Saturday, July 26, 2008

ಮನದ ಮುಗಿಲಿನಲ್ಲಿ

ನೆನಪಿಗೊಂದು ಕಿರುನಗೆ
ಕನಸಿಗಿನ್ನೊಂದೆರಡು ಸುಳಿಮಿಂಚು...
ಹುಸಿಕೋಪದ ಹೊಗೆ, ಹೊಯ್ದಾಟ
ಗಲಿಬಿಲಿ ಹಕ್ಕಿಗೂಡು
ಇನ್ನೊಂದಷ್ಟು ತಲ್ಲಣ
ಕಣ್ಣಂಚಿಗೇ ಬಂದು ನಿಲ್ಲುವ ಕವಿತೆ...
ಇಷ್ಟೆಲ್ಲ ತುಂಬಿಕೊಳ್ಳಲು
ಮೌನದರೆಚಣ!

ಎಲ್ಲ ಕರಗಿ
ದಳದಳದಿ ನಳನಳಿಸಿ
ಅರಳಲು
ಒಂದು ಹೂನಗೆ
ತುಂತುರು ನೀರ ಹಾಡು

11 comments:

ಶಾಂತಲಾ ಭಂಡಿ (ಸನ್ನಿಧಿ) said...

sree...
ತುಂಬ ಇಷ್ಟವಾಯ್ತು.
"ಎಲ್ಲ ಕರಗಿ
ದಳದಳದಿ ನಳನಳಿಸಿ
ಅರಳಲು
ಒಂದು ಹೂನಗೆ"
ಹಿಡಿದಿಟ್ಟ ಸಾಲುಗಳು.

ಇನ್ನೊಂದು ಬ್ಲಾಗ್ ಯಾವಾಗ ಅಪ್ ಡೇಟ್ ಮಾಡ್ತೀಯಾ? ಪೂರ್ತಿ ಹಾಡು ಕೇಳ್ಬೇಕು. ಕಾಯ್ತಿದೀನಿ.

Shree said...

Welcome back!
ಚಂದದ ಬೆಳಗಿಗೊಂದು ಆಹ್ಲಾದಕರ ಮುನ್ನುಡಿಯಾಯ್ತು ನಿಮ್ಮ ಕವಿತೆ... ಥ್ಯಾಂಕ್ಯೂ..! :-)

ಅಮರ said...

ಕವನದ ಸಾಲುಗಳೊಡನೆ ನಾನು ಮೌನವಾದೆ :)

ಮನಸ್ವಿನಿ said...

Nice one....
ಇಷ್ಟ ಆಯ್ತು.

Susheel Sandeep said...

Whoaaaa!!!
ನಿಜ ಹೇಳ್ರೀ ಒಂದು ತಿಂಗಳ ಕಾಲ ಎಲ್ಲಿಗೆ ಹೋಗಿದ್ರಿ? ಇಂಥಾ ಸಾಲುಗಳು ಹೊರಹೊಮ್ಮಬೇಕಾದ್ರೆ ಅದೆಂಥಾ ಅದ್ಭುತ ಸ್ಫೂರ್ತಿ!!!

"ಹುಸಿಕೋಪದ ಹೊಗೆ,ಹೊಯ್ದಾಟ
ಗಲಿಬಿಲಿ ಹಕ್ಕಿಗೂಡು
ಕಣ್ಣಂಚಿಗೇ ಬಂದು ನಿಲ್ಲುವ ಕವಿತೆ...
ಮೌನದರೆಚಣ!"

ವಾಹ್! ಒಂದಕ್ಕಿಂತ ಒಂದು ಸೂಪರ್

Sushrutha Dodderi said...

ನೈಚ್!

kanasu said...

tumbaa chennagide :)

Adarsh said...

chennagide..

Sree said...

ಶಾಂತಲಾ, ಶ್ರೀ,ಅಮರ,ಮನಸ್ವಿನಿ,ಸುಶ್೧, ಸುಶ್೨, ಕನಸು, ಆದರ್ಶ - ಎಲ್ರಿಗೂ ಥ್ಯಾಂಕ್ಸು:)
ಶಾಂತಲಾ ಬ್ಲಾಗ್ ಅಫ್ಡೇಟ್ ತಕ್ಕಮಟ್ಟಿಗೆ ನಡೀತಿದೆ:p ಹಾಡು ಸದ್ಯದಲ್ಲೇ ರಿಕಾರ್ಡಿಸ್ತೀನಿ:)
ಶ್ರೀ, ಇಲ್ಲೇ ಇದ್ದೆ ಕಣ್ರೀ, ನನ್ನ ಮಾಮೂಲು ಸ್ಪೀಡಿನಲ್ಲಿ ಬರೀತಿದ್ದೀನಷ್ಟೆ:p
ಸುಶೀಲ್, ಇಲ್ಲೇ ಬಾಲ್ಕನಿಯಲ್ಲರಳಿದ ಜಾಜಿ ಹೂ;)

dinesh said...

ಕವನ ತುಂಬಾ ಚೆನ್ನಾಗಿದೆ.....ಸುಂದರ ಸರಳ ಅರ್ಥಗರ್ಭಿತ ಸಾಲುಗಳು.......

manju.S said...

Tumba artapurna...