಜನೆ ಅಂದ್ರೇನು ಅಂತ ಕನ್ನಡಿಗರಿಗೆ ಒಂದು standard set ಮಾಡಿದ್ರು! ಆ ಅಭಿನಯ, ಭಾಷೆ...ಉಫ್! ರವಿ ಬೆಳಗೆರೆಯವ್ರು ಹೇಳಿದ್ ಒಂದು ಮಾತು ಭಾಳಾ ಹಿಡಿಸ್ತು - ಅಣ್ಣಾವ್ರನ್ನ ನಮ್ಮೆಲ್ಲರ ಪ್ರೀತಿಯ ಕನ್ನಡ ಮೇಷ್ಟ್ರು ಅಂದಿದ್ದು!
ಚಿಕ್ಕ ವಯಸ್ಸ್ನಲ್ಲಿ ಎದುರು ಮನೆಗೆ ಹೋಗಿ (ಆಗ ನಮ್ಮನೇಲಿ ಟಿವಿ ಇರ್ಲಿಲ್ಲ!) ಆಂಟಿ ಕೊಟ್ಟ ಕಡ್ಲೇಪುರಿ ತಿನ್ನುತಾ ನೋಡ್ತಿದ್ದ ಅಣ್ನಾವ್ರ black n white ಚಿತ್ರಗಳು ಇವತ್ತಿಗೂ ಮನಸ್ಸಲ್ಲಿ ಹಸಿರಾಗಿವೆ! ನರಸಿಂಹರಾಜು, ಬಾಲಕೃಷ್ಣ ಅವರುಗಳ ಜೊತೆಯಲ್ಲಿನ ಹಾಸ್ಯ, ಕಲ್ಪನಾ, ಮಂಜುಳಾ, ಭಾರತಿ...ಆ ರೊಮ್ಯಾನ್ಸ್... ಆ ಆದರ್ಶಪುರುಷನ ರೋಲ್ ಗಳು...ಅಣ್ಣಾವ್ರಿಗೆ ಉತ್ತರ ಇಲ್ಲ ಬಿಡ್ರೀ! ಇವತ್ತು ಕಡ್ಲೇಪುರಿ ಕೊಡ್ತಿದ್ದ ಆಂಟಿನೂ ಇಲ್ಲ, ಕಣ್ಣಿಗೆ, ಕಿವಿಗೆ ಹಬ್ಬವಾಗಿದ್ದ ಅಣ್ಣಾವ್ರೂ ಇಲ್ಲ... ಆದ್ರೆ ಅಣ್ಣಾವ್ರ ಚಿತ್ರಗಳು ನಮ್ಮ ಜೊತೆ ಯಾವಾಗ್ಲೂ ಇರುತ್ತ್ವೆ...ಅವುಗಳನ್ನ್ ನೋಡ್ದಾಗ ನೆನಪಿನ ಭಿತ್ತಿಯಲ್ಲಿ ಎಲ್ಲೋ ಕಳೆದುಹೋಗಿದ್ದ ಆಂಟಿಯ ನೆನಪೂ ಸುಳಿದ ಕಿರುನಗೆಯಂತೆ....
ಅಣ್ಣಾವ್ರು ಹೋಗ್ಬಿಟ್ಟ್ರು ಅನ್ನೋ ನ್ಯೂಸ್ ತಿಳಿದಾಗ ಸಡನ್ನಾಗಿ ಆವರಿಸಿದ ಖಾಲಿತನ ಈಗ ನಿಧಾನಕ್ಕೆ ಕರಗ್ತಿದೆ. ಅಣ್ಣಾವ್ರು ಹೋಗೋದು ಅಸಾಧ್ಯ ಅನ್ನೋ ಅರಿವು ಬರ್ತಿದೆ.
ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ...
ಆ ಇನ್ನೋಸೆಂಟ್ ನಗೆ ಆಗೀಗ ಟಿವಿಯಲ್ಲಿ ಮಿಂಚಿ ನಾನಿಲ್ಲೇ ಇದ್ದೀನ್ರಪ್ಪಾ, ಅನ್ಯಾಯವಾಗಿ ಬೆಂಕಿ ಹಚ್ಚಬೇಡಿ ನನ್ನ್ ಹೆಸರಲ್ಲಿ ಅನ್ನ್ತಿರೋ ಹಾಗನ್ನ್ಸುತ್ತೆ!
26 comments:
chance illa odakke! its been too long! che che.......feeling bad.
arhta aaglilla! odakke chance illvaa??!! yaake??
ಮನಮುಟ್ಟುವ ಹಾಗೆ ಬರೆದಿದ್ದೀರಿ. ಡಾಕ್ಟರ್ ರಾಜ್ ನಮ್ಮ ನೆನಪಿನಿಂದ ಹೋಗೋದು ಅಸಾಧ್ಯ. ಅವರ ಸಭ್ಯತೆಗೂ ಅವರ ಅಂತಿಮಸಂಸ್ಕಾರದ ಘಟನೆಗಳಿಗೂ ಎಂತಹ ಅಜಗಜಾಂತರ.
(ಕಸ್ತೂರಿನಿವಾಸದಲ್ಲಿ ಪಾರಿವಾಳದ ಜೊತೆ ಪೋಸ್ ಕೊಟ್ಟಿದ್ದ ರಾಜ್‍ಕುಮಾರ್ ಚಿತ್ರ ನೆನಪಿಗೆ ಬರ್ತಿದೆ)
sree... agree with u that annavru reminds me of our younger days, the dd channel, family glued to the tv, melodious songs played on akashvani while getting ready to go to school ( and ofcourse sant's dance at gandharva !!)...truly he's the synonym of nostalgia...
pls increase the font size so that i can read it in half the time :-)
sham n prash thanks for the nice words:D n for reminding of beautiful moments of ANNaavru as part of our lives:)
prash, font size default setting upyOgsideeni...view nalli text size increase maaDkondbiDbEkittu tumbaa kashTa aagidre;P
@gowtham
ok, ur turn now:p
ur blog page has such a confusing design! one cant know whats the latest entry!!(unless one sees the date, which i ddnt do, accepted!:D)
ಬರಹ ಬಹಳ ಚೆನ್ನಾಗಿ ಮೂಡಿದೆ. ನೀವೇ ನೋಡಿ ಬಹಳ ಇಂಪ್ರೂವ್ ಆಗಿದ್ದೀರ. ನೀವು ನನಪಿಸಿದ ಹಾಡುಗಳು ನಾನೂ ಗುನುಗುತ್ತಿರುವೆ. ಶರೀರ - ಶಾರೀರ ಡೈಲಾಗ್ ನೆನಪಿದೆ ಅಲ್ವೇ. ರಾಜ್ ಹಾಡುಗಳಿಗೆ ಪಿಬಿಶ್ರೀ ಗಾಯನ ಹೇಳಿ ಮಾಡಿಸಿದ ಹಾಗೆ. ಈ ತುಣುಕು ಬರಹದಿಂದ ನನಗೆ ಮರೆಯದ ಹಾಡುಗಳು ನೆನಪಾಗುತ್ತಿವೆ
ye crack!
OL yaako biDli! nangEn huchchnaayi kacchidyaa?!(rest will be posted in ur blog!) nann blognalli nann blog bagge maatra maathaaDbEkaagi vinanti. nin blog bagge jagaLa kaaybEkidre ninn blognallE aagbEku adu - illi nanna bhaktabaandhavarige, guruhiriyarige confuse aagutte!
yeah those childhood days....i still remember all those kannada movies which our kannada channel beamed on every sunday evening.....above all raj's movies added a lot of colour to those evenings(when raj's movie was beamed ofcurse!!!!).....enjoyed all those!!!!!!!
well those days were those days full of innocence and beliveing what all u see on the screen,
on a lighter note......
i just wonder why these days have caused a lot of change....they(these days) just laugh at those raj's movies,
to be frank he indeed was an excellent actor and human being but nothing more than that,
(i am greatful to u for reminding those sunday evening movies akka)
and abt that violence and people's reaction to his death.....i really doubt,all those fans who were crying like hell were crying in the same manner(fashion or passion any of thses can be substituted) when they lost any of their parents!!....
really very sorry if my comments ahve hurt any body,
ನೋಡಿ, ಸಾವ್ರ-ಗೀವ್ರ ಲೆಕ್ಕಕ್ಕಿಟ್ಟುಕೊಳ್ದೇ, ಮನಸ್ಸಿನಲ್ಲಿರೋದನ್ನೆಲ್ಲ ತೆಗೆದು ಹೊರಹಾಕಿ ಸ್ವಲ್ಪ ಗಾಳಿನಾದ್ರೂ ಕುಡೀಲಿ!
ನೀವೆಲ್ಲ ಪುಣ್ಯವಂತ್ರೂ ಬೇಕು ಅಂದಾಗೆಲ್ಲ ಅಣ್ಣಾವ್ರ ಸಿನಿಮಾ ನೋಡ್‌ಬಹುದು.
ಹೀಗೇ ಬರೀತಾ ಇರಿ.
ಇತಿ,
ನಿಮ್ಮವ
antarnaga.blogspot.com
ನೀವು ಬರ್ದಿರೋದು ಸರಿಯಾಗಿ ಕಾಣಿಸ್ತಿಲ್ಲ.
ಎಲ್ಲರಿಗೂ ಈ ರೀತಿ ಆಗ್ತಿದ್ಯೋ ಅಥವ ಇದು ನಂಗೆ ಮಾತ್ರ ಆಗ್ತಿರೋದೋ??
ravi - neen bardirOdu artha aagtillapa - yaarige yaav vishyakke hurt aagutte anta?!
@nimmava naanu?(lol!)
saavira naan lekkakkiDolla, site meter iDUtte - naanEnidrU nODi santOsha paDOdashTE:D
n gaaLi aagaaga kuDstaanE irteeni - bardu bisaaktaanU irteeni - beega haakiTTu muggulu hiDyOke biDalla yaavdannU!:))
n Srinivas saar, thanks, ellaa nimmgaLa prOtsaaha:) sorry, ee gowtham jote kOLi jagaLadalli nimm comment'ge reply haakOdu marte!
n anonymous - neevE first kaaNtilla anta complain maaDtirOdu - so... btw hesru haakidre channaagirutte commentsnalli...
ನಮಸ್ಕಾರ.
ನಾನೆ ಅನಾನಿಮಸ್ ಆಗಿ ಪೋಸ್ಟಿಸಿದ್ದು. ಪೋಸ್ಟಿಸಿದಾಗ ಸ್ವಲ್ಪ ತೊಂದರೆ ಆಗಿತ್ತು, ಅದಕ್ಕೆ ಅನಾನಿಮಸ್.
ನೋಡಿ ನಂಗೆ ಹೀಗೆ ಕಾಣಿಸ್ತಿದೆ.
@ krishnaprasad
ಗೊತ್ತಿಲ್ಲ ರೀ...ನೀವ್ ಬರ್ದಿರೋದು, ನಾನ್ ಬರ್ದಿರೋದು ಎರಡೂ ನನಗೆ ಸರಿಯಾಗಿ ಕಾಣ್ತಿದೆ. ನಿಮ್ಮ ಬ್ರೌಸರ್/ಓ ಎಸ್ ನಲ್ಲಿ ಏನಾದ್ರೂ compatibility issue ಇರಬಹುದು...
gottilla ree...neev bardirOdu, naan bardirOdu eraDU nanage sariyaagi kaaNtide. nimma browser/ OS nalli EnaadrU compatibility issue irabahudu...
ಹೋಗ್ಲಿ ಬಿಡಿ.
ನಾನು ಬೆಂಕಿನರಿ(Firefox) ಉಪಯೋಗಿಸುತ್ತಿರೋದು.
ಹಾಗೆ ಬೇರೆಯವರ ಬ್ಲಾಗ್‍ಗಳಲ್ಲಿ ಮತ್ತೆ ನಿಮ್ಮ ಬ್ಲಾಗ್‍ನಲ್ಲಿ ಕಾಮೆಂಟ್ಸ್ ಎಲ್ಲ ಕನ್ನಡದಲ್ಲಿ ಕಾಣಿಸ್ತಿದೆ, ಆದ್ರೆ ನಿಮ್ಮ ಲೇಖನ ಮಾತ್ರ ಹೀಗೆ :(
ಒಳ್ಳೆ ಲೇಖನ ಓದಕ್ಕಾಗ್ಲಿಲ್ಲ :(
@krishnaprasad
benki nari bagge maahiti illa ree:( i belong to the technically challenged species - so neevE daari huDukkObEku:)
oLLe lEkhana anta OdOk munchenE hELtideeraa!:))
@gowtham
bareeteenO...sakhath biji aagbiTTideeni...swalpa pursottaad takhsaNa bareeteeni
ಕೃಪ್ರ ಅಲ್ಲಿ ಬರೆದಿರುವುದು ಓದಲಾಗದಿದ್ದರೆ, ಅದನ್ನು ಕತ್ತರಿಸಿ ನಿಮ್ಮ ಐ.ಇ. ಬ್ರೌಸರ್ ನಲ್ಲಿ ಅಥವಾ ವರ್ಡ್ ಕನ್ವರ್ಟರ್‍ನಲ್ಲಿ (ಬರಹ) ಹಾಕಿಕೊಂಡು ನೋಡಿ.
ನಿಜವಾಗಿಯೂ ನೀವೊಂದು ಒಳ್ಳೆಯ ಲೇಖನ ಓದುವುದನ್ನು ತಪ್ಪಿಸಿಕೊಳ್ತಿದ್ದೀರ.
ಶ್ರೀಮಾತಾ,
ಅರ್ಕುಟ್ ನಲ್ಲಿ ನಿಮ್ಮ ಬ್ಲಾಗ್‍ತಾಣವನ್ನು ಕಂಡು ಅಲ್ಲಿಗೆ ಒಂದೇ ಕ್ಲಿಕ್‍ನಲ್ಲಿ ನೆಗೆದು ಬಂದುದಕ್ಕು ಸಾರ್ಥಕವಾಯಿತು.ಅಣ್ಣಾವ್ರ ಬಗ್ಗೆ ಅಂತರಾಳದ ಮಾತುಗಳನ್ನು ಈ ಲೇಖನದಲ್ಲಿ ಓದುದವಕ್ಕೆ ಅವಕಾಶ ಸಿಕ್ಕಿತು.
ತುಂಬಾ ಸೊಗಸಾಗಿ ನೆನಪಿನಾಂಗಳದಿಂದ ಪದಗಳನ್ನು ಹೆಕ್ಕಿದ್ದೀರ.ಹೀಗೆ ಸಾಗಲಿ ನಿಮ್ಮ ಬ್ಲಾಗುವಿಕೆ..
@ಶ್ರೀ:ಇಲ್ಲಿ ಜನ ಹಾಕಿರೋ ತಮ್ಮ ಅನಿಸಿಕೆಗಳನ್ನ ಓದಿ, ಒಳ್ಳೆ ಲೇಖನ ಅಂತ ಹೇಳಿದೆ ಅಷ್ಟೆ.
@ತವಿಶ್ರೀ: ತುಂಬ ಥ್ಯಾಂಕ್ಸ್ . ನೀವು ಹೇಳಿದ ಹಾಗೆ ಮಾಡಿ ನೋಡುತ್ತೇನೆ.
ಕೊನೆಗೂ ಕಂಡು ಹಿಡಿದೆ.
ತೊಂದರೆ ಇರೋದು Firefox ನಲ್ಲಿ, IE ನಲ್ಲಿ ಚೆನ್ನಗೆ ಕಾಣಿಸ್ತಿದೆ.
Firefox ನಲ್ಲೂ ಕನ್ನಡ ಚೆನ್ನಾಗೆ ಕಾಣಿಸ್ತದೆ ಆದ್ರೆ text Justify ಮಾಡಿದಾಗ ಹೀಗಾಗುತ್ತೆ. ನೀವು Justify Full ಮಾಡಿದ್ದೀರಿ ಅಲ್ವೆ, ಅದಕ್ಕೆ ಹೀಗೆ.
ನನ್ನ ಗೊಣಗಾಟಕ್ಕೆ ನಿಮ್ಮ ಬ್ಲಾಗ್ ಉಪಯೋಗಿಸಿದ್ದಕ್ಕೆ ಕ್ಷಮೆ ಇರಲಿ.
ನನಗೆ ಅಣ್ಣಾವ್ರ ಬಗ್ಗೆ ಬರುತ್ತಿರುವ ಯಾವುದೇ ಲೇಖನ ಓದಲು ಶುರುಮಾಡಿದರು ಎದೆ ಭಾರವಾಗಿ ಅರ್ಧಕ್ಕೆ ನಿಲ್ಲಸಬೇಕೆನಿಸುತ್ತದೆ. ಆದರೆ ನಿಲ್ಲಿಸಲು ಆಗುವುದಿಲ್ಲ! ಇದು ನಿಮ್ಮ ಲೇಖನದಲ್ಲಿ ಹೆಚ್ಚಾಗಿ ಕಾಡಿದೆ!!
ಏನ್ರಿ ಶ್ರೀ, ಪುರೊಸೊತ್ತಿಲ್ಲವ? ಬಹಳ ದಿನಗಳಾಗಿದೆ ನಿಮ್ಮ ಬ್ಲಾಗ್ update ಆಗಿ.
ಶಿವ್, ಧನ್ಯವಾದಗಳು:)
ಕೃಪ್ರ, ಅಭಿನಂದನೆಗಳು!:))ಬೆಂಕಿನರಿಯ ಮಿತಿಗಳ ಬಗ್ಗೆ ನಮ್ಗೂ ತಿಳ್ಸಿದ್ದಕ್ಕೆ ಧನ್ಯವಾದಗಳೂ:)
ಕಲ್ಯಾಣ್, ಧನ್ಯವಾದ again!:)
"ತಲೆಹರಟೆ", ಹೌದ್ರೀ, ಸ್ವಲ್ಪ ಬಿಜಿ ಆಗ್ಬಿಟ್ಟಿದೀನಿ...ಬರೀತೀನಿ ಆದಷ್ಟು ಬೇಗ:)
ತಿಂಗಳ ಮೇಲೆ ಒಂದು ವಾರ ಆಯ್ತು. ಒಂದು ಸಾಲಿನ ಲೇಖನವಾದ್ರೂ ಬೇಡವೇ? ಈಗೇನು ರಾಮೋತ್ಸವದ ಕಾಲವಲ್ಲ ಏನಲ್ಲ. ಎಲ್ಲರಿಗೂ ಬರೆಯಿರಿ ಬರೆಯಿರಿ ಎಂದು ಹೇಳಿ, ನಿಮ್ಮ ಬ್ಲಾಗ್‍ನಲ್ಲಿ ಹೊಸ ಬರಹವೇ ಕಾಣಿಸಲಿಲ್ಲ.
ಹೊಸ ಲೇಖನ ಬೇಕ್ಲೇ ಬೇಕು. ನನ್ನ ಪಿಸಿ ಡಮಾರ್ ಎಂದಿದೆ. ಅದಕ್ಕಾಗಿ ನನ್ನ ತಾಣ ಆಶ್ರಯದಲ್ಲಿ ನನ್ನ ಲೇಖನಗಳು ಸ್ವಲ್ಪ ದಿನವಿಲ್ಲ.
ಶ್ರೀನಿವಾಸ್ ಸಾರ್, ನಿಮ್ಮ ಅಭಿಮಾನಕ್ಕೆ dv'ಗಳು! ಬರೆದಿಟ್ಟಿದೀನಿ ಈಗ ತಾನೆ - ಹೊಸದನ್ನ. ಸ್ವಲ್ಪ formatting ಕೆಲ್ಸ ರಾತ್ರಿ ಮುಗ್ಸಿ ಮೇಲೇರ್ಸ್ತೀನಿ:) ಆಶ್ರಯ ಚೇತರಿಸಿಕೊಳ್ಳ್ಲಿ ಬೇಗ ಅಂತ ಹಾರೈಸ್ತೀನಿ:)
ಮತ್ತೆ ಸುಧೀರ್, ಇಲ್ಲ, ಪುಂಡಲೀಕ ಶೇಟ್ ಅವರ ಬರಹಗಳನ್ನ್ ಓದಿಲ್ಲ.
hmmm....ಭಾಷೆಯನ್ನ ಪ್ರಯೋಗಾತ್ಮಕವಾಗೇನ್ ಆರಿಸಿಕೊಳ್ಳೋ ಪ್ರಯತ್ನ ಮಾಡಿಲ್ಲ ನಾನು ಇಲ್ಲಿಯ ವರೆಗೆ...ಭಾವನೆಗೆ ತಕ್ಕ ಭಾಷೆ ತಾನೇ ಬಂದರೆ ಚೆನ್ನ ಅಂತ ನನಗನ್ನಿಸುತ್ತೆ...ಇಲ್ಲದಿದ್ದ್ರೆ artificial ಅನ್ನಿಸೋ ಅಪಾಯ ಇದೆ ಅಲ್ಲ್ವ?
hey sree...chanced upon your blog while looking for yaava mohana murali lyrics...am really impressed with your kannada blog. though i want to blog in namma bhashe too...find it difficult to type long pieces. keep up the great writing. and yes, annavru is dearly missed...he is our evergreen hero and will continue to live on in our hearts.
Post a Comment