ಹುರ್ರಾ!!!!! ಕೊನೆಗೂ ಗೆದ್ದುಬಿಟ್ಟೆ:)
ಬರಹ ಯುನಿಕೋಡ್ ಬಳಸಲು ಎಲ್ಲರೂ ಕೊಟ್ಟ ಸಲಹೆಗಳನ್ನ ಒಂದಾದಮೇಲೊಂದು try ಮಾಡೀ ಮಾಡೀ ಸೋತು ಸುಣ್ಣವಾಗಿ ಇನ್ನೇನು ಧರಾಶಾಯಿಯಾಗೋದ್ರಲ್ಲಿದ್ದೆ, ನನ್ನ್ ತಮ್ಮ
ಅಪರೂಪಕ್ಕೊಂದು ಒಳ್ಳೇ ಸಲಹೆ ಮುಂದಿಟ್ಟ - ಬ್ರೌಸರ್ ಬದಲಿಸಿ ನೋಡು ಅಂತ! ಒಪೆರನಲ್ಲಿ ಪ್ರಯತ್ನಿಸಿದ ತಕ್ಷಣ ಬಂದುಬಿಡ್ತು ನಮ್ಮ ಕನ್ನಡದ ಮಲ್ಲಿಗೆ ಹೂವು, ಮುತ್ತಿನ ಸಾಲು!
ತವಿಶ್ರೀಯವರಿಗೆ, ಸುಶೀಲ್ ಗೆ,ಶ್ರೀ(ಏನ್ಸಮಾಚಾರ!)ಗೆ,alwaysvettiಗೆ ಸಲಹೆಗಳಿಗಾಗಿ, ಮಾರ್ಗದರ್ಶನಕ್ಕಾಗಿ ಧನ್ಯವಾದಗಳು:)
ಹುಹ್! ತುಂಬಾ ಹಸಿವಾದಾಗ ಏನನ್ನೂ ತಿನ್ನೋಕಾಗಲ್ಲ! ಏನ್ ಬರಿಯೋದಕ್ಕೂ ಆಗ್ತಿಲ್ಲ - ತಲೆಯಲ್ಲಿ ಐಡಿಯಾಗಳು ತಕಧಿಮಿ ನಡ್ಸಿವೆ!
ಈ ಅನುಭವದ್ ಬಗ್ಗೆನೇ ಮೊದಲು ಬರೀಬೇಕು! ಸುಧಾರಿಸ್ಕೊಂಡು ಬರೀತೀನಿ!:)
8 comments:
ಇಂತಹ ಸಮಯದಲ್ಲಿ ಸುಧಾರಿಸಿಕೊಂಡ್ರೆ ಕೆಲವು ಅಂಶಗಳು ಮರೆತುಹೋಗೋ ಸಾಧ್ಯತೆಗಳಿರುತ್ತವೆ. ಇದು ಸುವರ್ಣಸಮಯ. ತಕ್ಷಣ ತಲೆಗೆ ಬಂದದ್ದನ್ನೆಲ್ಲಾ ಒಂದು ಹಾಳೆಯಲ್ಲಿ ಗೀಚಿ. ಸ್ವಲ್ಪ ಸುಧಾರಿಸಿಕೊಂಡು, ಗೀಚಿದ್ದನ್ನು ಸಾವರಿಸಿ ಬರೆಯಿರಿ. ಆಗ ನೋಡಿ, ಅದರ ಮಜವೇ ಬೇರೆ.
ಸಿರಿಗನ್ನಡದ ಕಂಪನ್ನು ಬ್ಲಾಗಿನಿಂದ ಬ್ಲಾಗಿಗಳಿಗೆ ಪಸರಿಸಿ.
ಒಳ್ಳೆಯದಾಗಲಿ.
Nija..gaNakayantra tondre aadre tale keTThogutte..
Kannada dalle bariri inmele..ee aangla bhasheli baryovru tumba iddare..aadre Kannada dalli baryovru kammi...janakke aangla bhashe mele moha tumba jaasti..:(
ಅಂತೂ ಇಂತೂ ಕನ್ನಡ ಫಾಂಟುಗಳೊಡನೆ ನಡೆಸಿದ ಕಾಳಗದಲ್ಲಿ ಗೆದ್ದ ಖುಷಿ! ಅನುಭವಗಳು ಹರಿಯಲಿ...
ತವಿಶ್ರೀಯವ್ರೆ, alwaysvetti n ಸುಶೀಲ್, ಇನ್ನೊಂದ್ಸಲ ಧನ್ಯವಾದಗಳು:) ಬರೀತೀನಿ. ಇವತ್ತೇ ಪೋಸ್ಟಿಸದಿದ್ದ್ರೂ ಡ್ರಾಫ್ಟ್ ಆದ್ರೂ ಹಾಕಿಡ್ತೀನಿ:) ನೀವು ಹೇಳೋದು ಹೆಚ್ಚಾ ನಾನು ಬರಿಯೋದು ಹೆಚ್ಚಾ!:P
:)
congratulations!!
but iddanan kannada dalli enu helthare?
Dhanyavada = Thnak you
Shubhashaya = wishes
Congratulation = ???
@enigma
abhinandanegaLu ree:)
dhanyavaadagaLu:))
ಶ್ರೀಮಾತಾ ಅವರಿಗೆ ನಮಸ್ಕಾರಗಳು,
ನಿಮ್ಮ ಬ್ಲಾಗಿನ ಶೀರ್ಷಿಕೆ, ಕೆಲವು ಲೇಖನಗಳು (ಉದಾ: 'ನಾನೂ ನನ್ನ ಬರಹ'), firefox ಬ್ರೌಸರಿನಲ್ಲಿ ಸರಿಯಾಗಿ display ಆಗುತ್ತಿಲ್ಲ. ಇದು ಕನ್ನಡ ಬ್ಲಾಗುಗಳಲ್ಲಿನ ಒಂದು ಕಾಮನ್ ಸಮಸ್ಯೆ.
ಈ ಸಮಸ್ಯೆ ಬಗ್ಗೆ, ಮತ್ತು ಇದರ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
http://manadamaatu.blogspot.com
ನಿಮಗೂ ಉಪಯೋಗವಾಗಬಹುದೆಂದು ಭಾವಿಸುವೆ.
ಶುಭವಾಗಲಿ,
ಮನ
Post a Comment