Friday, March 03, 2006

ಸುಮ್ಮ್ನೆ

ಎಷ್ಟೆಲ್ಲಾ ಇದ್ದೂ ಎನೋ ಇಲ್ಲ ಅನ್ನೋ ಖಾಲಿತನ ಯಾಕೆ ಕಾಡುತ್ತೋ... ಎಲ್ಲಾ ಇರೋದು impossible ಅಂತ ಗೊತ್ತಿದ್ದೂ... ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ...
ಯಾವ್ದೋ ಬೆಟ್ಟದ ಕಣಿವೆಗೆ ಹೋಗಿ ಈ ಹಾಡನ್ನ ಕೂಗಿ ಕೂಗಿ ಹೇಳ್ಬೇಕು ಅನ್ನಿಸ್ತಿದೆ. ಕೂಗೋದು ಯಾಕೆ, ಹೇಳ್ಕೊಳ್ಳ್ ಬೇಕಾಗಿರೋದು ನನಗೇನೇ ಅಂತ ಗೊತ್ತಿದ್ದೂ....
ಗೊತ್ತಿಲ್ಲ!

ಅಥ್ವಾ ಇರೋದ್ರಲ್ಲಿ ತೃಪ್ತಿ ಪಟ್ಟ್ಬಿಟ್ಟ್ರೆ ಜೀವನನೇ ಇರೋಲ್ಲ್ವೇನೋ...ಕನಸುಗಳು, ತುಡಿತಗಳು, ಎಲ್ಲೋ ಸ್ವಲ್ಪ ತಳಮಳ ಬದುಕಿಗೆ ಬೇಕೇಬೇಕೇನೋ...

ದಿನದಲ್ಲಿ ಮುಕ್ಕಾಲು ಭಾಗ ನಗ್ತಾ ಇರೋವ್ರಿಗೂ ಕಾಲು ಭಾಗದ ಕಸಿವಿಸಿ inevitable ಆಗಿಬಿಡುತ್ತಾ...

ಮನಸ್ಸು ಯಾವ್ದೋ ಮಳೆ ಹನಿಗೆ ಕಾಯ್ತಿರೋ ಹಾಗೆ ಅನ್ನಿಸ್ತಿದೆ!

10 comments:

Anonymous said...

wonder ful aagide tudita tumulgala chitrana, matte matte 3-4 saari odide,
keep it up sis
hope u ll find me out....!!!!!

Sree said...

thanx ravi...nanagoskara barkondidda naaku saalu ashte:)

Naveen said...

wow sree... ur post makes me nostalgic .. nice one..

Susheel Sandeep said...

ತುಮುಲ,ತುಡಿತ,ಮಿಡಿತಗಳಿಲ್ಲದೇ ಹೋದಲ್ಲಿ ಜೀವನದಲ್ಲಿ ಸ್ವಾರಸ್ಯ ಏನ್ ಉಳಿಯತ್ತೆ ಹೇಳಿ?

ಆಗಾಗ ಈ ರೀತಿಯ ವೈರಾಗ್ಯ ಭಾವ ಕಾಡೋದು ಸೃಷ್ಟಿ ಸಹಜ!
ನಿಮ್ಮ ಬ್ಲಾಗ್ ನೋಡಿದ ಮೇಲೆ ನನ್ನ ಹಳೇ ಕವನಗಳೆರಡು ನೆನಪಾಗಿ, ಧೂಳು ಒರೆಸ್ತಿದ್ದೇನಷ್ಟೆ,ತಪ್ಪು ತಿಳೀಬೇಡಿ.
ಸ್ವಗತ
ವೈರಾಗ್ಯ

bhadra said...

ಮನದ ತುಡಿತಗಳ ಚೆನ್ನಾಗಿ ನಿರೂಪಿಸಿದ್ದೀರಿ. ನಾನೂ ಇಂಥಹದ್ದೇ ಒಂದು ಪ್ರಯತ್ನ ಮಾಡಿದ್ದೆ. ಒಮ್ಮೆ ಇಲ್ಲಿ ನೋಡಿ - http://asraya.net/node/172

Sree said...

thanx naveen, susheel, rags n mavinayasa for the comments:)
susheel, kavanagaLeraDU nanna manassnalli banda yOchanegaLige, bhaavanegaLge bhahaLa hattiravaagive - esply kaLedukondaddu - paDedaddu...

rags! thames nann magne! thippgonDanhaLLi wateru swalpa parcel maaDtini, kuDdu aamEle nange artha aagO haage baree;)

srinivas sir, Odi enannisthu anta bareeteeni..

Shiv said...

ಎಷ್ಟೊಂದು ಸರಳವಾಗಿ ಮನದ ಭಾವನೆಗಳನ್ನ ಈ ಪದಗಳಲ್ಲಿ ಹಿಡಿದಿಟ್ಟಿದಿರ.ಇದನ್ನು ಓದಿದ ಮೇಲೆ ನನಗೂ ಆಗಾಗ ಕಾಡುವ ಇದ್ದು ಇಲ್ಲದ ಭಾವನೆಗಳು ಸಹಜ ಅನಿಸಿತು.

ಅಂದಾಗೆ ಮನ ಕಾಯುತ್ತಿದ್ದ ಮಳೆ ಹನಿ ಉದುರಿತೇ??

Sree said...

ಧನ್ಯವಾದಗಳು ಶಿವ್...ಇಂತಹ ತುಮುಲಗಳು ಎಲ್ಲರನ್ನೂ ಕಾಡುತ್ವೆ ಅನ್ನಿಸುತ್ತೆ...ಅಲ್ಲೊಂದು ಮಿಂಚು ಇಲ್ಲೊಂದು ಗುಡುಗು ಇಲ್ಲದೇ ಮಳೆ ಬರೋದಾದ್ರೂ ಹೇಗೆ ಅಲ್ಲ್ವಾ:)

anoop said...

ಖಾಲಿತನ, ಎಲ್ಲಾರಿಗು ಇರುತ್ತೆ.. ಅದು ನಿಜ..
ಆದರೆ.. ಈ ಖಾಲಿತನವನ್ನು ಸಮರ್ಥ ರೀತಿಯಲ್ಲಿ ಭರ್ತಿ ಮಾಡೋ
ವಿಧಾನವನ್ನು ಕಲಿಯುವುದೇ ಜೀವನ, ಎಂದು ನನ್ನ ಅಭಿಪ್ರಾಯ...

Anonymous said...

i have read all your blogs, i love the way you put words to your feeling and memories, its also many others feeling which you are voice for. I am able to connect to my past and present while reading your blogs. But keep bloging regularly as many will be surely missing it.

thanks for provking to think out of the frame ..

Chethan