Monday, September 25, 2006

ನಿನ್ನೆ ನಿನ್ನೆಗೆ ಇಂದು ಇಂದಿಗೆ...

'ಹಿಂದೊಂದು ಚೆಂದದ ಕಾಲವಿತ್ತು' ಅಂತ ಹಾಲುಹಲ್ಲು ಬೀಳೋ ಮೊದಲೇ ಯಾಕೆ ಷುರು ಹಚ್ಚ್ಕೋತೀವಿ ನಾವುಗಳು? ನಾಸ್ಟಾಲ್ಜಿಯಾ ಯಾಕೆ ನಮಗಷ್ಟು ಅಪ್ಯಾಯಮಾನ? ನನಗೆ ಚೆನ್ನಾಗಿ ನೆನಪಿದೆ, ಕಾಲೇಜಿನ ದಿನಗಳಲ್ಲಿ, ಆಹಾ ಆ ಸ್ಕೂಲ್ ದಿನಗಳು ಮತ್ತೆ ಬರುತ್ವಾ ಅಂತ ಹದಿನಾರರ ಹರೆಯದಲ್ಲಿ ಜೀವನದಲ್ಲಿ ಆಗ್ಲೇ ಕಳೆದುಹೋಗಿದ್ದರ ಲೆಕ್ಕ! ಕಾಲೇಜು ದಿನಗಳು ಕಳೆದಾಗ ಅಯ್ಯೋ ಆ golden days ಆಗಿಹೋಯ್ತಲ್ಲ ಅಂತ ಕ್ಯಾಂಟೀನ್,crush, ಬೈಯ್ಯೋ ಲೆಕ್ಚರರ್ಸ್, ಕ್ಲಾಸ್ ಬಂಕ್ ಮಾಡಿ 'ರಿಹರ್ಸಲ್' ಅನ್ನೋ ಹೆಸರಲ್ಲಿ ಆಡ್ತಿದ್ದ ಆಟಗಳು, ಹೊತ್ತುಗೊತ್ತಿಲ್ಲದೇ ನಡೆಸುತ್ತಿದ್ದ ಹರಟೆ sessionಗಳು...ಎಲ್ಲ ಒಂದೇ ಸಲ ಸುನಾಮಿ ಥರ ಆವರಿಸಿಕೊಳ್ಳೋದು! ಇವತ್ತಿಗೂ ಕಾಲೇಜ್ ಸ್ನೇಹಿತರೆಲ್ಲ ಸಿಕ್ಕಾಗ ಈ ನಾಸ್ಟಾಲ್ಜಿಯ ಟ್ರಿಪ್ ಹೋಗಿ ಬರದಿದ್ದ್ರೆ ಅದು incomplete!

ನಾಸ್ಟಾಲ್ಜಿಯಾ ಇಲ್ಲದಿದ್ದ್ರೆ ಅದರ ಜಾಗದಲ್ಲಿ ಕನಸುಗಳು ಬೆಚ್ಚಗೆ ಬಂದು ಕೂತುಬಿಡುತ್ತ್ವೆ. ನಾನು ಹೀಗೆ ಮಾಡ್ಬೇಕು, ಇದು ಹಾಗೆ ಆಗ್ಬೇಕು...ಹೀಗಾದ್ರೆ ಚೆನ್ನ, ಹಾಗಾದ್ರೆ ಚೆನ್ನ...

ನಮ್ಮ ನೆನ್ನೆ ನಾಳೆಗಳನ್ನ ಪ್ರೀತಿಸೋ ಅಷ್ಟು ನಮ್ಮ ಇಂದಿನ ಅನುಭವಗಳನ್ನ ಪ್ರೀತ್ಸೋದು ಕಲಿಯೋಕೆ ಆಗುತ್ತಾ? ನೆನಪು - ಕನಸುಗಳಿಗೆ ಇಷ್ಟು ಪ್ರೀತಿ ತೋರಿಸೋದಕ್ಕೆ distance lends enchantment ಅನ್ನೋದು ಕಾರಣವಿರಬಹುದಾ? ಅಥ್ವಾ ನೆನ್ನೆ ನಾಳೆಗಳ ಯೋಚನೆಗೂ ಸಮಯ ಕೊಡದೇ ನಮ್ಮ್ಮ ಇಂದಿನ ಕ್ಷಣವನ್ನ ಆವರಿಸೋದೇ ಪ್ರೀತಿನಾ?

P.S: ಕೆಲಸ-ಬದುಕುಗಳಲ್ಲಿ ಮುಳುಗಿ ಹೀಗೇ ಸುಮ್ಮ್ನೆ long break ತೆಗೆದುಕೊಂಡುಬಿಟ್ಟಿದ್ದೆ...ಏನ್ರೀ ಬರೀತಾನೇ ಇಲ್ಲ ಅಂತ ಇಲ್ಲಿ, ಮೈಲ್ ಮೂಲಕ...ಆತ್ಮೀಯತೆಯಿಂದ ವಿಚಾರಿಸಿಕೊಂಡ, ಬರೀದೇದ್ರೆ ನೋಡಿ ಅಂತ ಧಮ್ಕಿ ಕೊಟ್ಟ ಎಲ್ಲ ಪ್ರೀತಿಯ ಸ್ನೇಹಿತರಿಗೆ ನನ್ನವೆರಡು ಪುಟ್ಟ sorry ಮತ್ತು ಧನ್ಯವಾದಗಳು:)

10 comments:

bhadra said...

ಹೊಸದೊಂದು ಅಂಚೆ ಬಂದಾಗ ಆಗೋ ಅಷ್ಟು ಸಂತೋಷವಾಯ್ತು. ಹೊಸ ಚಿಂತನೆ, ಹೊಸ ಲೇಖನ, ಹೊಸ ಪ್ರತಿಕ್ರಿಯೆ ಅದ್ಭುತ

"ನಮ್ಮ ನೆನ್ನೆ ನಾಳೆಗಳನ್ನ ಪ್ರೀತಿಸೋ ಅಷ್ಟು ನಮ್ಮ ಇಂದಿನ ಅನುಭವಗಳನ್ನ ಪ್ರೀತ್ಸೋದು ಕಲಿಯೋಕೆ ಆಗುತ್ತಾ?"

ಖಂಡಿತ ಇಲ್ಲ - ಇದಕ್ಕೆ ಉತ್ತರ ನಿಮ್ಮ ಬ್ಲಾಗಿನ ಹೆಸರಿನಲ್ಲಿಯೇ ಇದೆ.

ಉತ್ತಮ ಚಿಂತನೆಯ ಪ್ರಸ್ತಾವನೆಗೆ ವಂದನೆಗಳು.

adamya said...

bhale bhale...nan standard ge chikkadaagi kandroo vishya ide he he..

"ನೆನಪು - ಕನಸುಗಳಿಗೆ ಇಷ್ಟು ಪ್ರೀತಿ ತೋರಿಸೋದಕ್ಕೆ distance lends enchantment ಅನ್ನೋದು ಕಾರಣವಿರಬಹುದಾ?" idu oLLe super point.

"ಅಥ್ವಾ ನೆನ್ನೆ ನಾಳೆಗಳ ಯೋಚನೆಗೂ ಸಮಯ ಕೊಡದೇ ನಮ್ಮ್ಮ ಇಂದಿನ ಕ್ಷಣವನ್ನ ಆವರಿಸೋದೇ ಪ್ರೀತಿನಾ?" enoppa goththilla haha..seriously speaking,eno goththilla..

adamya said...

but nostalgia jaagadalli kansu? erdakkoo adrade sthaana ide antha naan andkondidde....eno doddavru enaadru heLdaaga ondu uddeshwo arthwo iraththe andkondideeni.....

Author said...

ಬ್ಲಾಗ್ ಲೋಕದ ಯಾವಯಾವುದೋ ಗಲ್ಲಿಗಳನ್ನು ಸುತ್ತಿ ಇಲ್ಲಿಗೆ ಬಂದೆ. ಬಂದು ನೋಡಿದರೆ ಎನು ಸೂಪರ್ ಆಗಿ ಬರಿ ಬರಿತೀರಿ ಅನ್ನಿಸಿತು.
ನಮ್ಮ ತಲೆಮಾರಿನ ಹೃದಯವಂತರೆಲ್ಲ ದಿನಕ್ಕೆ ಹದಿನಾಲ್ಕು ತಾಸು ಸಾಪ್ಟ್‍ವೇರ್ ಕುಟ್ಟುವುದರಲ್ಲೇ ಕಳೆಯುತ್ತಿರುವಾಗ, ಈ ತಲೆಮಾರಿನ ಅಭಿವ್ಯಕ್ತಿಗೆ ನಿಮ್ಮಂತವರ ಅಗತ್ಯ ಬಹಳವಿದೆ.
ನಿಮ್ಮ ಬ್ಲಾಗ್ ಓದುತ್ತಾ ಇದ್ದರೆ ಒಮ್ಮೊಮ್ಮೆ ನವ್ಯ ಕಾವ್ಯ ಓದಿದಹಾಗೆ, ಒಮ್ಮೊಮ್ಮೆ ಪಕ್ಕದ ಮನೆ ಹುಡುಗಿ ಜೊತೆ ಮಾತು ಆಡಿದಹಾಗೆ ಅನ್ನಿಸುತ್ತೆ. ಈ ಎರಡೂ ತುದಿಗಳಿಗೂ ಮಧ್ಯ ಇರೋದೇ ನಿಮ್ಮ plus point ಅನ್ನಿಸುತ್ತೆ.
ಹೀಗೆ ಬರಿತಾ ಇರಿ.
ಸರಿ, ಇನ್ನೇನು ದಾರಿ ಗೊತ್ತಾಯ್ತಲ್ಲ ಬರ್ತಾ ಇರ್ತೀನಿ ನಿಮ್ಮ ಬ್ಲಾಗ್‍ಗೆ.

ShaK said...

Welcome back. Keep writing. Such questions keep our minds young.

Sree said...

ತವಿಶ್ರೀಯವ್ರಿಗೆ
ಇಷ್ಟು ದಿನ ತಣ್ಣಗೆ ಕೂತಿದ್ರೂ ಬರೆದ ತಕ್ಷಣ ಎಂದಿನಂತೆ ಅಭಿಮಾನದ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು ಸಾರ್:) ಕೆಲವು ಸಮಯವಾದ್ರೂ ನಮ್ಮ ಇಂದಿನ ಅನುಭವಗಳನ್ನ ಪ್ರೀತ್ಸ್ತೀವಿ ಅನ್ಸುತ್ತೆ ನನಗೆ...

ads
ನಾಸ್ಟಾಲ್ಜಿಯಾ ಜಾಗದಲ್ಲಿ ಕನಸು - ಅಂತ ಬರೆದಾಗ ಒಂದಕ್ಕೆ ಒಂದು ಬದಲಿ ಅಂತಲ್ಲ ಮಗ ಹೇಳಿದ್ದು, ನಮ್ಮ್ ಜೇವನದಲ್ಲಿ ಬಹುಪಾಲು ನೆನಪುಗಳಲ್ಲಿ ಅದಿಲ್ಲದಿದ್ದ್ರೆ ಕನಸುಗಳಲ್ಲಿ ಕಳೀತೀವಿ ಅಂತ ಹೇಳ್ದೆ ಅಷ್ಟೆ - ಎರಡಕ್ಕೂ ಅವುಗಳದ್ದೇ ಜಾಗ ಇದೆ, ಡೌಟೇ ಇಲ್ಲ:)

ಶಾಸ್ತ್ರಿ
ವಾವ್! ತುಂಬಾ ದೊಡ್ಡ ಮಾತುಗಳು!:)) plus pointಓ ಅಲ್ಲ್ವೋ, ಒಟ್ಟಿನಲ್ಲಿ ಈ ಎರಡು ತುದಿಗಳ ಮಧ್ಯ ಸಿಕ್ಕಿಕೊಂಡಿರೋದಂತೂ ನಿಜ:)ಹೀಗೇಸುಮ್ಮ್ನೆ ಬಂದಿದ್ದಕ್ಕೆ ಧನ್ಯವಾದಗಳು:)

ಶಕ್ರಿ,ಗೌತಮ್, thanks for keeping track:)

Anonymous said...

ಹೀಗೆ ಸುಮ್ನೆ long break ತೆಗೊಂಡಿದ್ರಾ? ನಾನೆಲ್ಲೋ "ಇರುವುದೆಲ್ಲವ ಬಿಟ್ಟು" ಅಂತ ಬ್ಲಾಗ್ ಬರೆಯೋದನ್ನು ಬಿಟ್ ಬಿಟ್ರೇನೋ ಅನ್ಕೊಂಡಿದ್ದೆ!:)) ಸುಮ್ನೆ ತಮಾಷೆಗೆ ಹೇಳ್ದೆ ಕಣ್ರೀ:)

ಇವತ್ತಿನ ಸ್ಥಿತಿ ಚೆನ್ನಾಗಿದ್ರೆ ನಿನ್ನೆಯ ಸಾವಿರ ನೆನಪುಗಳು ಸವಿ ಸವಿಯಾಗೇ ಇರುತ್ತದೆ. ನಿನ್ನೆಯ ದುಃಖ, ಕಷ್ಟ, ಅಳು ಎಲ್ಲದರ ನೆನಪು ತುಟಿಯಂಚಿನ ಕಿರುನಗೆಯಾಗುತ್ತದೆ. ನೆನಪೇ ಒಂದು ಸುಮಧುರ ಅನುಭವವಾಗುತ್ತದೆ.

ಇವತ್ತಿನ ಸ್ಥಿತಿ ಚೆನ್ನಾಗಿಲ್ಲ ಅಂದ್ರೆ ಗತಕಾಲದ ವೈಭವ ಜ್ಞಾಪಕಕ್ಕೆ ಬಂದು ಬೇಜಾರಾಗುತ್ತದೆ. ಆಗ ನಾಳೆಯ ಕನಸೊಂದೆ ಆಶಾಕಿರಣ.

ನಿನ್ನೆ/ನಾಳೆ ಮತ್ತು ಇಂದು ಒಂದೇ ನಾಣ್ಯದ ಎರಡು ಮುಖಗಳಲ್ಲವೇ? ನೆನಪು/ಕನಸುಗಳು ನಮಗೆ ಇವತ್ತಿನ ಬಗ್ಗೆ ಇರುವ ಪ್ರೀತಿ/ದ್ವೇಷಗಳ ಬಗ್ಗೆ ಹೇಳುತ್ತವಲ್ಲವೆ?

"ಅಥ್ವಾ ನೆನ್ನೆ ನಾಳೆಗಳ ಯೋಚನೆಗೂ ಸಮಯ ಕೊಡದೇ ನಮ್ಮ್ಮ ಇಂದಿನ ಕ್ಷಣವನ್ನ ಆವರಿಸೋದೇ ಪ್ರೀತಿನಾ?" - ನನಗೆ ಇದರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಯೋಚಿಸ್ತಾ ಇದ್ದೀನಿ! ಏನೂ ಸರಿಯಾಗಿ ಗೊತ್ತಾಗ್ತಾ ಇಲ್ಲಾ. ಬಹುಶಃ ನಾಳೆ ಗೊತ್ತಾಗ್ಬಹುದೇನೋ!!

nishu mane said...

ಇಂದು
-----

ನೆನ್ನೆಯ ನೆನಪು
ನಾಳಿನ ಕನಸು
ಜೊತೆಗೊಂದಿಷ್ಟು
ಊಟ, ನಿದ್ದೆ, ಹಾಡು, ಹಸೆ,
ಪ್ರೀತಿ, ಜಗಳ...
ಜೊತೆಗೆ ಕೊಡುವ ಕೈ
ಮಿಡಿವ ಹೃದಯ.

----------------------
ಹೀಗಂತ ಮೊನ್ನೆ ಬರ್ದಿದ್ದೆ, ನನ್ನ ಬುಕ್ನಲ್ಲಿ. ಈವತ್ತು ನಿಮ್ಮ ಬ್ಲಾಗ್-ಗೆ ಬಂದು ನೋಡಿದ್ರೆ, ನೀವು ಈ ಬಗ್ಗೇನೇ ಬರ್ದಿದೀರಿ. ನಿಮ್ಮ ಬ್ಲಾಗ್ ತುಂಬಾ ದಿನದಿಂದ ಮೆಚ್ಚಿಕೊಂಡಿದ್ರೂ ನಿಮಗೆ ತಿಳಿಸೇ ಇರ್ಲಿಲ್ಲ. ಚೆನ್ನಾಗಿ ಬರೀತೀರ. ಹೀಗೇ ಬರೀತಿರಿ.

ಮೀರ.

Shiv said...

ಶ್ರೀ,

ಕೊನೆಗೂ ಮತ್ತೆ ಬರಿಯೋಕೆ ಶುರುಮಾಡಿಕೊಂಡರಲ್ಲಾ..ಅಷ್ಟು ಸಾಕು !

ಬಹುಷ ಇಂದಿನ ಅನುಭವಗಳನ್ನು ನಾವು ಪ್ರೀತ್ಸೋಕೆ ಅಷ್ಟು ಆಗೋಲ್ಲ ಅನಿಸುತ್ತೆ.

ಅನುಭವ ಅನ್ನೋದು ಸೆಂಡಿಗೆ ಹಿಟ್ಟಿನ ಹಾಗೆ..ಅದನ್ನು ಸಮಯ ಎಂಬ ಬಿಸಿಲಿನಲ್ಲಿ ಬಿಟ್ಟ ನಂತರವೇ ಅದು ಗರಿಗರಿಯಾಗಿ ಬರುತ್ತೆ. ಅಂಥಾ ಗರಿಗರಿ ಅನುಭವಗಳನ್ನು ಆವಾಗವಾಗ ನೆನಪು ಎಂಬ ಎಣ್ಣೆಯಲ್ಲಿ ಕರಿತಾ ಇದ್ದರೆ..ಅಲ್ಲಿ ಸುಮಧುರ ನೆನಪುಗಳ ಭೋಜನ...

ತುಂಬಾ ಇಷ್ಟ ಅಯ್ತು ಈ ಲೇಖನ..

ಅಪ್ಪು..... said...

Hi Sree Akka,

Nimmanna Akka anta karde anta bejaar maadkobedi...!!!

Nijavvaglu Preethi Bagge nimma Definition Chennagide.

Ondu maatra nija naavugalu, evattina Chinte bittu Bari ninne naalegala madya mulugi hogirodantu nija....