ಕಳೆಯದ ಹಳೆ ಹಾಡುಗಳು
ಒಂದಷ್ಟು ಹಳೆ ಮುಖಗಳು
ಬೇಕಾದ್ದು - ಬೇಡದ್ದು
ಕಸ-ಕಡ್ಡಿ ಉರುವಲು
ಸಣ್ಣಗೆ ಬೆಂಕಿ
ತಣ್ಣಗೆ ಕಳೆದ
ನೀನಿರದ ಬೇಸಿಗೆಯ ಸಂಜೆಗಳು
iruvudellava biTTu iradudaredege tuDivude jeevana... to leave behind what we have and long for things that are not there is life...is the rough translation of these beautiful lines of Kannada poetry by Gopalakrishna Adiga, from the popular song - 'yaava mOhana muraLi kareyito'...they sum up our lives in a way nothing else can... this constant look out called life...
Sunday, July 05, 2009
Monday, October 06, 2008
ಬೆಳ್ಳಿ ಮಾತು ಬಂಗಾರದ ಮೌನಗಳ ನಿನಗೊಂದು ಕಿವಿಮಾತು
ಮೌನದ ಮೊರೆ ಹೊಕ್ಕ ಹುಡುಗ... ಹುಡುಗಿಗೆ ತಲೆಬಿಸಿ...
ಏನಾಯ್ತು, ಯಾಕೆ, ಯಾವಾಗ...
ಮನ ಗೊಂದಲದ ಬೀಡು.
ಏನು ಮಾಡೋದು? ಹೊರಗೆ ಹೋಗೋಣ್ವಾ?
ಸರಿ...
ಕಾಫಿಡೇನಲ್ಲೂ ಮತ್ತೆ ಕಪ್ಪಿಚಿಪ್ಪಿನೊಳಗೆ ತೂರಿದ ಹುಡುಗ.
ಲಾಂಗ್ ಡ್ರೈವ್? ಮತ್ತಷ್ಟು ಉದ್ದದ ಮೌನ...
ಇನ್ನೆಷ್ಟು ತಡೆದಾಳು ಪಾಪ...
ಏನಾಯ್ತೋ? ನನ್ನಿಂದ ಏನಾದ್ರೂ ತಪ್ಪಾಯ್ತಾ?
ಇಲ್ಲಮಾ, it has nothing to do with you, dont worry.
ಫುಲ್‌ಸ್ಟಾಪಿಸಿ ಗಾಡಿ ಓಡಿಸೋ ಮೌನ ಬಂಗಾರ!
ಮನೆ ತಲುಪಿದ ಕೂಡಲೇ ಮೌನಕ್ಕೆ ಸಾಥ್ ಟಿವಿ
ನನ್ನ ಜೊತೆ ಸಾಕಾಯ್ತಾ? ದಿಂಬಿನೊಡನೆ ಪ್ರಶ್ನೆಗಳನ್ನು ಬಿಕ್ಕುತ್ತಿರೋವಾಗ್ಲೇ ಪಕ್ಕದಲ್ಲಿ ತೆಪ್ಪಗೆ ನಿದ್ದೆ ಹೊಡೆದುಬಿಟ್ಟಾಗ...
ಬಿಕ್ಕಿದ ಸಾಲುಗಳನ್ನು ಹೆಕ್ಕುವುದಕ್ಕೆ ಕೂತ ಡೈರಿಗೆ ಓವರ್‌ಟೈಮ್.
ಅತ್ತು ಅತ್ತು ಸುಸ್ತಾಗಿ ಅಂತೂ ಇಂತೂ ಹುಡುಗಿ ನಿದ್ದೆಗೆ ಜಾರಿದಾಗ ಡೈರಿಗೆ ಪಕ್ಕದ ಡೈರಿಯ ಜೊತೆ ಮಾತಿಗೆ ಸಮಯ.
ಏನಿತ್ತಲ್ಲಿ?
Today India lost the cricket match
against bangladesh.
DAMN
IT.
ಯಾವತ್ತೋ ಎಲ್ಲಿಂದಲೋ ಬಂದ forwarded mail. ಸಾಧಾರಣವಾಗಿ ನನಗೂ gender stereotype ಮೆಸೇಜುಗಳಿಗೂ ಅಷ್ಟಕಷ್ಟೆ. women drivers, wife bashing jokes...ಇಂಥವು. ಆದ್ರೆ ಇದನ್ನ ಓದಿದಾಗ ಮಾತ್ರ ಸುಳಿದದ್ದು ಕಿರುನಗೆ! ನೀನೂ ನಗ್ತೀಯಾ ಅಂತ ಗೊತ್ತಿತ್ತು. ಕಳಿಸಿದೆ. ಹೌದಲ್ಲ, ನಾ ಹೀಗೇನೇ! ಅಂತ ಇಬ್ರಿಗೂ ಅನ್ನಿಸಿಬಿಡ್ತಲ್ಲವಾ:)
ಮತ್ತೆ ನಿನ್ನ ಮೆಸೇಜು,
ಓದಿದೆ ಕಣೇ, ಈಗ್ಲಾದ್ರೂ ನಿನಗೆ ಅರ್ಥವಾಗಿರಬೇಕು ನಾನೆಷ್ಟು ಸಿಂಪಲ್, ಹೆಂಗಸರೆಷ್ಟು ಕಾಂಪ್ಲೆಕ್ಸ್(’ನೀನೆಷ್ಟು ಕಾಂಪ್ಲೆಕ್ಸ್’ ಅನ್ನೋಕೆ ಹೊರಟವನಿಗೆ ನನ್ನ ಚಾಮುಂಡಿ ಅವತಾರಗಳು ನೆನಪಾಗಿರ್ಬೇಕು ಅಲ್ವಾ!:) )ಅಂತಾ...
ನೀನಷ್ಟೇ ಯಾಕೆ, ೯೦% ಹುಡುಗ್ರೂ ಹಾಗೇನೇ, ೯೦% ಹುಡುಗಿಯರು ಹೀಗೇನೇ...ಅದಕ್ಕೇ ಅಲ್ವಾ ನಿಮಗೆ ನಾವು ನಮಗೆ ನೀವು ಬೇಕಾಗೋದು, ಪ್ರೀತಿ, ಕೋಪ, ನಗು, ಅಳು ಇವೆಲ್ಲಾ ಭೂಮಿ ಮೇಲೆ ಫೆವಿಕೋಲ್ ಹಾಕ್ಕೊಂಡು ಕೂತಿರೋದು?
ಹೌದು, ಅದಕ್ಕೇ ಬದುಕಲ್ಲಿ ಮಜಾ ಇರೋದು, ಹಾಗಂತ ತುಂಬಾ ಕಾಂಪ್ಲೆಕ್ಸ್ ಕೂಡ ಆಗಬಾರದು...
ನಿಜ, ತುಂಬಾ ಸಿಂಪಲ್, ತುಂಬಾ ಕಾಂಪ್ಲೆಕ್ಸ್ ಇವೆಲ್ಲಾ ಎಷ್ಟೆಷ್ಟು, ಎಲ್ಲಿ, ಯಾವಾಗ ಅಂತ ಯಾವುದೇ ಸಂಬಂಧದಲ್ಲಿ ನಿಧಾನಕ್ಕೆ ಅರ್ಥವಾಗುತ್ತಾ ಹೋಗುತ್ತೆ...ಮೊದಮೊದಲಿನ ಗೊಂದಲಗಳು ಸಹಜವಷ್ಟೇ ಅಲ್ಲ, ಈ ಬಗೆಯ ಅರ್ಥೈಸಿಕೊಳ್ಳುವಿಕೆಯ ಮೊದಲ ಹೆಜ್ಜೆಗಳೂ ಹೌದು. ಎರಡು ಕಡೆಯಿಂದ ಈ ಬಗೆಗೆ ಪ್ರಯತ್ನವಿದ್ದಾಗ balance ಹುಡುಕೋದು ಕಷ್ಟದ ಕೆಲಸವೇನಲ್ಲ...
ಹೂಂ, ಇದೆಲ್ಲ ವಟವಟಗಳು ನಿನಗೂ ಗೊತ್ತಿದ್ದೂ ನಾ ಬಡಬಡಾಯ್ಸುವಾಗ ಹೊಸತನ್ನೋ ಹಾಗೆ ನಸುನಗೆಯಲ್ಲಿ ಕೇಳ್ತೀಯಲ್ಲ, ಅದಕ್ಕೇ ನೀ ನನಗಷ್ಟು ಇಷ್ಟವಾಗೋದೇನೋ!
ಸರಿ, ಪಂಡಿತೆಯಂತೆ ಬೀಗೋದು ನಿಲ್ಲಿಸಿ ನಂ ಬಗ್ಗೆ ಸ್ವಲ್ಪ ಹೇಳ್ತೀನಿ ಕೇಳು.
ನಾವು ಹುಡುಗಿಯರು ಹೀಗೇ ಕಣೋ, ನಮ್ಮ ಕಾಂಪ್ಲೆಕ್ಸಿಟಿ ಪ್ರೀತಿಯ ಇನ್ನೊಂದು ಮುಖ ಅಷ್ಟೇ. ನಿಮ್ಮ ಮಾತುಗಳಿಗೆ ಬೀಳೋ ಅಷ್ಟೇ ಸುಲಭವಾಗ ನಿಮ್ಮ ಮೌನಗಳು ಚುಚ್ಚಿಬಿಡತ್ವೆ ನಮ್ಮನ್ನ... ಒಂದೇ ಕ್ಷಣದ ಹಿಂದೆ ನೀನಾಡಿದ ಪ್ರೀತಿಮಾತೂ ನೀ ನನ್ನ ಮರೆತು ಮುಳುಗೋ ಮೌನದಲ್ಲಿ ಒದ್ದಾಡಿಹೋಗುತ್ತೆ. silence kills, it just kills us!
ಯಾಕೆ ಗೊತ್ತಾ... ಒಂದು ಹುಡುಗಿಗೆ ನೀ ಇಷ್ಟ ಅನಿಸಿದ ಘಳಿಗೆಯಿಂದ 24X7, 365ದಿನಗಳೂ ನೀ ಅವಳ ಜೊತೆಯಿರ್ತೀಯ. ಎಷ್ಟೇ ಕೆಲಸ ಇರಲಿ, ಏನೇ ಯೋಚನೆ ಇರಲಿ...ಒಂದು ಕಿರುನಗೆಯಾಗಿ, ಹನಿ ಕಣ್ಣೀರಾಗಿ, ಒರಗೋ ಹೆಗಲಾಗಿ, ಆರ್ಭಟಗಳಿಗೆ ಕಿವಿಯಾಗಿ...ಅಲ್ಲಿ ನೀನಿದ್ದೇ ಇರ್ತೀಯ, ನಿನ್ನ ಲೋಕದಲ್ಲಿ ನೀ ಬಿಜಿಯಾಗಿರೋವಾಗಲೂ.
ಹಾಗೆ ನಮ್ಮೆಲ್ಲ ಬಿಜಿ ಬಿಜಿ ಲೋಕಗಳಲ್ಲೂ ನಿಮ್ಮನ್ನು ಭದ್ರವಾಗಿ ಕೂಡಿಸುವ ನಮಗೆ ನಮ್ಮನ್ನು ಮೀರಿದ ನಿಮ್ಮ ಲೋಕಗಳನ್ನ ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟ... ಆದ್ರೂ ಒಳ್ಳೇ ಹುಡುಗಿಯರು ನಾವು. ನೀವುಗಳು ಎರಡೇ ಎರಡು ಸೆಕೆಂಡ್ ತೊಗೊಂಡು, ಬಿಜಿ ಇದ್ದೀನಿ ಕಣೇ ಅಂತ ಒಂದು ಮಾತು ಹೇಳಿದರೂ ಮತ್ತೆ ಗುಲಾಬಿ ತೋಟದಂತೆ ಅರಳಿಬಿಡ್ತೀವಿ, ನಗುತ್ತಾ ಕಾದುಬಿಡ್ತೀವಿ...
ಇನ್ನೊಂದು ಮಾತು, ನಮ್ಮ ದುಪಟ್ಟಾಗಳಿಗೆ, ಸೀರೆಗಳಿಗೆ ಜಿಗ್‌ಜಾಗ್ ಮಾಡಿಸ್ತೀವಿ ಗೊತ್ತಾ? ಅಂಚು ಕಟ್ಟುವ ಕೆಲಸ. ಯಾಕೆ ಮಾಡ್ತೀವಿ ಗೊತ್ತಾ? ಹಾಗೆ ಕಟ್ಟದೇ ಇದ್ರೆ ಹರಿದುಹೋಗೋ ಚಾನ್ಸ್ ಜಾಸ್ತಿ. ಅದನ್ನ ತಪ್ಪಿಸೋಕೆ ಒಂದು ಅಂಚು. ಒಂದು definition. ಸಂಬಂಧಗಳಲ್ಲೂ ಅಷ್ಟೆ... ಅಂಚು ಕಟ್ಟಿದ, ಮಿತಿಗಳನ್ನ ಗುರ್ತಿಸಿದ ಸಂಬಂಧಗಳಲ್ಲಿ ಅರ್ಥವಾಗದೇ ಹರಿದುಹೋಗುವ ಸಾಧ್ಯತೆಗಳು ಆ ಮಟ್ಟಿಗೆ ಕಮ್ಮಿ. ಅರ್ಥವಾಗದಿದ್ದಾಗ ಆಗ್ಲಿಲ್ಲ ಕಣೋ ಅಂತ ಹೇಳಿ ಬಿಡಿಸಿ ಕೇಳೋ ಅಷ್ಟು ಹಕ್ಕಾದ್ರೂ ಇರುತ್ತಲ್ಲ ಅಲ್ಲಿ, ಅದೇ ಅದರ ಸೇಫ್ಟಿ ವಾಲ್ವ್.
ಆದ್ರೆ ಇಷ್ಟಕ್ಕೆ ನೀ ಏನು ಅಂತ ನಾ ತಿಳಿದುಕೊಳ್ಳೋಕೆ, ನಾ ಏನು ಅಂತ ನೀ ತಿಳಿದುಕೊಳ್ಳೋಕೆ ಒಂದು forward mail ಸಾಕು ಅಂತ ಆಗಿಬಿಟ್ರೆ, ಇದಕ್ಕೂ ನಾಕು ಟೆಕ್ಸ್ಟ್‌ಬುಕ್ಕು, ಎರಡು ಎಕ್ಸಾಮು ಇಟ್ಟು ಪಾಸು ಮಾಡಿಸಬಹುದಿತ್ತಲ್ವಾ? ಧ್ರುವಗಳ ಮಧ್ಯೆ ಬದುಕು ಅರಳಿರುವ ಪರಿಯಿಂದಲ್ಲವಾ ಭೂಮಿ ಸುಂದರ ಅನ್ನಿಸೋದು...
ನಿನಗೊಂದು ಕಿವಿ ಮಾತು ಅಂದಿದ್ದೆ ಅಲ್ವಾ, ಕೇಳು... ನಾ ನನ್ನ usual ವಟವಟ ಯಾವತ್ತಾದ್ರೂ ನಿಲ್ಲಿಸಿದ್ರೆ (ಯಾಆಅಆಆವತ್ತಾದ್ರೂ!) ಅದಕ್ಕೆ ಖಂಡಿತಾ ಕ್ರಿಕೆಟ್ ಕಾರಣವಾಗಿರೋಲ್ಲ. ನನ್ನೆಲ್ಲ ಮೌನಗಳ ಕಾರಣಗಳ ಜೊತೆ ನಿನಗೊಂದು ಲಿಂಕ್ ಪರ್ಮನೆಂಟಾಗಿ ಅಂಟಿಕೊಂಡಿರುತ್ತೆ - ’ನಾವು’ ಇರುವವರೆಗೆ...

Monday, September 29, 2008
’ಲವ್ ನೋಟ್’ಗಳು-೨
ನೀ ಅಡ್ಡಗೋಡೆಯ ದೀಪವಾದರೆ
ನಾ ಗಾಳಿಯಾಗಿಬಿಡ್ತೀನಿ;)
ಚಂದ್ರನಿಲ್ಲದ ರಾತ್ರಿ ಅನ್ನಿಸ್ತು
ಬೆಳದಿಂಗಳು ಬಿಸಿಲಾಯ್ತಾ ಅಂತ ಗುಮಾನಿ ಬಂತು
ಇನ್ನೊಂದು ಚಂದಿರ ಕಾಣಿಸೋ ಮುಂಚೆ
ನೀನೇ ಬಂದುಬಿಡು;))
(ಖಂಡಿತಾ ಇವತ್ತು ಬರೆದಿದ್ದಲ್ಲ :)) )
ನಾ ಗಾಳಿಯಾಗಿಬಿಡ್ತೀನಿ;)
ಚಂದ್ರನಿಲ್ಲದ ರಾತ್ರಿ ಅನ್ನಿಸ್ತು
ಬೆಳದಿಂಗಳು ಬಿಸಿಲಾಯ್ತಾ ಅಂತ ಗುಮಾನಿ ಬಂತು
ಇನ್ನೊಂದು ಚಂದಿರ ಕಾಣಿಸೋ ಮುಂಚೆ
ನೀನೇ ಬಂದುಬಿಡು;))
(ಖಂಡಿತಾ ಇವತ್ತು ಬರೆದಿದ್ದಲ್ಲ :)) )
Saturday, August 23, 2008
ನಂ ಬೆಂಗ್ಳೂರ್ ಬಗ್ಗೆ ಹೇಮಾ ಬರೀತಿರೋ ಬ್ಲಾಗ್
ಅಪಾರ್ಟ್‌ಮೆಂಟಿನ ಬಾಗಿಲಿಗೆ ತೋರಣ ಕಟ್ಟಿ ರಂಗೋಲೆಯಿಟ್ಟು, ಹಬ್ಬಕ್ಕೆ ನಮ್ಮ ಅಮ್ಮನ ತಲೆಮಾರನ್ನೂ ಮೀರಿಸೋ ಹಾಗೆ ಒಬ್ಬಟ್ಟು ತಟ್ಟುತ್ತಾ ನಮ್ಮತನದಲ್ಲಿ ಸಂಭ್ರಮ ಕಂಡುಕೊಳ್ಳೋ ಈ ಹುಡುಗಿ ಕಾಲೇಜು ದಿನಗಳಿಂದ ಉಳಿದುಬಂದಿರೋ ಕೆಲವೇ ಆತ್ಮೀಯ ಗೆಳೆಯ-ಗೆಳತಿಯರಲ್ಲಿ ಒಬ್ಬಳು. ಹೊಸತರ ಬಗ್ಗೆ ಸದಾ ಕುತೂಹಲ, ಏಳುಬೀಳುಗಳನ್ನೆಲ್ಲ ದಾಟಿ ನಿಲ್ಲೋ ಸ್ಫೂರ್ತಿ, self-made ದಿಟ್ಟತನ, ಜೊತೆಗೊಂದಿಷ್ಟು ಕವಿಮನಸು, ಕನಸುಗಳು - ಹೇಮಾ ಇಷ್ಟವಾಗೋಕೆ ಇನ್ನೂ ಕಾರಣಗಳು ಬೇಕಾ?:)
ಕಾರ್ಪೊರೇಟ್ ಕಲರವಗಳ ಮಧ್ಯೆ ಕನ್ನಡದ ಕಂಪು ಹಂಚೋ ಕೆಲಸವನ್ನೂ ಮಾಡ್ತಿರೋ ಹೇಮಾ ಈಗ ಗುಬ್ಬಚ್ಚಿಗೂಡಿನ ಅತಿಥಿಗಳನ್ನ ಬೆಂಗಳೂರಿನ ಒಂದು ಮುದ್ದಾದ ದೇವಸ್ಥಾನಕ್ಕೆ ಕರೆದುಕೊಂಡುಹೋಗ್ತಿದ್ದಾಳೆ. ಮಾಲ್-ಪಬ್ಬುಗಳಲ್ಲಿ ಕಳೆದುಹೋಗ್ತಾನೋ ಅಥ್ವಾ ಬೆಂಗಳೂರಂದ್ರೆ ಅಷ್ಟೇ ಅಂತ ಶಪಿಸ್ತಾನೋ ಇರೋ ಜನರಿಗೆ ಬೆಂಗಳೂರಿನ ಇನ್ನೊಂದು ಮುಖದ ಪರಿಚಯ ಮಾಡಿಕೊಳ್ಳೋ ಒಳ್ಳೇ ಅವಕಾಶ ಇದು. ಈ ಹಿಂದೆ ಪಟದ ಹಬ್ಬದ ಬಗ್ಗೆನೂ ಗುಬ್ಬಚ್ಚಿ ಗೂಡಲ್ಲಿ ಚಿಲಿಪಿಲಿ ನಡೆದಿತ್ತು. ಮುಂದೆನೂ ಇನ್ನಷ್ಟು ಈ ಥರದ ಪರಿಚಯಗಳು ಗುಬ್ಬಚ್ಚಿ ಗೂಡಿನಲ್ಲಿ ಬರುತ್ವೆ ಅಂತ ಹೇಮಕ್ಕ ಪ್ರಾಮಿಸ್ ಮಾಡ್ತಿದಾಳೆ.
ಓದಿ ಎರಡು ಸಾಲು ಅನಿಸಿಕೆ ಹಂಚಿಕೊಂಡ್ರೆ ಖುಷಿಯಾಗ್ತಾಳೆ:)

Sunday, July 27, 2008
ಕನಸು ಕಸಿಯುವ ಕ್ಷಣಗಳು
ಊಟ ಮಾಡ್ತಾ ತೆಪ್ಪಗೆ ಸ್ಟಾರ್ ವಾಯ್ಸ್ ಆಫ್ ಇಂಡಿಯಾ ನೋಡೋದು ಬಿಟ್ಟು ಯಾರೋ ಕೆಟ್ಟದಾಗಿ ಹಾಡಿದ್ರು ಅಂತ ಚಾನಲ್ ಬದಲಿಸಿದ್ದು ತಪ್ಪಾ? ಗೊತ್ತಿಲ್ಲ! ಬೆಂಗಳೂರಲ್ಲಿ ಬಾಂಬ್ ಸರಣಿಯ ಸದ್ದಿನ್ನೂ ಅಡಗೋಕೆ ಮುಂಚೆ ಅಹಮದಾಬಾದಿನಲ್ಲಿ ಮಾರ್ದನಿಸಿದ್ದು ನೋಡ್ತಾ ಗಂಟಲಲ್ಲಿ ಅನ್ನ ಇಳೀಲಿಲ್ಲ...ಹೇಗೋ ತುರುಕಿ ನೀರುಕುಡಿದು ಎದ್ದಿದ್ದಾಯ್ತು... ೨೮ ಜೀವಗಳು...ಯಾರೋ ಏನೋ... ಅವುಗಳ ಸುತ್ತ ಕಟ್ಟಿಕೊಂಡಿದ್ದ ಬದುಕುಗಳಿನ್ನೆಷ್ಟೋ....
ಇನ್ನೂ ಉಸಿರುಕಟ್ತಿದೆ... ಒಳಗೆಲ್ಲ ಕಲಸಿದಂತೆ...ಕಣ್ಣೀರು ಕಟ್ಟೆ ಒಡೆದು ಹರಿಯೋಕೆ ಕಾಯ್ತಿದೆ...
ಹಿಂಸೆ ಹೇಗೆ ಸಾಧ್ಯವಾಗುತ್ತೆ ಅನ್ನೋ ಪ್ರಶ್ನೆ ಮತ್ತೆ ಕಾಡ್ತಿದೆ...
ತಿಂಗಳ ಹಿಂದೆ ಓದಿದ ಖಾಲಿದ್ ಹೊಸೇನಿಯ ’ಕೈಟ್ ರನ್ನರ್’, ’ಎ ಥೌಸೆಂಡ್ ಸ್ಪ್ಲೆಂಡಿಡ್ ಸನ್ಸ್’, ಅಫ್ಘಾನಿಸ್ತಾನದ ಹಿಂಸೆಯ ಸರಮಾಲೆಯ ಕಥೆಗಳಿಂದ ಮನಸ್ಸನ್ನ ಕಲಕಿಬಿಟ್ಟಿದ್ವು... ಅದೇ ಹೊತ್ತಿಗೆ ಅಲ್ಲಿನ indian embassyಯ ಮೇಲಿನ ಧಾಳಿ, ಅದರ ಹಿಂದೆ ಪತ್ರಿಕೆಗಳಲ್ಲಿ ಬಂದ ಅಫ್ಘಾನಿಸ್ತಾನದ ಕಣ್ಣೀರಿನ ಕಥೆಗಳೊಂದಿಷ್ಟು ಓದಿ ಅಯ್ಯೋ ಪಾಪ ಅನ್ನುವಾಗ ಈ ಪ್ರಶ್ನೆಗಳಿದ್ದರೂ, ಇಲ್ಲಿ ಬೆಚ್ಚಗೆ ಕೂತು ಅಯ್ಯೋ ಅನ್ನುವ ಸಾಧ್ಯತೆಯ ಬಗ್ಗೆ ಒಂದಿಷ್ಟು ನೆಮ್ಮದಿಯೂ ಸೇರಿತ್ತೇನೋ...ಈಗ ಪ್ರಶ್ನೆಗಳೆಲ್ಲ ಪುಸ್ತಕದಾಚೆ, ನನ್ನದೇ ನೆಲಕ್ಕೆ, ಮನೆಯ ಬಾಗಿಲಿಗೇ ಬಂದು ಕೂತಿವೆ!
ಬದುಕಿಗಾಗಿ ನಂಬಿಕೆಗಳು, ಆಸೆಗಳು, ಗುರಿಗಳು... ಬದುಕನ್ನೇ ನುಂಗಬಲ್ಲಷ್ಟು ಹೇಗೆ ಇವೆಲ್ಲ ಬಲಿಯುತ್ವೆ, ಎಲ್ಲಿ ಬಲಿಯುತ್ವೆ ಅರ್ಥಾನೇ ಆಗೋಲ್ಲ ನನಗೆ...
ಅಮಿತಾವ್ ಘೋಷರ ಶ್ಯಾಡೋ ಲೈನ್ಸ್‌ನಂತೆ ಗೆರೆ-ಗೆರೆಗಳೊಳಗೆ ಭಾಗವಾಗುತ್ತ ನಮ್ಮನ್ನೇ ತುಂಡು ತುಂಡಾಗಿಸಿಕೊಳ್ಳೋದರ ಬಗ್ಗೆ ಆತಂಕವೆನ್ನಿಸುತ್ತೆ... ಜೊತೆಗೇ ಆತಂಕದ ಕ್ಷಣಗಳಲ್ಲಿ ಸಿಕ್ಕ ಆಟೋ ಹತ್ತಿ ಲೈಸೆನ್ಸ್ ಪ್ಲೇಟಿನಲ್ಲಿರೋ ಹೆಸರು, ಊರು ನೋಡಿ ಗಾಬರಿಯಾಗೋ ಕ್ಷಣಗಳಲ್ಲಿ ನಮ್ಮ ಅರಿವಿಲ್ಲದೇ ದಟ್ಟವಾಗಿಸೋ ಗೆರೆಗಳ ಬಗ್ಗೆ ಇನ್ನಷ್ಟು ಆತಂಕ, ನಾಚಿಕೆ, ಕಸಿವಿಸಿ... ಮನುಷ್ಯತ್ವ ಅಷ್ಟು vulnerable ಆಗ್ತಿದೆಯಾ ಅನ್ನಿಸುತ್ತೆ... ಬೆಂಗ್ಳೂರಲ್ಲಿ ಬಾಂಬ್ ಸಿಡಿದು ಒಂದು ಘಂಟೆಯೊಳಗೆ ’ಇಬ್ರೇ ಅಂತೆ ಮ್ಯಾಮ್ ಸತ್ತಿದ್ದು’ ಅನ್ನುವ ೮ರ ಪುಟ್ಟಿಯ ಮಾತು ಕೇಳ್ತಾ ಕನಸುಗಳಿಗೆ ಕಸುವು ಕಮ್ಮಿಯಾಗಿಬಿಟ್ಟ ಭಾವ...

Saturday, July 26, 2008
ಮನದ ಮುಗಿಲಿನಲ್ಲಿ
ನೆನಪಿಗೊಂದು ಕಿರುನಗೆ
ಕನಸಿಗಿನ್ನೊಂದೆರಡು ಸುಳಿಮಿಂಚು...
ಹುಸಿಕೋಪದ ಹೊಗೆ, ಹೊಯ್ದಾಟ
ಗಲಿಬಿಲಿ ಹಕ್ಕಿಗೂಡು
ಇನ್ನೊಂದಷ್ಟು ತಲ್ಲಣ
ಕಣ್ಣಂಚಿಗೇ ಬಂದು ನಿಲ್ಲುವ ಕವಿತೆ...
ಇಷ್ಟೆಲ್ಲ ತುಂಬಿಕೊಳ್ಳಲು
ಮೌನದರೆಚಣ!
ಎಲ್ಲ ಕರಗಿ
ದಳದಳದಿ ನಳನಳಿಸಿ
ಅರಳಲು
ಒಂದು ಹೂನಗೆ
ತುಂತುರು ನೀರ ಹಾಡು
ಕನಸಿಗಿನ್ನೊಂದೆರಡು ಸುಳಿಮಿಂಚು...
ಹುಸಿಕೋಪದ ಹೊಗೆ, ಹೊಯ್ದಾಟ
ಗಲಿಬಿಲಿ ಹಕ್ಕಿಗೂಡು
ಇನ್ನೊಂದಷ್ಟು ತಲ್ಲಣ
ಕಣ್ಣಂಚಿಗೇ ಬಂದು ನಿಲ್ಲುವ ಕವಿತೆ...
ಇಷ್ಟೆಲ್ಲ ತುಂಬಿಕೊಳ್ಳಲು
ಮೌನದರೆಚಣ!
ಎಲ್ಲ ಕರಗಿ
ದಳದಳದಿ ನಳನಳಿಸಿ
ಅರಳಲು
ಒಂದು ಹೂನಗೆ
ತುಂತುರು ನೀರ ಹಾಡು
Subscribe to:
Posts (Atom)