Friday, March 16, 2007

ನಮ್ಮ ಯುಗಾದಿ

ಹಬ್ಬದ ಸಡಗರದ ಮಧ್ಯೆ ಯುಗಾದಿಗಾಗಿ ಕೆಲವು ಕ್ಷಣಗಳು...

ಯುಗಾದಿಯೊಂದಿಗೇ ಕನ್ನಡಿಗರ ಮನಸ್ಸಿಗೆ ಥಟ್ ಅಂತ ಬರೋ ಕವನ ವರಕವಿಯವರ evergreen ಹಾಡು...ಆಕಾಶವಾಣಿಯಿಂದ ಹಿಡಿದು sms ಶುಭಾಶಯಗಳವರೆಗೆ ಇವತ್ತು ಈ ಹಾಡಿನದ್ದೇ ರಾಜ್ಯಭಾರ!:)
ಹೊಸ ವರ್ಷದ ಹೊಸತನವನ್ನು ಎಲ್ಲೆಡೆ ನೋಡೋ ಈ ಕವಿತೆಯ ಕೆಲವು ಸಾಲುಗಳ ಬಗ್ಗೆ ಹಾಗೇ ಯೋಚಿಸುತ್ತಿದ್ದೆ...
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ...
ಎಲ್ಲದರಲ್ಲೂ ಏನೋ ಒಂದು ಹೊಸತನವನ್ನು ತರೋ ಯುಗಾದಿಯನ್ನ ನಮ್ಮ ಜೀವನದಲ್ಲಿ ಹೇಗೆ ತರೋದು ಅನ್ನೋ ಯೋಚನೆ ಬಂತು. ಬೇಂದ್ರೆಯವರು ಹೇಳೋ ಹಾಗೆ
"ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"
ಅನ್ನಿಸ್ತು! ಶಿಶಿರದಲ್ಲಿ ಮೈಕೊಡವಿ ವಸಂತದಲ್ಲಿ ಮತ್ತೆ ಹೊಸ ಚಿಗುರನ್ನುಡುವ ಪ್ರಕೃತಿಯ ಮೇಲೆ ಸ್ವಲ್ಪ ಅಸೂಯೆನೇ ಆಯ್ತು ಅನ್ನಬಹುದು!:)
ಹಾಗೇ ಕೆ ಎಸ್ ನ ಅವರ "ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ" ನೆನಪಾಯ್ತು...
ಸ್ಯಾಂಕಿ ಕೆರೆಯುದ್ದಕ್ಕೂ ಹಾರಿ ನಲಿಯುತ್ತಿದ್ದ ಹಕ್ಕಿಗಳನ್ನ ನೋಡ್ತಾ ನಡೀತಿದ್ದಾಗ ಗೆಳತಿ ಹೇಳಿದ್ದು...ಅವುಗಳಂತೆ ಆರಾಮಾಗಿ ಇರೋಕೆ ಆಗಿದ್ರೆ ಎಷ್ಟು ಚೆನ್ನಾಗಿರ್ತಿತ್ತಲ್ಲವೇನೆ ಅಂತ...

ಹಕ್ಕಿಯಂತೆ ಹಾರೋದು, ನೀರಲ್ಲಿ ಆಡ್ಕೊಂಡು ಇದ್ದುಬಿಡೋದು ಸಾಧ್ಯವಾಗದೇ ಇರಬಹುದು, ನಮ್ಮ ಗೂಡಿನಲ್ಲೇ ಆಕಾಶದ ತುಣುಕೊಂಡನ್ನ ಇಳಿಸೋದಕ್ಕೆ ಬೇಕಾದ lightness of being ಇದ್ದರಾಯ್ತು!
ನಿತ್ಯಮರಣ-ಜನನಗಳ ಭಾಗ್ಯ ಪಡೀಲಿಲ್ಲವಾದ್ರೂ ಹೊಸ ಬೆಳಕಿನ ಹಾದಿಗೆ ಹುಮ್ಮಸ್ಸಿಂದ ನಡಿಯೋ ಶಕ್ತಿಯನ್ನಂತೂ ನಮ್ಮೊಳಗೆ ಬಚ್ಚಿಟಿರ್ತೀವಿ....
ಸರಿಯಾಗಿ ನಿದ್ದೆ ಮಾಡೋಕಾದ್ರೆ ಮುಂಬರುವ ಮುಂಜಾವಿಗೆ ಹುರುಪು ಹೆಚ್ಚೋದಂತೂ ನಿಜ ಅಲ್ಲ್ವಾ?
ನಮ್ಮಬದುಕುಗಳಲ್ಲಿ ಯುಗಾದಿ ತರಬೇಕಾದ್ರೆ ಇದೇ ದಾರಿ ಅನ್ನಿಸುತ್ತೆ!:)

ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಬೇವು-ಬೆಲ್ಲ, ಒಬ್ಬಟ್ಟಿನ ಸಂಭ್ರಮದ ಜೊತೆ ನಿಜವಾದ ಅರ್ಥದಲ್ಲಿ ಹೊಸತನ ನಿಮ್ಮೆಲ್ಲರ ಬದುಕಲ್ಲಿ ಸದಾಕಾಲಕ್ಕೂ ಹುರುಪು ತರಲಿ ಅಂತ ಹಾರೈಸ್ತಾ,
ಶ್ರೀ

16 comments:

Mahantesh said...

"ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ" e thara asaMkhata gEtegaLiMda taane namma maastar 'yugada kavi'haagu 'jagada kavi' annisikoLLuvadu....

bevalli kahi uMTu...
kahiyalli sihi uMTu..
novalli naviv uMTu..
navivalli sihi uMTu
kahi-sihi saMgama
jeevanada sarigama...
nimagu ugadiya shubhashagaLu....

Vijendra ( ವಿಜೇಂದ್ರ ರಾವ್ ) said...

ಹೌದು.. ನೀವು ಹೇಳಿದ್ದು ನಿಜ... ನಿದ್ರೆ ನನ್ನ ಪರಮ ಮಿತ್ರ...ಅದ್ರಿಂದ ನಂಗಂತೂ ದಿನ ಬೆಳಿಗ್ಗೆ ಹೊಸ ಹುಟ್ಟು..

ಹೊಸ ವರ್ಷದ ಶುಭಾಶಯಗಳು ..ಲೇಖನ ಚೆನ್ನಾಗಿತ್ತು

Sushrutha Dodderi said...

ಒಟ್ಟೊಟ್ಟಿಗೇ ಸುಮಾರು ಕವಿತೆ, ಭಾವಗಳನ್ನು ಕೂಡಿ ಹಾಕಿದ್ದೀರ. ನಿಮಗೂ ಯುಗಾದಿಯ ಶುಭಾಷಯಗಳು.

Shiv said...

ಶ್ರೀ,

ಆಕಾಶದ ತುಣುಕನ್ನು ಗೂಡಿನಲ್ಲೇ ಇಳಿಸೋದು ಹೇಗೆ :)
ಚೆನ್ನಾಗಿದೆ ಕಲ್ಪನೆ

ಕೆಲವೊಮ್ಮೆ ರಾತ್ರಿ-ಮುಂಜಾವುಗಳ ನಡುವೆ ಅಂತರವೇ (ಗೊತ್ತು)ಇಲ್ಲದಿರುವಾಗೆ,ಮುಂಜಾವಿನ ಹುರುಪು ಕಡಿಮೆಯಾಗುವುದೇ ಇಲ್ಲಾ..ಯಾಕೆಂದರೆ ಈಡಿ ದಿನವೇ ಮುಂಜಾವು ..ಹೀಗೆ ಸುಮ್ನೆ ಎನೋ ಹೇಳಿದೆ :)

Anonymous said...

Why so much of a "sense of resignation" bordering on cynicism in your voice in many recent posts

Sree said...

ಮಹಂತೇಶ್, ಹೌದು ಬೇಂದ್ರೆಯವರ ಕವನಗಳ ಬಗ್ಗೆ ಎರಡು ಮಾತಿಲ್ಲ!
ವಿಜೇಂದ್ರ ರಾವ್, ಅದು ದೊಡ್ಡ ಗಿಫ್ಟ್! (ನನಗೂ ಕೊಟ್ಟಿದಾನೆ ದೇವ್ರು ಆ ಗಿಫ್ಟ್ ನ :p)

ಸುಶ್ರುತ, ಚಿತ್ರಾನ್ನ ('ಚಿಂದಿ'ಸೇರಿಸಬೇಕನ್ನಿಸುತ್ತೆ!:)) ) ಮಾಡಿಹಾಕಿದೀನಿ ಗೊತ್ತು:p ಬರವಣಿಗೆಯಲ್ಲಿ ಲಾಂತ್ ಬ್ರೇಕ್ ತೊಗೊಂಡಿದ್ದಕ್ಕೋ ಅಥ್ವಾ ಇವತ್ತು ಏನಾದ್ರೂ ಬರೀಲೇ ಬೇಕು ಅಂತ ಕೂತಿದ್ದಕ್ಕೋ - ಒಟ್ಟಿನಲ್ಲಿ ಇದು ಚಿತ್ರಾನ್ನವಾಗಿದ್ದಂತೂ ನಿಜ:))

ಶಿವ್
u picked the only nice bit in this post(in my view) :)
ನಿಮಗೆ ಬಿಡಿ ಸದ್ಯಕ್ಕೆ ಗೊತ್ತಾಗೋದು ಸಪ್ತಸಾಗರಗಳ ಅಂತರ ಅಷ್ಟೇ!;)

anonymous, sorry, i would perhaps have replied if u gave ur name n wrote a slightly elaborate comment. I cant figure out which posts u r referring to

Shree said...

ಯುಗಾದಿ ಹೊತ್ತಿಗೆ ಒಳ್ಳೆಯ ಭಾವದ ಜತೆಗೆ ವಾಪಸ್ ಬ೦ದಿದ್ದೀರ, ಬರೆಯೋದು ಬಿಡಬೇಡಿ...
what is this life, if full of care,
we have no time to stand and stare...!!

Anonymous said...

There are times when your day starts with humming a song... and more often than not, you r humming that same song the entire day... And in my case, today, it happens to be this song 'Yaava mohana murali...' What a song! I decide to google out more info on this song..... and i bump into your web site. Really impressed!! Taavu kannadadalli blog bareyuvuddanu nodi bahala santhoshavaayithu!
Keep blogging!

shrutha said...

good one ....

Karthik CS said...

bahaLa chennagide.. Tumba late aadroo parvaagilla wish maaDteeni.. Hosa varsha nimage arOgya santOsha nemmadi taMdu koDali

ಸುಪ್ತದೀಪ್ತಿ suptadeepti said...

ಏನ್ ಮೇಡಮ್? ಯುಗಾದಿ ಮುಗಿದೇ ಇಲ್ವಾ? ನಾಳೆ ನಾಳೆ ಅನ್ನುವಷ್ಟರಲ್ಲಿ ನಾಗ, ಗೌರಿ, ಗಣೇಶ, ಕೃಷ್ಣ ಬರ್ತಾರೆ. ಎಲ್ಲೀತನಕ ಮೌನ?

Anonymous said...

ಗೆಳೆಯರೆ,

ಪ್ರಪಂಚದ ಆಗುಹೋಗುಗಳ ಬಗ್ಗೆ ಕನ್ನಡದ ಕಣ್ಣಿನಿಂದ ಸರಿಯಾಗಿ ವಿಶ್ಲೇಷಿಸಲು ಮತ್ತು ಚರ್ಚಿಸಲು, ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆಗೆ ಬದ್ಧವಾಗಿರುವ ಬನವಾಸಿ ಬಳಗದ ಹೊಸ ಬ್ಲಾಗ್ ಬಂದಿದೆ. ಅದೇ http://enguru.blogspot.com. ಬನ್ನಿ, ಚರ್ಚೆಯಲ್ಲಿ ಭಾಗವಹಿಸಿ, ನಿಮ್ಮ ಗೆಳೆಯರನ್ನೂ ಕರೆ ತನ್ನಿ.

-ಕಟ್ಟೇವು ಕನ್ನಡದ ನಾಡ, ಕೈ ಜೋಡಿಸು ಬಾರಾ...

Anonymous said...

reminds me of the famous song "Uga Uga ugadi kaledaru.. tirugi maruli baruthide".. anyways, I think the article is well written. Including the thing about the bevu bella..
but I've always wondered why it's not like sankranthi...

Anonymous said...

ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಪರ ಹೋರಾಟವನ್ನು ಬೆಂಬಲಿಸಿ

http://karave.blogspot.com/

www.karnatakarakshanavedike.org

Amit Charles said...

Impressive :)
This is my first visit to a kannada blog. And I gotta say it's a gr8 start.
Thank you:)
Keep it rollin;)

Nagaraj said...

A google search on Ugadi song brought me into ur blog and I was too happy to read those lines in kannada....the poem in itself is such a masterpiece..in just a few lines,our beloved Kavi Bendre has captured the spirit of Ugadi..hats off to that spirit..
Keep posting..