ನಿನಗೋ ಸದಾ ವೀಣೆಯ ಗುಂಗು...
ಜೊತೆಗೆ ಪುಸ್ತಕಪಾಣಿ!
ಅವನಿಗೋ ಊರವರ ಹಣೆಬರಹ ಬರೆಯುವುದೇ ಕೆಲಸ ಮೂರುಹೊತ್ತೂ...
ವಿಶ್ವದ ಮೊದಲ ಇಟಲೆಕ್ಚುಅಲ್ ಕಪಲ್ಲು;
ಸಾಗರದ ಏಕಾಂತ ಲೋಕಾಭಿರಾಮ ಹಾಗಿರಲಿ,
ಒಬ್ಬರ ಮುಖ ಒಬ್ಬರು ನೋಡಲಿಕ್ಕೆ ಯಾವಾಗ ಪುರುಸೊತ್ತು?
ಇನ್ನು ಪ್ರೀತಿಗೆ ಪತಂಗವಾಗಿ ಉರಿಯುವ ಹುಚ್ಚೂ
ಉರಿದವಳ ಹೊತ್ತು ಭೂಮ್ಯಾಕಾಶ ತಾಂಡವಿಸುವ ಮತ್ತೂ
ಬಹಾಆಆಆಆಅ...ಳ ದೂರದ ಮಾತು!
ಜುಬಾನಲ್ಲಿ* ನರ್ತಿಸುವ ನಿನಗೆ
ಮಲ್ಲಿಗೆ ಕವಿಯ ಕವನದೊಳಗಷ್ಟೇ ಪ್ರೀತಿಯ ಪುಟ್ಟ ಲಿಂಕು.
ಓದು ಬರಹ ಹಾಡು ಹಸೆ ಕೇಳಿದಾಗ ಕೊಟ್ಟೆ ಅಂತ
ಅರೆಬರೆ ಹಿಡಿಹುಡಿ ಪ್ರೀತಿಗಳಿಗೆ ನಿನ್ನ ಮುಂದೆ ಅಹವಾಲಿಟ್ಟರೆ
ಅವು ತೋಪೆದ್ದು ತಿಪ್ಪರಲಾಗ ಹೊಡೆಯದೆ ಇನ್ನೇನು ಅನ್ನೋ ದಿವ್ಯ ಜ್ನ್ಯಾನ
ಈಗ ಹೊಳೆದು ಹೊಸ ದೇವರ ಹುಡುಕಾಟದಲ್ಲಿದ್ದೇನೆ!
ಬ್ಲಾಸ್ಫೆಮಿ ಅದು ಇದು ಅಂತ ಶಾಪ ಕೊಡೊ ಬದಲು
ಕೇಳಿದವರ ಕೊಟ್ಟುನೋಡಲ್ಲ?;)
*zubaan. couldnt get that letter in kannada:(