ಪ್ರ: "ಅವ್ಳು ನಿನಗೇನಾಗ್ಬೇಕು?"
ಉ: "ಅಕ್ಕ ಆಗ್ಬೇಕು"
(ಎರಡು ಸೆಕೆಂಡ್ ಮೌನ)
"ಆದ್ರೆ ನಾನು ಅವ್ಳಿಗೆ ಏನೂ ಆಗಲ್ಲ!"
ಮೂರು ವರ್ಷದ ಮುದ್ದಿನ ಮುದ್ದೆಯ ಬಾಯಲ್ಲಿ ಈ ಮಾತು ಕೇಳಿ ಒಂದ್ ನಿಮಿಷ ಹಾಗೇ ಶಾಕ್ ಆಗಿ ಕೂತ್ವಿ ನಾವು!
ಹಾಗೇ ಈ ಮಾತನ್ನ ಮೆಲುಕು ಹಾಕ್ತಿದ್ದಾಗ ಭಾಷೆ, ಬಾಂಧವ್ಯಗಳೆರಡಕ್ಕೂ ನಮ್ಮ ಚಿನ್ನುಮರಿ ಕೊಡೋ ಪ್ರಾಮುಖ್ಯ ನಾವು ಕೊಡಲ್ಲ ಅನ್ನೋ ಸತ್ಯ flash ಆಗಿ ಆ ಪುಟ್ಟಿಯ ಪ್ರಪಂಚಕ್ಕೂ ನಮ್ಮದಕ್ಕೂ ಇರೋ ಕಂದಕವನ್ನ ಎತ್ತಿ ತೋರ್ಸ್ಬಿಡ್ತು!
ಆಡೋ ಮಾತಿಗೂ ಮಿಡಿಯೋ ಹೃದಯಕ್ಕೂ ಇರೋ ಲಿಂಕ್ ಗಳನ್ನೆಲ್ಲ ಗುಜರಿ ಅಂಗಡಿ ಪಾಲು ಮಾಡಿಬಿಡ್ತೀವಾ ಬೆಳೀತಾ ಬೆಳೀತಾ... ಹಾಗಿದ್ದ್ರೆ ಅದು ಬೆಳೆಯೋದು ಹೇಗಾಯ್ತು...ಅಕ್ಕ ಅನ್ನೋ ಅಕ್ಕರೆ ಇದೆಯೋ ಇಲ್ಲ್ವೋ, ಬಾಯಿ ಅದರ ಪಾಡಿಗೆ ಅದು ಅಭ್ಯಾಸಬಲದ್ ಮೇಲೆ ಕೆಲಸ ಮಾಡುತ್ತಾ... ಅಥವಾ ಮಾತಿಗೂ ಮನಸ್ಸಿಗೂ ಮಧ್ಯ ಇರೋ ಅಂತರವನ್ನ ಅಳೀಸೋ ಧಾರ್ಷ್ಟ್ಯ ವಯಸ್ಸಾದ್ ಹಾಗೇ ಕರಗಿ ಬಿಡುತ್ತಾ...
ಎಲ್ಲವೂ taken for granted ಆಗಿ ಇವಕ್ಕೆಲ್ಲ ಅರ್ಥವೇ ಕಳೆದುಹೋಗುತ್ತಾ ನಮ್ಮ್ ಬದುಕಿನಲ್ಲಿ...ಅರ್ಥ ಹುಡುಕಿ ಕೂರೋ ವ್ಯವಧಾನದ ಕೊರತೆನೋ...
ಹೀಗೇ ಕಣ್ಣಿಗೆ ಪಟ್ಟಿ ಕಟ್ಟ್ಕೊಂಡು ರೇಸ್ ಓಡ್ತಿರೋ ನಮಗೆ ಒಂದು ಕ್ಷಣ ಬೆಚ್ಚಿ ಕಣ್ಣಗಲಿಸೋ ಹಾಗೆ ಶಾಕ್ ಕೊಡೋಕೆ ಈ ಪುಟ್ಟಿ ಇದಾಳಲ್ಲ ಅಂತ ಅಲ್ಲೇ ಒಂದು ಪುಟ್ಟ ಸಮಾಧಾನ ಮಾಡ್ಕೊಂಡಿದ್ದೂ ಆಯ್ತು!
ಪುಟ್ಟಕ್ಕನ ಪಾರ್ಟಿಂಗ್ ಶಾಟ್:
ನಮ್ಮ ಭಾವ (ಅವಳ ತಂದೆ) ಅವಳನ್ನ್ ಕೇಳಿದ್ರು, "ಸೋನು, ನಿಂಗೆ 'B' ಬರಿಯೋಕೆ ಬರುತ್ತಾ?"
ಅವಳ ಬತ್ತಳಿಕೆಯಲ್ಲಿ ಅದಕ್ಕೂ ಉತ್ತರ ರೆಡಿ! - "ನಂಗೆ 'B' ಬರ್ಯೋಕೆ ಬರಲ್ಲ, 'B' ಮೇಲೆ ಕೂತ್ಕೊಳ್ಳೋಕೆ ಬರುತ್ತೆ!"(ಪಾರ್ಕಿನಲ್ಲಿ ಮಕ್ಕಳ ಆಟಕ್ಕೆ A, B, C etc ಹಾಕಿರ್ತಾರಲ್ಲ - ಅದರ ಬಗ್ಗೆ ಸೋನು ಕೊಚ್ಚಿಕೊಂಡಿದ್ದು!:))
20 comments:
hmm...ನಿಜಕ್ಕೂ ಇದನ್ನ ಓದಿದಮೇಲೆ ಎರಡು ಸೆಕೆಂಡ್ ಮೌನವಾಗಿ ಯೋಚಿಸಿದೆ...ಇಲ್ಲಿರುವ ಪ್ರಶ್ನೆಗೆ ಉತ್ತರವನ್ನೂ ನೀವೆ ಹಾಕಿದ್ದೀರ ಅನ್ನಿಸ್ತು.
"ಎಲ್ಲವೂ taken for granted ಆಗಿ ಇವಕ್ಕೆಲ್ಲ ಅರ್ಥವೇ ಕಳೆದುಹೋಗುತ್ತಾ ನಮ್ಮ್ ಬದುಕಿನಲ್ಲಿ...ಅರ್ಥ ಹುಡುಕಿ ಕೂರೋ ವ್ಯವಧಾನದ ಕೊರತೆನೋ..."
ಸಧ್ಯದ ಪರಿಸ್ಥಿತಿಯಲ್ಲಿ ಅರ್ಥ ಹುಡುಕಿಕೊಂಡು ಕೂರೋ ವ್ಯವಧಾನ ಯರಿಗಿದೆ ಹೇಳಿ...
ನಿಜಕ್ಕೂ ನಿಮ್ಮ ಬರಹದಲ್ಲಿ ಸಿಕಾಪಟ್ಟೆ ಮೆಚ್ಯೂರಿಟಿ ಬರ್ತಿದೆ..ಈಚೀಚೆಗೆ ನಿಮ್ಮ ಬ್ಲಾಗ್ ಓದಿದ ಮೇಲೆ ಒಂದ್ ೨ ನಿಮಿಷವಾದ್ರೂ ಯೋಚನೆಗಳ ಸುಳಿಯಲ್ಲಿ ಸಿಲುಕೋ ಹಾಗೆ ಮಾಡತ್ತೆ ನಿಮ್ಮ ಬರಹ.
ಮುಂದುವರೀಲಿ...
ಇಲ್ಲಾ ಅವಳಿಗೂ ತನ್ನ ಅಪ್ಪನ ಥರ ತುಂಬಾ ಬುದ್ಧಿ!
ಒಂದುವರೆ ಬುದ್ಧಿ ಅಂತ ಹೇಳಬಹುದು ;)
ಬಹುಶಃ ವಯಸ್ಸಾದಂತೆಲ್ಲಾ ಮಾತಿಗೂ ಮಿಡಿಯೋ ಹೃದಯಕ್ಕೂ ಇರೋ ಲಿಂಕ್ಗಿಂತ, ಮಾತಿಗೂ ಸಾಮಾಜಿಕ ಶಿಷ್ಟಾಚಾರಕ್ಕೂ ಇರುವ ಲಿಂಕೆ ಹೆಚ್ಚಾಗುತ್ತದೆ. ನಂತರ ನಾವು ಇದನ್ನೇ ಚಿಕ್ಕ ಮಕ್ಕಳೂ ಮಾಡುವಂತೆ, ಅದೇ ಸರಿ ಎನ್ನುವಂತೆ ಹೇಳಿಕೊಡುತ್ತೇವೆ!
ಅಂದ ಹಾಗೆ, ನಿಮ್ಮ ಬ್ಲಾಗಿಗೆ ಲಿಂಕ್ ಕೊಡಲು ನಿಮ್ಮ ಅನುಮತಿ ಬೇಕಿತ್ತು.
(ಇದು ಶಿಷ್ಟಾಚಾರದ ಮಾತೋ ಅಥವಾ ಹೃದಯಾಂತರಾಳದಿಂದ ಸಹಜವಾಗಿ ಬಂದದ್ದೋ ಎಂದು ಕೇಳಬೇಡಿ:) ಅದನ್ನು ಪ್ರಾಮಾಣಿಕವಾಗಿ ಉತ್ತರಿಸುವಷ್ಟು ಮುಗ್ಧತೆ ನನ್ನಲ್ಲಿ ಈಗ ಇಲ್ಲಾ!).
ಸುಶೀಲ್,
dv'ಗಳು:) ಮೆಚ್ಯೂರಿಟಿ ಬಗ್ಗೆನೇ ಸಂಶಯ ಹುಟ್ಟಿಸ್ಬಿಟ್ಟ್ಳು ನನ್ನ್ ಅಕ್ಕನ ಮಗಳು!:))
ರವಿ? ಶಶಿ ತಮ್ಮನಾ? ಹ್ಹೆ ಹ್ಹೆ! ಸೋನು ಅವರಪ್ಪ, ಅಮ್ಮನ ಬುದ್ಧಿಯ ಬಗ್ಗೆನೂ ಕಾಮೆಂಟ್ ಹೊಡ್ದಿದಾಳೆ, ಅದನ್ನ್ ಇಲ್ಲಿ ಬರೆದ್ರೆ ನನಗ್ ಎಹೊಡೆತ ಬೀಳುತ್ತೆ - ಸೋ ಯಾವಾಗ್ಲದ್ರೂ ಎದುರು ಸಿಕ್ಕಾಗ ಹೇಳ್ತೀನಿ:)
ಕಲ್ಯಾಣ್,
ನಿಜವಾದ ಮಾತು:( ಒಂದ್ಸಲ ಮತ್ತೆ ಮಕ್ಕಳಾಗಿ ಇದನ್ನೆಲ್ಲ ಮರೆಯೋ ಮನಸ್ಸಾಗುತ್ತೆ!:(
ಲಿಂಕ್ ಮಾಡ್ಕೊಳಿಪಾ, ಅನುಮತಿ ಏನಿಲ್ಲ, ನನಗೆ ಹೇಳ್ದ್ರೆ ನಾನೂ ಬಂದು ನಿಮ್ಮ್ ಬ್ಲಾಗನ್ನ್ ಓದ್ತೀನಿ - ಅದಕ್ಕೋಸ್ಕರ ಹೇಳಿ ಅನ್ನೋದಷ್ಟೆ:)
ಈಗಿನ ಮಕ್ಕಳ ಜೊತೆ ಮಾತನಾಡುವಾಗ ನಾವು ಹುಷಾರಾಗಿರಬೇಕು. ಹೈಬ್ರೀಡ್ ತಳಿಗಳು. ನಾವ್ಯಾದೋ ಜ್ಞಾನದಲ್ಲಿ ಅವರೊಂದಿಗೆ ಮಾತನಾಡಲು ಹೋದರೆ ವಿದ್ಯುತ್ತಿನಂತೆ ಥಟ್ಟನೆ ಪ್ರತಿ ಉತ್ತರ ಬಂದಿರತ್ತೆ. ನೀವು ಬರೆದಿರುವ ಹಾಗೆ ನನಗೆ ನಮ್ಮ ಮನೆಯಲ್ಲೇ ಅನುಭವ ಆಗಿದೆ.
ಇಂತಹ ಸನ್ನಿವೇಶವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು
ಶ್ರೀ,
ನಿಜಕ್ಕೂ ಚಿನಕುರುಳಿ ಪಾಟಿಕೆನೇ ಈ ಪುಟ್ಟಿ.
ನಮ್ಮ ಉಪ್ಪಿ ಭಾಷೆಯಲ್ಲಿ ಹೇಳೋದಾದರೆ 'ಹೃದಯಕ್ಕೂ ನಾಲಿಗೆಗೂ ನಾವು ಪಿಲ್ಟರ್ ಹಾಕಿಕೊಂಡಿದ್ದೀವಿ' !
ಅಂದಾಗೆ ನಿಮ್ಮ ಒರ್ಕೂಟ್ನಲ್ಲಿರುವ ಚಿತ್ರ ಆ ಪುಟ್ಟಿದೇ ಅಲ್ವಾ?
maklu hengenge vichara maadtave antha....ee blogu manassige muda needtu....mudaneedida aa putanige matte adanna illi nam jote hancikoda ninge tumba thanks akka,
link haakkolri....nandenoo abhyantara illaa...badalige thanks!!
ಶ್ರೀ ಅವರೆ,
ಈಗಿನ ಬಿಜಿ ಯುಗದಲ್ಲಿ ಹೃದಯ ಅಂದ್ರೇನು ಅಂತ ಕೇಳೋರೆ ಹೆಚ್ಚಾಗ್ತಿದಾರೆ.
ಆದ್ರೆ ಒಂದ್ವಿಚಾರ ಅಂದ್ರೆ, ನನ್ನ ಹೃದಯವಿನ್ನೂ ಬಾಯಿಗೆ ಬಂದಿಲ್ಲ !
:)
ಖಂಡಿತಾ ಹೌದು ಶ್ರೀ,
ಇಂದಿನ ಮಕ್ಕಳಿಗೆ ಹಿಂದೆ ತಂದೆ ತಾಯಿ, ಬಂಧು ಬಳಗದಿಂದ ದೊರೆಯುತ್ತಿರುವ ಪ್ರೀತಿ ಖಂಡಿತಾ ಸಿಗುತ್ತಿಲ್ಲ. ಮನುಷ್ಯ ಯಂತ್ರವಾಗಿಬಿಟ್ಟಿದ್ದಾನೆ. ಭಾವನೆಗಳಿಗೆ ಅರ್ಥವೇ ಇರೋದಿಲ್ಲ...
ಮನಮುಟ್ಟುವ ಲೇಖನ.
ತ ವಿ ಶ್ರೀಯವರಿಗೆ ಧನ್ಯವಾದಗಳು. ಹೌದು, ತುಂಬಾ ಜೋಪಾನ್ವಾಗಿ ಮಾತಾಡ್ಬೇಕು, ಬರೀ ತರಲೆಗಳೇ ಈಗಿನ್ ಪುಟಾಣಿಗಳು!(ನಮ್ಮ್ ಬಗ್ಗೆ ನೀವುಗಳೂ ಹಾಗೇ ಅಂತೀರೇನೋ!:))
ಥಾಂಕ್ಸ್ ಕಣೊ ರವಿ:)
ಶಿವ್,
ಹೌದು ಅವಳೇ ನಮ್ಮನೆ ರಾಜಕುಮಾರಿ:) ಉಪ್ಪಿ ಡೈಲಾಗ್ ಸಖತ್!:))
ಅಲೆಮಾರಿಗಳೆ ಸ್ವಲ್ಪ ಅಪ್ಡೇಟ್ ಮಾಡ್ರೀ, ಹೊಸ ಪೋಸ್ಟ್ ನೋಡಿ ತುಂಬಾ ದಿನ ಆಯ್ತು!
ಅಸತ್ಯಾನ್ವೇಷಿ
ಬಿಜಿ ಅನ್ನೋದ್ ನಿಜ ಆದ್ರೂ ಎಲ್ಲಾರೂ ಎಲ್ಲೋ ಹುಡುಕ್ತಿರ್ತೀವಲ್ಲ್ವ ಹೃದಯನ? ಅದಕ್ಕೇ ಇಂಥಾ ಮಾತುಗಳು ಮನಸ್ಸಿಗೆ ತಟ್ಟೋದು - ಏನಂತೀರ?:)
ಏವಿ?!
ಯಾಕ್ರೀ ಇಂಥಾ ಸ್ಟೇಟ್ಮೆಂಟೂ?? ನಾನ್ ಮಕ್ಕಳೀಗೆ ಪ್ರೀತಿ ದೊರೀತಿಲ್ಲ ಅಂತ ಎಲ್ಲಿ ಹೇಳ್ದೆ?! ಮಕ್ಕಳು ಅಂದೂ ಇಂದೂ ಮನಸ್ಸಿನಲ್ಲಿದ್ದಿದ್ದನ್ನ ಹೇಳ್ಬಿಡ್ತಾರೆ ಅಂದೆ ಅಷ್ಟೆ.. ಏನ್ ಯಂತ್ರ ಆದ್ರೂ ಪುಟ್ಟ್ ಮಕ್ಕಳ ಮುದ್ದು ಮುಖಗಳು ನಮ್ಮಲ್ಲಿರೋ ಪ್ರೀತಿ, ಆರ್ದತೆಗಳನ್ನ ಎಬ್ಬಿಸುತ್ವೆ ಅಲ್ವಾ?
ನಿಮ್ಮ ಮಾತಿನಲ್ಲಿ ಗಹನವಾದ ವಿಚಾರ ಅಡಗಿದೆ.. ದೊಡ್ಡವರಾಗ್ತ ಆಗ್ತಾ ನಮ್ಮ ಮುಗ್ಧತೆಯನ್ನು ಕಳೆದುಕೊಂಡು ಲೌಕಿಕತೆಯ ಸುಳಿಯಲ್ಲಿ ಸಿಕ್ಹಾಕೋತೀವಿ.. ಆದ್ರೆ ನಮ್ಮೊಳಗೆ ನಮಗೇ ತಿಳಿಯದ ಆ ಮುಗ್ಧತೆಯನ್ನು ನಾವೇ ಹುಡುಕಿಕೊಳ್ಳಬೇಕು ..
ಬಹಳ ಚೆನ್ನಾಗಿ ಬರ್ತಾ ಇದೆ ನಿಮ್ಮ ಬ್ಲಾಗ್ .. ಹೀಗೆ ಮುಂದುವರೆಯಲಿ ..
ಹಾಗಲ್ಲ ಶ್ರೀ,
ನಾನು ಒಪ್ಪಿದ್ದು ಈ ಕೆಳಗಿನ ಸಾಲುಗಳಲ್ಲಿರುವ ಕಾಳಜಿಯನ್ನು.
ಆಡೋ ಮಾತಿಗೂ ಮಿಡಿಯೋ ಹೃದಯಕ್ಕೂ ಇರೋ ಲಿಂಕ್ ಗಳನ್ನೆಲ್ಲ ಗುಜರಿ ಅಂಗಡಿ ಪಾಲು ಮಾಡಿಬಿಡ್ತೀವಾ ಬೆಳೀತಾ ಬೆಳೀತಾ... ಹಾಗಿದ್ದ್ರೆ ಅದು ಬೆಳೆಯೋದು ಹೇಗಾಯ್ತು...ಅಕ್ಕ ಅನ್ನೋ ಅಕ್ಕರೆ ಇದೆಯೋ ಇಲ್ಲ್ವೋ, ಬಾಯಿ ಅದರ ಪಾಡಿಗೆ ಅದು ಅಭ್ಯಾಸಬಲದ್ ಮೇಲೆ ಕೆಲಸ ಮಾಡುತ್ತಾ... ಅಥವಾ ಮಾತಿಗೂ ಮನಸ್ಸಿಗೂ ಮಧ್ಯ ಇರೋ ಅಂತರವನ್ನ ಅಳೀಸೋ ಧಾರ್ಷ್ಟ್ಯ ವಯಸ್ಸಾದ್ ಹಾಗೇ ಕರಗಿ ಬಿಡುತ್ತಾ...
ಆದ್ರೆ ಪಟ್ಟಣದ ಮಕ್ಳಿಗೆ ಪ್ರೀತಿ ದೊರೀತಾ ಇಲ್ಲ ಅನ್ನೋದು ನನ್ನ ಅಭಿಪ್ರಾಯ.
ಕಾರ್ತಿಕ್,
ಹೌದು...ನಾವೇ ಹುಡುಕಿಕೊಳ್ಳ್ಬೇಕು...ಕೆಲವ್ ಸಲ ಹುಡುಕೋಕಾಗ್ದೇರೋ ಹಾಗೆ ಕಳ್ದುಹೋಗುತ್ತೆ...ಅಥ್ವಾ ಕಳ್ದ್ ಹೋಗಿದೆ ಅಂತ ಗೊತ್ತಾಗೇ ಇರೋಲ್ಲ...ಆಗ ಇಂಥದ್ದೊಂದು ಮಿಂಚು ನಮ್ಮನ್ನ್ ಎಬ್ಬಿಸಿದ್ದ್ರೆ ನಮ್ಮ್ ಪುಣ್ಯ ಅನ್ಬೇಕು:)
ಅವಿ,
ಒಹ್ ಸರಿ:)
ಆದ್ರೆ ಪಟ್ಟಣದ ಮಕ್ಕಳಿಗೆ ಪ್ರೀತಿ ದೊರೀತಿಲ್ಲ ಅನ್ನೋ ಸಾರಾಸಗಟಾದ ಜೆನರಲೈಸೇಶನ್ ನಾ ಒಪ್ಪೋದಿಲ್ಲ.. ನಾನಂತೂ ಹುಟ್ಟಿದಾಗಿಂದ ನಂಬೆಂಗ್ಳೂರಿನ ಕಾಂಕ್ರೀಟ್ ಕಾಡಲ್ಲೇ ಇದೀನಿ, ಯಾವತ್ತೂ ಪ್ರೀತಿಗಾಗಿ ಹುಡುಕಿಹೋಗೋ ಅಗತ್ಯ ಬರ್ಲಿಲ್ಲ...ಈ ನಮ್ಮ್ ಪುಟ್ಟಿ ಅಂತೂ ಎಲ್ಲಾ cousinsಗಳ ಮುದ್ದಿನ ರಾಜಕುಮಾರಿ...ಹಳ್ಳಿಯಲ್ಲಿ ಪ್ರೀತಿ ಇದೆ, ಇಲ್ಲಿ ಇಲ್ಲ ಅನ್ನೋದು ತುಂಬಾ naive generalisation ಅನ್ನ್ಸುತ್ತೆ ನನಗೆ...ಎಷ್ಟು ಜನ ಮಕ್ಕಳು ಹಳ್ಳಿಗಳಿಂದ ಓಡಿಬಂದು ಇಲ್ಲಿ ಬಾಲಕಾರ್ಮಿಕರಾಗಿ ದುಡೀತಿಲ್ಲ್ವ? ಹಳ್ಳಿಗಳು ನಿಜಕ್ಕೂ ಅಷ್ಟು ಯುಟೋಪಿಕ್ ಆಗಿ ಪ್ರೀತಿಯ ತಾಣಗಳಾಗಿದ್ದ್ರೆ ಇದು ಯಾಕೆ ಆಗ್ತಿತ್ತು? ಎಲ್ಲಾ ಕಡೆನೂ ಒಳ್ಳೇದೂ ಕೆಟ್ಟದ್ದೂ ಇರುತ್ತೆ ರೀ...ಸುಮ್ಮ್ನೆ ಯಾವಾಗ್ಲೂ ಪಟ್ಟಣದ ಮೇಲೆನೇ ಗೂಬೆ ಕೂರ್ಸಿ ಅಭ್ಯಾಸ ಆಗ್ಬಿಟ್ಟಿದೆ ಅಷ್ಟೆ!
ಶ್ರೀ,
ಪಟ್ಟಣದಲ್ಲಿ ಮಕ್ಕಳಿಗೆ ಪ್ರೀತಿ ಸಿಗಲ್ಲ ಅನ್ನೋದನ್ನ generalise ಮಾಡಿ ಹೇಳ್ತಿಲ್ಲ. ಆದ್ರೆ ಹೊಸದಾಗಿ ಪಟ್ಟಣಕ್ಕೆ ಬಂದು ಸೇರಿಕೊಂಡವರು, ತಮ್ಮವರನ್ನು, ಸಂಬಂಧಿಕರನ್ನೆಲ್ಲಾ ಬಿಟ್ಟು ಬಂದು ಪಟ್ಟಣದಲ್ಲಿ ನೆಲಸುವ ಅನಿವಾರ್ಯತೆಗೆ ಸಿಲುಕಿದವರು, ಅದಕ್ಕೂ ಹೆಚ್ಚಾಗಿ ದುಡಿತವೇ ದೇವರು ಅಂತ workoholic ಆಗಿರುವ ಅಪ್ಪ-ಅಮ್ಮಂದಿರಿರುವ ಹೊಸ ಜನರೇಶನ್ ಗೆ ಮಾತ್ರ ಇದು ಅನ್ವಯವಾಗುತ್ತದೆ.
ಆ ಮಟ್ಟಿಗೆ ನೀವು, ನಿಮ್ಮ ಪುಟ್ಟಿ ಲಕ್ಕೀನೇ.
ಆ ಮೇಲೆ, ಬಾಲಕಾರ್ಮಿಕರು ಪಟ್ಟಣಕ್ಕೆ ಬರೋದು ಸೂಕ್ತ ಗೈಡೆನ್ಸ್ ಇಲ್ಲದ ಕಾರಣವಿರಬಹುದು ಅಥವಾ ಅನಿವಾರ್ಯತೆಯೂ ಇರಬಹುದು.
ಮೊದಲು .. ನಾವು ನಮ್ಮ ಜೀವನದ ಮೌಲ್ಯಗಳನ್ನು ನಿರ್ಧರಿಸಬೇಕು.. ಆ ಮೌಲ್ಯಾಧಾರಿತ ಜೀವನಕ್ಕೆ ಬೇಕಾದ ಕೆಲಸಗಳನ್ನು ಮಾಡಬೇಕು .. ಕೆಲವು ಸಲ ನಮ್ಮ ಮೌಲ್ಯಾಧಾರಿತ ನಮ್ಮ ವೃತ್ತಿ ಅಡ್ಡಿಬರಹುದು .. ಆಗ ನಾವು, ಸ್ವಲ್ಪ break ತಗೊಂಡು ಮೌಲ್ಯದ ಕಡೆಗೆ ಮತ್ತೆ ಗಮನ ಹರಿಸಿದರೆ ಸರಿಹೋಗುತ್ತದೆ.. ನಮ್ಮ problem ಏನು ಅಂದ್ರೆ ದುಡ್ಡು ಏಕೆ ಸಂಪಾದಿಸಬೇಕು ಅಂತಾನೇ ಮರ್ತೋಗಿದೀವಿ ..
ಉದಾ: ನನಗೆ ಬಹಳ ಬೇಕಾದವರೊಬ್ಬರ ಹತ್ರ ಹೀಗೇ ಕೆಲವು ತಿಂಗಳ ಹಿಂದೆ ಚರ್ಚೆ ನಡೆಸಿದ್ದೆ, ಅವರು ಬಹಳ ದೊಡ್ದ contruction ಇಂಜಿನಿಯರ್. ತುಂಬಾ ಕಷ್ಟ ಪಟ್ಟು ಮೇಲೆ ಬಂದಿದಾರೆ.. ಈಗ್ಲೂ ಅಷ್ಟೆ ಕಷ್ಟ ಪಟ್ಟು ದುಡೀತಿದಾರೆ. ಆದ್ರೆ ಅವರ ಮಕ್ಕಳು ಸರಿಯಾದ ದಾರಿಯಲ್ಲಿಲ್ಲ ಅನ್ನೋ ಕೊರಗು.. ಮಗಳು ಬುದ್ಧಿವಂತೆಯಾದರೂ ಸರಿಯಾದ ದಾರಿಯಲ್ಲಿಲ್ಲ, ಮಗನೋ ೧೦ನೇ ತರಗತಿ ಸಹ ಉತ್ತೀರ್ಣ ಆಗಿಲ್ಲ. ಅವರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದು ತುಂಬಾ ಕಡಿಮೆ .. ನೀವು ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಿರಿ ಅಂತ ಅಂದ್ರೆ ತಮ್ಮ ಕೆಲಸ ಅಡ್ಡಿ ಬರತ್ತೆ ಅಂತಾರೆ.. ನೀವು ದುಡಿಯುವುದೇ ಮಕ್ಕಳಿಗಾಗಿ ಅವರೇ ಸರಿಯಿಲ್ಲ ಅಂದ್ರೆ ದುಡಿದು ಏನು ಪ್ರಯೋಜನ? ಅನ್ನೋ ಪ್ರಶ್ನೆಗೆ ಸರಿಯಾದ ಉತ್ತರ ಅವರ ಹತ್ತಿರ ಇಲ್ಲ. ನನಗೆ ಅಭ್ಯಾಸ ಆಗೋಗಿದೆ ಅಂತಾರೆ. ಮಕ್ಕಳಿಗೆ ಏನ್ ಬೇಕೋ ಅದನ್ನ ತೆಗೆಸಿ ಕೊಡಿಸ್ತೀನಲ್ಲ ಇನ್ನೇನು ಬೇಕು ಇವರಿಗೆ ಅಂತಾರೆ.. come on ..ನಿಮ್ಮ ಸಂಗತ ಬೇಕು ಅವರಿಗೆ.. ಇಂಥಹ ಅನೇಕರು ತಮ್ಮ ಜೀವನಕ್ಕೆ ಅರ್ಥವೆ ಇಲ್ಲದೆ ಸುಮ್ಮನೆ ಓಡ್ತಾ ಇದಾರೆ.
ಅಂಥವರಿಗೆ ನನ್ನ suggestion: stop and re-think..
didnt know where to comment ...
anyway... -->http://manadamaatu.blogspot.com/2006/07/firefox.html
ಏಕೆ ಒಂದು ತಿಂಗಳಿನಿಂದ ಏನನ್ನೂ ಇಲ್ಲಿ ಬರೆದ ಹಾಗಿಲ್ಲ?
tahrel putti :)
enri elli maya agibiTTidara?
Post a Comment