Monday, March 13, 2006

ನಾನೂ ನನ್ನ ಬರಹ!

ಕನ್ನಡಕ್ಕೂ ಕಂಪ್ಯೂಟರಿಗೂ ಜೋತು ಬಿದ್ದ ಅಪರೂಪದ ಪ್ರಾಣಿಗಳ ಗುಂಪಿಗೆ ಸೇರಿದ ನನಗೆ ಮನೆಯಲ್ಲಿ ಬರಹ ಉಪ್ಯೋಗಿಸೋಕೆ ಆಗ್ದೇದ್ದಾಗ ಮೈ ಪರಚಿಕೊಳ್ಳೋಹಾಗಾಗಿದ್ದು ಸಹಜ ಅನ್ನ್ಸುತ್ತೆ!

ಮುಂಚಿನಿಂದ ಓದುವ ಬರೆಯುವ ಗೀಳೇನೋ ಇತ್ತು - ಆದ್ರೆ ಈಚೆಗೆ ಬರೆದದ್ದು ಕಡಿಮೆ. ಕಾಲೇಜಿನಲ್ಲಿದಾಗ ಜಾಸ್ತಿ ಸಮಯ ಇರ್ತಿತ್ತೋ ಅಥವಾ distractions ಕಡಿಮೆ ಇದ್ದ್ವೋ...ಒಟ್ಟಿನಲ್ಲಿ ಆಗ ಎನಾದ್ರೂ ಬರೀತಿದ್ದೆ...ಯಾವ್ದೋ essay competitionನೋ ಅಥ್ವಾ ಇನ್ನ್ಯಾವ್ದೋ ಮನಸ್ಸಿಗೆ ನಾಟಿದ/ ಸ್ವಲ್ಪ ಅಲ್ಲಾಡಿಸಿದ ವಿಷಯನೋ ತಲೆಗೆ ಹೊಕ್ಕಾಗಲೆಲ್ಲ ನೋಟ್ ಬುಕ್ ನಲ್ಲಿ ನಾಕು ಸಾಲು ಗೀಚೋದು ಅಭ್ಯಾಸ. ಪುಟ್ಟ ಹುಡುಗಿ ಅಮ್ಮನ ಕಾಲೇಜು ಪುಸ್ತಕಗಳಲ್ಲಿ ನೋಡಿದ್ದ ಅಮ್ಮನ ಭಾವಜೀವನದ, ಮುಗ್ಧತೆಯ, ಯೋಚನಾಶೀಲತೆಯ, ಕಲ್ಪನೆಯ ತುಣುಕುಗಳು ಈ ಗೀಚುವಿಕೆಗೆ inspiration ಆಗಿತ್ತೇನೋ. ಒಟ್ಟಿನಲ್ಲಿ ನನ್ನ ನೋಟ್ ಬುಕ್ ಗಳ ಹಿಂದಿನ ಪುಟಗಳು ನನ್ನ ಪ್ರಪಂಚದ ಆತ್ಮೀಯ ಭಾಗವಾಗಿದ್ದವು. note bookನ ಜೊತೆಯ ನಂಟು ಕಳೆದದ್ದರಿಂದಲೋ ಏನೋ ಈ ನನ್ನ ಪ್ರಪಂಚದಿಂದ ಕೆಲವು ದಿನ ದೂರವಾಗಿದ್ದೆ. note bookನ ಜಾಗಕ್ಕೆ ಕಂಪ್ಯೂಟರ್ ಬಂದು, ತನ್ನ ಜೊತೆ ಇಂಟರ್ನೆಟ್ಟನ್ನೂ ತಂದಾಗ ಬ್ಲಾಗ್ ಅನ್ನೋ ಹೊಸ ಖಾಲಿ ಸ್ಲೇಟು ನನ್ನ ಬತ್ತಳಿಕೆಗೆ ಒಡ್ಡಿಕೊಂಡು, ನಾನು ಅದಕ್ಕೆ ಒಗ್ಗಿಕೊಂಡು ನನ್ನ ಈ ಒದ್ದಾಟಗಳಿಗೆ ಸಹೃದಯಿ ಸ್ನೇಹಿತರ ಒತ್ತಾಸೆಯೂ ಸೇರಿಕೊಂಡು ಕಳೆದು ಹೋದ ಗೊಂಬೆಯೊಂದು ಹೊಸ ಅಲಂಕಾರದಲ್ಲಿ ಕೈಗೆ ಸಿಕ್ಕ ಮಗುವಿನಂತೆ ನನ್ನದೇ ಖುಷಿಯಲ್ಲಿ ಮತ್ತೆ ಬರೆಯೋದಕ್ಕೆ ಪ್ರಾರಂಭಿಸಿದೆ.

ಆಫೀಸ್ನಲ್ಲಿ ಕನ್ನಡ ಬಳಕೇನ ಬರಹದ ಮೂಲಕ ಷುರು ಮಾಡಿದ್ದೆ. ಈ ಬ್ಲಾಗ್ ಹುಚ್ಚು ಹಿಡಿದ್ಮೇಲೆ ಅದನ್ನೇ ಇಲ್ಲೂ ಉಪಯೋಗಿಸೋಕೆ ಷುರು ಹಚ್ಚ್ಕೊಂಡೆ. ಆದ್ರೆ ಇದ್ದದ್ದು ಒಂದೇ ಸಮಸ್ಯೆ. ಇಂಗ್ಲೀಷ್ ನಲ್ಲಿ ಬರೆದ ಪೋಸ್ಟ್ ಗಳನ್ನ ಮನೆಯಲ್ಲಿ ಬರೆದು ತಂದು ಇಲ್ಲಿ ಪೋಸ್ಟ್ ಮಾಡ್ಬಹುದಿತ್ತು. ಆದ್ರೆ ಮನೆಯಲ್ಲಿ ಬರಹದ ಹಳೆಯ ವರ್ಶನ್ ಇದ್ದಿದ್ರಿಂದ ಕನ್ನಡದಲ್ಲಿ ಅಲ್ಲಿ ಬರೆದು ಇಲ್ಲಿ ಪೋಸ್ಟ್ ಮಾಡೋಕಾಗ್ತಿರ್ಲಿಲ್ಲ. ಹಾಗೇ ಆಫೀಸ್ನಲ್ಲೇ ಅಲ್ಲೊಂದು ಇಲ್ಲೊಂದು ಖಾಲಿ ನಿಮಿಷಗಳನ್ನ ಕದ್ದು ಏನೋ ನಾಕು ಸಾಲು ಗೀಚ್ತಿದ್ದೆನಾದ್ರೂ ಮನಸ್ಸು ಬಂದಾಗ(ನನ್ನ್ ಕೇಸ್ನಲ್ಲಿ ಇದು usually ಆಗೋದು ರಾತ್ರಿ ೧೧ ಘಂಟೆ ಮೇಲೇನೇ!), ಮನಸ್ಸು ಬಂದಷ್ಟು ಹೊತ್ತು ಬರ್ಯೋದಕ್ಕಾಗ್ತಿರ್ಲಿಲ್ಲ ಅನ್ನೋ ಬೇಜಾರು ಆಗಾಗ ಕಾಡ್ತಾನೇ ಇತ್ತು.

ಅಷ್ಟರಲ್ಲಿ bsnl ದಯೆಯಿಂದ ಮನೆಯಲ್ಲಿ ನೆಟ್ ಬಂತು. ಸರಿ ಇನ್ನು ಪೋಸ್ಟ್ ಮೇಲೆ ಪೋಸ್ಟ್ ಕುಟ್ಟಿ ಬಿಸಾಕೋದು ಅಂತ ಹಕ್ಕಿಯಂತೆ light ಆಗಿ ಹಾರೋದ್ರಲ್ಲಿದ್ದೆ! ಮೊದಲ ಹೆಜ್ಜೆ ಅಂತ ಬರಹದ ಹೊಸ ವರ್ಶನ್ ಕೆಳಗಿಳಿಸೋ ಮಹತ್ಕಾರ್ಯನೂ ಆಯ್ತು. ಅದಾದ್ ತಕ್ಷಣ ಇನ್ನು ಬರ್ದೇ ಬಿಡ್ತೀನಿ ಅನ್ನೋ ಹುಮ್ಮಸ್ಸಿನಲ್ಲಿ ಬ್ಲಾಗಿಗೆ ಲಾಗ್ ಆದ್ರೆ ಹುಹ್! ಕನ್ನಡ ಹೋಗಿ ಚಿತ್ರಾನ್ನ ಆಗ್ಬಿಡೋದಾ! ಬರಹ ಡೈರೆಕ್ಟ್ನಲ್ಲಿ ಯುನಿಕೋಡ್ನಲ್ಲಿ ಅಫೀಸ್ನಲ್ಲಿ ಕುಟ್ಟಿ ಕುಟ್ಟಿ ಬಿಸಾಕ್ತಿದ್ದದ್ದು ಮನೇನಲ್ಲಿ ಏನಾಯ್ತು ಅಂತ ಎಷ್ಟು ತಲೆ ಕೆಡ್ಸ್ಕೊಂದ್ರೂ ಗೊತ್ತಾಗ್ಲಿಲ್ಲ! ಆರ್ಕಟ್ ಕನ್ನಡ ಕಮ್ಮ್ಯೂನಿಟಿ, ಸಂಪದ, ಭಾಷಾಇಂಡಿಯಾ - ಹೀಗೆ ಸ್ನೇಹಿತರ ಸಲಹೆ ಮೇರೆಗೆ ಎಲ್ಲಾ ಕಡೆ ತೀರ್ಥಯಾತ್ರೆ ಹೋಗ್ಬಂದಿದ್ದಾಯ್ತು, ಕನ್ನಡಪ್ರೇಮಿ ಮಿತ್ರರಿಗೆ sos ಹಾಕಿದ್ದಾಯ್ತು, ಇಂಡಿಕ್ ಫಾಂಟ್ಸ್ ಮಣ್ಣು ಮಸಿ ಅಂತೆಲ್ಲ ಕೆಳಗಿಳ್ಸಿದ್ದಯ್ತು, ನಮ್ಮ್ ಬರಹ ಮಾತ್ರ ಕನ್ನಡ ಬರೀ ಒಲ್ಲ್ದು! ಏನ್ ಸಮಸ್ಯೆ ಅಂತನೇ ಗೊತ್ತಾಗ್ತಿಲ್ಲ!

ಕನ್ನಡ, ಇಂಗ್ಲಿಷ್ - ಎರಡು ಭಾಷೆಲೂ ಬರಿಯೋ ನನಗೆ ಕನ್ನಡ ಕೈಗೆಟುಕದಂತಾದಾಗ ಇಷ್ಟು ಕಸಿವಿಸಿಯಾದದ್ದು ನನಗೇ surprise! ಇನ್ನೇನು frustration ಪರಮಾವಧಿ ಮುಟ್ಟೋ ಹೊತ್ತಿಗೆ ಒಂದು ತಣ್ಣನೆಯ ರಾತ್ರಿ ನನ್ನ್ ತಲೆ ಬಿಸಿಯಾಗಿ ಬ್ಲಾಸ್ಟ್ ಆಗೋ ಮುಂಚೆ ನನ್ನ್ ತಮ್ಮನಿಗೆ ಬ್ರೌಸರ್ ಬದಲಿಸೋ ಐಡಿಯಾ ಠಕ್ಕಂತ ಹೊಳೆದಿದ್ದು ಕನ್ನಡಮ್ಮನ್ blessingsಏ ಅಂತ ಈಗ ಅನ್ನ್ಸುತ್ತೆ! ಹಿಂದಿನ ಪೋಸ್ಟ್ನಲ್ಲಿ ಹೇಳಿದ್ ಹಾಗೆ ಎಕ್ಸ್ಪ್ಲೋರರ್ ಬಿಟ್ಟು ಒಪೆರನಲ್ಲಿ ಬ್ಲಾಗಿಗೆ ಬಂದಾಗ ಕನ್ನಡ ಲಿಪಿ ಮುದ್ದಾಗಿ ಅರಳಿ ಮುಖದಲ್ಲಿ ಹೂನಗೆಯೊಂದನ್ನ ಮಿಂಚಿಸಿಬಿಟ್ಟ್ವು!

ಆಗ ಬರೀತೀನಿ ಅನ್ಕೊಂಡದ್ದನ್ನ ಬರ್ಯೋಕೆ ವಾರಕ್ಕ್ ಮೇಲೆ time ತೊಗೊಂಡಿದ್ದು ನಿಜ. ಆದ್ರೆ ಬರ್ಯಕ್ಕಾಗ್ದೇದ್ದಾಗ ಚಡಪಡಿಸಿದ್ದೂ ನಿಜ! ಒಲ್ಲೆ ಅಂದ ಹುಡುಗಿ ಹಿಂದೆ ಓಡೋ ಹುಡುಗ ಹುಡುಗಿ ಒಂದು glance ಕೊಟ್ಟ್ಬಿಟ್ಟ್ ತ್ತಕ್ಷಣ ಇಲ್ಲ್ದೇರೋ ಜಂಭಾನೆಲ್ಲಾ ಮುಖದ್ ಮೇಲೆ ಮಿಂಚಿಸೋ ಹಾಗೇನೋ!:) (ok guys, granted, the reverse is also true!)
ಅಂತೂ ಹೀಗಾಯ್ತು ಬರಹದ ಜೊತೆ ನನ್ನ ಪ್ರಣಯಪ್ರಸಂಗ!

9 comments:

bhadra said...

ಮನಸ್ಸಿಗೆ ಬಂದದ್ದನ್ನೆಲ್ಲವನ್ನೂ ಚೊಕ್ಕದಾಗಿ
ಬರೆದಿರುವಿರಿ. ಕಳೆದು ಹೋದ ಗೊಂಬೆ ಸಿಕ್ಕಿದಾಗ ಆಗುವ ಖುಷಿಯ ತುಲನೆ ಮಾಡಿರುವುದು ಬಹಳ ಚೆನ್ನಾಗಿ ಬಂದಿದೆ. ಅದೂ ಬಾರ್ಬಿ, ಕೆಲ್ಲಿ ಗೊಂಬೆಗಳೂಂದ್ರೆ ಹೆಣ್ಣುಮಕ್ಕಳಿಗೆ ಬಹಳ ಇಷ್ಟ ಅಲ್ವಾ?

ಹೀಗೆಯೇ ಮುಂದುವರೆಸಿಕೊಂಡು ಹೋಗಿ. ವಾರಕ್ಕೊಂದು ಪುಟ ಬರೆದರೂ ಸಾಕು. ಮನದಲಿರುವ ಭಾರವನ್ನು ಇಳಿಸಲು ಒಂದು ಹಾಡು ಹಾಡಿದರೆ ಹೇಗೆ ಮನಸ್ಸಮಾಧಾನವಾಗುವುದೋ ಹಾಗೆಯೇ ಬರೆದರೂ ಆಗುವುದು.

Sree said...

ತ ವಿ ಶ್ರೀಯವ್ರಿಗೆ dvಗಳು:) ಹೌದು, ಗೊಂಬೆಗಳಂದ್ರೆ ಭಾಳ ಪ್ರೀತಿ:) ನನ್ನ್ ಗೊಂಬೆಗಳ್ ಕಥೆ ಇನ್ನೊಂದ್ ದಿನ ಬರೀತೀನಿ - its quite a story!:))

ಗೌತಮ್, thanks for dropping by:) Ragsಗೆ ಯಾವ ಥರ ಬುದ್ಧಿ ಹೇಳೋದು ಗೊತ್ತಾಗಲ್ಲ! ಕತ್ತೆ ಥರ ದುಡೀತಿದಾನೆ! ಈ ನಡ್ವೆ ಆನ್ಲೈನ್ ಸಿಗೋದೂ ಭಾಳಾ ಅಪರೂಪ ಆಗ್ಬಿಟ್ಟಿದೆ. ಮೊನ್ನೆ ಸಿಕ್ಕು ನಿಮ್ಮ್ ಉಪ್ಪಿಟ್ಟ್ ಕಥೆ, ಅವ್ನು 3 hr ಮನೆ ದಾರಿ ಹುಡ್ಕಿದ್ದು - ಎಲ್ಲಾ ಕಥೆ ಹೇಳ್ದ!:) nice to hear u guys managed to meet up:) write about all his heroic stories soon:)

Sree said...

boss! adanna Odi comment haakde nin blognalli - it is not to b found tho! rags' heroics innEnaadru story irutte ankonDe - ishTEna?!;D

Anonymous said...

i am sure now u can entertain SOS's regarding "baraha"....alve????
i just can imgine how joyous u were when u overcame ur problem,
prapancha ne gedda bhavane,

Sree said...

@ anonymous - yaakappa, hesru haakidre naan kondhaakbiDteenaa?!:)) howdu, i think i can handle quite a few SOSs now:))

@gowtham,
naanu 3 post Odide - yaavdakke comment haakde anta nenapilla:( oTTinalli uddddddaaaa comment haakidde!:(

Anonymous said...

adu naane akka ,hmmmmmmm.....anonymous!!!!!

Susheel Sandeep said...

"ಬ್ಲಾಗ್ ಅನ್ನೋ ಹೊಸ ಖಾಲಿ ಸ್ಲೇಟು ನನ್ನ ಬತ್ತಳಿಕೆಗೆ ಒಡ್ಡಿಕೊಂಡು, ನಾನು ಅದಕ್ಕೆ ಒಗ್ಗಿಕೊಂಡು ನನ್ನ ಈ ಒದ್ದಾಟಗಳಿಗೆ ಸಹೃದಯಿ ಸ್ನೇಹಿತರ ಒತ್ತಾಸೆಯೂ ಸೇರಿಕೊಂಡು ಕಳೆದು ಹೋದ ಗೊಂಬೆಯೊಂದು.." - ಸಿಕಾಪಟ್ಟೆ ಹಿಡಿಸಿತು ಈ ಉಪಮೆ ಮತ್ತು ಪದಪ್ರಯೋಗ!

ಶಾಲೆ-ಕಾಲೇಜಿನಲ್ಲಿ ನೋಟ್ ಪುಸ್ತಕಗಳ ಕಡೇ ಹಾಳೆಗಳು ಹೇಗೋ,ಹಾಗೆ ಈಗ ನನ್ನ ಆಫೀಸಿನ ಡೈರಿಯ ಕಡೆ ಪುಟಗಳು ಕೂಡಾ! :)
ಬರವಣಿಗೆ Non-Stop ಬಸ್ಸಿನ ಹಾಗೆ ಓಡಲಿ!

Sree said...

ರವಿ, 'ಅಲ್ವೇ' usage fooled me! ಸಾಮಾನ್ಯವಾಗಿ ಬೆಂಗಳೂರು - ಮೈಸೂರು ಕಡೆ, ಅದ್ರಲ್ಲೂ old timers ಉಪಯೋಗಿಸೋದು ಈ expression:)

ಸುಶೀಲ್, ಸಿಕ್ಕಾಪಟ್ಟೆ dvಗಳು:)) ಓಹ್ ನೀನೂ ಕಡೆಯ ಪುಟಗಳ ಕನಸುಗಾರ ಅಂತಾಯ್ತು!:) ಸರಿ, ನೀನೂ ಬರಿಯಪ್ಪ, ನಿನ್ನ ಬ್ಲಾಗ್ ಹೊಸ ನೀರು ಕಂಡು ಸುಮಾರು ದಿನ ಆದ್ವಲ್ಲ!:)

Phantom said...

ಬ್ಲಾಗ್ ಓದೊ ಹವ್ಯಾಸ ಇರ್ಲಿಲ. ಈಗ ಶುರು ಆಯ್ತು. ಹಾಗೆ ಅಡ್ ಆಡ್ತ ಇಲ್ಲಿಗೆ ಬಂದು ಓದಿದೆ.
ವಹ್, ಇದನ್ನು ಓದ್ತ ಇದ್ದಗ, ನಾನು ಮೊದಲನೆ ಸರ್ತಿ ಕನ್ನಡ ಉಪ್ಯೋಗಿಸಲು ಒದ್ದಡಿದ್ದು ನೆನಪಿಗೆ ಬಂತು.

ಕೊನೇಲಿ, ಕನ್ನಡ ಕ್ಕಂಡಾಗ ಆದ ರೋಮಾಂಚನ ಅಸ್ಟಿಸ್ಟಲ್ಲ.
ಇಂತಿ
ನಡೆದಾಡುವ ಭೂತ
ಫ್ಯಾಂಟಮ್