Wednesday, January 19, 2011

ಶಾರದೆಗೆ

ನಿನಗೋ ಸದಾ ವೀಣೆಯ ಗುಂಗು...
ಜೊತೆಗೆ ಪುಸ್ತಕಪಾಣಿ!
ಅವನಿಗೋ ಊರವರ ಹಣೆಬರಹ ಬರೆಯುವುದೇ ಕೆಲಸ ಮೂರುಹೊತ್ತೂ...
ವಿಶ್ವದ ಮೊದಲ ಇಟಲೆಕ್ಚುಅಲ್ ಕಪಲ್ಲು;
ಸಾಗರದ ಏಕಾಂತ ಲೋಕಾಭಿರಾಮ ಹಾಗಿರಲಿ,
ಒಬ್ಬರ ಮುಖ ಒಬ್ಬರು ನೋಡಲಿಕ್ಕೆ ಯಾವಾಗ ಪುರುಸೊತ್ತು?
ಇನ್ನು ಪ್ರೀತಿಗೆ ಪತಂಗವಾಗಿ ಉರಿಯುವ ಹುಚ್ಚೂ
ಉರಿದವಳ ಹೊತ್ತು ಭೂಮ್ಯಾಕಾಶ ತಾಂಡವಿಸುವ ಮತ್ತೂ
ಬಹಾಆಆಆಆಅ...ಳ ದೂರದ ಮಾತು!
ಜುಬಾನಲ್ಲಿ* ನರ್ತಿಸುವ ನಿನಗೆ
ಮಲ್ಲಿಗೆ ಕವಿಯ ಕವನದೊಳಗಷ್ಟೇ ಪ್ರೀತಿಯ ಪುಟ್ಟ ಲಿಂಕು.
ಓದು ಬರಹ ಹಾಡು ಹಸೆ ಕೇಳಿದಾಗ ಕೊಟ್ಟೆ ಅಂತ
ಅರೆಬರೆ ಹಿಡಿಹುಡಿ ಪ್ರೀತಿಗಳಿಗೆ ನಿನ್ನ ಮುಂದೆ ಅಹವಾಲಿಟ್ಟರೆ
ಅವು ತೋಪೆದ್ದು ತಿಪ್ಪರಲಾಗ ಹೊಡೆಯದೆ ಇನ್ನೇನು ಅನ್ನೋ ದಿವ್ಯ ಜ್ನ್ಯಾನ
ಈಗ ಹೊಳೆದು ಹೊಸ ದೇವರ ಹುಡುಕಾಟದಲ್ಲಿದ್ದೇನೆ!
ಬ್ಲಾಸ್ಫೆಮಿ ಅದು ಇದು ಅಂತ ಶಾಪ ಕೊಡೊ ಬದಲು
ಕೇಳಿದವರ ಕೊಟ್ಟುನೋಡಲ್ಲ?;)

*zubaan. couldnt get that letter in kannada:(

18 comments:

ಆನಂದ said...

ವರ ಸಿಕ್ಕಲ್ಲಿ ಕೂಡಲೇ ತಿಳಿಸಿ, ನಾವೂ ಧಮಕಿ ಹಾಕಲು ಪ್ರಯತ್ನಿಸುತ್ತೇವೆ. :)
ಕವಿತೆ ಇಷ್ಟವಾಯ್ತು.

sunaath said...

`ತಥಾಸ್ತು’ ಅನ್ನಲೇಬೇಕು ಶಾರದೆ!

Dileep Hegde said...

hahaha.. sooper...

Unknown said...

Hahah... good that you changed the god :)

Good post ...

Unknown said...

ಜುಬಾನಲ್ಲಿ ನರ್ತಿಸುವ ನಿನಗೆ

modalu idu enanta arthavagalilla ...

ಮನಸಿನ ಮಾತುಗಳು said...

He He...nice one...:-)

Pataragitti (ಪಾತರಗಿತ್ತಿ) said...

ಶ್ರೀ,

ಸೂಪರ್ ಆಗಿ ಪಾರ್ಟಿ ಬದಲಿಸುವ ನೋಟೀಸ್ ನೀಡಿದ್ದೀರಾ ಶಾರದೆಗೆ :)

ಬಹಳ ದಿನಗಳ (ತಿಂಗಳು) ನಂತರ ಮರಳಿ ಬಂದದ್ದಕ್ಕೆ ವಂದನೆಗಳು !

ಇಷ್ಟವಾಯ್ತು ನಿಮ್ಮ ಸಾಲುಗಳು.

ವಿ.ರಾ.ಹೆ. said...

innu nan blog update maDlilla andre na blogger aagirode tappagatte ;)

ಸುಮ said...

ಶಾರದೆಯನ್ನು ಚೆನ್ನಾಗಿ ಬ್ಲಾಕ್ ಮೇಲ್ ಮಾಡಿದ್ದೀರ :)

ಚುಕ್ಕಿಚಿತ್ತಾರ said...

wow... nice poem

ಸುಧೇಶ್ ಶೆಟ್ಟಿ said...

ಅ೦ತೂ ವನವಾಸದಿ೦ದ ಹಿ೦ದೆ ಬ೦ದು ಚ೦ದದ ಕವನ ಕೊಟ್ಟಿದ್ದೀರಾ... ತು೦ಬಾ ಸ೦ತೋಶ :P

uma bhat said...

Zubaan - Has 2 meanings - 1) "MAATU KODUVUDU"
2) "NAALIGE"..
NICE PEICE WRITTEN :)

Shree said...

Lovely... ಸಿಕ್ರಾ ಕೇಳಿದ-ವರ? ;)

Kirti said...

nimma blogige hosabalu naanu.. chennagive nimma barahagalu..

Kiran said...

ಸೂಪರ್! Simon & Garfunkel ರ ಈ ಹಾಡು ಥಟ್ಟನೆ ನೆನಪಿಗೆ ಬಂತು . The Dangling Conversation ( http://www.youtube.com/watch?v=k3Ij_UapnwE )

Kiran said...

ಎರಡು ತಿಂಗಳು ಬೆಂಗಳೂರಿಂದ ಹಾಗು ನನ್ನದೆಲ್ಲದರಿಂದ ದೂರವಿದ್ದು, ಸ್ವಲ್ಪ ಕನ್ನಡಕ್ಕಾಗಿ ಹಾತೊರಿತ ಇತ್ತು ಅನ್ಸುತ್ತೆ ನನ್ನ ಮನಸ್ಸು. ಕಳೆದೆರಡು ತಾಸುಗಲ್ಲಿ ನೀವು ಈ ಐದು ವರ್ಷ ಗೀಚಿದೆಲ್ಲವನ್ನು ಓದಿ ಮುಗಿಸಿದೆ. ಯಾರೋ ಹತ್ತಿರದವರ ಜೊತೆ ನನ್ನ ಭಾಷೆಯಲ್ಲಿ ಸಂವಾದಿಸದಷ್ಟು ಖುಷಿ ಆಯ್ತು. so, Thank you. ಶಾರದೆಗೆ, ಹಣತೆಗೆ ಹಾಗು ಮಿಡಿದ ತಂತಿಗೆ were my favorites. apparantly ಅದು ಸ್ವಾರ್ಥನಂತೆ, ನಾನು ನನ್ನವಳೆಂದುಕೊಂಡವಳು ನಂಗೆ ಹೇಳಿದ್ದು :-p . ಹೀಗೆ ಚೆನ್ನಾಗಿ ಬರೀತಾ ಇರಿ. ನಾನು ಅವಾಗ್ ಅವಾಗ ಓದಿ ಖುಷಿ ಪಡ್ತೀನಿ.

Unknown said...

ha ha ha nice :)
Please check my blog http://rakeshashapur.blogspot.com

Unknown said...
This comment has been removed by a blog administrator.