Friday, February 01, 2008

ಕಳೆಯದ ನಿನ್ನೆ
ಕೈಜಾರಿದ ನಾಳೆಗಳ ನಡುವೆ
ನಿಟ್ಟುಸಿರೊಂದಕ್ಕೆ
ನಿದ್ದೆಗೊಮ್ಮೆ ನಿತ್ಯಮರಣ
ಎದ್ದ ಸಲ ನವೀನ ಜನನ!

(ಕನ್ನಡ ಬ್ಲಾಗ್ ಲೋಕದ ಲೇಟೆಸ್ಟ್ ಸಾಂಕ್ರಾಮಿಕ - ಚುಟುಕರೋಗ, ಇದನ್ನು ಕವಿತೆಯಾಗಿ ಬೆಳೆಸದ ನನ್ನ ಸೋಮಾರಿತನಕ್ಕೆ ಎಕ್ಸ್‌ಕ್ಯೂಸ್!)

20 comments:

VENU VINOD said...

ಶ್ರೀ,
ಉದ್ದುದ್ದ ಕವನ ಬರೆದರೆ ಓದೋರು ಮೊದಲ ಪ್ಯಾರಾದಿಂದ ಕೊನೆ ಪ್ಯಾರಾಕ್ಕೆ ಬಂದಾಗ ಕೆಲವೊಮ್ಮೆ ಕಾಂಪ್ಲೆಕ್ಸಿಟಿ (ಅದರಲ್ಲೂ ಬೇರೆ ಖುಷಿ ಇದೆ)ಕಾಣಿಸುತ್ತದೆ. ಆದರೆ ಇನ್ ಸ್ಟಂಟ್ ಕಾಫಿಯಂತೆ ನಾಲ್ಕೇ ಸಾಲಲ್ಲಿ ಕಿಕ್ ಸಿಗೋದು ಚುಟುಕದಲ್ಲಿ. ಹಾಗಾಗಿ ನಿಮ್ಮ ಸೋಮಾರಿತನ ಕ್ಷಮಾರ್ಹ :)

ಮಹೇಶ ಎಸ್ ಎಲ್ said...

ಬಿಡಿಸಿ ಬಡಿಸಿದರೆ ಊಟ ಇನ್ನು ರುಚಿಯಾಗಿರುತ್ತದೆ ಅನಿಸುತ್ತದೆ. ಉಳಿದದ್ದನ್ನು ಪ್ರಕಟಿಸಿ ಓದುಗರನ್ನು ಉಳಿಸುತ್ತಿರಿ ಎಂಬ ನಂಬಿಕೆಯೊಂದಿಗೆ

Shiv said...

ಹೂವು ಅರಳಿ ನಳನಳಿಸುತ್ತಿನೋ...ಯಾಕೋ ಮೊಗ್ಗು ಇದ್ದಾಗ ಕಿತ್ತು ಬಿಟ್ಟಿದಿರಿ..

Jagali bhaagavata said...

ಕಳೆಯದ ನಿನ್ನೆಗಳು.....
..ಕೂಡಿಸ್ಲಿಕ್ಕಾಗತ್ತ ನೋಡಿ :-)

ಮನಸ್ವಿನಿ said...

'ಕೈಜಾರಿದ ನಾಳೆಗಳ ನಡುವೆ' ?

ನಾಳೆಯ ಗ್ಯಾರಂಟಿ ನಾಳೆ ಆದ್ಮೇಲೆ ತಾನೆ?

MD said...

ಯಾಕೋ ಈ ಎರಡು ಸಾಲುಗಳು ಹೀಗಾಗಬೇಕಿತ್ತು ಅನಿಸುತ್ತಿದೆ:
"ಕಳೆಯದ ನಾಳೆ
ಕೈಜಾರಿದ ನಿನ್ನೆಗಳ ನಡುವೆ"

ವೇಣು ಹೇಳಿದಂತೆ ಇನ್ ಸ್ಟಂಟ್ ಕಾಫಿಯಂತೆ ನಾಲ್ಕೇ ಸಾಲಲ್ಲಿ ಕಿಕ್ ಸಿಗೋದು ಚುಟುಕಿನಲ್ಲಿ

Tina said...

Dear Sree,
Liked your blog.
Will include you in my blogroll.
- Tina
(www.tinazone.wordpress.com)

L'Étranger said...

ಸೊಗಸಾದ ಚುಟುಕ -- ಈ ಸಾಂಕ್ರಾಮಿಕ ಒಂದು ರೋಗವೆನಿಸದಂತೆ ಮಾಡುವಂತಹ ಚುಟುಕ! ಕವಿತೆಯಾಗಿ ಬೆಳೆಯದಿದ್ದರೂ ನಾನು ಯಾರಿಗೇನೂ ಕಡಿಮೆ ಇಲ್ಲ ಎನ್ನುವಂತೆ ನಿಂತಿದೆ. :)


’ಕಳೆಯದ ನಿನ್ನೆ
ಕೈಜಾರಿದ ನಾಳೆಗಳು’

ಈ ಸಾಲುಗಳ ಬಗ್ಗೆ ಮೇಲೆ ಸ್ವಲ್ಪ ಕುತೂಹಲ, ಗೊಂದಲ ವ್ಯಕ್ತವಾಗಿದೆ. ನನಗೆ ಅರ್ಥವಾದಂತೆ, ನೀವಿಲ್ಲಿ ಮಾತನಾಡುತ್ತಿರುವುದು - ಬಿಡದೆ ಇನ್ನೂ ಕಾಡುತ್ತಿರುವ ನಿನ್ನೆಯ ನೋವುಗಳು, ನಿರಾಶೆಗಳು ಮತ್ತು ಇಲ್ಲವಾಗುತ್ತಿರುವ ನಾಳೆಯ ಭರವಸೆಗಳು. ಆದ್ದರಿಂದಲೇ, ದಿನವೂ ಹುಟ್ಟಿ ಸಾಯುತ್ತಿರುವ ನಿಟ್ಟುಸಿರು! ಹಾಗಾಗಿ, ನೀವು ಬರೆದ ಸಾಲುಗಳು ಸರಿ ಕಾಣುತ್ತಿವೆ.
:)

Sree said...

@ವೇಣುವಿನೋದ್
ಕ್ಷಮೆಗೆ ಧನ್ಯವಾದಗಳು!:P

@ಮಹೇಶ್
ಬಿಡಿಸಿಬರೆದ್ರೆ ಕವಿತೆಯೂ ಆಗಲ್ಲವೇನೋ ಅಲ್ಲ್ವಾ?:)

@ಶಿವ್
hmm...ಇರಬಹುದು, ಅದಿಕ್ಕೇ ಸಾರಿ ಕೇಳಿದ್ದು:p

@ಜಗಲಿ ಭಾಗವತ್ರು
ಇದಿಕ್ಕೇ ಅಲ್ಲ್ವಾ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಅನ್ನೋದು!:))

@ಮನಸ್ವಿನಿ & MD,
l'etranger ಉತ್ತರಿಸಿದ್ದಾರೆ ನಿಮ್ಮ್ ಪ್ರಶ್ನೆಗೆ:)

@ಟೀನಾ,
ಥ್ಯಾಂಕ್ಯೂ, ನಿಮ್ಮ್ ಬ್ಲಾಗ್ ಸೂಪರಾಗಿ ಬರ್ತಿದೆ:)

@l'etranger,
ತುಂಬಾ ಥ್ಯಾಂಕ್ಸ್, ಚುಟುಕ ಮೆಚ್ಚಿದ್ದಕ್ಕೆ,ಮತ್ತೆ interpret ಮಾಡಿ ನನ್ನ ಕೆಲ್ಸ ಉಳ್ಸಿದ್ದಕ್ಕೆ!:)

ವಿಕ್ರಮ ಹತ್ವಾರ said...

saalugaLu chennaagive....chutuku saamkramika 'roga' aagibittide eega.

Jagali bhaagavata said...

ಇದಿಕ್ಕೇ ಅಲ್ಲ್ವಾ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಅನ್ನೋದು!:))......
ಹೌದಾ? ಆದ್ರೆ ನಾನೇನೂ ಪ್ರಾಣಸಂಕಟದಲ್ವಿಲ್ಲ?:-)

ನಿಮ್ಮ್ ಬ್ಲಾಗ್ನ ’ನಮ್ ಐಕ್ಳ್’ ಪಟ್ಟಿಗೆ ಸೇರ್ಸಿದ್ರೆ don't worry ಮಾಡ್ಕೋತೀರಾ?

Sree said...

@ವಿಕ್ರಮ್
ಥಾಂಕ್ಯೂ:)

@ಭಾಗವತ್ರು
ಅಂದ್ಮೇಲೆ ಯಾರ್ ಬೆಕ್ಕು ಅಂತ ಗೊತ್ತಾಗಿರ್‍ಬೇಕಲ್ಲ?:))
ಐಕ್ಳು ಪಟ್ಟಿಗೆ ಸೇರ್ಸ್ಕೊಳಿ ಸಾರ್ ಧಾರಾಳವಾಗೀ:)

Manjula said...

ನಿಟ್ಟುಸಿರಿಗೆ ವ್ಯಾಖ್ಯೆ ಕೊಟ್ಟ ಹಾಗಿದೆ ಚುಟುಕ.. md ಅವರೆ ನನಗೇಕೊ 'ಕಳೆಯದ ನೆನ್ನೆ, ಕೈ ಜಾರಿದ ನಾಳೆ'ಯೇ ನಿಟ್ಟುಸಿರಿಗೆ ಸೂಕ್ತ ಅನಿಸುತಿದೆ.. ಅವರವರ ಭಾವಕ್ಕೆ.. ಅನ್ಕೋತಿನಿ.. :-)

MD said...

ಭಾವ-ದರ್ಪಣ ತುಂಬ ದಿನಗಳ ನಂತರ ಬ್ಲಾಗ್ ಲೋಕದಲ್ಲಿ ಕಾಣಿಸಿದ್ದೀರಿ.
ಶ್ರೀ, ನಿಮ್ಮ ಬ್ಲಾಗ್ನಲ್ಲಿ ಭಾವ-ದರ್ಪಣ ಅವರಿಗೆ ವೆಲ್-ಕಮ್ ಹೇಳಿದ್ದಕ್ಕೆ ಕ್ಷಮೆಯಿರಲಿ.
ಯಾವ್ಯಾವುದೋ ಭಾವಗಳಾದರೂ ಒಟ್ಟಾರೆ ನಿಟ್ಟುಸಿರು ಬಂತಲ್ಲ :-)

Srikanth said...

ಚಿಕ್ಕ..ಚೊಕ್ಕ!

Sree said...

ಭಾವ ದರ್ಪಣ & ಶ್ರೀಕಾಂತ್,
ಧನ್ಯವಾದಗಳು:)
md,
its like family,ಕ್ಷಮೆ ಎಲ್ಲಾ ಅನಗತ್ಯ:)

Manjunatha Kollegala said...

"ನಿದ್ದೆಗೊಮ್ಮೆ ನಿತ್ಯಮರಣ
ಎದ್ದ ಸಲ ನವೀನ ಜನನ!" ಹೊಂದುವ ನಿಟ್ಟುಸಿರೊಂದು ಕವಿತೆ ಆಗಲು ತುಂಬಾ ಚಿಕ್ಕದೇನೋ; ಅದಕ್ಕೆ ಚುಟುಕವೇ ಸರಿಯಾದ ಅಭಿವ್ಯಕ್ತಿ... good one

Saranga said...

kaleyada nale....kaleda ninnegala....naduve adre chennagirtittu anstittu..but any how avaravara bhavakke avaravara bhakti....nim kavanagalella chennagive

Saranga said...

kaleyada nale....kaleda ninnegala....naduve adre chennagirtittu anstittu..but any how avaravara bhavakke avaravara bhakti....nim kavanagalella chennagive

Sree said...

@Saranga, guess u missed the point... ಈ ಚರ್ಚೆ ಹಿಂದಿನ ಕಾಮೆಂಟ್ಸ್ ಗಳಲ್ಲಿ ಆಗಿದೆ ನೋಡಿ:)