Tuesday, February 28, 2006

ಕುಲ್ಗೆಟ್ಟ್ ಭಾಷೆ, ಕಂಗ್ಲೀಷು, ಕಂಗಾಲು!

warning: ಕನ್ನಡದಲ್ಲ್ ಸಂಸ್ಕೃತ ಮಾತಾಡಿ/ ಕೇಳಿ ಅಭ್ಯಾಸ ಇಲ್ಲ್ದೇರೋವ್ರು please stay away. ನಂಗೆ ಶಾನೆ ಕೋಪ ಬಂದಿರೋದ್ರಿಂದ ಜೇಡ್ರಳ್ಳಿ style ಬರೋ ಎಲ್ಲಾ ಸಾಧ್ಯತೆಗಳೂ ಇವೆ!:D

ನೆನ್ನೆ ಹಿಂಗೇ ಎಲ್ಲೋ ಬೀದಿ ಸುತ್ತ್ಕೊಂಡ್ ಮನೆಗ್ ಬರ್ತಿದ್ದೆ. ಜೊತೆಗೆ ಇದ್ದವ್ರು ಇಬ್ರು. ಇಬ್ರೂ ಇಲ್ಲಿಯವ್ರೇ. ಕನ್ನಡ ಮಾತಾಡಕ್ಕ್ ರೋಗ! ಹಾಳಾಗೋಗ್ಲಿ ಇಂಗ್ಲಿಷ್ ಚೆನ್ನಾಗ್ ಬಂದ್ರೆ ತಡ್ಕೋ ಬಹುದು! ಕೆಲ್ವು samples:
'sooooo many times i called to him ya! even morning i told to him to come to here'
'please remeber me to call to him ya'(ಇಂಥಾ ನುಡಿಮುತ್ತು ಉದ್ರ್ಸ್ತಿದ್ರೆ ನಿನ್ನ ಮರ್ಯೋದಾದ್ರೂ ಹೇಗೆ!)
ಕೆಂಬೂತ ನವಿಲ್ಗರಿ ಸಿಕ್ಕ್ಸ್ಕೊಂಡು ಕುಣೀತಂತೆ! ಎತ್ತ್ ಒದ್ಯಣ ಅನ್ನ್ಸುತ್ತೆ! ಯಾವ್ದಾದ್ರೂ ಭಾಷೆ ಮಾತಾಡಿ, atleast ಸರ್ಯಾಗಿ ಮಾತಾಡಿ! ಇತ್ಲಾಗೆ ಕುವೆಂಪು ಕನ್ನಡಾನೂ ಗೊತ್ತಾಗಲ್ಲ, ಅದು ಹೋಗ್ಲಿ ಅಂದ್ರೆ Indian english-U ಬರಲ್ಲ! ಸರಿ ಸೀದಾ ಸಾದಾ ಬೆಂಗ್ಳೂರ್ಕನ್ನಡ ಮಾತಾಡಿ ಅಂದ್ರೆ ಹರ್ಕ್ಲು ಇಂಗ್ಲಿಷ್ನಲ್ಲೇ ಸ್ಕೋಪು!

ಭಾಷೆ ಇರೋದು communicationಗೆ ಅನ್ನೋದು ಮರ್ತು ಇಲ್ಲ್ದೇರೋ ಪ್ರತಿಷ್ಠೆ ಮೆರ್ಸಕ್ಕ್ ಹೋಗೋವ್ರಲ್ಲಿ ಇದೊಂದು type ಆದ್ರೆ, ಕೆಟ್ಟ್ ಕುಲ್ಗೆಟ್ಟೊಗಿರೋ ಅಮೆರಿಕನ್ accentನಲ್ಲಿ ಬಡ್ಬಡಾಯ್ಸೋದು ಇನ್ನೊಂದ್ ಗುಂಪು!
ನಾನು ಕನ್ನಡ ಬಾವುಟ ಎತ್ತ್ಕೊಂಡುಹೋಗಿ ಗೌರಿಶಂಕರದಲ್ಲಿ(Mt Everest ಕಣ್ರಪ್ಪಾ ಥೇಮ್ಸ್ ನನ್ನ್ ಮಕ್ಕಳ್ರಾ!) ನೆಡ್ಬೇಕು ಅನ್ನೋದಿಲ್ಲ. ಶೇಕ್ಸ್ಪಿಯರು ಸಮಾಧಿನಲ್ಲಿ ಒದ್ದ್ಲಾಡ್ದೇರೋ ಥರ ಇಂಗ್ಲಿಷ್ ಮಾತಾಡಿ ಅಂತನೂ ಹೇಳಲ್ಲ. ಆದ್ರೆ ಕನ್ನಡವೂ ಇಂಗ್ಲಿಷೋ ಕಂಗ್ಲಿಷೋ (ನನ್ನ್ ಭಾಷೆ ಈ ಕುಲ್ಗೆಟ್ಟ್ ಕಂಗ್ಲೀಷೇ ಅಂತ ಕುವೆಂಪು ಮುತ್ತಾತ, ಶೇಕ್ಸ್ಪಿಯರ್ ಕೋಲ್ತಾತನ್ ಥರ 'ಶುದ್ಧ ಭಾಷೆ'ಗಳನ್ನ ಮಾತಾಡೋ ಒಬ್ಬ ಫ್ರೆಂಡು ಹೇಳ್ತಿರ್ತಾನೆ/ ಬೈತಿರ್ತಾನೆ:P) ನಾವು ಮಾತಾಡೋದು ಎದುರು ಇರೋವ್ರಿಗೆ ಅರ್ಥ ಆಗೋದು ನಮ್ಮ್ priority ಆಗಿರ್ಬೇಕಲ್ಲ್ದೇ ದೊಂಬರಾಟ ಆಗ್ಬಿಡ್ಬಾರ್ದಲ್ಲ್ವ?!

ಈ ಕುವೆಂಪು ಮುತ್ತಾತ/ ಶೇಕ್ಸ್ಪಿಯರ್ ಕೋಲ್ತಾತನ್ ಬಗ್ಗೆ ಮಾತಾಡ್ತಾ ಒಂದು incident ನೆನಪಾಗತ್ತೆ. ಒಂದ್ಸಲ ಈ ಮಹಾಶಯನ್ ಹತ್ರ ಕೆಲವು ಹುಲು ಮನುಷ್ಯರು - ಅವ್ರೂ ನನ್ನ್ ಫ್ರೆಂಡ್ಸೇ (ಹೌದು, ನನ್ನ್ ಫ್ರೆಂಡ್ಸ್ ಲಿಸ್ಟು ಯಾವ್ zoo gardenಗೂ ಕಡಿಮೆ ಇಲ್ಲ - ಎಲ್ಲಾ ನಮೂನಾಗಳೇ!:)) - ಮಾತಾಡ್ತಿದ್ದ್ರು. ಈ ಪುಣ್ಯಾತ್ಮನ್ನ ಹಾಸ್ಟಲ್ನಲ್ಲಿ ಊಟ ಚೆನ್ನಾಗಿದೆ ಅಲ್ಲ್ವಾ ಅಂದ್ರೆ 'ಮೊದಮೊದಲು ಹಾಗನ್ನಿಸ್ತಿತ್ತು ನನಗೂ, ಈಗ ಏಕತಾನತೆ ಕಾಡತ್ತೆ' ಅಂತ royal ಆಗಿ ಅಚ್ಚಕನ್ನಡದಲ್ಲಿ ನುಡಿಮುತ್ತು ಉದುರ್ಸಿಬಿಟ್ಟಿದಾನೆ! ಈ ಪ್ರಾಣಿಗಳರಡು ಕಣ್ಣ್ ಕಣ್ಣ್ ಬಿಟ್ಟ್ಕೊಂಡು, ಮುಖ ಮುಖ ನೋಡ್ಕೊಂಡು ಇದು ನಮ್ಮ್ levelಗೆ ಮೀರಿದ್ದು ಅಂತ ತೆಪ್ಪ್ಗಾಗಿ ಆಮೇಲೆ ಬಂದು ನನ್ನನ್ನ ಕೇಳ್ದ್ರು! ಏಕತಾನತೆ ಅಂದ್ರೆ monotony ಅಂತ ವಿವರಿಸ್ದಾಗ ಒಂದು ದೊಡ್ಡ್ ಓಹೋನೂ ಬಂತು!:))

ಇದನ್ನ ನೋಡ್ತಿದ್ದಾಗ ಭಾಷೆನ ಕಲ್ಸೋ ರೀತಿನಲ್ಲೇ ಎಲ್ಲೋ ಎಡವಟ್ಟಾಗಿದೆಯೇನೋ ಅನ್ನ್ಸುತ್ತೆ. ಈ caseನಲ್ಲಂತೂ ಒಂದ್ಸ್ವಲ್ಪ logic ಉಪ್ಯೋಗ್ಸಿದ್ರೆ ಸ್ವಲ್ಪ scientificಆಗಿ ಭಾಷೆನ ಕಲ್ತಿದ್ರೆ ಏಕ=mono ತಾನ=tone ಅಂತ ಸುಲಭವಾಗಿ ಅರ್ಥ ಮಾಡ್ಕೋಬಹುದುತ್ತು. ನಮ್ಮಮ್ಮ ನಾನು ಚಿಕ್ಕವ್ಳಿದ್ದಾಗ ಭಾಷೆ ಕಲಿಸ್ತಾ, ಕನ್ನಡವೇ ಆಗ್ಲಿ ಇಂಗ್ಲಿಷೇ ಆಗ್ಲಿ, mug up ಮಾಡು ಅನ್ನದೇ ಪದಗಳನ್ನ, spellingsನ, ಅರ್ಥದಮೇಲೆ, pronunciation ಮೇಲೆ ಬಿಡಿಸಿ ಕಲಿಯೋದನ್ನ ಹೇಳ್ಕೊಟ್ಟ್ರು - ನನ್ನ್ ಪುಣ್ಯ! ಅಷ್ಟೇ - ಅದನ್ನ್ ಬಿಟ್ಟು ಯಾವ ಹೋಮ್ ವರ್ಕೂ ಕೂತು ಮಾಡಿಸ್ಲಿಲ್ಲ, ಯಾವ ಪಾಠನೂ ಓದ್ಸ್ಲಿಲ್ಲ. ಎಲೆಗಳನ್ನ ಹಸಿರು ಮಾಡೊದು ಯಾವ್ದು ಅನ್ನೋದಕ್ಕೆ ನನ್ನ್ ಮಿಕ್ಕೆಲ್ಲಾ classmates ಪತ್ರ ಹರಿತ್ತು ಅಂತ ಉತ್ತರ ಗಟ್ಟ್ ಹೊಡೀತಿದ್ದಾಗ ನಾನು ಆರಾಮಾಗಿ ಪತ್ರ=ಎಲೆ, ಹರಿತ್ತು=ಹಸಿರು ಅದರಲ್ಲಿ ತಲೆಕೆಡ್ಸ್ಕೊಂಡು ಗಟ್ಟು ಹೊಡ್ಯೋದೇನಿದೆ ಅನ್ಕೋತಿದ್ದೆ! ಈಗಂತೂ ಭಾಷೆಗಳಿಗೆ ನಮ್ಮ್ curriculumನಲ್ಲಿ ದಿನೇ ದಿನೇ importance ಕಡಿಮೆಯಾಗ್ತಿದೆ. science/ engineering ಆದ್ರಂತೂ ಕೇಳೊದೇ ಬೇಡ! ಭಾಷೆಗೂ ತಮ್ಗೂ ಸಂಬಂಧನೇ ಇಲ್ಲ ಅಂತ ಒಂದೇ ಸಲ ಕೈತೊಳ್ಕೊಂಡ್ಬಿಡ್ತಾರೆ ನಮ್ಮ್ ಹುಡುಗ್ರು! VTU VC language papers introduce ಮಾಡ್ದಾಗ ಊರಲ್ಲಿರೋ ಇಂಜಿನೀರಿಂಗ್ ಹುಡುಗ್ರೆಲ್ಲಾ ಹಿಡಿ ಹಿಡಿ ಶಾಪ ಹಾಕಿದ್ರು!
ಊರ್ ತುಂಬಾ ಇಂಜಿನೀರ್ಸೇ ತುಂಬ್ಕೊಂಡಿರೋ ಬೆಂಗ್ಳೂರಲ್ಲಿ ಅವ್ರಿಗೆಲ್ಲ ಸಾಹಿತ್ಯ ಬಿಡಿ, ಭಾಷೆನೂ ಸರ್ಯಾಗಿ ಬರ್ದೇ ಇದ್ದ್ರೆ ಸುಮ್ಮ್ನೆ ಕನ್ನಡಕ್ಕೆ ಅವಮಾನ ಆಗ್ತಿದೆ, ನಮ್ಮ್ ಭಾಷೆಗೆ ಸ್ಥಾನ ಸಿಗ್ತಿಲ್ಲ ಅಂತೆಲ್ಲಾ ಒದರಿದ್ರೆ ಅದಕ್ಕೊಂಡು ಬೆಲೆಯಾದ್ರೂ ಹೇಗೆ ಸಿಗತ್ತೆ!

ಭಾಷೆಯೆಂಬುದು ಮಗಳೆ ಮಾನವನ ಆಸೆ....ಅಂತ ಪ್ರೈಮರಿ ಸ್ಕೂಲ್ನಲ್ಲಿ ಓದಿದ ದಿನಕರ ದೇಸಾಯಿಯವ್ರ ಚುಟುಕ ನೆನಪಾಗತ್ತೆ!

ಏನೇನೋ ಬರ್ದ್ಬಿಟ್ಟಿದೀನಿ - ಇದನ್ನ ಬರ್ಯೊಕೆ ಶುರು ಮಾಡಿದ್ದ್ ದಿನ ಮೆಟ್ಟ್ಕೊಂಡಿದ್ದ ಜೇಡ್ರಳ್ಳಿ ಭೂತ ಇವತ್ತು ನನ್ನ ಹಿಂದೆ ಇಲ್ಲ, ಆದ್ರೆ ಭಾಷೆಗಳ್ ಬಗ್ಗೆ ನನ್ನ ಯೋಚನಾ ಲಹರಿ ಹರೀತಾನೇ ಇದೆ...

28 comments:

Sree said...

hi raghava,
thanx for the compliments!:) susheel nanna e-friend annbahudu. i like his poetry..

Anonymous said...

S
papa a hinglishu mathadavarannu yakea golaikothiya bidu.. avaru avaradea ada prapanchadallidarea. Engineering nalli ondo eredo sem english odirtharea astea. so avarinda expect madodu tappu.

Sree said...

oh boss! avarinda expect maaDodEnu - i m sying the general attitude towards language learning shud change. i m not talkin against any engineering hudgas, but against their attitudes n the curriculum which makes them think languages r unimportant!
n kett english maataadOvranna naanelli gOlhoykonde - i jus say what i feel abt them ashte allva?! enu nimm blog diary thara ide andiddakke revenge-a?;) modlu nann blog sareeg Odi;D

Susheel Sandeep said...
This comment has been removed by a blog administrator.
Susheel Sandeep said...

ತಮ್ಮ ಪಾದ...
ಶ್ರೀ, ಈ ವಿಚಾರಧಾರೆಗೆ ಎಲ್ಲೆಯೇ ಇಲವೇನೋ ಬಿಡಿ.ಮಾತಾಡ್ತಿದ್ರೆ ಜೇಡ್ರಲ್ಲಿ ಒಬ್ನೇ ಅಲ್ಲ..ಊರ್ನಲ್ಲಿರೋ ಎಲ್ಲ ಚಾಕು-ಚೂರಿ-ಬ್ಲೇಡು-ಆಸಿಡ್ಡು-ಲಾಂಗುಗಳನ್ನ ಒಟ್ಟಿಗೆ ತರಬೇಕು ;)

ಬೀದೀಗ್ ಹತ್ತು ಜನ ಇಂಜಿನೀರುಗಳೂ,ಗಲ್ಲಿ ಗಲ್ಲಿಗೊಂದು ಕಾಲೇಜು ಶುರುವಾಗ್ತಿರೋದ್ರ ಪ್ರಭಾವ ಅನ್ನಬಹುದೇನೊ.
ಮೊದ್ಲೆಲ್ಲ ದುಡ್ಡಿದ್ದವ್ರು ಛತ್ರಾನೋ ಪೆಟ್ರೋಲ್ ಬಂಕೋ ತೆಗೀತಿದ್ರಂತೆ..ಈಚೆಗೆ ಇಂಜಿನೀರಿಂಗ್ ಕಾಲೇಜ್ ತೆರೆಯೋಕೆ ಶುರು ಮಾಡಿದ್ರು.ಇನ್ಮೇಲೆ ಏನಾಗುತ್ತೋ ಗೊತ್ತಿಲ್ಲ

Seriously, ನಮ್ಮ Education System ಸರೀಗಿದ್ರೆ ಇಷ್ಟೆಲ್ಲ ಪಾಡು ಇರ್ತಿರ್ಲಿಲ್ವೇನೋ.ಎಲ್ಲೋ ಎಡವಟ್ಟಾಗಿದೆ.ಭಾಷೆ ಯಾವ್ದಾದ್ರೂ ಸರಿ, ಅದನ್ನ ಗೌರವಿಸೋ ಭಾವನೆ ಬೆಳೆಸ್ಕೋಬೇಕಲ್ಲ!
ಹಾಗೇ ಮನೇಲೂ ಈ ಕಲೆ,ಸಾಹಿತ್ಯ,ಸಂಗೀತಕ್ಕೆಲ್ಲ ಪ್ರೋತ್ಸಾಹ ಬೇಕಲ್ಲ...ಮನೇಲಿ ಕೂತ್ಕೊಂಡು ಪಾಪ ಟೀವಿಲಿ ಬರೋ ಅತ್ತೆ-ಸೊಸೆ ಜಗಳ ನೋಡಕ್ಕೆ ಟೈಮ್ ಇಲ್ಲ, ಇನ್ನು ಕತೆ,ಕವನ,ಕಾದಂಬರಿ ಎಲ್ಲ ಎಲ್ಲಿಂದ ಓದ್ಬೇಕು ಹೇಳಿ

Sree said...

ಹ್ಹ ಹ್ಹ! ಹೌದು...ಜೇಡ್ರಳ್ಳಿ ಸಾಕಾಗಲ್ಲ ಈಗಿನ್ ಪರಿಸ್ಥಿತಿ ನೋಡಿದ್ರೆ! ಮನೆ, education system, ಜನರ attitude...ಎಲ್ಲಾ ಸೇರ್ಕೊಂಡು ಏನೇನೋ ಆಗ್ತಿದೆ...ಇರ್ಲಿ, ಅತ್ತೆಗೊಂದ್ ಕಾಲ, ಸೊಸೆಗೊಂದ್ ಕಾಲ ಅಂತ - ಇದೆಲ್ಲಾ ಅತಿರೇಕಕ್ಕೆ ಹೋದಾಗ್ಲಾದ್ರೂ ಎಚ್ಚರ ಬರ್ಬೇಕಲ್ಲ! ಅಲ್ಲೀ ವರ್ಗೂ ನಮ್ಮಂಥಾ ಬಡಪಾಯಿಗಳು ಬ್ಲಾಗ್ನಲ್ಲಿ ಬಡಬಡಾಯ್ಸಿ ಇದ್ದಿದ್ದ್ರಲ್ಲಿ ಸಮಾಧಾನ ತಂದ್ಕೊಳ್ಳೋದು!
ತಮ್ಮ್ ಬ್ಲಾಗ್ ಅಪ್ಡೇಟ್ಸ್ಗೆ ಕಾಯ್ತಿದ್ದೆನಪ್ಪಾ ಸುಶೀಲ್:)

Sree said...

hmm...kagga/ subhaashitha ellaa elaargU bardEdre anthaa loss Enilla, nangU 10ne classnalli Odidd chemistry nenapilla! aadre dina nithyad baLakege bEkaagO ashTu bhaashe barOdilla, naavu hELiddu innobrige artha aagOd mukhya annOdu artha aagalla andre adu serious problem...

ishtaramEle bhaashe barOdilla annOdakkintha bhaashena (read bad english) oNa pratishTe mersO astra annkoLLOvru nann mEle jEDraLLi meTtkoLLOhaag maaDiddu!:D

Sant.. said...

Hey sree...super write up kane...i would be visiting your blog quite often now...i am impressed by ur patience also...even i have started writing for change ;)..just check my blog

Sree said...

dhanyaLaade santosaa!:)) patience?? artha aaglilla...if u r referring to the length of the write up then adu janmakkanTid rOga:D sari, Odtaairi, nimmellara abhimaana nann blog mEle sadaa heegE irli!:D will read ur blog nw:)

Anonymous said...

mass addressing of engineers....,
bedve swalpa olle janano irtare,
majority neenu heldhage irbahudu....but not all,

here ur speacially questioning linguistics of science/engineering students....is it so that all arts students are good at linguistics????
i personally take it this way science and engineering students should be appreciated for the whatever amount of linguistic knowledge they have...since it is not in their curriculam(this point seems too much logical but still i will mention it),

Sree said...

ha ha! keTT jana antelli hELdno!
adE - majority aa thara. ellO kelavu ninnantha rathnagaLU irathve - i dont deny dat;))

naanu engineers bagge hELirOdu ondE ond saalu. i acceptthat not all arts students are gd wt languages. my contetntion is there is something wrong wt the way languages are taught in the current edu system. artha aaytaa?:)

naanu yaav studentsannU baitilla, but i feel we need to reloo at the curriculum which is producing such wonderfully linguistically challenged people!:)

bhadra said...

ನಿಮ್ಮ ಬ್ಲಾಗ್ ಚೆನ್ನಾಗಿದೆ. ಸುಸ್ ಕೊಟ್ಟ ಕೊಂಡಿಯ ಮೂಲಕ ಇಲ್ಲಿಗೆ ಬಂದೆ. ನಿಮ್ಮ ಕೃತಿಗಳನ್ನು ಬ್ಲಾಗ್‍ಗಷ್ಟೇ ಸೀಮಿತಗೊಳಿಸಬೇಡಿ, ಎಲ್ಲ ಕಡೆಯೂ ಪ್ರಕಟಿಸಿ. ಸೂರ್ಯನ ಕಿರಣದಂತೆ ಜಗತ್ತನ್ನು ಪಸರಿಸಿ ತನ್ನ ಕಂಪನ್ನು ಬೀರಲಿ. ಒಳ್ಳೆಯದಾಗಲಿ ಎಂದು ಹಾರೈಸುವೆ.

Anonymous said...

ellO kelavu ninnantha rathnagaLU irathve - i dont deny dat;))
i appreciate ur sarcasam....and take it as my appraisal!!!!!!!

Anonymous said...

Namskara guru...:)))

Now, You know who I am right?;)

Superraagi bareetheeya...what I feel is your kannada writings are more natural and heart touching when compare to english stuffs..no double they are also great but still in my opinion your kannada thoughts and words are sweeter...that may be because I am kannada fan...:)

I expect more experiences from you in this web page...whatever it may starting from fight with auto driver for change to the greatest concert....bareetheeralla?

Always waiting for your sweet words with tasty meaning..;))

Ninna shishya...

Sree said...

ಶ್ರೀನಿವಾಸ್ ಸಾರ್! ಬಹಳಾ ಧನ್ಯವಾದಗಳು ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ, ಅಷ್ಟು ಒಳ್ಳೆಯ ಮಾತುಗಳನ್ನ ಹೇಳಿದ್ದಕ್ಕೆ! ಬಹಳ ಖುಷಿಯಾಗ್ತಿದೆ ನೀವು ನನ್ನ ಬ್ಲಾಗ್ ನೋಡಿದ್ದಕ್ಕೆ!
Ravi, dats the truth - sacrcasm or not - very few of the kind!:)

ತನ್! ಓದಿದ್ದಕ್ಕೆ thanks:) ಕನ್ನಡ/english...ಅದು ನಾನು ಏನ್ ಹೇಳ್ಬೇಕು ಅಂತ ಹೊರಟಿದ್ದೆನಿ - ಅದರಮೇಲೆ ಅವಲಂಬಿಸುತ್ತೆ...ಎರಡನ್ನೂ ಸೇರ್ಸಿ ನನ್ನದೇ ಕುಲಗೆಟ್ಟ ಕಂಗ್ಲೇಷಲ್ಲಿ ಬರ್ಯೋದೂ ಕೆಲವು ಸಲ ಸಹಜವಾಗಿ ಬರುತ್ತೆ...ಯಾವಾಗ ಯಾವ ಭಾಷೆನಲ್ಲಿ ಬರೀತೀನೋ ನನಗೇ ಗೊತ್ತಿಲ್ಲ!:P

Anonymous said...
This comment has been removed by a blog administrator.
Sree said...
This comment has been removed by a blog administrator.
Anonymous said...
This comment has been removed by a blog administrator.
Sree said...
This comment has been removed by a blog administrator.
Anonymous said...
This comment has been removed by a blog administrator.
Sree said...
This comment has been removed by a blog administrator.
ಶೇಖರ್‌ಪೂರ್ಣ said...
This comment has been removed by a blog administrator.
ಶೇಖರ್‌ಪೂರ್ಣ said...
This comment has been removed by a blog administrator.
Anonymous said...
This comment has been removed by a blog administrator.
Anonymous said...
This comment has been removed by a blog administrator.
Anonymous said...
This comment has been removed by a blog administrator.
Sree said...
This comment has been removed by a blog administrator.
Sree said...
This comment has been removed by a blog administrator.